Wednesday, May 1, 2024
Homeಮಲೆನಾಡುಚಿಕ್ಕಮಗಳೂರುಕೊಪ್ಪ: ಶ್ರೀಕ್ಷೇತ್ರ ಶಕಟಪುರಮ್ ಶ್ರೀವಿದ್ಯಾಪೀಠ : ಶ್ರೀಚಿಂತಾಮಣಿಗೃಹಪ್ರವೇಶೋತ್ಸವ ಕಾರ್ಯಕ್ರಮ

ಕೊಪ್ಪ: ಶ್ರೀಕ್ಷೇತ್ರ ಶಕಟಪುರಮ್ ಶ್ರೀವಿದ್ಯಾಪೀಠ : ಶ್ರೀಚಿಂತಾಮಣಿಗೃಹಪ್ರವೇಶೋತ್ಸವ ಕಾರ್ಯಕ್ರಮ

ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಭಂಡಿಗಡಿಯ ಶಕಟಪುರಮ್ ಸಂಸ್ಥಾನದ ಪ್ರಕಟಣೆಯಂತೆ, ಶ್ರೀ ಚಿಂತಾಮಣಿ ಗೃಹಪ್ರವೇಶ ಶುಭಾರಂಭದ ಮಾಹಿತಿಯನ್ನು ನೀಡಲಾಗಿದೆ.

ಇದನ್ನೂ ಓದಿ; ಓವರ್ ಟೇಕ್ ಮಾಡುವಾಗ ಆಕ್ಸಿಡೆಂಟ್ ;ಬೈಕ್ ಸವಾರ ಸ್ಥಳದಲ್ಲಿಯೇ ಸಾವು

ಭಕ್ತ ಚಿಂತಾಮಣಿಯಾದ ಶ್ರೀವಿದ್ಯಾಂಬಿಕಾ ಶ್ರಿ ರಾಜರಾಜೇಶ್ವರೀದೇವಿ ಶ್ರೀಮಾತೆಯ ಸಾಕ್ಷಾತ್ಕಾರಕ್ಕೆ ಸಾಧನವಾದ ಶ್ರೀವಿದ್ಯೋಪಾಸನಾ ತಪೋನುಷ್ಠಾನವನ್ನು ಶ್ರೀಶ್ರೀ ಜಗದ್ಗುರು ಆಚಾರ್ಯಮಹಾಸ್ವಾಮಿಗಳು ನಿರಂತರ ನಿರಂತರಾಯ ಅನುಷ್ಠಿಸಲು ಅನುಕೂಲಗಳು ಇರುವಂತೆ “ಶ್ರೀಚಿಂತಾಮಣಿ ಗೃಹವನ್ನು ಶ್ರೀಜಗದ್ಗುರು ಬದರೀ ಶಂಕರಾಚಾರ್ಯ ಸಂಸ್ಥಾನಮ್. ಶ್ರೀವಿದ್ಯಾಪೀಠಮ್, ಶ್ರೀಕ್ಷೇತ್ರ ಶಕಟಪುರಮ್. ಕೊಪ್ಪ ತಾಲೂಕಿನಲ್ಲಿ ನಿರ್ಮಿಸಲಾಗಿದೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು


ಶ್ರೀ ಶ್ರೀಜಗದ್ಗುರು ಮಹಾಸ್ವಾಮಿಗಳು ಕೈಗೊಳ್ಳುವ ಶ್ರೀವಿದ್ಯಾ, ಶ್ರೀಚಂದ್ರಮೌಲೀಶ್ವರ, ಶ್ರೀವಿದ್ಯಾವಿಶ್ವೇಶ್ವರದೇವರ ಪೂಜಾದರ್ಶನವನ್ನು ಮಾಡಲು ಭಕ್ತರಿಗೆ ಸೌಕರ್ಯವಿರುವಂತೆ “ಶ್ರೀಸಭಾವನ್ನು ಸಜ್ಜುಗೊಳಿಸಲಾಗಿದೆ. ಇದೇ ಶ್ರೀಶೋಭನ ಸಂಮತ್ಸರದ ಜ್ಯೇಷ್ಠ ಶುದ್ಧ ದ್ವಾದಶೀ ಗುರುವಾರ ದಿನಾಂಕ 1-06-2023 ರಂದು ಪ್ರಾತಃ 08:00ಕ್ಕೆ ಸಲ್ಲುವ ಮಿಥುನಲಗ್ನದ ಮೀನಾಂಶದಲ್ಲಿ ಈ “ಶ್ರೀಚಿಂತಾಮಣಿಗೃಹ”ದ ಮತ್ತು “ಶ್ರೀಸಭಾ”ದ ಶುಭಪ್ರವೇಶೋತ್ಸವವು ನಡೆಯಲಿದೆ.

ಇದನ್ನೂ ಓದಿ; ಕಳ್ಳತನವಾಗಿದ್ದ 30 ಮೊಬೈಲ್‌ಗಳು ಮಾಲೀಕರಿಗೆ ಹಸ್ತಾಂತರ

ಈ ಶುಭ ಮಹೋತ್ಸವಸಮಯದಲ್ಲಿ ಸಹಸ್ರನಾಲಿಕೇರಮಹಾಗಣಯಾಗವೂ ಮತ್ತು ಅತಿರುದ್ರಮಹಾಯಾಗ-ಶ್ರೀಸಹಸ್ರಚಂಡೀಮಹಾಯಾಗಗಳೂ ನೆರವೇರಲಿವೆ. ಶ್ರೀವಿದ್ಯಾಪೀಠದ ಎಲ್ಲ ಶಿಷ್ಯ-ಭಕ್ತಾಭಿಮಾನಿಗಳು ಈ ಮಂಗಲಮಹೋತ್ಸವದಲ್ಲಿ ಬಂಧು-ಮಿತ್ರ ಪರಿವಾರ ಸಹಿತ ಭಾಗವಹಿಸಿ ಶ್ರೀವಿದ್ಯಾ-ಶ್ರೀಗುರುದೇವ ತಾನುಗ್ರಹಕ್ಕೆ ಪಾತ್ರರಾಗ ಬೇಕೆಂದು ಕೋರಿದ್ದಾರೆ.

ಇದನ್ನೂ ಓದಿ; ಹೈಟೆಕ್‌ ವೇಶ್ಯಾವಾಟಿಕೆ ದಂಧೆ ಮೇಲೆ ರೈಡ್

ಶ್ರೀಚಿಂತಾಮಣಿಗೃಹಪ್ರವೇಶ ಶುಭಾರಂಭದ ಕಾರ್ಯಕ್ರಮದ ವಿವರ:
* 22-05-2023 ರ ಸೋಮವಾರ ಶ್ರೀಗುರು-ಶ್ರೀಗಣೇಶಪ್ರಾರ್ಥನೆ, ಪುಣ್ಯಾಹ, ಸಹಸ್ರಮೋದಕ ಶ್ರೀಮಹಾಗಣಪತಿಹೋಮ, ಸಾಯಂ :- ಶ್ರೀಮಹಾಗಣಪತಿಮಂತ್ರಜಪ, ಅಗ್ನಿಜನನ.
* 23-05-2023 ಮಂಗಳವಾರ ಶ್ರೀಸಹಸ್ರನಾಲಿಕೇರಮಹಾಗಣಯಾಗ, ಮಧ್ಯಾಹ್ನ 12:00ಕ್ಕೆ ಪೂರ್ಣಾಹುತಿ
* 24-05-2023 ಬುಧವಾರ ಪ್ರಾತಃ 08:00ಕ್ಕೆ : ಅತಿರುದ್ರಮಹಾಯಾಗಸಂಕಲ್ಪ ಹಾಗೂ ಶ್ರೀರುದ್ರಪುರಶ್ಚರಣೆ.
* 25-05-2023 ಗುರುವಾರದಿಂದ 28-05-2023 ಭಾನುವಾರದವರೆಗೆ ಪ್ರತಿದಿನ ಪ್ರಾತಃ ಸಾಯಂ ಶ್ರೀರುದ್ರಪುರಶ್ಚರಣೆ.
* 29-05-2023 ಸೋಮವಾರ 12:00ಕ್ಕೆ ಶ್ರೀಶ್ರೀಜಗದ್ಗುರು ಆಚಾರ್ಯಮಹಾಸ್ವಾಮಿಗಳವರ ದಿವ್ಯಸಾನ್ನಧ್ಯದಲ್ಲಿ ಅತಿರುದ್ರಮಹಾಯಾಗದ ಪೂರ್ಣಾಹುತಿ.
* ದಿನಾಂಕ 30-05-2023ರ ಮಂಗಳವಾರ ಶ್ರೀವಿದ್ಯಾಂಬಿಕಾಶ್ರೀರಾಜರಾಜೇಶ್ವರೀದೇವೀಶ್ರೀಮಾತೆಯ ಸನ್ನಿಧಿಯಲ್ಲಿ ಲಕ್ಷಾರ್ಚನೆ, ಜಪ, ಮಹಾಮಂಗಲಾರತಿ ಇತ್ಯಾದಿ.
* 31-05-2023 ಬುಧವಾರ ಪ್ರಾತಃ 08:00ಕ್ಕೆ ಶ್ರೀಸಹಸ್ರಚಂಡಿಕಾಯಾಗದ ಮಹಾಸಂಕಲ್ಪ, ಸಹಸ್ರಚಂಡೀಪುರಶ್ಚರಣೆ ಪ್ರಾರಂಭ. ರಾತ್ರಿ ವಾಸ್ತು-ರಾಕ್ಷಿಘ್ನಹೋಮ.
* 01-06-2023 ಗುರುವಾರ ಪ್ರಾತಃ 08:00ಕ್ಕೆ ಸಲ್ಲುವ ಮಿಥುನಲಗ್ನದ ಮೀನಾಂಶದಲ್ಲಿ ಚಿಂತಾಮಣಿ-ಶ್ರೀಸಭಾಗೃಹಪ್ರವೇಶೋತ್ಸವ.
* 01-06-2023 ರಿಂದ 03-06-2023ರವರೆಗೆ ಸಹಸ್ರಚಂಡೀಪುರಶ್ಚರಣೆ. ಸಾಯಂಕಾಲ ನವಾಕ್ಷರೀಮಂತ್ರಜಪ, ಶ್ರೀಲಲಿತಾಸಹಸ್ರನಾಮಪಾರಾಯಣ.
* 04-06-2023 ಭಾನುವಾರ ಶ್ರೀಸಹಸ್ರಚಂಡೀಮಹಾಯಾಗ, ಮಧ್ಯಾಹ್ನ 12:00ಕ್ಕೆ ಶ್ರೀಶ್ರೀಜಗದ್ಗುರು ಆಚಾರ್ಯ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ಶ್ರೀಸಹಸ್ರಚಂಡಿಕಾಯಾಗದ ಪೂರ್ಣಾಹುತಿ, ಅನುಗ್ರಹಭಾಷಣ, ಋತ್ವಿಕ್ಸಂಭಾವನೆ, ಅನ್ನಸಂತರ್ಪಣೆ.

ಸಮಸ್ತ ಭಕ್ತಾದಿಗಳಿಗೆ ಆದರದ ಸುಸ್ವಾಗತ

ಇದನ್ನೂ ಓದಿ; ಕಾರ್ಯಕರ್ತರ ಶ್ರಮ ಅಪಾರ, ಸಮಚಿತ್ತದಿಂದ ಚುನಾವಣೆಯ ಫಲಿತಾಂಶ ಸ್ವೀಕಾರ: ಡಿ.ಎನ್ ಜೀವರಾಜ್

Most Popular

Recent Comments