ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಟ್ರಕ್ಕಿಂಗ್ ಬಂದಿದ್ದ ಯುವನೊಬ್ಬ ಹೃದಯಘಾತದಿಂದ ಸಾವನ್ನಪ್ಪಿದ ಘಟನೆ ಜಿಲ್ಲೆಯ ಗಡಿ ಭಾಗವಾದ ಕುದುರೇಮುಖದಲ್ಲಿ ನಡೆದಿದೆ. ರಕ್ಷಿತ್ (27) ಮೃತಪಟ್ಟ ಯುವಕ.
ಮೈಸೂರು ಮೂಲದ 7 ಯುವಕರ ತಂಡ ಟ್ರಕ್ಕಿಂಗ್ ಗೆಂದು ಆಗಮಿಸಿದ್ದರು. ಕುದುರೆಮುಖದಿಂದ-ನೇತ್ರಾವತಿ ಪೀಕ್ ಸ್ಪಾಟ್ ಗೆ ತೆರಳಿದ್ದ ವೇಳೆ ಮಾರ್ಗ ಮಧ್ಯದಲ್ಲಿ ರಕ್ಷಿತ್ ಗೆ ಎದೆ ನೋವು ಕಾಣಿಸಿಕೊಂಡಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಚಿಕ್ಕಮಗಳೂರು-ದಕ್ಷಿಣಕನ್ನಡ ಜಿಲ್ಲೆಯ ನೇತ್ರಾವತಿ ಪೀಕ್ ಸ್ಪಾಟ್ ನಿಂದ ಮೃತದೇಹವನ್ನ ಪೊಲೀಸರು ಕಳಸಕ್ಕೆ ತಂದಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೃದಯಾಘಾತ ಸಂಭವಿಸಿದೆ. ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.
ಜಿಲ್ಲಾಧಿಕಾರಿ ವರ್ಗಾವಣೆಗೆ ಕಣ್ಣೀರಿಟ್ಟ ಮಹಿಳೆ
ಚಿಕ್ಕಮಗಳೂರು: ಜಿಲ್ಲಾಧಿಕಾರಿಯಾಗಿದ್ದ ಕೆ.ಎನ್ ರಮೇಶ್ ವರ್ಗಾವಣೆ ಹಿನ್ನಲೆಯಲ್ಲಿ ಮಹಿಳೆಯೊಬ್ಬರು ಉಡುಗೊರೆ ನೀಡಿ ಕಣ್ಣೀರಿಟ್ಟಿದ್ದಾರೆ.
ಕಳೆದ 2 ವರ್ಷದಿಂದ ಚಿಕ್ಕಮಗಳೂರು ಜಿಲ್ಲಾಧಿಕಾರಿಯಾಗಿದ್ದ ಕೆ.ಎನ್ ರಮೇಶ್ ವರ್ಗಾವಣೆಗೊಂಡಿದ್ದು, ಚಿಕ್ಕಮಗಳೂರು ಜಿಲ್ಲಾಧಿಕಾರಿಯಾಗಿದ್ದಾಗ ಜಮೀನು ದಾಖಲೆ ಮಾಡಿಕೊಟ್ಟಿದ್ದನ್ನ ಮಹಿಳೆಯೊಬ್ಬರು ನೆನೆದು ತನ್ನ ತೋಟದಲ್ಲಿ ಸಾವಯವ ಗೊಬ್ಬರದಲ್ಲಿ ಬೆಳೆದ ತರಕಾರಿ ನೀಡಿ ಕೃತಜ್ಞತೆಯ ಕಣ್ಣೀರು ಸುರಿಸಿದರು.