Wednesday, November 29, 2023
Homeಮಲೆನಾಡುಚಿಕ್ಕಮಗಳೂರುಶೃಂಗೇರಿ; ಭ್ರಷ್ಟಾಚಾರವನ್ನು ಪ್ರಶ್ನಿಸಿದ್ದಕ್ಕೆ ಉಚ್ಛಾಟನೆ ಕುತಂತ್ರ ಮಾಡುತ್ತಿದ್ದಾರೆ

ಶೃಂಗೇರಿ; ಭ್ರಷ್ಟಾಚಾರವನ್ನು ಪ್ರಶ್ನಿಸಿದ್ದಕ್ಕೆ ಉಚ್ಛಾಟನೆ ಕುತಂತ್ರ ಮಾಡುತ್ತಿದ್ದಾರೆ

ಶೃಂಗೇರಿ; (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿ ತಾಲ್ಲೂಕು ಬಿಜೆಪಿ ಘಟಕದಿಂದ ಈ ಹಿಂದೆ ಪತ್ರಿಕಾ ಹೇಳಿಕೆ ನೀಡಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿರುವ ಆರೋಪದ ಮೇರೆಗೆ ಬಿಜೆಪಿ ಅಸಂಘಟಿತ ಕಾರ್ಮಿಕರ ಪ್ರಕೋಷ್ಟದ ಜಿಲ್ಲಾ ಸಂಚಾಲಕ ಉದಯ್ ಆನೆಗುಂದ ಹಾಗೂ ಧರೆಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯರಾದ ಭಾನುಪ್ರಕಾಶ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕಾಗಿ ಜಿಲ್ಲಾ ಅಧ್ಯಕ್ಷರಿಗೆ ಪತ್ರ ಬರೆದಿದ್ದರು.

ಇದನ್ನೂ ಓದಿ; ಸಿ.ಟಿ ರವಿ ಗೆ ಶಾಕ್ ನೀಡಲು ಶಾಸಕ ಹೆಚ್ ಡಿ ತಮ್ಮಯ್ಯ ಕಸರತ್ತು

ಇದನ್ನೂ ಓದಿ; ಕಟ್ಟಡ ಕುಸಿಯುವ ಭೀತಿಯಲ್ಲಿ ಸರ್ಕಾರಿ ಶಾಲೆ

ಇದಕ್ಕೆ ಪತ್ರಿಕಾ ಹೇಳಿಕೆ ಮೂಲಕ ಬಿಜೆಪಿ ಅಸಂಘಟಿತ ಕಾರ್ಮಿಕರ ಪ್ರಕೋಷ್ಟದ ಜಿಲ್ಲಾ ಸಂಚಾಲಕ ಉದಯ್ ಆನೆಗುಂದ ಹೇಳಿಕೆ ನೀಡಿದ್ದಾರೆ.

ಬಿಜೆಪಿ ತಾಲ್ಲೂಕು ಅಧ್ಯಕ್ಷರು ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಲು ಪತ್ರಮುಖೇನ ಜಿಲ್ಲಾಧ್ಯಕ್ಷರಿಗೆ ಮನವಿ ನೀಡಿರುವುದಾಗಿ ತಿಳಿದಿದ್ದು ತಾಲ್ಲೂಕಿನಲ್ಲಾದ ಭ್ರಷ್ಟಾಚಾರವನ್ನು ಪ್ರಶ್ನಿಸಿದ್ದಕ್ಕೆ ಹಾಗೂ ಅದನ್ನು ವಿರೋಧಿಸಿದ್ದಕ್ಕೆ ಉಚ್ಛಾಟನೆ ಮಾಡುವ ಕುತಂತ್ರ ಮಾಡುತ್ತಿದ್ದಾರೆ, ಇಲ್ಲಿನ ಭ್ರಷ್ಟಾಚಾರದ ಎಲ್ಲಾ ಸತ್ಯಾಸತ್ಯತೆಯನ್ನು ಜಿಲ್ಲಾ ಹಾಗೂ ರಾಜ್ಯಮಟ್ಟದ ಪಕ್ಷದ ಮುಖಂಡರಿಗೆ ತಿಳಿಸುತ್ತೇನೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು


ಕಳೆದ 26 ವರ್ಷಗಳಿಂದ ತಾನು ಸಂಘ ಪರಿವಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಬಜರಂಗದಳ ತಾಲ್ಲೂಕು ಸಂಚಾಲಕ, ಜಿಲ್ಲಾ ಸಂಚಾಲಕ, ಹಿಂದೂ ಜಾಗರಣ ವೇದಿಕೆ ಜಿಲ್ಲಾ ಪ್ರಮುಖ ಜವಾಬ್ದಾರಿ ನಿಭಾಯಿಸಿಕೊಂಡು ಬಂದಿದ್ದೇನೆ, ಹಲವಾರು ಕೇಸ್ ಗಳನ್ನು ಹಾಕಿಸಿಕೊಂಡಿದ್ದೇನೆ. ಪ್ರಸ್ತುತ ಅಸಂಘಟಿತ ಕಾರ್ಮಿಕರ ಪ್ರಕೋಷ್ಟದ ಜಿಲ್ಲಾ ಸಂಚಾಲಕ ಆಗಿದ್ದೇನೆ.
ನನ್ನ ಪತ್ನಿ ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ನಾನು ಹಾಗೂ ನನ್ನ ಪತ್ನಿ ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿಯಲ್ಲಿ ನಡೆದ ಭ್ರಷ್ಟಾಚಾರವನ್ನು ವಿರೋಧಿಸಿದ್ದೇ ಇಂದು ಪಕ್ಷದಿಂದ ಉಚ್ಚಾಟನೆ ಮಾಡುವ ಕುತಂತ್ರ ನಡೆಸಲು ಪ್ರಮುಖ ಕಾರಣವಾಗಿದೆ ಎಂದಿದ್ದಾರೆ.

ಇದನ್ನೂ ಓದಿ; ಚಿಕ್ಕಮಗಳೂರು: ಸ್ಟೈಲಾಗಿ ಡ್ರೆಸ್ ಮಾಡ್ಕೊಂಡು ಹಣ ವಸೂಲಿಗಿಳಿದ ಲೇಡಿ ಗ್ಯಾಂಗ್

ಇದನ್ನೂ ಓದಿ; ಕಡೂರು ತಾಲ್ಲೂಕು ಕಛೇರಿ sda ಕಿರಣ್ ಕುಮಾರ್ ಅಮಾನತು; ಜಿಲ್ಲಾಧಿಕಾರಿಗಳಿಂದ ಆದೇಶ

ಶೃಂಗೇರಿಯಲ್ಲಿ 94ಸಿ ಹಕ್ಕುಪತ್ರ ಹಗರಣದಲ್ಲಿ ಹತ್ತಾರು ಕೋಟಿ ಭ್ರಷ್ಟಾಚಾರ ಆಯಿತು, ನರೇಂದ್ರ ಮೋದಿಜಿಯವರ ಆಶಯವನ್ನು ಗಾಳಿಗೆ ತೂರಿ ಸ್ಥಳೀಯ ಬಿಜೆಪಿ ನಾಯಕರೇ ಈ ಭ್ರಷ್ಟಾಚಾರದ ನೇರ ರೂವಾರಿಗಳಾಗಿ ಕೆಲಸ ಮಾಡಿದರು. ಬಡವರಿಂದ ಹಣವಸೂಲಿ ಮಾಡಿ ಅನ್ಯಾಯ ಮಾಡಿದರು. ಆ ಸಂದರ್ಭದಲ್ಲಿ ನಾನು ಅದನ್ನು ವಿರೋಧಿಸಿದ್ದೆ, ನಕಲಿ ಹಕ್ಕುಪತ್ರಕ್ಕೆ ಹಣ ಪಡೆದು ಈ ಸ್ವತ್ತು ನೀಡಲಾಗುತ್ತಿತ್ತು ಅದನ್ನು ನಾನು ಹಾಗೂ ವಿದ್ಯಾರಣ್ಯಪುರ ಪಂಚಾಯಿತಿ ಸದಸ್ಯೆಯಾದ ನನ್ನ ಪತ್ನಿ ವಿರೋಧಿ‌ಸಿದ್ದೆವು ಆ ಕಾರಣದಿಂದ ನನ್ನ ಮೇಲೆ ದ್ವೇಷ ಸಾಧಿಸಿ ಈಗ ಇಂತಹ ಕುತಂತ್ರ ಮಾಡಿದ್ದಾರೆ.

ಪರಾಜಿತ ಬಿಜೆಪಿ ಅಭ್ಯರ್ಥಿಯಾದ ಡಿ.ಎನ್ ಜೀವರಾಜ್ ಅವರ ಬೂತ್ ನಲ್ಲಿಯೇ ಬಿಜೆಪಿಗೆ ಹಿನ್ನಡೆಯಾಗಿದೆ, ಇವರು ಹಾಗೂ ಇವರ ಕೆಲವು ಬೆಂಬಲಿಗರ ಮೇಲಿದ್ದ ತಿರಸ್ಕಾರ ಭಾವನೆಯೇ ಈ ಚುನಾವಣೆ ಸೋಲಿಗೆ ಕಾರಣ ಆದರೆ ಅದನ್ನು ನಮ್ಮ ತಲೆಗೆ ಕಟ್ಟುವ ಪ್ರಯತ್ನ ಮಾಡಲಾಗುತ್ತಿದೆ.
ಶೃಂಗೇರಿ ಹಕ್ಕುಪತ್ರ ಹಗರಣದಿಂದ ಕನಿಷ್ಠ 1000 ಓಟು ಬಿಜೆಪಿಗೆ ನಷ್ಟವಾಗಿದೆ. ಹಗರಣದಲ್ಲಿ ಭಾಗಿಯಾದವರು ಈ ಸೋಲಿಗೆ ಬಹುಮುಖ್ಯ ಪಾತ್ರ ವಹಿಸುತ್ತಾರೆ.

ಇದನ್ನೂ ಓದಿ; ವಿನಯ್ ಗುರೂಜಿ ಹೆಸರಲ್ಲಿ ಫೇಕ್ ಅಕೌಂಟ್ ಮಾಡಿ ಏನು ಮೆಸೇಜ್ ಮಾಡ್ತಿದ್ದಾರೆ ಗೊತ್ತಾ?

ಪರಿವಾರದ ವಿವಿಧ ಸಂಘಟನೆಗಳಲ್ಲಿ ಹಲವು ದಶಕಗಳಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿಕೊಂಡು ಬಂದಿರುವವರನ್ನು ಕ್ಷೇತ್ರದಲ್ಲಿ ಮೂಲೆಗುಂಪು ಮಾಡಿ ಇವರುಗಳಿಗೆ ಚಮಚಾಗಿರಿ ಮಾಡುವವರಿಗೆ ಪಕ್ಷದಲ್ಲಿ ವಿವಿಧ ಜವಾಬ್ದಾರಿ ನೀಡಿ ಕೂರಿಸಿದ್ದಾರೆ. ಇವರುಗಳ ಮುಖ ನೋಡಿ ಓಟು ಹಾಕುವವರು ಇಲ್ಲವಾದ ಕಾರಣ ಪಕ್ಷಕ್ಕೆ ಹಿನ್ನೆಡೆ ಉಂಟಾಗಿದೆ.
ಚುನಾವಣೆ ಗೆದ್ದಿದ್ದರೆ ನನ್ನಿಂದಲೇ ಎಂದು ಬಹಳಷ್ಟು ಜನರು ಲೈನಿನಲ್ಲಿ ನಿಂತಿರುತ್ತಿದ್ದರು ಈಗ ಸೋತ ಕಾರಣ ಯಾರ ಮೇಲೆ ಹಾಕುವುದು ಎಂದು ಹುಡುಕುತ್ತಿದ್ದಾರೆ.
ಇದು ನೈತಿಕತೆ ಇಲ್ಲದವರು ಮಾಡುವ ಕೆಲಸವಾಗಿದೆ.

ಇದನ್ನೂ ಓದಿ;  ಕಾದ ಕಾವಲಿಯಂತಿದ್ದ ಜಿಲ್ಲೆಗೆ ತಂಪೆರೆದ ಮಳೆರಾಯ, ಹಲವೆಡೆ ಅವಾಂತರ ಸೃಷ್ಟಿ

ಪಕ್ಷದ ಅಧ್ಯಕ್ಷರುಗಳು ಹಾಗೂ ಪಕ್ಷದ ಚಿಹ್ನೆಯಲ್ಲಿ ಗೆದ್ದಿರುವ ಪಕ್ಷದ ಮುಖಂಡರು ಈ ಸೋಲಿಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಅದನ್ನು ಬಿಟ್ಟು ನಿಮ್ಮ ಕುತಂತ್ರ ರಾಜಕಾರಣದಿಂದ ಆದ ಹಿನ್ನಡೆಗೆ ಬೇರೆಯವರನ್ನು ಬಲಿಯಾಗಿಸಬೇಡಿ.
ಪಕ್ಷದಲ್ಲಿ ಇದ್ದುಕೊಂಡು ಭ್ರಷ್ಟಾಚಾರ, ಅಕ್ರಮ ವ್ಯವಹಾರಗಳಲ್ಲಿ ಭಾಗಿಯಾದವರು ಪಕ್ಷ ದ್ರೋಹಿಗಳೇ ಹೊರತು ನಾವಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ; ಬೆಂಗಳೂರಿಂದ ಚಿಕ್ಕಮಗಳೂರಿಗೆ 6 ಅತ್ಯಾಧುನಿಕ ‘ಎಲೆಕ್ಟ್ರಿಕ್ ಬಸ್’

ಹಾಗೂ ಕಳೆದ ವಿಧಾನಸಭಾ ಚುನಾವಣೆಯ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲು, ನನ್ನನ್ನು ಯಾರೂ ಸಹ ಚುನಾವಣಾ ಪ್ರಚಾರಕ್ಕೆ ಕರೆದಿರಲಿಲ್ಲ.
ಆದರೆ ನಮ್ಮ ಗ್ರಾಮದ ಮತದಾರರ ಮನೆಯ ಪಟ್ಟಿ ಮಾಡಿದ್ದ ಬಿಜೆಪಿ ಮುಖಂಡರು ನಮ್ಮ ಮನೆಯನ್ನು ಸಿ ಪಟ್ಟಿಗೆ ಸೇರಿಸಿದ್ದರು, ಸಿ ಅಂದರೆ ಬಿಜೆಪಿಗೆ ಮತ ಹಾಕದವರು ಎಂಬ ಅರ್ಥ. ಹಾಗೆ ಸೇರಿಸಿ ನಮ್ಮನ್ನು ಚುನಾವಣೆ ಪ್ರಕ್ರಿಯೆಯಿಂದ ಮೊದಲೇ ಹೊರಗೆ ಇಟ್ಟಿದ್ದರು. ಆದರೆ ಗ್ರಾಮದಲ್ಲಿ ಬಿಜೆಪಿ ಮುಖಂಡರು ಪ್ರಚಾರಕ್ಕೆ ಹೋದಾಗ ಹಕ್ಕುಪತ್ರ ಹಗರಣದಲ್ಲಿ ಹಣ ಕಳೆದುಕೊಂಡ ಬಡವರು ತಿರುಗಿಬಿದ್ದ ಕಾರಣ ಆ ಸಂದರ್ಭದಲ್ಲಿ ಅಸಮಾಧಾನ ಸರಿಪಡಿಸಲು ಮಾತ್ರ ನಮ್ಮನ್ನು ಕರೆದಿದ್ದರು ಎಂದು ಉದಯ್ ಆನೆಗುಂದ ಆರೋಪಿಸಿದ್ದಾರೆ.

ಇದನ್ನೂ ಓದಿ; ಚಿಕ್ಕಮಗಳೂರಿನಲ್ಲಿ ಮತ್ತೊಂದು ದುರ್ಘಟನೆ; ಒಂದೇ ಕುಟುಂಬದ ಮೂವರು ಸಾವು

Most Popular

Recent Comments