Sringeri News: ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಮೂರು ತಿಂಗಳ ಹಿಂದೆ ಕೊಲೆ ಮಾಡಿ ಶವವನ್ನು ಮನೆಯ ಸಮೀಪ ಹೂತುಹಾಕಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನಲ್ಲಿ ನಡೆದಿದೆ. ವಾಸಂತಿ (42) ಕೊಲೆಯಾಗಿರುವ ಮಹಿಳೆ
ಮೂರು ತಿಂಗಳ ಹಿಂದೆ ನಡೆದಿದ್ದ ಕೊಲೆ:
ಎಪ್ರಿಲ್ 29ರ ಬೆಳಿಗ್ಗೆ, ಶೃಂಗೇರಿ ತಾಲ್ಲೂಕಿನ ತ್ಯಾವಣ ಸಮೀಪದ ವಾಸಂತಿ ಮನೆ ಬಿಟ್ಟು ಹೋಗಿದ್ದಳು. ಆ ಬಳಿಕ ಪುತ್ರ ನವೀನ್ ಇಲ್ಲೇ ಎಲ್ಲಾದರೂ ಸಂಬಂಧಿಗಳ ಮನೆಗೆ ಹೋಗಿರಬಹುದು ಎಂದು ಹುಡುಕಾಡಿದ್ದಾರೆ. ಹತ್ತು ದಿನಗಳ ಬಿಳಿಕವೂ ಕಾಣೆಯಾದ ತನ್ನ ತಾಯಿಯ ಕುರಿತಂತೆ ಸುಳಿವು ಸಿಗದ ಹಿನ್ನಲೆ, ಶೃಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
Sringeri News: ಏನಿದು ಘಟನೆ.. ಹೇಗಾಯ್ತು ಕೊಲೆ?
ಕಳಸ ಮೂಲದ ಪ್ರಕಾಶ್ (29) ತ್ಯಾವಣದ ಪ್ಲಾಂಟೇಶನ್ ಒಂದರಲ್ಲಿ ಕೆಲಸಕ್ಕೆ ಇದ್ದ. ಕಳೆದ ಒಂದು ವರ್ಷದಿಂದ ಆರೋಪಿ ಪ್ರಕಾಶ್ ವಾಸಂತಿ ಜೊತೆಗೆ ಸಂಪರ್ಕದಲ್ಲಿದ್ದ. ಮಾರ್ಚ್ 17ನೇ ತಾರೀಖು ಪ್ರಕಾಶ್ ಬೇರೊಬ್ಬರ ಜೊತೆ ಮದುವೆಯಾಗಿದ್ದ. ಆ ಬಳಿಕ ವಾಸಂತಿ ಪ್ರಕಾಶ್ ಗೆ, ತನ್ನನ್ನು ಭೇಟಿಯಾಗಲು ತಿಳಿಸಿದ್ದಾಳೆ. ನನ್ನ ಜೊತೆ ಸಂಬಂಧ ಹೊಂದಿದ್ದು, ಹೇಗೆ ಬೇರೆಯವರನ್ನ ಮದುವೆಯಾಗಿದ್ದೀಯಾ, ನಾನು ಈಗ ವಿಷ ಕುಡಿತೀನಿ ಎಂದು ಹೆದರಿಸಿದ್ದಾಳೆ. ಮಾತಿಗೆ ಮಾತು ಬೆಳೆದು ಇಬ್ಬರ ಮಧ್ಯೆ ಜಗಳ ಪ್ರಾರಂಭವಾಗಿದೆ. ಕೋಪಗೊಂಡ ಪ್ರಕಾಶ್ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ಬಲವಾಗಿ ಹೊಡೆತ ಬಿದ್ದ ಹಿನ್ನಲೆ ವಾಸಂತಿ ಜ್ಞಾನ ತಪ್ಪಿದ್ದಾಳೆ. ಬಳಿಕ ಪ್ರಕಾಶ್ ಆಕೆಗೆ ನೀರು ಕುಡಿಸಲು ಪ್ರಯತ್ನಿಸಿದ್ದಾನೆ. ಆದ್ರೆ ಎದ್ದೇಳದ್ದನ್ನು ಕಂಡ ಪ್ರಕಾಶ್ ಗೆ ವಾಸಂತಿ ಸತ್ತಿರೋದು ವಿಚಾರ ತಿಳಿದಿದೆ.
ಕಾಡಿನಲ್ಲಿ ಹೆಣ ಹೂತಿಟ್ಟಿದ್ದ ಆರೋಪಿ
ವಾಸಂತಿ ಜೀವ ಹೋಗಿದೆ ಎನ್ನೋದು ಗೊತ್ತಾಗ್ತಿದ್ದಂತೆ ಎಚ್ಚತ್ತ ಪ್ರಕಾಶ್, ಆಕೆಯನ್ನು ಮನೆಯ ಸಮೀಪದ ಕಾಡಿನಲ್ಲಿ ಬಿದ್ದಿದ್ದ ಮರವೊಂದರ ಬುಡದಲ್ಲಿ ಹೂತಿಟ್ಟಿದ್ದಾನೆ.
ಇದನ್ನೂ ಓದಿ; ಕಡೂರು ಸಮೀಪ ಕೈ ಶಾಸಕನ ಆಪ್ತನ ಕಾರು ಡಿಕ್ಕಿ: ಓರ್ವ ಸ್ಥಳದಲ್ಲೇ ಸಾವು, ಚಾಲಕ ಪರಾರಿ
ಫೋನ್ ಕಾಲ್ ನಿಂದ ಗೊತ್ತಾಯ್ತು ಆರೋಪಿಯ ಸುಳಿವು
ಮಿಸ್ಸಿಂಗ್ ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ವಾಸಂತಿಯ ಫೋನ್ ಕಾಲ್ ಡಿಟೇಲ್ಸ್ ತೆಗೆಸಿದ್ದಾರೆ. ಆಕೆ ಮನೆಯಿಂದ ಕಾಣೆಯಾದ ವೇಳೆ ಪ್ರಕಾಶ್ ಗೆ ಅನೇಕ ಬಾರಿ ಕರೆ ಮಾಡಿದ ಮಾಹಿತಿ ಪೊಲೀಸರಿಗೆ ದೊರೆತಿದೆ. ಕೂಡಲೇ ಆರೋಪಿಯನ್ನು ಪತ್ತೆ ಹಚ್ಚಿ ವಿಚಾರಣೆಗೊಳಪಡಿಸಿದಾಗ ಆರೋಪಿ ಪ್ರಕಾಶ್ (29) ಸತ್ಯ ಬಾಯ್ನಿಟ್ಟಿದ್ದಾನೆ. ಸಧ್ಯ ಪೊಲೀಸರು ಪ್ರಕಾಶ್ ನನ್ನು ಬಂಧಿಸಿದ್ದಾರೆ. ಘಟನಾ ಸಂಬಂಧ ಸ್ಥಳಕ್ಕೆ ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಿನ್ನೆಯ ಪ್ರಮುಖ ಸುದ್ದಿಗಳನ್ನು ಓದಿ
- ಕಾಫಿತೋಟದಲ್ಲಿ ಕಾಡಾನೆ ದಾಂಧಲೆ; ಮರದ ಮೇಲೆ ನಿಂತು ವಿಡಿಯೋ ಮಾಡಿದ ವ್ಯಕ್ತಿ
- ಶೃಂಗೇರಿಯಿಂದ ಹೊರ ಹೊಮ್ಮುವ ಪಟ್ಟಣ ಹಾಗೂ ಗ್ರಾಮೀಣ ಫೀಡರ್ ಗಳಲ್ಲಿ ವಿದ್ಯುತ್ ನಿಲುಗಡೆ
- ಒಂಟಿ ಸಲಗ ದಾಳಿಗೆ ಮತ್ತೊಂದು ಬಲಿ
- ಪ್ಯಾಕೆಟ್ ಮಾಡಿ ಸ್ಕೂಟರ್ ನಲ್ಲಿ ದನದ ಮಾಂಸದ ಹೋಂ ಡೆಲಿವರಿ: ಇಬ್ಬರ ಬಂಧನ
- ಶೃಂಗೇರಿ: ಇಂದಿನಿಂದ ಸಿರಿಮನೆ ಜಲಪಾತ ವೀಕ್ಷಣೆಗೆ ಮುಕ್ತ
- ನಿಮಗೆ ಮಧುಮೇಹ&ಕೊಲೆಸ್ಟ್ರಾಲ್ ಇದೀಯಾ?; ಈ ಅರೋಗ್ಯದ ಸಮಸ್ಯೆಯ ಪರಿಹಾರಕ್ಕೆ ಇಲ್ಲಿದೆ ಟಿಪ್ಸ್
- ಬೇಲ್ ಬಗ್ಗೆ ನಿಮಗೆಷ್ಟು ಗೊತ್ತು?; ಯಾರು ಯಾವಾಗ ಜಾಮೀನು ಪಡೆಯಬಹುದು?
- ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್; ಈ ದಿನದಿಂದ ರೇಷನ್ ಕಾರ್ಡ್ ನಲ್ಲಿ ಹೆಸರು ತಿದ್ದುಪಡಿಗೆ ಅವಕಾಶ
- ಸ.ಹಿ.ಪ್ರ ಶಾಲೆ ಆನೆಗುಂದದಲ್ಲಿ 77 ನೇ ಸ್ವಾತಂತ್ರ‍್ಯ ದಿನಾಚರಣೆ
- ಸಂಜೆ ದೀಪ ಹಚ್ಚಿದ ಮೇಲೆ ಉಗುರು ತೆಗೀಬಾರ್ದು ಅನ್ನೋದೇಕೆ?; ಇದರ ಬಗ್ಗೆ ಹಿರಿಯರ ಹತ್ತಿರ ಕೇಳಿದ್ರೆ ಉತ್ತರ ಇಲ್ಲ
- ಮಲೆನಾಡಿನಲ್ಲಿ ನಾನು ಮತ್ತು ಗುಂಡ ಭಾಗ-2 ಚಿತ್ರ ತಂಡ; ಮಲೆನಾಡಿನ ಜನರ ಗುಣ ಇಡೀ ನಮ್ಮ ಚಿತ್ರತಂಡಕ್ಕೆ ಬಹಳ ಸಂತೋಷವಾಗಿದೆ- ನಿರ್ದೇಶಕ ರಘು ಹಾಸನ್
- ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಗನ್ ಮ್ಯಾನ್; ಸರ್ಕಾರದಿಂದ ಆದೇಶ
- ಈ ಟಿಪ್ಸ್ ಫಾಲೊ ಮಾಡಿದ್ರೆ ನಿಮ್ಮ ಹಲ್ಲುಗಳು ಹಾಳಾಗೋದಿಲ್ಲ; ಫಳ ಫಳ ಹೊಳೆಯುತ್ತೆ!
- ಪದೆ ಪದೇ ಲಟಿಕೆ ತೆಗೀತಾನೇ ಇರ್ತೀರಾ?; ಈ ಅಭ್ಯಾಸವಿದೆಯೇ? ಇದು ಒಳ್ಳೇಯದಲ್ಲ!
- ಪಾಕಶಾಲೆಯ ಮಾಸ್ಟರ್ ಕಾಳುಮೆಣಸಿನಲ್ಲಿ ಇದೆ ಔಷಧ ಗುಣ; ಕಾಳುಮೆಣಸನಿಂದ ಎಷ್ಟೊಂದು ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸಬಹುದು ಗೊತ್ತಾ?
- ಚಿಕ್ಕಮಗಳೂರು: ಯುವಕನಿಗೆ ಕಾರ್ ಡಿಕ್ಕಿ ಹೊಡೆದ ಪ್ರಕರಣಕ್ಕೆ ಟ್ವಿಸ್ಟ್; ಗೆಳೆಯನನ್ನೇ ಮುಗಿಸೋಕೆ ಫ್ರೆಂಡ್ ಸ್ಕೆಚ್
- ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-19.08.2023
- ಮಲೆನಾಡ ಘಟ್ಟಪ್ರದೇಶದ ಕೆಲ ಭಾಗದಲ್ಲಿ ಜೋರು ಮಳೆ; ಜಿಲ್ಲಾದ್ಯಂತ ಮೋಡ ಕವಿದ ವಾತಾವರಣ
- ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಣದ್ರಾಕ್ಷಿ ನೆನೆಸಿದ ನೀರನ್ನು ಕುಡಿದರೆ ಏನಾಗಬಹುದು.?; ಒಣದ್ರಾಕ್ಷಿ ನೀರು ಕುಡಿದರೆ ಆರೋಗ್ಯಕ್ಕೆ ಪ್ರಯೋಜನ ಇದೆಯಾ?
intresting story ಓದಲು ಇಲ್ಲಿ ಕ್ಲಿಕ್ ಮಾಡಿ