ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಇಲ್ಲಿನ ಪಟ್ಟಣದ ಬಿಜಿಎಸ್ (ವೆಂಕಟೇಶ್ವರ ವಿದ್ಯಾ ಮಂದಿರ) ಶಾಲೆಯಲ್ಲಿ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ.

ಡೆತ್ ನೋಟ್ ನಲ್ಲಿ ಬಯಲಾಯ್ತು ಸತ್ಯ;
ಕೇವಲ 750 ರೂ. ಸಾಲಕ್ಕೆ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಆಘಾತಕಾರಿ ಅಂಶ ಹೊರಬಿದ್ದಿದೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಹಿರೇಬಳ್ಳೇಕೆರೆ ಮೂಲದ ವಿದ್ಯಾರ್ಥಿ ಶ್ರೀನಿವಾಸ್ ಆಗಸ್ಟ್ 22ರಂದು ಹಾಸ್ಟೆಲ್ ನಲ್ಲಿ ನೇಣುಬಿಗಿದುಕೊಂಡಿದ್ದ. ಆದರೆ ಇದೀಗ ವಿದ್ಯಾರ್ಥಿ ಬರೆದಿಟ್ಟಿದ್ದ ಡೆತ್ ನೋಟ್ ವೈರಲ್ ಆಗಿವೆ. ಡೆತ್ ನೋಟ್ ಪ್ರಕಾರ ಆತ 750 ರೂ. ಸಾಲ ತೆಗೆದುಕೊಂಡಿದ್ದು ಆತ 3000 ವಾಪಾಸ್ ಕೇಳಿದ್ದಾನೆ. ಇದರಿಂದ ಮಾನಸಿಕ ಒತ್ತಡಕ್ಕೊಳಗಾದ ಶ್ರೀನಿವಾಸ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಡೆತ್ ನೋಟ್ ನಲ್ಲಿ ಏನಿದೆ?
ಇದೀಗ ವೈರಲ್ ಆಗಿರುವ ಡೆತ್ ನೋಟ್ ನಲ್ಲಿ ನನ್ನ ಸಾವಿಗೆ ಕಾರಣ ಇಬ್ಬರು ಕಾರಣ ಎಂದು ಉಲ್ಲೇಖಿಸಿದ್ದಾನೆ ಬರೆದುಕೊಂಡಿದ್ದಾನೆ ಎನ್ನಲಾಗಿದೆ.
ಮಗನ ಸಾವಿಗೆ ನ್ಯಾಯ ನ್ಯಾಯ ಕೊಡಿಸಿ ಎಂದು ತಂದೆ ಕಣ್ಣೀರು;
ಮೃತ ವಿದ್ಯಾರ್ಥಿ ಶ್ರೀನಿವಾಸ್ ಅವರ ತಂದೆ ರಮೇಶ್ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಸದ್ಯ ಕಂದಾಯ ಇಲಾಖೆಯಲ್ಲಿ ಗ್ರಾಮ ಆಡಳಿತಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ತನ್ನ ಮಗನ ಡೆತ್ ನೋಟ್ ನೋಡಿ ಕಣ್ಣೀರಿಟ್ಟಿರುವ ರಮೇಶ್, ಮಗನ ಸಾವಿನ ಕುರಿತು ಅನುಮಾನ ವ್ಯಕ್ಯಪಡಿಸಿದ್ದಾರೆ. ಈ ರೀತಿಯ ಸಾವು ಮುಂದೆ ಯಾವ ವಿದ್ಯಾರ್ಥಿಗೂ ಬಾರದಿರಲಿ ಎಂದು ಹೇಳಿದ್ದಾರೆ. ಮಗನ ಕುರಿತಂತೆ ಸಾಕಷ್ಟು ಕನಸು ಕಟ್ಟಿಕೊಂಡಿದ್ದ ಪೊಷಕರು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.