(Lok Sabha Elections) ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಕರ್ನಾಟಕದ 17 ಕ್ಷೇತ್ರಗಳಿಗೆ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿ ಅಭ್ಯರ್ಥಿಗಳ ಘೋಷಣೆ ಮಾಡಿದೆ. ಈ ಮೂಲಕ ಒಟ್ಟು 24 ಕ್ಷೇತ್ರಗಳಿಗೆ ಅಭ್ಯರ್ಥಿ ನಿಗದಿಯಾದಂತಾಗಿದೆ. ಇದೇ ತಿಂಗಳ ಮಾರ್ಚ್ 8 ರಂದು ಕರ್ನಾಟಕದ ಏಳು ಲೋಕಸಭಾ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿದ್ದ ಕಾಂಗ್ರೆಸ್, ಈಗ ತನ್ನ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಉಳಿದಂತೆ 4 ಕ್ಷೇತ್ರಗಳಿಗೆ ಅಭ್ಯರ್ಥಿ ಬಾಕಿ ಇದೆ.
ಇದನ್ನೂ ಓದಿ; ಕೇಂದ್ರದ ಹೊಸ ಯೋಜನೆ; ನಿರುದ್ಯೋಗಿ ಮಹಿಳೆಯರಿಗೆ ಸಿಗಲಿದೆ 4000 ರೂ!
ಕೊನೆಗೂ ಜಯಪ್ರಕಾಶ್ ಹೆಗ್ಡೆಗೆ ಟಿಕೆಟ್ ಘೋಷಣೆ:(Lok Sabha Elections)
ಉಡುಪಿ ಚಿಕ್ಕಮಗಳೂರು ಕ್ಷೇತ್ರಕ್ಕೆ ಕಾಂಗ್ರೆಸ್ ಯಿಂದ ಜಯಪ್ರಕಾಶ್ ಹೆಗ್ಡೆಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲೂ ನಡೆದಿದ್ದ “ಗೋ ಬ್ಯಾಕ್ ಜೆ.ಪಿ.ಹೆಗ್ಡೆ” ಅಭಿಯಾನ ಸದ್ಯಕ್ಕೆ ಯಾವುದೇ ಫಲ ನೀಡಿಲ್ಲ. ಚಿಕ್ಕಮಗಳೂರು ಜಿಲ್ಲೆಯ ಕಾಂಗ್ರೆಸ್ ಮುಖಂಡ ಸುಧೀರ್ ಕುಮಾರ್ ಮುರೊಳ್ಳಿ ಅವರಿಗೆ ಟಿಕೇಟ್ ನೀಡಿ ಎಂಬ ಕೈ ಕಾರ್ಯಕರ್ತರ ಬೇಡಿಕೆಗೆ ಮನ್ನಣೆ ಸಿಕ್ಕಿಲ್ಲ. 2017 ಕ್ಕೆ ಬಿಜೆಪಿ ಸೇರಿ ಇದೀಗ ಮತ್ತೆ ‘ಕೈ’ ಹಿಡಿದಿರುವ ಜಯಪ್ರಕಾಶ್ ಹೆಗ್ಡೆ ಅವರಿಗೆ ಕಾಂಗ್ರೆಸ್ ಮಣೆ ಹಾಕಿದ್ದು, ಚಿಕ್ಕಮಗಳೂರಿನ ಕೈ ಕಾರ್ಯಕರ್ತರ ಅಸಮಾದಾನ ಎದುರಿಸಿ ಜಯಪ್ರಕಾಶ್ ಹೆಗ್ಡೆ ಪೈಪೋಟಿ ನೀಡಬೇಕಿದೆ.
ಇದನ್ನೂ ಓದಿ; ರೈಲ್ವೆ ಇಲಾಖೆಯಲ್ಲಿ ಉದ್ಯೋಗ: 10th ಪಾಸಾದವರು ಈಗಲೇ ಅರ್ಜಿ ಸಲ್ಲಿಸಿ
ಬಿಜೆಪಿ ರಾಜಕೀಯ ದಾಳಕ್ಕೆ ಕಾಂಗ್ರೆಸ್ ಕಂಗಾಲು:
ಕಾಂಗ್ರೆಸ್ ಪಕ್ಷಕ್ಕೂ ಮೊದಲು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಣೆ ಮಾಡುವ ಮೂಲಕ ಕೈ ಪಕ್ಷಕ್ಕೆ ಬಿಜೆಪಿ ಟೆನ್ಶನ್ ಕೊಟ್ಟಿತ್ತು. ಶೋಭಾ ಕರಂದ್ಲಾಜೆಗೆ ಟಿಕೆಟ್ ಸಿಗಬಹುದು ಎಂದು ಕಾಂಗ್ರೆಸ್ ಲೆಕ್ಕಾಹಾರ ಹಾಕಿ, ಜಯಪ್ರಕಾಶ್ ಹೆಗ್ಡೆ ಅವರನ್ನು ಪಕ್ಷಕ್ಕೆ ಸೆಳೆದುಕೊಂಡಿತ್ತು. ಆದರೆ ಹಿಂದುಳಿದ ವರ್ಗದ ನಾಯಕನಿಗೆ ಟಿಕೆಟ್ ಕೊಟ್ಟು ಬಿಜೆಪಿ ರಾಜಕೀಯ ದಾಳ ಉರುಳಿಸಿದ್ದು, ಅನಿರೀಕ್ಷಿತ ಅಚ್ಚರಿ ಎಂಬಂತೆ ಕೋಟ ಶ್ರೀನಿವಾಸ ಪೂಜಾರಿಗೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಲಾಗಿದೆ.
ಇದನ್ನೂ ಓದಿ; ಒಂದೇ ವಾರದಲ್ಲಿ ಸಖತ್ ಸದ್ದು ಮಾಡಿದ ‘ರಾಜಕೀಯ’ ರ‍್ಯಾಪ್ ಸಾಂಗ್; ಯಾರು ಈ ಕೊಪ್ಪದ ರ‍್ಯಾಪರ್ ಚೇತನ್.. ಹೇಗಿದೆ ಸಾಂಗ್..?
ಬಿಜೆಪಿ ಗೌಡ ಸಮುದಾಯದ ಶೋಭಾ ಕರಂದ್ಲಾಜೆ ಗೆ ಟಿಕೆಟ್ ಎಂದು ಭಾವಿಸಿದ್ದ ಕಾಂಗ್ರೆಸ್, ಬಂಟ ಸಮುದಾಯದ ಜಯಪ್ರಕಾಶ್ ಹೆಗ್ಡೆಯನ್ನು ಪಕ್ಷಕ್ಕೆ ಸೆಳೆದಿತ್ತು. ಬದಲಾದ ಪರಿಸ್ಥಿತಿಯಲ್ಲಿ ಶೋಭಾ ಕರಂದ್ಲಾಜೆ ಬೆಂಗಳೂರು ಉತ್ತರಕ್ಕೆ ಶಿಫ್ಟ್ ಆಗಿ ಶೋಭಾ ಸ್ಥಾನಕ್ಕೆ ಶ್ರೀನಿವಾಸ ಪೂಜಾರಿಯನ್ನು ಘೋಷಣೆ ಮಾಡಿತ್ತು. ಹೀಗೆ ಹೊಸ ಅಭ್ಯರ್ಥಿ ಘೋಷಣೆ ಮಾಡಿ ಕಾಂಗ್ರೆಸ್ ಗೆ ಟೆನ್ಶನ್ ಕೊಟ್ಟಿದ್ದ ಬಿಜೆಪಿ, ಬಿಲ್ಲವ ಅಭ್ಯರ್ಥಿ ಎದುರು ಯಾರನ್ನು ಕಣಕ್ಕಿಳಿಸಬೇಕೆಂದು ಅಳೆದು ತೂಗಿ ಕೊನೆಗೂ ಉಡುಪಿ ಚಿಕ್ಕಮಗಳೂರು ಕ್ಷೇತ್ರಕ್ಕೆ ಜಯಪ್ರಕಾಶ್ ಹೆಗ್ಡೆಗೆ ಟಿಕೆಟ್ ಘೋಷಣೆ ಆಗಿದೆ.
ಇದನ್ನೂ ಓದಿ; ಇಂತಹವರಿಗೆ ಮಾತ್ರ ಹೊಸ ರೇಷನ್ ಕಾರ್ಡ್ ವಿತರಣೆ!; ಯಾವಾಗ ಹೊಸ ಪಡಿತರ ಚೀಟಿ ವಿತರಣೆ
ಕಾಂಗ್ರೆಸ್ ನ 17 ಕ್ಷೇತ್ರಗಳ ಟಿಕೆಟ್ ಯಾರಿಗೆ:(Lok Sabha Elections)
- ಚಿತ್ರದುರ್ಗ -ಬಿ.ಎನ್.ಚಂದ್ರಪ್ಪ
- ಬೆಳಗಾವಿ – ಮೃಣಾಲ್ ಹೆಬ್ಬಾಳಕರ್
- ಚಿಕ್ಕೊಡಿ – ಪ್ರಿಯಾಂಕಾ ಜಾರಕಿಹೊಳಿ
- ಬಾಗಲಕೋಟೆ – ಸಂಯುಕ್ತಾ ಪಾಟೀಲ್
- ಧಾರವಾಡ – ವಿನೋದ್ ಅಸುಟಿ
- ದಾವಣಗೆರೆ – ಪ್ರಭಾ ಮಲ್ಲಿಕಾರ್ಜುನ
- ಕೊಪ್ಪಳ – ರಾಜಶೇಖರ ಹಿಟ್ನಾಳ್
- ಕಲಬುರಗಿ – ರಾಧಾಕೃಷ್ಣ ದೊಡ್ಡಮನಿ
- ಬೀದರ್ – ಸಾಗರ್ ಖಂಡ್ರೆ
- ದಕ್ಷಿಣ ಕನ್ನಡ – ಪದ್ಮರಾಜ್
- ಉಡುಪಿ -ಚಿಕ್ಕಮಗಳೂರು -ಜಯಪ್ರಕಾಶ್ ಹೆಗ್ಡೆ
- ಬೆಂಗಳೂರು ದಕ್ಷಿಣ – ಸೌಮ್ಯ ರೆಡ್ಡಿ
- ಬೆಂಗಳೂರು ಸೆಂಟ್ರಲ್ -ಮನ್ಸೂರ್ ಅಲಿಖಾನ್
- ಬೆಂಗಳೂರು ಉತ್ತರ -ಪ್ರೊ.ರಾಜೀವ್ ಗೌಡ
- ಮೈಸೂರು -ಎಂ.ಲಕ್ಷ್ಮಣ್
- ರಾಯಚೂರು -ಜಿ.ಕುಮಾರ ನಾಯಕ್
- ಉತ್ತರ ಕನ್ನಡ -ಡಾ.ಅಂಜಲಿ ನಿಂಬಾಳ್ಕರ್
ಇದನ್ನೂ ಓದಿ; ಬೆಳಗಾವಿ ನ್ಯಾಯಾಲಯದಲ್ಲಿ ಉದ್ಯೋಗ; 10th, 12th ಪಾಸ್ ಆದವರು ಈಗಲೇ ಅರ್ಜಿ ಸಲ್ಲಿಸಿ
ಮೊದಲ ಪಟ್ಟಿಯಲ್ಲಿ ಯಾರಿಗೆಲ್ಲಾ ಟಿಕೆಟ್?:
- ಬಿಜಾಪುರ- ಎಚ್.ಆರ್. ಅಲಗೂರು
- ಹಾವೇರಿ- ಆನಂದಸ್ವಾಮಿ ಗಡ್ಡದೇವರ ಮಠ
- ಶಿವಮೊಗ್ಗ- ಗೀತಾ ಶಿವರಾಜ್ ಕುಮಾರ್
- ಹಾಸನ- ಶ್ರೇಯಸ್ ಪಟೇಲ್
- ತುಮಕೂರು- ಎಸ್.ಪಿ. ಮುದ್ದಹನುಮೇಗೌಡ
- ಮಂಡ್ಯ- ವೆಂಕಟರಾಮೇ ಗೌಡ (ಸ್ಟಾರ್ ರಾಜು) ಅವರಿಗೆ ಟಿಕೆಟ್ ನೀಡಲಾಗಿತ್ತು.
ಇದನ್ನೂ ಓದಿ; ರೈತರಿಗೆ ಸಿಹಿ ಸುದ್ದಿ!; ಈ ಯೋಜನೆ ಮೂಲಕ ರೈತರಿಗೆ ಸಿಗಲಿದೆ 90% ವರೆಗೆ ಸಬ್ಸಿಡಿ ಹಣ
ಬಾಕಿ ಇರುವ ಕ್ಷೇತ್ರಗಳು ಯಾವುವು?:
- ಬಳ್ಳಾರಿ
- ಚಾಮರಾಜನಗರ
- ಚಿಕ್ಕಬಳ್ಳಾಪುರ
- ಕೋಲಾರ

ಉಪಯುಕ್ತ ಮಾಹಿತಿ, ಉದ್ಯೋಗ ಮಾಹಿತಿ ಪಡೆಯಲು ವಾಟ್ಸಾಪ್ ಗ್ರೂಪ್ JOIN ಆಗಿ
ಪ್ರಮುಖ ಸುದ್ದಿಗಳನ್ನು ಓದಿ
- ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಆಹ್ವಾನ;ಅರ್ಜಿ ಸಲ್ಲಿಕೆ ಹೇಗೆ?; ಅಗತ್ಯ ದಾಖಲೆಗಳು ಯಾವುವು?ಪೂರ್ಣ ವಿವರ ಇಲ್ಲಿದೆ
- ಪಿಎಂ ಕಿಸಾನ್ ಯೋಜನೆ; 16ನೇ ಕಂತಿನ ಹಣ ಇನ್ನು ಬಂದಿಲ್ವಾ?; ತಪ್ಪದೇ ಈ ಕೆಲಸ ಮಾಡಿ
- ರೈತರಿಗೆ ಸಿಹಿ ಸುದ್ದಿ!; ಈ ಯೋಜನೆ ಮೂಲಕ ರೈತರಿಗೆ ಸಿಗಲಿದೆ 90% ವರೆಗೆ ಸಬ್ಸಿಡಿ ಹಣ
- ಪಂಪ್ ಸೆಟ್ ಖರೀದಿಗೆ ಸಿಗುತ್ತೆ 50% ಸಹಾಯಧನ; ಅರ್ಜಿ ಸಲ್ಲಿಕೆ ಎಲ್ಲಿ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ
intresting story ಓದಲು ಇಲ್ಲಿ ಕ್ಲಿಕ್ ಮಾಡಿ






Leave a Reply