Rameshwaram Cafe Blast: ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟದ ಹಿಂದಿದ್ದಾರೆ ಮಲೆನಾಡಿನ ಇಬ್ಬರು

(Rameshwaram Cafe Blast) ರಾಜಧಾನಿ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆಸಲಾಗಿದ್ದ ಬಾಂಬ್ ಸ್ಫೋಟ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳಕ್ಕೆ ಮಹತ್ವದ ಸುಳಿವು ಸಿಕ್ಕಿದೆ. ಬಾಂಬ್ ಇಟ್ಟವನು ಹಾಗೂ ಆತನ ಸ್ನೇಹಿತ ಇಬ್ಬರೂ ಶಿವಮೊಗ್ಗ ಮೂಲದವರು, ಆದರೆ ಸ್ಫೋಟಕ್ಕೆ ಮೊದಲಿನ ಎರಡು ತಿಂಗಳು ತಮಿಳುನಾಡಿನಲ್ಲಿ ಇದ್ದರು ಎಂಬುದು ತಿಳಿದು ಬಂದಿದೆ.

ಇದನ್ನೂ ಓದಿ; ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ನೇಮಕ: 513 ಹುದ್ದೆಗೆ ಅರ್ಜಿ ಆಹ್ವಾನ

ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತನ ಜಾಡು ಹಿಡಿದ NIA ಗೆ ಚೆನ್ನೈ ಲಿಂಕ್ ಸಿಕ್ಕಿದ್ದು, ತಮಿಳುನಾಡಿನಿಂದ ಬಂದು ಬಾಂಬ್ ಇಟ್ಟು ಶಂಕಿತ ಪರಾರಿಯಾಗಿದ್ದಾನೆ. ಸ್ಫೋಟಕ್ಕೂ ಮುನ್ನ 2 ತಿಂಗಳು ತಮಿಳುನಾಡಿನಲ್ಲಿದ್ದ ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ. 1000ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಗಳ ಪರಿಶೀಲನೆ ಬಳಿಕ ಇಬ್ಬರು ಶಂಕಿತರನ್ನು ಪತ್ತೆಹಚ್ಚಲಾಗಿದೆ.

ಇದನ್ನೂ ಓದಿ; ವೋಟರ್ ಐಡಿ ಇಲ್ಲದಿದ್ರೂ ಮತದಾನ ಮಾಡ್ಬಹುದು!; ಈ ದಾಖಲೆಗಳಿದ್ದರೆ ಸಾಕು…ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್

ಟೋಪಿಯಲ್ಲಿದ್ದ ಕೂದಲಿನಿಂದ ಸಿಕ್ಕಿತು ಮಹತ್ವದ ಸುಳಿವು:
ಶಂಕಿತ ಧರಿಸಿದ್ದ (Rameshwaram Cafe Blast) ಟೋಪಿಯ ಮೂಲ ಪತ್ತೆ ಹಚ್ಚಿದ್ದ NIA ಗೆ ತಮಿಳುನಾಡಿನ ಪ್ರತಿಷ್ಠಿತ ಮಾಲ್ ವೊಂದರಲ್ಲಿ ಖರೀದಿಸಲಾಗಿರುವ ಮಾಹಿತಿ ದೊರೆತಿದ್ದು, ಜೊತೆಗೆ ಟೊಪಿ ಖರೀದಿ ವೇಳೆ ಶಂಕಿತನ ಜೊತೆಗೆ ಮತ್ತೋರ್ವ ವ್ಯಕ್ತಿ ಇರುವುದು ಮಾಲ್ ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮತ್ತೊಂದೆಡೆ ಪತ್ತೆಯಾದ ಕ್ಯಾಪ್ ನಲ್ಲಿ ಶಂಕಿತನ ಕೂದಲು ಪತ್ತೆಯಾಗಿದ್ದು, NIA ಅಧಿಕಾರಿಗಳು DNA ಟೆಸ್ಟ್ ಗೆ ನೀಡಿದ್ದಾರೆ.

ಇದನ್ನೂ ಓದಿ; ಒಂದೇ ವಾರದಲ್ಲಿ ಸಖತ್ ಸದ್ದು ಮಾಡಿದ ‘ರಾಜಕೀಯ’ ರ‍್ಯಾಪ್ ಸಾಂಗ್; ಯಾರು ಈ ಕೊಪ್ಪದ ರ‍್ಯಾಪರ್ ಚೇತನ್.. ಹೇಗಿದೆ ಸಾಂಗ್..?

ಸ್ಪೋಟದ ಹಿಂದಿದ್ದಾರೆ ಮಲೆನಾಡಿನ ಇಬ್ಬರು:
ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ (Rameshwaram Cafe Blast) ಶಂಕಿತರು ಶಿವಮೊಗ್ಗ ಜಿಲ್ಲೆಯ ಮುಸಾವೀರ್ ಹಾಗೂ ಹುಸೇನ್ ಶಜೀಬ್ ಎಂದು ಗುರುತಿಸಲಾಗಿದೆ. ಸದ್ಯ ಸಿಸಿಟಿವಿಗಳನ್ನು ಆಧರಿಸಿ ನಡೆದಿರುವ ತನಿಖೆಯಲ್ಲಿ ಸಿಕ್ಕಿರುವ ಈ ಮಹತ್ವದ ಲೀಡ್ NIA ಗೆ ಮತ್ತಷ್ಟು ಆಳದ ತನಿಖೆಗೆ ಪೂರಕವಾಗಿದೆ.

Rameshwaram Cafe Blast: ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟದ ಹಿಂದಿದ್ದಾರೆ ಮಲೆನಾಡಿನ ಇಬ್ಬರು
Rameshwaram Cafe Blast: ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟದ ಹಿಂದಿದ್ದಾರೆ ಮಲೆನಾಡಿನ ಇಬ್ಬರು

ಪ್ರಮುಖ ಸುದ್ದಿಗಳನ್ನು ಓದಿ

  1. ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಆಹ್ವಾನ;ಅರ್ಜಿ ಸಲ್ಲಿಕೆ ಹೇಗೆ?; ಅಗತ್ಯ ದಾಖಲೆಗಳು ಯಾವುವು?ಪೂರ್ಣ ವಿವರ ಇಲ್ಲಿದೆ
  2. ಪಿಎಂ ಕಿಸಾನ್ ಯೋಜನೆ; 16ನೇ ಕಂತಿನ ಹಣ ಇನ್ನು ಬಂದಿಲ್ವಾ?; ತಪ್ಪದೇ ಈ ಕೆಲಸ ಮಾಡಿ
  3. ರೈತರಿಗೆ ಸಿಹಿ ಸುದ್ದಿ!; ಈ ಯೋಜನೆ ಮೂಲಕ ರೈತರಿಗೆ ಸಿಗಲಿದೆ 90% ವರೆಗೆ ಸಬ್ಸಿಡಿ ಹಣ
  4. ಪಂಪ್ ಸೆಟ್ ಖರೀದಿಗೆ ಸಿಗುತ್ತೆ 50% ಸಹಾಯಧನ; ಅರ್ಜಿ ಸಲ್ಲಿಕೆ ಎಲ್ಲಿ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ
  5. ರೈಲ್ವೆ ಇಲಾಖೆಯಲ್ಲಿ ಉದ್ಯೋಗ: 10th ಪಾಸಾದವರು ಈಗಲೇ ಅರ್ಜಿ ಸಲ್ಲಿಸಿ
  6. ಕೇಂದ್ರದ ಹೊಸ ಯೋಜನೆ; ನಿರುದ್ಯೋಗಿ ಮಹಿಳೆಯರಿಗೆ ಸಿಗಲಿದೆ 4000 ರೂ!
  7. ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ನೇಮಕ: 513 ಹುದ್ದೆಗೆ ಅರ್ಜಿ ಆಹ್ವಾನ
  8. ವೋಟರ್ ಐಡಿ ಇಲ್ಲದಿದ್ರೂ ಮತದಾನ ಮಾಡ್ಬಹುದು!; ಈ ದಾಖಲೆಗಳಿದ್ದರೆ ಸಾಕು…ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್
  9. ಒಂದೇ ವಾರದಲ್ಲಿ ಸಖತ್ ಸದ್ದು ಮಾಡಿದ ‘ರಾಜಕೀಯ’ ರ‍್ಯಾಪ್ ಸಾಂಗ್; ಯಾರು ಈ ಕೊಪ್ಪದ ರ‍್ಯಾಪರ್ ಚೇತನ್.. ಹೇಗಿದೆ ಸಾಂಗ್..?
  10. ಇಂತಹವರಿಗೆ ಮಾತ್ರ ಹೊಸ ರೇಷನ್ ಕಾರ್ಡ್ ವಿತರಣೆ!; ಯಾವಾಗ ಹೊಸ ಪಡಿತರ ಚೀಟಿ ವಿತರಣೆ

intresting story ಓದಲು ಇಲ್ಲಿ ಕ್ಲಿಕ್ ಮಾಡಿ