(Petrol Bunk:) ಪೆಟ್ರೋಲಿಯಂ ಕಂಪನಿಗಳ ನಿಯಮದ ಪ್ರಕಾರ ಪ್ರತಿಯೊಂದು ಪೆಟ್ರೋಲ್ ಬಂಕ್‌ವು ಕೆಲವು ಮೂಲಭೂತ ಸೌಲಭ್ಯಗಳನ್ನು ಗ್ರಾಹಕರಿಗೆ ಉಚಿತವಾಗಿ ಒದಗಿಸಬೇಕು. ಪೆಟ್ರೋಲ್ ಬಂಕ್‌ಗಳಲ್ಲಿ ಲಭ್ಯವಿರುವ ಉಚಿತ ಸೇವೆಗಳ ಕುರಿತು ಇಲ್ಲಿದೆ ನೋಡಿ.
ಇದನ್ನೂ ಓದಿ: ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ರಿಲೀಫ್; ಏನದು, ಮಿಸ್ ಮಾಡ್ದೆ ಈ ಸುದ್ದಿ ಓದಿ
ಉಚಿತ ಗಾಳಿ ಸೌಲಭ್ಯ:
ವಾಹನಗಳ ಟೈರ್‌ಗಳಿಗೆ ಗಾಳಿ ತುಂಬಿಸಲು ಯಾವುದೇ ಶುಲ್ಕ ವಿಧಿಸಲು ಬಂಕ್‌ಗಳಿಗೆ ಅನುಮತಿ ಇಲ್ಲ. ಇದಕ್ಕಾಗಿ ಎಲೆಕ್ಟ್ರಾನಿಕ್ ಏರ್ ಮಷಿನ್ ಹಾಗೂ ಸಿಬ್ಬಂದಿ ವ್ಯವಸ್ಥೆ ಇರಬೇಕು.
ಕುಡಿಯುವ ನೀರು:
ಪ್ರತಿ ಪೆಟ್ರೋಲ್ ಬಂಕ್‌ನಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಡ್ಡಾಯವಾಗಿದೆ. ಸಾಮಾನ್ಯವಾಗಿ RO ಅಥವಾ ವಾಟರ್ ಕೂಲರ್ ಮೂಲಕ ನೀರು ಲಭ್ಯವಾಗಬೇಕು.
ಶೌಚಾಲಯ ಸೌಲಭ್ಯ:
ಪೆಟ್ರೋಲ್ ಬಂಕ್‌ಗಳಲ್ಲಿರುವ ವಾಶ್‌ರೂಮ್‌ಗಳನ್ನು ಸಾರ್ವಜನಿಕರು ಉಚಿತವಾಗಿ ಬಳಸುವ ಹಕ್ಕು ಹೊಂದಿದ್ದಾರೆ. ಇದಕ್ಕಾಗಿ ಯಾವುದೇ ಹಣ ವಸೂಲಿಸಲು ಅವಕಾಶ ಇಲ್ಲ.
ತುರ್ತು ಕರೆ ಸೌಲಭ್ಯ:
ಅಪಘಾತ ಅಥವಾ ತುರ್ತು ಪರಿಸ್ಥಿತಿಗಳಲ್ಲಿ ಪೆಟ್ರೋಲ್ ಬಂಕ್‌ನಿಂದ ಉಚಿತವಾಗಿ ಫೋನ್ ಕರೆ ಮಾಡುವ ಅವಕಾಶ ಗ್ರಾಹಕರಿಗೆ ಇದೆ.
ಇದನ್ನೂ ಓದಿ: ರಾಜ್ಯದ ರೈತರಿಗೆ ಗುಡ್ ನ್ಯೂಸ್; ಇನ್ಮುಂದೆ ಮೊಬೈಲ್ ನಲ್ಲೇ ಸಿಗಲಿದೆ ಹಳೆಯ ಪಹಣಿ
ಪ್ರಥಮ ಚಿಕಿತ್ಸೆ ಪೆಟ್ಟಿಗೆ:
ಪ್ರತಿ ಪೆಟ್ರೋಲ್ ಬಂಕ್‌ನಲ್ಲಿ ಅವಧಿ ಮುಗಿಯದ ಅಗತ್ಯ ಔಷಧಿಗಳು, ಬ್ಯಾಂಡೇಜ್‌ಗಳು ಸೇರಿದಂತೆ ಫಸ್ಟ್ ಏಡ್ ಬಾಕ್ಸ್ ಇರಬೇಕು.
ಅಗ್ನಿ ಸುರಕ್ಷತಾ ವ್ಯವಸ್ಥೆ:
ವಾಹನಗಳಿಗೆ ಬೆಂಕಿ ಹೊತ್ತಿಕೊಂಡಂತಹ ಸಂದರ್ಭಗಳಲ್ಲಿ ಬಳಸಲು ಅಗ್ನಿಶಾಮಕ ಸಾಧನಗಳು ಹಾಗೂ ಮರಳಿನ ಬಕೆಟ್‌ಗಳು ಸಿದ್ಧವಾಗಿರಬೇಕು.
ಮಾಲೀಕರ ವಿವರ ಮತ್ತು ಕಾರ್ಯಾವಧಿ:
ಪೆಟ್ರೋಲ್ ಬಂಕ್ ತೆರೆಯುವ ಮತ್ತು ಮುಚ್ಚುವ ಸಮಯ, ರಜೆ ದಿನಗಳ ಮಾಹಿತಿ ಹಾಗೂ ಮಾಲೀಕರ ಸಂಪರ್ಕ ವಿವರಗಳನ್ನು ಸ್ಪಷ್ಟವಾಗಿ ಪ್ರದರ್ಶಿಸುವುದು ಕಡ್ಡಾಯವಾಗಿದೆ.
ಕಡ್ಡಾಯ ಬಿಲ್ ನೀಡುವುದು:
ಗ್ರಾಹಕರು ತುಂಬಿಸಿದ ಇಂಧನಕ್ಕೆ ಬಿಲ್ ಪಡೆಯುವ ಹಕ್ಕು ಹೊಂದಿದ್ದಾರೆ. ಯಾವುದೇ ಅನುಮಾನ ಅಥವಾ ವ್ಯತ್ಯಾಸ ಕಂಡುಬಂದರೆ ಬಿಲ್ ಮೂಲಕ ದೂರು ನೀಡಲು ಸಾಧ್ಯ.
ಇದನ್ನೂ ಓದಿ: ಎಲ್ಪಿಜಿ ಸಿಲಿಂಡರ್ ದರ ದಿಢೀರ್ ಏರಿಕೆ; ಗ್ರಾಹಕರಿಗೆ ಬಿಗ್ ಶಾಕ್
ಸೌಲಭ್ಯ ಸಿಗದಿದ್ದರೆ ದೂರು ನೀಡಬಹುದು:
ಒಂದು ವೇಳೆ ಪೆಟ್ರೋಲ್ ಬಂಕ್ ಮಾಲೀಕರು ಈ ಉಚಿತ ಸೇವೆಗಳನ್ನು ನೀಡಲು ನಿರಾಕರಿಸಿದರೆ ಅಥವಾ ಹಣ ಕೇಳಿದರೆ, ಗ್ರಾಹಕರು ಬಂಕ್‌ನಲ್ಲಿ ಇರುವ Complaint Bookನಲ್ಲಿ ದೂರು ದಾಖಲಿಸಬಹುದು.
ಇದರ ಜೊತೆಗೆ,
• ಸಂಬಂಧಿತ ಪೆಟ್ರೋಲಿಯಂ ಕಂಪನಿಗಳ ಅಧಿಕೃತ ವೆಬ್‌ಸೈಟ್‌ನಲ್ಲಿ ದೂರು ನೀಡಬಹುದು.
• ಕೇಂದ್ರ ಸರ್ಕಾರದ pgportal.gov.in ಪೋರ್ಟಲ್‌ನಲ್ಲಿ ಕೂಡ ದೂರು ದಾಖಲಿಸುವ ಅವಕಾಶ ಇದೆ.

ಇತ್ತೀಚಿನ ಜನಪ್ರಿಯ ಸುದ್ದಿಗಳು (Petrol Bunk:)
-
- ಈ ಸಂಸ್ಥೆಯಿಂದ ಸಿಗಲಿದೆ ವಿದ್ಯಾರ್ಥಿಗಳಿಗೆ ₹1,00,000 ಸ್ಕಾಲರ್‌ಶಿಪ್
- ಮನೆಯಲ್ಲೇ ಕುಳಿತು ಇ-ಖಾತಾ ಪಡೆದುಕೊಳ್ಳಿ!
- ಕೆನರಾ ಬ್ಯಾಂಕ್‌ನಿಂದ 30 ದಿನದ ಉಚಿತ ಹೋಲಿಗೆ ಯಂತ್ರ ತರಬೇತಿಗೆ ಅರ್ಜಿ ಆಹ್ವಾನ
- ರಾಜ್ಯದ ವಿವಿಧ ಇಲಾಖೆಗಳಲ್ಲಿ 2,84,881 ಹುದ್ದೆಗಳು ಖಾಲಿ
- ಕರ್ನಾಟಕ ಸರ್ಕಾರದಿಂದ ರೈತರಿಗೆ ಗುಡ್‌ನ್ಯೂಸ್
- ಈ ಯೋಜನೆಯಡಿ ಸಿಗಲಿದೆ ಮಹಿಳೆಯರಿಗೆ ಸಹಾಯಧನ
- ಯುವಕರಿಗೆ ʼಗ್ರಾಮ ಒನ್ ಕೇಂದ್ರʼ ಆರಂಭಿಸಲು ಸುವರ್ಣಾವಕಾಶ
- ಎಸ್‌ಎಸ್‌ಪಿ ವಿದ್ಯಾರ್ಥಿವೇತನ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
- 8ನೇ ತರಗತಿಯ ಪಠ್ಯಪುಸ್ತಕದಲ್ಲಿ ಮಹತ್ವದ ಬದಲಾವಣೆ
- ರೈಲ್ವೆ ಇಲಾಖೆಯಿಂದ ಸಹಾಯಕ ಲೋಕೋ ಪೈಲೆಟ್ ಹುದ್ದೆಗೆ ಅರ್ಜಿ ಆಹ್ವಾನ




























