Free Sewing Training: 30 ದಿನದ ಉಚಿತ ಹೊಲಿಗೆ ತರಬೇತಿ

Free Sewing Training: ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆ 2026ರ ಅವಧಿಯಲ್ಲಿ ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಉಚಿತ ಹೊಲಿಗೆ ತರಬೇತಿಯನ್ನು ಆಯೋಜಿಸುತ್ತಿದೆ. ಗ್ರಾಮೀಣ ಹಾಗೂ ನಗರ ಪ್ರದೇಶದ ಮಹಿಳೆಯರು ತಮ್ಮ ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಈ ಯೋಜನೆಯಡಿ 3 ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯವನ್ನೂ ಪಡೆಯಬಹುದು. ಈ ತರಬೇತಿಯು ಹೊಲಿಗೆ ಮತ್ತು ಎಂಬ್ರಾಯ್ಡರಿ ಕಲೆಗಳಲ್ಲಿ ಪ್ರಾಯೋಗಿಕ ಜ್ಞಾನವನ್ನು ನೀಡುತ್ತದೆ, ಇದರಿಂದ ಮಹಿಳೆಯರು ಆರ್ಥಿಕವಾಗಿ ಸಬಲರಾಗಬಹುದು. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಪರಿಣಿತರಿಂದ ಅತ್ಯಾಧುನಿಕ ಹೊಲಿಗೆ ತಂತ್ರಗಳ ಕಲಿಕೆ ದೊರೆಯುತ್ತದೆ. ತರಬೇತಿ ಜೊತೆಗೆ 31 ದಿನಗಳ ಕಾಲ ಉಚಿತವಾಗಿ ಊಟ ಮತ್ತು ವಸತಿ ಸೌಲಭ್ಯವಿರುತ್ತದೆ. ತರಬೇತಿ ಯಶಸ್ವಿ ಬಳಿಕ ಅಧಿಕೃತ ಪ್ರಮಾಣಪತ್ರ ನೀಡಲಾಗುತ್ತದೆ. ಇದರಿಂದ ಮನೆಯಲ್ಲೇ ಕುಳಿತು ಸ್ವಂತ ಉದ್ಯೋಗ ಮಾಡುವ ಕೌಶಲ್ಯ ಲಭ್ಯವಾಗುತ್ತದೆ.


ನ್ನೂ ಓದಿ: 10th ಪಾಸ್‌ ಆದವರಿಗೆ ಪೋಸ್ಟ್‌ ಆಫೀಸ್‌ ನಲ್ಲಿ ಭರ್ಜರಿ ಜಾಬ್‌ ಆಫರ್‌; 12,000 ದಿಂದ ಸಂಬಳ


ತರಬೇತಿಯಲ್ಲಿ ಭಾಗವಹಿಸಲು ಇರಬೇಕಾದ ಅರ್ಹತೆಗಳು:
* ಉಚಿತ ಹೊಲಿಗೆ ತರಬೇತಿಯಲ್ಲಿ ಭಾಗವಹಿಸಲು ಅಭ್ಯರ್ಥಿಗಳಿಗೆ 18 ರಿಂದ 45 ವರ್ಷದ ಒಳಗಿರಬೇಕು.
* ಮಹಿಳೆಯರು ಮತ್ತು ಗ್ರಾಮೀಣ ಯುವತಿಯರು ಭಾಗವಹಿಸಬಹುದು.
* BPL ಕಾರ್ಡ್ ಹೊಂದಿರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ.
* ಸ್ವ-ಉದ್ಯೋಗ ಪ್ರಾರಂಭಿಸಲು ಆಸಕ್ತಿ ಹೊಂದಿರಬೇಕು.

03 ಮಾರ್ಚ್ 2026 ರಿಂದ ತರಬೇತಿ ಪ್ರಾರಂಭಗೊಂಡು ಎಪ್ರಿಲ್ 02 2026 ರ ವರೆಗೆ ಇರುತ್ತದೆ. ಒಟ್ಟು ತರಬೇತಿ 31 ದಿನ ನಡೆಯಲಿದ್ದು, ಪ್ರತಿದಿನ ಬೆಳಿಗ್ಗೆ 9:30 ರಿಂದ ಸಂಜೆ 5:30 ರ ವರೆಗೆ ಇರುತ್ತದೆ. ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ, ಇಂಡಸ್ಟ್ರಿಯಲ್ ಏರಿಯಾ, ಹೆಗಡೆ ರಸ್ತೆ, ಕುಮಟಾ, ಉತ್ತರ ಕನ್ನಡ ಜಿಲ್ಲೆ – 581343.


ನ್ನೂ ಓದಿ: 6 ತಿಂಗಳು ಇಂತಹವರ ರೇಷನ್‌ ಕಾರ್ಡ್‌ ಕ್ಯಾನ್ಸಲ್‌; ಕಾರಣವೇನು ಗೊತ್ತಾ…?


ದಾಖಲಾತಿಗಳು:
* ರೇಷನ್ ಕಾರ್ಡ್ (BPL)(Ration Card)
* ಆಧಾರ್ ಕಾರ್ಡ್(Aadhaar card)
* ಪಾನ್ ಕಾರ್ಡ್(PAN card)
* ಪಾಸ್‌ಪೋರ್ಟ್ ಫೋಟೋ(Passport photo)
* ಬ್ಯಾಂಕ್ ಪಾಸ್ ಬುಕ್(Bank pass book)

ಅರ್ಜಿ ವಿಧಾನ: ಆಸಕ್ತರು ಹತ್ತಿರದ ಕೆನರಾ ಬ್ಯಾಂಕ್ RSETI ಕೇಂದ್ರವನ್ನು ಸಂಪರ್ಕಿಸಿ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಅಥವಾ ನೋಂದಣಿಗಾಗಿ, ನಿಮ್ಮ ಜಿಲ್ಲೆಯ ಕೆನರಾ ಬ್ಯಾಂಕ್ RSETI ಕಚೇರಿಯನ್ನು ಸಂಪರ್ಕಿಸಿ.

Free Sewing Training ಕೆನರಾ ಬ್ಯಾಂಕ್‌ನಿಂದ 30 ದಿನದ ಉಚಿತ ಹೊಲಿಗೆ ತರಬೇತಿ
Free Sewing Training ಕೆನರಾ ಬ್ಯಾಂಕ್‌ನಿಂದ 30 ದಿನದ ಉಚಿತ ಹೊಲಿಗೆ ತರಬೇತಿ

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಇತ್ತೀಚಿನ ಜನಪ್ರಿಯ ಸುದ್ದಿಗಳು (Free Sewing Training:)

  1.  ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
  2. ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
  3. ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
  4. ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
  5. ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ