(Lands E Account:) ಗ್ರಾಮೀಣ ಪ್ರದೇಶದ ಜನರಿಗೆ ಜಮೀನಿನ ದಾಖಲೆಗಾಗಿ ಕಚೇರಿಗಳ ಸುತ್ತ ಅಲೆದಾಡುವ ಕಾಲ ಬಹುತೇಕ ಮುಗಿದಿದೆ. Government of Karnataka ಸರ್ಕಾರದ ಮಹತ್ವಾಕಾಂಕ್ಷಿ ಕ್ರಮವಾಗಿ, ಕೃಷಿಯೇತರ ಜಮೀನಿನ ಇ-ಖಾತಾವನ್ನು ಈಗ ಆನ್‌ಲೈನ್ ಮೂಲಕವೇ ಪಡೆಯುವ ವ್ಯವಸ್ಥೆ ಮಾಡಲಾಗಿದೆ.
ರಾಜ್ಯದ ಗ್ರಾಮೀಣ ನಾಗರಿಕರು ಈಗ ತಮ್ಮ ಕೃಷಿಯೇತರ ಜಮೀನಿನ ಇ-ಖಾತಾ, ಹಾಗು ನಮೂನೆ 9 ಮತ್ತು ನಮೂನೆ 11 ಅನ್ನು ಮನೆಯಲ್ಲೇ ಕುಳಿತು ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದಕ್ಕಾಗಿ ಸರ್ಕಾರದ ಅಧಿಕೃತ ಪೋರ್ಟಲ್ ಆದ e-Swathu Portal (https://eswathu.karnataka.gov.in/) ನಲ್ಲಿ ಲಾಗಿನ್ ಆಗಬೇಕು.
ಹೇಗೆ ಪಡೆಯಬಹುದು?
* e-Swathu Portal ವೆಬ್‌ಸೈಟ್‌ಗೆ ಭೇಟಿ ನೀಡಿ.
* ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ಅಗತ್ಯ ವಿವರಗಳ ಮೂಲಕ ಲಾಗಿನ್ ಆಗಿ.
* ನಿಮ್ಮ ಜಮೀನಿನ ವಿವರಗಳನ್ನು ಪರಿಶೀಲಿಸಿ.
* ಇ-ಖಾತಾ, ನಮೂನೆ 9 ಮತ್ತು ನಮೂನೆ 11 ಅನ್ನು ಆನ್‌ಲೈನ್‌ನಲ್ಲೇ ವೀಕ್ಷಿಸಿ ಹಾಗೂ ಡೌನ್‌ಲೋಡ್ ಮಾಡಿಕೊಳ್ಳಿ.
ಗ್ರಾಮೀಣ ಜನರಿಗೆ ಲಾಭ
* ತಾಲ್ಲೂಕು ಕಚೇರಿ ಸುತ್ತಾಟಕ್ಕೆ ತೆರೆ
* ಸಮಯ ಮತ್ತು ಹಣ ಉಳಿತಾಯ
* ದಾಖಲೆಗಳ ಪಾರದರ್ಶಕತೆ ಹೆಚ್ಚಳ
* ಸುಲಭ ಮತ್ತು ವೇಗವಾದ ಸೇವೆ
ರಾಜ್ಯದ ನಾಗರಿಕರು ಈ ಸೌಲಭ್ಯವನ್ನು ಬಳಸಿಕೊಂಡು ತಮ್ಮ ಜಮೀನಿನ ಇ-ಖಾತಾವನ್ನು ತ್ವರಿತವಾಗಿ ಪಡೆದುಕೊಳ್ಳಬಹುದು.

Public Desclimer
This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.
News Malnad is not responsible for any misuse of our media identity by unauthorized persons.
ಇತ್ತೀಚಿನ ಜನಪ್ರಿಯ ಸುದ್ದಿಗಳು (Lands E Account:)
- ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
- ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
- ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
- ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
- ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ
- ಏರ್‌ಟೆಲ್, ಜಿಯೋ ರೀಚಾರ್ಜ್ ಯೋಜನೆ ಬೆಲೆ ಹೆಚ್ಚಳ?; ಜನಪ್ರಿಯ ಯೋಜನೆಗಳು ಸಹ ದುಬಾರಿ
- ಚಿಕ್ಕಮಗಳೂರು ಜಿಲ್ಲೆಯಲ್ಲಿ 12,991 BPL ಕಾರ್ಡ್ ರದ್ದು; ನಿಮ್ಮ ತಾಲೂಕಿನ ರೇಷನ್ ಕಾರ್ಡ್ ಡಿಲೀಟ್ ಆದ ಡಿಟೈಲ್ಸ್ ಇಲ್ಲಿದೆ
- ಹೊಸ ವರ್ಷವನ್ನು ವಿಶಿಷ್ಟ ಡೂಡಲ್ ಮೂಲಕ ಸ್ವಾಗತಿಸಿದ ಗೂಗಲ್





