Garlic Health Tips: ದಿಂಬಿನ ಕೆಳಗೆ ಬೆಳುಳ್ಳಿ ಇಡುವುದರಿಂದ ಇದೆ ಲಾಭ

(Garlic Health Tips:) ರಾತ್ರಿ ಮಲಗುವ ಮುನ್ನ ದಿಂಬಿನ ಕೆಳಗೆ ಬೆಳ್ಳುಳ್ಳಿ ಇಟ್ಟುಕೊಂಡು ಮಲಗುವುದು ಆರೋಗ್ಯಕ್ಕೆ ಒಳ್ಳೆಯದು. ಇದು ಸೊಳ್ಳೆಗಳನ್ನು ಹಿಮ್ಮೆಟ್ಟಿಸಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಉಸಿರಾಟದ ಸಮಸ್ಯೆಗಳನ್ನು ಶಮನಗೊಳಿಸುತ್ತದೆ.


ನ್ನೂ ಓದಿ: ಹಳೆಯ ಡಿಫೈನ್ಸ್ ಪಿಂಚಣಿ ಯೋಜನೆ ಜಾರಿ; ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಆದೇಶ!


ಹೌದು, ತಲೆ ದಿಂಬಿನ ಕೆಳಗೆ ಒಂದೇ ಒಂದು ಬೆಳ್ಳುಳ್ಳಿ ಇಟ್ಟುಕೊಂಡು ಮಲಗುವುದರಿಂದ ಹಲವು ಪ್ರಯೋಜನಗಳಿವೆ. ಹಾಗಾದ್ರೆ ಏನದು ಅಂತ ತಿಳಿಯೋಣ ಬನ್ನಿ.

ಬೆಳ್ಳುಳ್ಳಿಯ ಬಲವಾದ ವಾಸನೆಯು ಸೊಳ್ಳೆಗಳನ್ನು ನಮ್ಮಿಂದ ದೂರವಿಡುತ್ತದೆ ಮತ್ತು ಇದರ ವಾಸನೆಗೆ ಸೊಳ್ಳೆ ಓಡಿ ಹೋಗುತ್ತದೆ ಎಂದು ಅಧ್ಯಯನಗಳು ತಿಳಿಸುತ್ತವೆ. ನೀವು ದಿಂಬಿನ ಕೆಳಗೆ ಒಂದು ಬೆಳ್ಳುಳ್ಳಿಯನ್ನು ಇಟ್ಟುಕೊಂಡು ಮಲಗಿದರೆ, ಇದರ ಸುವಾಸನೆಯು ಗಾಳಿಯಲ್ಲಿ ವ್ಯಾಪಿಸುತ್ತಿದ್ದಂತೆ ಕೀಟಗಳನ್ನು ಗೊಂದಲಕ್ಕಿಡು ಮಾಡುತ್ತದೆ. ಇದಲ್ಲದೇ, ನಿಮ್ಮ ಚರ್ಮಕ್ಕೆ ಸ್ವಲ್ಪ ಬೆಳ್ಳುಳ್ಳಿ ನೀರನ್ನು ಹಚ್ಚಿಕೊಂಡು ಮಲಗಿದರೂ, ಸೊಳ್ಳೆಗಳು ನಿಮ್ಮ ಹತ್ತಿರ ಸುಳಿಯುವುದಿಲ್ಲ.


ನ್ನೂ ಓದಿ: ಅಂಚೆ ಇಲಾಖೆಯ ಫಲಿತಾಂಶ ಪ್ರಕಟ; ಅಭ್ಯರ್ಥಿಗಳು ಹೀಗೆ ಚೆಕ್‌ ಮಾಡಿ ನಿಮ್ಮ ರಿಸಲ್ಟ್‌


ಬೆಳ್ಳುಳ್ಳಿಯ ಎಸಳನ್ನು ದಿಂಬಿನ ಕೆಳಗೆ ಇಟ್ಟುಕೊಂಡು ಮಲಗಿದರೆ, ಇದರ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ರಾತ್ರಿಯಿಡೀ ನಿಮ್ಮ ಆರೋಗ್ಯವನ್ನು ಬೆಂಬಲಿಸುತ್ತವೆ. ಇದರಲ್ಲಿರುವ ಆಲಿಸಿನ್ ಎಂಬ ಸಂಯುಕ್ತ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ. ಈ ಆಲಿಸಿನ್ ಗಾಳಿಯ ಮೂಲಕ ನಿಧಾನವಾಗಿ ದೇಹಕ್ಕೆ ಸೇರುತ್ತದೆ ಎಂದು ವಿಜ್ಞಾನ ಹೇಳುತ್ತದೆ.

ಬೆಳ್ಳುಳ್ಳಿಯ ವಾಸನೆಯು ರಾತ್ರಿಯಿಡೀ ಉಸಿರಾಟದ ಪ್ರದೇಶವನ್ನು ಶಮನಗೊಳಿಸುತ್ತದೆ. ಬೆಳ್ಳುಳ್ಳಿಯಲ್ಲಿರುವ ಆಲಿಸಿನ್ ಮೂಗಿನಲ್ಲಿರುವ ಲೋಳೆಯನ್ನು ತೆಳುಗೊಳಿಸಿ ಉಸಿರಾಟವನ್ನು ಸುಲಭಗೊಳಿಸುತ್ತದೆ. ಈ ಪ್ರಕ್ರಿಯೆಯು ನಿಧಾನವಾಗಿದ್ದರೂ, ಕೆಲವೇ ದಿನಗಳಲ್ಲಿ ನೀವು ವ್ಯತ್ಯಾಸವನ್ನು ಕಾಣುತ್ತೀರಿ.


ನ್ನೂ ಓದಿ: ಸಹಕಾರಿ ಬ್ಯಾಂಕ್’ನಲ್ಲಿ ಜಾಬ್ ಆಫರ್; 21‌,400 ಸಂಬಳ


ಬೆಳ್ಳುಳ್ಳಿ ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ಇದರಲ್ಲಿರುವ ವಿಟಮಿನ್ ಬಿ1 ಮತ್ತು ಬಿ6 ನಿಂದಾಗಿ ನಿದ್ರಾಹೀನತೆ ಕಡಿಮೆಯಾಗುತ್ತದೆ. ಅಲ್ಲದೆ ಈ ತಂತ್ರವು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ ಎಂದು ಕೆಲವು ಅಧ್ಯಯನಗಳು ಸೂಚಿಸುತ್ತವೆ.

(ಸೂಚನೆ: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ನ್ಯೂಸ್‌ ಮಲ್ನಾಡ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್‌ ಮಲ್ನಾಡ್ ಇದಕ್ಕೆ ಜವಾಬ್ದಾರಿಯಲ್ಲ) (Garlic Health Tips:) 
Garlic Health Tips: ದಿಂಬಿನ ಕೆಳಗೆ ಬೆಳುಳ್ಳಿ ಇಡುವುದರಿಂದ ಇದೆ ಲಾಭ
Garlic Health Tips: ದಿಂಬಿನ ಕೆಳಗೆ ಬೆಳುಳ್ಳಿ ಇಡುವುದರಿಂದ ಇದೆ ಲಾಭ