(Solar Eclipse 2026:) 2026ರ ಮೊದಲ ಸೂರ್ಯಗ್ರಹಣವು ಫೆಬ್ರವರಿ 17ರಂದು ಮಂಗಳವಾರ ಸಂಭವಿಸಿದೆ. ಆದರೆ ಈ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಈ ಕಾರಣದಿಂದಾಗಿ, ಗ್ರಹಣದ ಸೂತಕ ಅವಧಿಯು ಇರಲಿಲ್ಲ ಎಂದು ಜ್ಯೋತಿಷ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: ರೈತರ ಮಕ್ಕಳಿಗೆ ‘ರೈತ ವಿದ್ಯಾನಿಧಿ ಸ್ಕಾಲರ್ಶಿಪ್; 2,000 ದಿಂದ 11,000ದ ವರೆಗೆ ಸಿಗಲಿದೆ ವಿದ್ಯಾರ್ಥಿವೇತನ
ಫೆಬ್ರವರಿ 17ರಂದು ಮಾಘ ಬಹುಳ ಅಮಾವಾಸ್ಯೆಯ ದಿನದಂದು ಕುಂಭ ರಾಶಿಯಲ್ಲಿ ಸೂರ್ಯಗ್ರಹಣ ಸಂಭವಿಸಿದ್ದು, ಇದು ವಿವಿಧ ರಾಶಿಗಳ ಮೇಲೆ ವಿಭಿನ್ನ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ.
ಮೇಷ ರಾಶಿಯ ಜನರು ಹಾಗೂ ವಿದ್ಯಾರ್ಥಿಗಳು ವಿಶೇಷ ಜಾಗರೂಕತೆ ವಹಿಸಬೇಕಾಗಿದೆ. ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ಮನಶಾಂತಿಗಾಗಿ ಗಾಯತ್ರಿ ಮಂತ್ರ ಪಠಣ ಮಾಡಲು ಸಲಹೆ ನೀಡಲಾಗಿದೆ.
ಸಿಂಹ ರಾಶಿ:
ವರ್ಷದ ಮೊದಲ ಸೂರ್ಯಗ್ರಹಣವು ಸಿಂಹ ರಾಶಿಯವರಿಗೆ ಅಶುಭಕರವಾಗಿರಲಿದೆ. ಸೂರ್ಯ ದೇವರ ಅಧಿಪತ್ಯವಿರುವ ಈ ರಾಶಿಯವರಿಗೆ ನಾಯಕತ್ವದಲ್ಲಿ ಕುಸಿತ, ಆರೋಗ್ಯ ಸಂಬಂಧಿತ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ.
ಮೀನ ರಾಶಿಯವರಿಗೆ ಈ ಸೂರ್ಯಗ್ರಹಣ ಅಶುಭ ಫಲ ನೀಡಲಿದೆ. ಭೂ ವಿವಾದಗಳು ಉಂಟಾಗುವ ಸಾಧ್ಯತೆ ಇದ್ದು, ಆರ್ಥಿಕವಾಗಿ ಬಜೆಟ್ ಮೇಲೆ ಒತ್ತಡ ಬೀಳಬಹುದು. ಉಳಿತಾಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು, ಇಲ್ಲವಾದಲ್ಲಿ ಸಾಲದ ಪರಿಸ್ಥಿತಿ ಎದುರಾಗಬಹುದು.
ಇದನ್ನೂ ಓದಿ: ಆಧಾರ್ ಸೇವಾ ಕೇಂದ್ರದಲ್ಲಿ ಜಾಬ್, ಅರ್ಜಿ ಆಹ್ವಾನ
ಕನ್ಯಾ ರಾಶಿಯವರಿಗೆ ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆಗಳ ಸೂಚನೆಗಳಿವೆ. ಮೇಲಧಿಕಾರಿಗಳೊಂದಿಗೆ ವಾಗ್ವಾದ ಸಂಭವಿಸಬಹುದು. ಕುಟುಂಬದಲ್ಲಿ ಸಹ ಅಸಮಾಧಾನಗಳು ಹೆಚ್ಚಾಗುವ ಸಾಧ್ಯತೆ ಇದೆ.
ಈ ರಾಶಿಗಳಿಗೆ ಶುಭ ಫಲ:
ವರ್ಷದ ಮೊದಲ ಸೂರ್ಯಗ್ರಹಣವು ಮಿಥುನ ಹಾಗೂ ಮಕರ ರಾಶಿಯವರಿಗೆ ಶುಭಕರವಾಗಿರಲಿದೆ. ಪ್ರಯಾಣದ ಅವಕಾಶಗಳು ಲಭಿಸಬಹುದು, ಆದರೆ ಎಚ್ಚರಿಕೆ ಅಗತ್ಯ. ಆದಾಯದ ಮೂಲಗಳು ಹೆಚ್ಚಾಗುವ ಸಾಧ್ಯತೆ ಇದೆ. ವ್ಯವಹಾರಗಳಿಗೆ ಈ ಸಮಯ ಅನುಕೂಲಕರವಾಗಿರಲಿದೆ.

Public Desclimer
This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.
News Malnad is not responsible for any misuse of our media identity by unauthorized persons.
ಇತ್ತೀಚಿನ ಜನಪ್ರಿಯ ಸುದ್ದಿಗಳು (Solar Eclipse 2026:)
- ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
- ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
- ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
- ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
- ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ
- ಏರ್‌ಟೆಲ್, ಜಿಯೋ ರೀಚಾರ್ಜ್ ಯೋಜನೆ ಬೆಲೆ ಹೆಚ್ಚಳ?; ಜನಪ್ರಿಯ ಯೋಜನೆಗಳು ಸಹ ದುಬಾರಿ
- ಚಿಕ್ಕಮಗಳೂರು ಜಿಲ್ಲೆಯಲ್ಲಿ 12,991 BPL ಕಾರ್ಡ್ ರದ್ದು; ನಿಮ್ಮ ತಾಲೂಕಿನ ರೇಷನ್ ಕಾರ್ಡ್ ಡಿಲೀಟ್ ಆದ ಡಿಟೈಲ್ಸ್ ಇಲ್ಲಿದೆ
- ಹೊಸ ವರ್ಷವನ್ನು ವಿಶಿಷ್ಟ ಡೂಡಲ್ ಮೂಲಕ ಸ್ವಾಗತಿಸಿದ ಗೂಗಲ್





