Land Map Measurements: ಮೊಬೈಲ್‌ ನಲ್ಲೇ ಸಿಗಲಿದೆ ಜಮೀನಿನ ನಕ್ಷೆ

(Land Map Measurements:) ರೈತರು ತಮ್ಮ ಜಮೀನಿನ ಅಳತೆ ಮತ್ತು ನಕ್ಷೆ (ಸ್ಕೆಚ್) ಪಡೆಯಲು ಕಂದಾಯ ಕಚೇರಿಗಳ ಮುಂದೆ ಸಾಲುಗಟ್ಟಿ ನಿಲ್ಲುವ ದಿನಗಳು ಇದೀಗ ಬಹುತೇಕ ಮುಗಿದಂತಾಗಿದೆ. ಡಿಜಿಟಲ್ ತಂತ್ರಜ್ಞಾನದ ನೆರವಿನಿಂದ ರೈತರು ತಮ್ಮ ಜಮೀನಿನ ಸಂಪೂರ್ಣ ವಿವರಗಳನ್ನು ಮನೆಯಲ್ಲೇ ಕುಳಿತು ಮೊಬೈಲ್ ಫೋನ್ ಮೂಲಕ ಪಡೆಯುವ ಸೌಲಭ್ಯವನ್ನು ಸರ್ಕಾರ ಒದಗಿಸಿದೆ.


ಇದನ್ನೂ ಓದಿ: ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ರಿಲೀಫ್; ಏನದು, ಮಿಸ್‌ ಮಾಡ್ದೆ ಈ ಸುದ್ದಿ ಓದಿ


ಈ ಸೇವೆಯ ಪ್ರಮುಖ ಉಪಯೋಗಗಳು

  • ಜಮೀನಿನ ಪೂರ್ವ, ಪಶ್ಚಿಮ, ಉತ್ತರ ಹಾಗೂ ದಕ್ಷಿಣ ದಿಕ್ಕುಗಳಲ್ಲಿ ಎಷ್ಟು ಅಳತೆ ಇದೆ ಎಂಬುದನ್ನು ಮೀಟರ್‌ಗಳಲ್ಲಿ ನಿಖರವಾಗಿ ತಿಳಿದುಕೊಳ್ಳಬಹುದು.
  • ನಿಮ್ಮ ಜಮೀನಿನ ಸುತ್ತಮುತ್ತ ಯಾರ ಜಮೀನುಗಳಿವೆ ಹಾಗೂ ಅವುಗಳ ಹಿಸ್ಸಾ ಸಂಖ್ಯೆಗಳು ಯಾವುವು ಎಂಬ ಮಾಹಿತಿ ನಕ್ಷೆಯಲ್ಲಿ ಲಭ್ಯವಿರುತ್ತದೆ.
  • ಪ್ರತಿಯೊಂದು ಮೂಲೆ ಅಥವಾ ಕಾರ್ನರ್‌ನಿಂದ ಮತ್ತೊಂದು ಮೂಲೆಗೆ ಇರುವ ದೂರವನ್ನು ಸುಲಭವಾಗಿ ಗುರುತಿಸಲು ಇದು ಸಹಕಾರಿ.
  • ಗೂಗಲ್ ಮ್ಯಾಪ್ ಅಥವಾ ಸ್ಯಾಟಲೈಟ್ ವ್ಯೂ ಮೂಲಕ ನಿಮ್ಮ ಜಮೀನು ಭೂಮಿಯ ಮೇಲೆ ಎಲ್ಲಿ ಇದೆ ಎಂಬ ಚಿತ್ರಣವನ್ನೂ ವೀಕ್ಷಿಸಬಹುದು.

ಇದನ್ನೂ ಓದಿ: ರಾಜ್ಯದ ರೈತರಿಗೆ ಗುಡ್ ನ್ಯೂಸ್; ಇನ್ಮುಂದೆ ಮೊಬೈಲ್‌ ನಲ್ಲೇ ಸಿಗಲಿದೆ ಹಳೆಯ ಪಹಣಿ


ಹಾಗಾದ್ರೆ ಜಮೀನಿನ ನಕ್ಷೆ ಪಡೆಯುವುದು ಹೇಗೆ?:

  • ಮೊಬೈಲ್‌ನಲ್ಲಿ ಗೂಗಲ್ ಕ್ರೋಮ್ ತೆರೆಯಿರಿ ಮತ್ತು landrecords.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಿ.
  • ಮುಖಪುಟದಲ್ಲಿರುವ ‘RTC and MR’ ಆಯ್ಕೆಯನ್ನು ಕ್ಲಿಕ್ ಮಾಡಿ.
  • ನಂತರ ಕಾಣಿಸುವ ‘Survey Sketch’ (ಸರ್ವೇ ಸ್ಕೆಚ್) ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ ಮತ್ತು ಗ್ರಾಮದ ಹೆಸರನ್ನು ಆಯ್ಕೆ ಮಾಡಿ.
  • ನಿಮ್ಮ ಜಮೀನಿನ ಸರ್ವೇ ನಂಬರ್ ಮತ್ತು ಹಿಸ್ಸಾ ಸಂಖ್ಯೆ ನಮೂದಿಸಿ Search ಬಟನ್ ಒತ್ತಿ.
  • ತಕ್ಷಣವೇ ನಿಮ್ಮ ಜಮೀನಿನ ಸಂಪೂರ್ಣ ನಕ್ಷೆ ಪರದೆಯ ಮೇಲೆ ಕಾಣಿಸುತ್ತದೆ.
Land Map Measurements: ಮೊಬೈಲ್‌ ನಲ್ಲೇ ಸಿಗಲಿದೆ ಜಮೀನಿನ ನಕ್ಷೆ
Land Map Measurements: ಮೊಬೈಲ್‌ ನಲ್ಲೇ ಸಿಗಲಿದೆ ಜಮೀನಿನ ನಕ್ಷೆ

ಇತ್ತೀಚಿನ ಜನಪ್ರಿಯ ಸುದ್ದಿಗಳು (Land Map Measurements:)

    1. ಈ ಸಂಸ್ಥೆಯಿಂದ ಸಿಗಲಿದೆ ವಿದ್ಯಾರ್ಥಿಗಳಿಗೆ ₹1,00,000 ಸ್ಕಾಲರ್‌ಶಿಪ್
    2. ಮನೆಯಲ್ಲೇ ಕುಳಿತು ಇ-ಖಾತಾ ಪಡೆದುಕೊಳ್ಳಿ!
    3. ಕೆನರಾ ಬ್ಯಾಂಕ್‌ನಿಂದ 30 ದಿನದ ಉಚಿತ ಹೋಲಿಗೆ ಯಂತ್ರ ತರಬೇತಿಗೆ ಅರ್ಜಿ ಆಹ್ವಾನ
    4. ರಾಜ್ಯದ ವಿವಿಧ ಇಲಾಖೆಗಳಲ್ಲಿ 2,84,881 ಹುದ್ದೆಗಳು ಖಾಲಿ
    5. ಕರ್ನಾಟಕ ಸರ್ಕಾರದಿಂದ ರೈತರಿಗೆ ಗುಡ್‌ನ್ಯೂಸ್‌
    6. ಈ ಯೋಜನೆಯಡಿ ಸಿಗಲಿದೆ ಮಹಿಳೆಯರಿಗೆ ಸಹಾಯಧನ
    7. ಯುವಕರಿಗೆ ʼಗ್ರಾಮ ಒನ್‌ ಕೇಂದ್ರʼ ಆರಂಭಿಸಲು ಸುವರ್ಣಾವಕಾಶ
    8. ಎಸ್‌ಎಸ್‌ಪಿ ವಿದ್ಯಾರ್ಥಿವೇತನ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
    9. 8ನೇ ತರಗತಿಯ ಪಠ್ಯಪುಸ್ತಕದಲ್ಲಿ ಮಹತ್ವದ ಬದಲಾವಣೆ
    10. ರೈಲ್ವೆ ಇಲಾಖೆಯಿಂದ ಸಹಾಯಕ ಲೋಕೋ ಪೈಲೆಟ್‌ ಹುದ್ದೆಗೆ ಅರ್ಜಿ ಆಹ್ವಾನ