Gold Rate Fall: ಚಿನ್ನಾಭರಣ ಪ್ರಿಯರಿಗೆ ಸಿಹಿ ಸುದ್ದಿ ಇಲ್ಲಿದೆ. ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗಿತ್ತು. 2026 ಜನವರಿ 30 ಕ್ಕೆ ಬೆಲೆ ಗಗನ ಮುಟ್ಟುವಂತಿತ್ತು, ಆದರೆ ಪೆಬ್ರುವರಿ 1 ರಿಂದ ಬೆಲೆ ಕೊಂಚ ಇಳಿಕೆಯಾಗಿದೆ. ಬೆಳ್ಳಿ ಬೆಲೆ 3 ಲಕ್ಷದ ಸಮೀಪಕ್ಕೆ ಬಂದಿದ್ದು, ಚಿನ್ನದ ಬೆಲೆಯು 1.54 ಸಾವಿರದ ಹತ್ತಿರದಲ್ಲಿದ್ದ ಚಿನ್ನ ಬೆಲೆ ಕೆಲವು ದಿನಗಳಿಂದ ಗಗನಕ್ಕೇರಿತ್ತು. ಈಗ ತಟ್ಟನೆ ಚಿನ್ನದ ಬೆಲೆ ಕಡಿಮೆ ಆಗಿರೊದು ಚಿನ್ನಾಭರಣ ಪ್ರಿಯರಿಗೆ ಖುಷಿ ನೀಡಿದೆ.
ಫೆಬ್ರವರಿ 2026ರ ಆರಂಭದಲ್ಲಿ ಬಂಗಾರದ ದರದಲ್ಲಿ 10 ಗ್ರಾಂಗೆ ಸುಮಾರು ₹9,000ಕ್ಕೂ ಹೆಚ್ಚು ಕಡಿತವಾಗಿದೆ. ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 1.5 ಲಕ್ಷ ರೂಪಾಯಿಯ ಆಸುಪಾಸಿಗೆ ಇಳಿಕೆಯಾಗಿದ್ದು, ಕಳೆದ ಜನವರಿ ಅಂತ್ಯದ ಗರಿಷ್ಠ ಮಟ್ಟದಿಂದ ಬಂಗಾರ ತುಸು ಅಗ್ಗವಾಗಿದೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ
ತಜ್ಞರ ಪ್ರಕಾರ, ಇದು ತಾತ್ಕಾಲಿಕ ತಿದ್ದುಪಡಿಯಾಗಿದ್ದು, ದೀರ್ಘಾವಧಿಯಲ್ಲಿ ಚಿನ್ನವು ಸುರಕ್ಷಿತ ಹೂಡಿಕೆಯಾಗಿ ಮುಂದುವರಿಯಲಿದೆ. ಸದ್ಯದ ಕುಸಿತವು ಚಿನ್ನವನ್ನು ಖರೀದಿಸಲು ಉತ್ತಮ ಅವಕಾಶವೆಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಫೆಬ್ರವರಿ 5 2026, ಗುರುವಾರದಂದು ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ : 502 ರೂ ಇಳಿಕೆಯಾಗಿದ್ದು, 10 ಗ್ರಾಂ ಗೆ 5020 ರೂ ಏರಿಕೆ ಆಗಿದೆ. ಆ ಮೂಲಕ 1 ಗ್ರಾಂ ಬೆಲೆ 15442 ರೂ ಆಗಿದ್ದು, 10 ಗ್ರಾಂ ಬೆಲೆ 1,54,420 ರೂಪಾಯಿ ಆಗಿದೆ.
ಬೆಳ್ಳಿ ಬೆಲೆ ಇಳಿಕೆ
ಬೆಳ್ಳಿ ಬೆಲೆ ಇಂದು 20 ರೂಪಾಯಿ ಇಳಿಕೆಯಾಗಿದ್ದು, ಗ್ರಾಂ ಬೆಲೆ 300 ರೂ ಆಗಿದ್ದು, ಕೆಜಿ ಬೆಲೆಯಲ್ಲಿ 20 ಸಾವಿರ ಏರಿಕೆ ಆಗಿ, ಕೆಜಿಗೆ 3,00,000 ರೂಪಾಯಿ ಆಗಿದೆ.ಜನವರಿ 30 ರಿಂದ ಚಿನ್ನದ ಬೆಲೆ ಕಡಿಮೆ ಇಳಿಕೆಯಾಗಿದೆ.
ಜನವರಿ 1ಕ್ಕೆ 12380 ರೂಪಾಯಿ ಇದ್ದು, ಜನವರಿ 29 ಕ್ಕೆ 17,885 ರೂಪಾಯಿಗೆ ಏರಿಕೆ ಆಗಿತ್ತು. ಪೆಬ್ರುವರಿ 4 ರಿಂದ ಚಿನ್ನದ ಬೆಲೆ ಏರಿಳಿತವಅಗುತ್ತಿದೆ. ಸದ್ಯ ಶುದ್ಧ ಚಿನ್ನದ ಬೆಲೆ 1 ಲಕ್ಷದ 54 ಸಾವಿರಕ್ಕೆ ಇಳಿಕೆ ಆಗಿದೆ.

Public Desclimer
This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.
News Malnad is not responsible for any misuse of our media identity by unauthorized persons.
ಇತ್ತೀಚಿನ ಜನಪ್ರಿಯ ಸುದ್ದಿಗಳು (Gold Rate Fall:)
- ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
- ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
- ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
- ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
- ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ





