(LPG cylinders:) ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಯುದ್ಧದ ಪರಿಸ್ಥಿತಿಯಿಂದಾಗಿ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಶಾಲೆಗಳ ‘ಪಿ.ಎಂ ಪೋಷಣ್’ (ಬಿಸಿಯೂಟ) ಯೋಜನೆಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಲು ಶಾಲಾ ಶಿಕ್ಷಣ ಇಲಾಖೆ ಆದೇಶಿಸಿದೆ.
ಇದನ್ನೂ ಓದಿ: ಶಿಕ್ಷಕರ ಬಡ್ತಿಗೆ ಹೊಸ ಮಾರ್ಗಸೂಚಿ ಪ್ರಕಟ; ಇಷ್ಟು ವರ್ಷಗಳ ಸೇವೆ ಕಡ್ಡಾಯ
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿನ ಯುದ್ಧದ ಸ್ಥಿತಿಯಿಂದಾಗಿ ಎಲ್‌ಪಿಜಿ (LPG) ಗ್ಯಾಸ್ ಸಿಲಿಂಡರ್‌ಗಳ ಸರಬರಾಜಿನಲ್ಲಿ ಏರುಪೇರಾಗುವ ಸಂಭವವಿದೆ ಎಂದು ಇಲಾಖೆ ಆತಂಕ ವ್ಯಕ್ತಪಡಿಸಿದೆ. ಬಿಸಿಯೂಟ ಯೋಜನೆಯು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇದಕ್ಕೆ ನಿರಂತರ ಗ್ಯಾಸ್ ಪೂರೈಕೆ ಅಗತ್ಯವಾಗಿದೆ. ಹೀಗಾಗಿ, ಗ್ಯಾಸ್ ಪೂರೈಕೆಯನ್ನು ಅಗತ್ಯ ವಸ್ತು ಕಾಯ್ದೆ ಅಡಿಯಲ್ಲಿ ಪರಿಗಣಿಸಿ, ಶಾಲೆಗಳಿಗೆ ಆದ್ಯತೆಯ ಮೇರೆಗೆ ಸಿಲಿಂಡರ್ ಒದಗಿಸಲು ಸೂಚಿಸಲಾಗಿದೆ.
ಇದನ್ನೂ ಓದಿ: ಎಸ್ಎಸ್ಎಲ್ಸಿ, ಪಿಯುಸಿ ಪಾಸ್ ಆದವರಿಗೆ ಉದ್ಯೋಗವಕಾಶ; ಆಕರ್ಷಕ ವೇತನ
ಪ್ರಸಕ್ತ ಶೈಕ್ಷಣಿಕ ವರ್ಷವು ಏಪ್ರಿಲ್ 10, 2026ಕ್ಕೆ ಮುಕ್ತಾಯಗೊಳ್ಳಲಿದ್ದು, ಅಲ್ಲಿಯವರೆಗೂ ಯಾವುದೇ ಅಡೆತಡೆಯಿಲ್ಲದೆ ಅಡುಗೆ ಅನಿಲ ಸಿಲಿಂಡರ್‌ಗಳನ್ನು ಪೂರೈಸುವಂತೆ ಎಲ್ಲಾ ವಿತರಕರಿಗೆ ಸೂಚಿಸಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.
ಈ ಕುರಿತು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ತುರ್ತು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.

ಈ ಸುದ್ದಿನೂ ಓದಿ:
ಹೊಸ ಕಾರು ಅಥವಾ ಬೈಕ್ ಖರೀದಿಸಿದಾಗ ಶೋರೂಮ್‌ನವರು ನೀಡುವ ಕೀಲಿಯ ಕೈಗುಚ್ಛದಲ್ಲಿ ಒಂದು ಸಣ್ಣ ಮೆಟಲ್ ಅಥವಾ ಅಲ್ಯೂಮಿನಿಯಂ ತುಂಡು ಇರುವುದನ್ನು ಬಹುತೇಕರು ಗಮನಿಸಿರುತ್ತಾರೆ. ಹೆಚ್ಚಿನವರು ಅದನ್ನು ಸಾಮಾನ್ಯ ಟ್ಯಾಗ್ ಎಂದುಕೊಂಡು ಎಸೆದುಬಿಡುತ್ತಾರೆ. ಆದರೆ ವಾಸ್ತವದಲ್ಲಿ ಈ ಪುಟ್ಟ ಮೆಟಲ್ ಟ್ಯಾಗ್ ನಿಮ್ಮ ವಾಹನದ ಸುರಕ್ಷತೆಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ.
ಈ ಸಣ್ಣ ಲೋಹದ ತುಂಡಿನ ಮೇಲೆ ಕೆಲವು ಅಂಕಿಗಳನ್ನು ಕೆತ್ತಲಾಗಿರುತ್ತದೆ. ಇದನ್ನು ತಾಂತ್ರಿಕವಾಗಿ ‘ಕೀ ಕೋಡ್’ (Key Code) ಎಂದು ಕರೆಯಲಾಗುತ್ತದೆ. ಈ ಕೋಡ್ ನಿಮ್ಮ ವಾಹನದ ಕೀಲಿಗೆ ಸಂಬಂಧಿಸಿದ ವಿಶಿಷ್ಟ ಗುರುತು ಆಗಿದ್ದು, ಕೀಲಿಯ ಡಿಜಿಟಲ್ ಫಿಂಗರ್‌ಪ್ರಿಂಟ್‌ನಂತೆ ಕಾರ್ಯನಿರ್ವಹಿಸುತ್ತದೆ.
ಈ ಕೋಡ್ ಯಾವಾಗ ಉಪಯೋಗಕ್ಕೆ ಬರುತ್ತದೆ?
- ಒಂದು ವೇಳೆ ವಾಹನದ ಎರಡೂ ಕೀಲಿಗಳು ಕಳೆದುಹೋದರೆ ಹೊಸ ಕೀಲಿ ಮಾಡಿಸುವುದು ಸಾಮಾನ್ಯವಾಗಿ ಕಷ್ಟಕರ. ಆದರೆ ಈ ಮೆಟಲ್ ಟ್ಯಾಗ್ ಮೇಲಿರುವ ಕೋಡ್ ಅನ್ನು ಕಂಪನಿಗೆ ನೀಡಿದರೆ, ಅವರು ಅದೇ ರೀತಿಯ ಹೊಸ ಕೀಲಿಯನ್ನು ಸುಲಭವಾಗಿ ತಯಾರಿಸಿಕೊಡುತ್ತಾರೆ.
- ಈ ಕೋಡ್ ಇಲ್ಲದಿದ್ದರೆ ಕೀಲಿ ಕಳೆದುಹೋದ ಸಂದರ್ಭದಲ್ಲಿ ಸಂಪೂರ್ಣ ಲಾಕ್ ಸೆಟ್ ಬದಲಿಸಬೇಕಾಗುತ್ತದೆ. ಇದರಿಂದ ಸಾವಿರಾರು ರೂಪಾಯಿ ವೆಚ್ಚವಾಗಬಹುದು. ಆದರೆ ಕೀ ಕೋಡ್ ಇದ್ದರೆ ಕೇವಲ ಹೊಸ ಕೀಲಿಯನ್ನು ಮಾತ್ರ ಮರುಸೃಷ್ಟಿಸಬಹುದು.
- ಇಂದಿನ ಆಧುನಿಕ ಕಾರುಗಳಲ್ಲಿ ಸ್ಮಾರ್ಟ್ ಕೀ ಅಥವಾ ಪುಶ್ ಬಟನ್ ಸ್ಟಾರ್ಟ್ ವ್ಯವಸ್ಥೆ ಇದ್ದರೂ ಅವುಗಳ ಒಳಗೆ ಒಂದು ಸಣ್ಣ ಎಮರ್ಜೆನ್ಸಿ ಕೀ ಇರುತ್ತದೆ. ಅದನ್ನು ಮರುತಯಾರಿಸಲು ಕೂಡ ಈ ಕೋಡ್ ಅತ್ಯಗತ್ಯವಾಗಿರುತ್ತದೆ.
ಇದನ್ನೂ ಓದಿ: ಅಕ್ರಮ ಪಂಪ್ ಸೆಟ್ ಹೊಂದಿದ್ರೆ ಈ ಸುದ್ದಿ ಓದಿ; ಚಿಕ್ಕಮಗಳೂರು ಉಸ್ತುವಾರಿ ಸಚಿವರಿಂದ ರೈತರಿಗೆ 3 ತಿಂಗಳು ಮಾತ್ರ ಟೈಲ್!
ಇತ್ತೀಚಿನ ಜನಪ್ರಿಯ ಸುದ್ದಿಗಳು (LPG cylinders:)
-
- ಈ ಸಂಸ್ಥೆಯಿಂದ ಸಿಗಲಿದೆ ವಿದ್ಯಾರ್ಥಿಗಳಿಗೆ ₹1,00,000 ಸ್ಕಾಲರ್‌ಶಿಪ್
- ಮನೆಯಲ್ಲೇ ಕುಳಿತು ಇ-ಖಾತಾ ಪಡೆದುಕೊಳ್ಳಿ!
- ಕೆನರಾ ಬ್ಯಾಂಕ್‌ನಿಂದ 30 ದಿನದ ಉಚಿತ ಹೋಲಿಗೆ ಯಂತ್ರ ತರಬೇತಿಗೆ ಅರ್ಜಿ ಆಹ್ವಾನ
- ರಾಜ್ಯದ ವಿವಿಧ ಇಲಾಖೆಗಳಲ್ಲಿ 2,84,881 ಹುದ್ದೆಗಳು ಖಾಲಿ
- ಕರ್ನಾಟಕ ಸರ್ಕಾರದಿಂದ ರೈತರಿಗೆ ಗುಡ್‌ನ್ಯೂಸ್
- ಈ ಯೋಜನೆಯಡಿ ಸಿಗಲಿದೆ ಮಹಿಳೆಯರಿಗೆ ಸಹಾಯಧನ
- ಯುವಕರಿಗೆ ʼಗ್ರಾಮ ಒನ್ ಕೇಂದ್ರʼ ಆರಂಭಿಸಲು ಸುವರ್ಣಾವಕಾಶ
- ಎಸ್‌ಎಸ್‌ಪಿ ವಿದ್ಯಾರ್ಥಿವೇತನ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
- 8ನೇ ತರಗತಿಯ ಪಠ್ಯಪುಸ್ತಕದಲ್ಲಿ ಮಹತ್ವದ ಬದಲಾವಣೆ
- ರೈಲ್ವೆ ಇಲಾಖೆಯಿಂದ ಸಹಾಯಕ ಲೋಕೋ ಪೈಲೆಟ್ ಹುದ್ದೆಗೆ ಅರ್ಜಿ ಆಹ್ವಾನ





