Medicines: ಸರ್ಕಾರಿ ಆಸ್ಪತ್ರೆಗೆ ಆರೋಗ್ಯ ಇಲಾಖೆಯಿಂದ ಎಚ್ಚರಿಕೆ!

(Medicines:) ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಅಗತ್ಯವಿರುವ ಔಷಧಿಗಳ ಕೊರತೆಯಾಗದಂತೆ ನೋಡಿಕೊಳ್ಳಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಔಷಧಿಗಳ ಖರೀದಿ ಪ್ರಕ್ರಿಯೆ ವಿಳಂಬವಾಗದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.


ನ್ನೂ ಓದಿ: ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ರಿಲೀಫ್; ಏನದು, ಮಿಸ್‌ ಮಾಡ್ದೆ ಈ ಸುದ್ದಿ ಓದಿ


ಇತ್ತೀಚೆಗೆ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘವು “ಸರ್ಕಾರ ಅಥವಾ ಇಲಾಖೆ ಸರಬರಾಜು ಮಾಡುವ ಔಷಧಿಗಳನ್ನು ಮಾತ್ರ ಬಳಸಬೇಕು, ಸ್ಥಳೀಯವಾಗಿ ಖರೀದಿ ಮಾಡಬಾರದು” ಎಂದು ಸೂಚನೆ ನೀಡಿತ್ತು. ಆದರೆ ಈ ಸೂಚನೆ ನಿಯಮಬಾಹಿರವಾಗಿದ್ದು, ಇದರಿಂದ ಆಸ್ಪತ್ರೆಗಳಲ್ಲಿ ತುರ್ತು ಸಂದರ್ಭಗಳಲ್ಲಿ ಔಷಧಿ ಕೊರತೆ ಉಂಟಾಗುವ ಸಾಧ್ಯತೆಯಿದೆ ಎಂದು ಇಲಾಖೆ ಅಭಿಪ್ರಾಯಪಟ್ಟಿದೆ.

ಆಸ್ಪತ್ರೆಗಳಿಗೆ ಲಭ್ಯವಿರುವ AB-ArK, ARS ಸೇರಿದಂತೆ ವಿವಿಧ ಅನುದಾನಗಳನ್ನು ಬಳಸಿಕೊಂಡು, KTPP ಕಾಯ್ದೆ ಹಾಗೂ GeM ಪೋರ್ಟಲ್ ಮೂಲಕ ಪಾರದರ್ಶಕವಾಗಿ ಔಷಧಿಗಳನ್ನು ಖರೀದಿಸಲು ಅವಕಾಶವಿದೆ ಎಂದು ಸ್ಪಷ್ಟಪಡಿಸಲಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಈ ಪ್ರಕ್ರಿಯೆಯನ್ನು ಮುಂದುವರಿಸುವಂತೆ ಸೂಚಿಸಲಾಗಿದೆ.


ನ್ನೂ ಓದಿ: ರಾಜ್ಯದ ರೈತರಿಗೆ ಗುಡ್ ನ್ಯೂಸ್; ಇನ್ಮುಂದೆ ಮೊಬೈಲ್‌ ನಲ್ಲೇ ಸಿಗಲಿದೆ ಹಳೆಯ ಪಹಣಿ


ಔಷಧಿ ಖರೀದಿ ಪ್ರಕ್ರಿಯೆಯಲ್ಲಿ ನಿರ್ಲಕ್ಷ್ಯ ತೋರಿ ರೋಗಿಗಳಿಗೆ ತೊಂದರೆಯಾಗಿದೆಯೆಂಬ ದೂರುಗಳು ಬಂದಲ್ಲಿ, ಸಂಬಂಧಪಟ್ಟ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳನ್ನೇ ನೇರವಾಗಿ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಇದೇ ವೇಳೆ ನಿಯಮಗಳನ್ನು ಉಲ್ಲಂಘಿಸುವ ಅಥವಾ ಕರ್ತವ್ಯ ಲೋಪ ಎಸಗುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಆಯುಕ್ತರು ತಮ್ಮ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಈ ಆದೇಶವನ್ನು ರಾಜ್ಯದ ಎಲ್ಲಾ ಜಿಲ್ಲಾ ಆರೋಗ್ಯ ಅಧಿಕಾರಿಗಳು (DHO), ಜಿಲ್ಲಾ ಶಸ್ತ್ರಚಿಕಿತ್ಸಕರು ಮತ್ತು ತಾಲ್ಲೂಕು ವೈದ್ಯಾಧಿಕಾರಿಗಳಿಗೆ ರವಾನಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ತುರ್ತು ಔಷಧಿಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದೇ ಈ ಆದೇಶದ ಮುಖ್ಯ ಉದ್ದೇಶವಾಗಿದೆ.


ನ್ನೂ ಓದಿ: ಎಲ್​ಪಿಜಿ ಸಿಲಿಂಡರ್ ದರ ದಿಢೀರ್ ಏರಿಕೆ; ಗ್ರಾಹಕರಿಗೆ ಬಿಗ್ ಶಾಕ್


Medicines: ಸರ್ಕಾರಿ ಆಸ್ಪತ್ರೆಗೆ ಆರೋಗ್ಯ ಇಲಾಖೆಯಿಂದ ಎಚ್ಚರಿಕೆ!
Medicines: ಸರ್ಕಾರಿ ಆಸ್ಪತ್ರೆಗೆ ಆರೋಗ್ಯ ಇಲಾಖೆಯಿಂದ ಎಚ್ಚರಿಕೆ!

ಇತ್ತೀಚಿನ ಜನಪ್ರಿಯ ಸುದ್ದಿಗಳು (Medicines:)

    1. ಈ ಸಂಸ್ಥೆಯಿಂದ ಸಿಗಲಿದೆ ವಿದ್ಯಾರ್ಥಿಗಳಿಗೆ ₹1,00,000 ಸ್ಕಾಲರ್‌ಶಿಪ್
    2. ಮನೆಯಲ್ಲೇ ಕುಳಿತು ಇ-ಖಾತಾ ಪಡೆದುಕೊಳ್ಳಿ!
    3. ಕೆನರಾ ಬ್ಯಾಂಕ್‌ನಿಂದ 30 ದಿನದ ಉಚಿತ ಹೋಲಿಗೆ ಯಂತ್ರ ತರಬೇತಿಗೆ ಅರ್ಜಿ ಆಹ್ವಾನ
    4. ರಾಜ್ಯದ ವಿವಿಧ ಇಲಾಖೆಗಳಲ್ಲಿ 2,84,881 ಹುದ್ದೆಗಳು ಖಾಲಿ
    5. ಕರ್ನಾಟಕ ಸರ್ಕಾರದಿಂದ ರೈತರಿಗೆ ಗುಡ್‌ನ್ಯೂಸ್‌
    6. ಈ ಯೋಜನೆಯಡಿ ಸಿಗಲಿದೆ ಮಹಿಳೆಯರಿಗೆ ಸಹಾಯಧನ
    7. ಯುವಕರಿಗೆ ʼಗ್ರಾಮ ಒನ್‌ ಕೇಂದ್ರʼ ಆರಂಭಿಸಲು ಸುವರ್ಣಾವಕಾಶ
    8. ಎಸ್‌ಎಸ್‌ಪಿ ವಿದ್ಯಾರ್ಥಿವೇತನ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
    9. 8ನೇ ತರಗತಿಯ ಪಠ್ಯಪುಸ್ತಕದಲ್ಲಿ ಮಹತ್ವದ ಬದಲಾವಣೆ
    10. ರೈಲ್ವೆ ಇಲಾಖೆಯಿಂದ ಸಹಾಯಕ ಲೋಕೋ ಪೈಲೆಟ್‌ ಹುದ್ದೆಗೆ ಅರ್ಜಿ ಆಹ್ವಾನ