Matru Vandana Yojane: ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಕೆಲವರು ಸದುಪಯೋಗ ಪಡೆದುಕೊಂಡರೆ ಇನ್ನು ಕೆಲವು ಅದರ ಸಂಪೂರ್ಣ ಮಾಹಿತಿ ತಿಳಿಯದೆ ಪ್ರಯೋಜನಗಳನ್ನು ಪಡೆಯುತ್ತಿಲ್ಲ. ಪ್ರಧಾನ ಮಂತ್ರಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಅದರಲ್ಲಿ ಮುಖ್ಯವಾಗಿ ರೈತರಿಗೆ, ಮಹಿಳೆಯರಿಗೆ ಎಂದು ಈ ರೀತಿ ವಿಭಜಿಸಲಾಸಿದೆ. ಮಹಿಳೆಯರಿಗಾಗಿ ‘ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ’ತಾಯಂದಿರ ಹಿತದಷ್ಟಿಯಿಂದ ಮಹತ್ವದ ಹೆಜ್ಜೆ ಇಟ್ಟಿದೆ.
ಇದನ್ನೂ ಓದಿ: 10th ಪಾಸ್ ಆದವರಿಗೆ ಪೋಸ್ಟ್ ಆಫೀಸ್ ನಲ್ಲಿ ಭರ್ಜರಿ ಜಾಬ್ ಆಫರ್; 12,000 ದಿಂದ ಸಂಬಳ
ಸಾಮಾನ್ಯವಾಗಿ ಗರ್ಭೀಣಿ ಸಮಯದಲ್ಲಿ ಹೆರಿಗೆಯಿಂದ ಹಿಡಿದು ಮಗು ಜನನ ನಂತರದ ನಿರಂತರವಾದ ಖರ್ಚು ವೆಚ್ಚಗಳು ಆಗುತ್ತವೆ. ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಇದು ಕಷ್ಟಕರವಾಗಿದೆ. ಆದ್ದರಿಂದ ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರ ಆರೋಗ್ಯ ಹಾಗೂ ಪೌಷ್ಟಿಕಾಂಶದ ದೃಷ್ಟಿಯಿಂದ ಒಂದು ಅದ್ಭುತ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಿದರೆ ನೇರವಾಗಿ ನಿಮ್ಮ ಖಾತೆಗೆ ಹಂತ ಹಂತವಾಗಿ 11,000 ರೂ.ಹಣ ಜಮೆಯಾಗುತ್ತದೆ.
ಹಣ ಖಾತೆಗೆ ಜಮೆಯಾಗುವ ಹಂತಗಳು:
1. ಮೊದಲ ಮಗುವಿನ ಜನನದ ವೇಳೆ (₹5,000):
ಗರ್ಭಧಾರಣೆಯ ನೋಂದಣಿ ಮಾಡಿಸಿದ ತಕ್ಷಣ ₹1,000 ಗರ್ಭಧಾರಣೆಯ ಆರನೇ ತಿಂಗಳ ₹2,000 ಮಗುವಿನ ಜನನ ಮತ್ತು ಮೊದಲ ಹಂತದ ಲಸಿಕೆ ಪೂರ್ಣಗೊಂಡ ನಂತರ ₹2,000ರೂ ಹಂತ ಹಂತವಾಗಿ ಜಮೆಯಾಗುತ್ತದೆ.
ಇದನ್ನೂ ಓದಿ: 6 ತಿಂಗಳು ಇಂತಹವರ ರೇಷನ್ ಕಾರ್ಡ್ ಕ್ಯಾನ್ಸಲ್; ಕಾರಣವೇನು ಗೊತ್ತಾ…?
2. ಎರಡನೇ ಮಗುವಿನ ಜನನದ ವೇಳೆ (₹6,000):
ಎರಡನೇ ಬಾರಿ ಗರ್ಭಿಣಿಯಾದಾಗ, ಮಗು ಜನಿಸಿ ಅಗತ್ಯವಿರುವ ಎಲ್ಲಾ ಆರೋಗ್ಯ ತಪಾಸಣೆಗಳು ಪೂರ್ಣಗೊಂಡ ನಂತರ ಒಂದೇ ಬಾರಿಗೆ ₹6,000 ನೇರವಾಗಿ ಖಾತೆಗೆ ಜಮೆಯಾಗುತ್ತದೆ.
ಬೇಕಾಗುವ ದಾಖಲೆಗಳು:
* ತಾಯಿಯ ಆಧಾರ್ ಕಾರ್ಡ್(Aadhar Card)
* ಗರ್ಭಧಾರಣೆಯ ದೃಢೀಕರಣ ವರದಿ(Pregnancy Confirmation Report)
* ಬ್ಯಾಂಕ್ ಪಾಸ್‌ಬುಕ್(Bank Passbook)
* ರೇಷನ್ ಕಾರ್ಡ್(Ration Card)
* ಪೋಟೋ(Photo)
ಅರ್ಜಿ ಸಲ್ಲಿಸುವ ವಿಧಾನ:
ನಿಮ್ಮ ಹತ್ತಿರದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಯೋಜನೆಯ ಲಾಭ ಪಡೆಯಲು ನಿಮ್ಮ ಹತ್ತಿರದ ಅಂಗನವಾಡಿ ಕಾರ್ಯಕರ್ತೆಯರನ್ನು ಅಥವಾ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ.

Public Desclimer
This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.
News Malnad is not responsible for any misuse of our media identity by unauthorized persons.
ಇತ್ತೀಚಿನ ಜನಪ್ರಿಯ ಸುದ್ದಿಗಳು (Matru Vandana Yojane:)
- ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
- ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
- ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
- ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
- ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ





