State Government6: ವಿವಿಧ ಇಲಾಖೆಗಳಲ್ಲಿ 2,84,881 ಹುದ್ದೆಗಳು ಖಾಲಿ

State Government6: 2,84,881 ವಿವಿಧ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿರುವುದನ್ನು ವಿರೋಧಿಸಿ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ಧಾರವಾಡದಲ್ಲಿ ಪ್ರತಿಭಟನೆ ನಡೆಸಿದ್ದರು. ಇದೀಗ ಸರ್ಕಾರದ ಅಂಕಿಅಂಶಗಳ ಪ್ರಕಾರ ರಾಜ್ಯದ ವಿವಿಧ ಇಲಾಖೆಗಳಲ್ಲಿ ಒಟ್ಟು 2,84,881 ಹುದ್ದೆಗಳು ಭರ್ತಿಯಾಗದೆ ಖಾಲಿ ಉಳಿದಿವೆ.

ಪ್ರಾಥಮಿಕ, ಪ್ರೌಢಶಿಕ್ಷಣ ಇಲಾಖೆಯಲ್ಲಿ ಅತಿಹೆಚ್ಚಿನ ಹುದ್ದೆಗಳು ಖಾಲಿ ಇದ್ದು, ಈ ಹಿಂದೆ 2019 ರಿಂದ 23 ರವರೆಗೆ ರಾಜ್ಯದಲ್ಲಿ ಮಹಾಮಾರಿ ಕೋವಿಡ್ 19 ಇದ್ದ ಕಾರಣ ಯಾವುದೇ ಹುದ್ದೆಗಳನ್ನು ತುಂಬಲು ಸಾಧ್ಯವಾಗಿರಲಿಲ್ಲ. ಇಡೀ ಆರ್ಥಿಕ ಚಟುವಟಿಕೆಯೇ ಸಂಪೂರ್ಣವಾಗಿ ಸ್ತಬ್ದಗೊಂಡು ಜನರು ದೈನಂದಿನ ಜೀವನ ನಡೆಸುವುದೇ ದುಸ್ತರವಾಗುವಂತಹ ಸಂದರ್ಭ ಬಂದು ಹೋಗಿತ್ತು. ಅಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸರ್ಕಾರಿ ಇಲಾಖೆಯಲ್ಲಿ ಖಾಲಿ ಇದ್ದ ಹುದ್ದೆಗಳನ್ನು ಭರ್ತಿ ಮಾಡಲು ಸಾಧ್ಯವಾಗಿರಲಿಲ್ಲ. 2023ರ ವರ್ಷದ ಪ್ರಾರಂಭದಲ್ಲಿ ಕೆಲವು ಇಲಾಖೆಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡಲು ಅಂದಿನ ಮುಖ್ಯಮಂತ್ರಿ ಸರ್ಕಾರ ಮುಂದಾಗಿತ್ತು.


ನ್ನೂ ಓದಿ: 10th ಪಾಸ್‌ ಆದವರಿಗೆ ಪೋಸ್ಟ್‌ ಆಫೀಸ್‌ ನಲ್ಲಿ ಭರ್ಜರಿ ಜಾಬ್‌ ಆಫರ್‌; 12,000 ದಿಂದ ಸಂಬಳ


ಒಂದಿಲ್ಲೊಂದು ಕಾರಣಗಳಿಂದ ಸರ್ಕಾರಿ ಇಲಾಖೆಗಳಲ್ಲಿ ಹುದ್ದೆಗಳು ದಿನದಿಂದ ದಿನಕ್ಕೆ ಬೆಳೆಯುತ್ತಲೇ ಹೋಗಿವಿಯೇ ವಿನಃ ಭರ್ತಿಯಾಗುತ್ತಿಲ್ಲ. ಹೀಗಾಗಿಯೇ ಯುವ ಉದ್ಯೋಗಾಂಕಾಕ್ಷಿಗಳ ಸಹನೆ ಕಟ್ಟೆ ಒಡೆದು ಬೃಹತ್ ಪ್ರತಿಭಟನೆಗೆ ಸಾಕ್ಷಿಯಾಯಿತು. ರಾಜ್ಯದ ವಿವಿಧ ಸರ್ಕಾರಿ ಮತ್ತು ಅರೆ-ಸರ್ಕಾರಿ ಇಲಾಖೆಗಳಲ್ಲಿ ಸುಮಾರು 2.84 ಲಕ್ಷಕ್ಕೂ ಹೆಚ್ಚು 2,84,881 ಹುದ್ದೆಗಳು ಖಾಲಿ ಇವೆ. ಒಟ್ಟು 43 ಇಲಾಖೆಗಳಲ್ಲಿ ಹುದ್ದೆಗಳು ಖಾಲಿಯಿದ್ದು, ಅದರಲ್ಲಿ ವಿವಿಧ ನಿಗಮ ಮಂಡಳಿಗಳಲ್ಲಿ 101420, ವಿಶ್ವವಿದ್ಯಾಲಯಗಳಲ್ಲಿ 14677 ಹುದ್ದೆಗಳು ಸೇರಿ 188037 ಹುದ್ದೆಗಳು ಖಾಲಿಯಿದೆ.

ಖಾಲಿ ಇರುವ ಹುದ್ದೆಗಳು
* ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ: 79,694 ಹುದ್ದೆಗಳು (ಅತಿ ಹೆಚ್ಚು).
* ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ: 37,572


ನ್ನೂ ಓದಿ: 6 ತಿಂಗಳು ಇಂತಹವರ ರೇಷನ್‌ ಕಾರ್ಡ್‌ ಕ್ಯಾನ್ಸಲ್‌; ಕಾರಣವೇನು ಗೊತ್ತಾ…?


ಹುದ್ದೆಗಳು.

* ಕೃಷಿ – 6876
* ಪಶುಸಂಗೋಪನೆ – 11020
* ಹಿಂದುಳಿದ ವರ್ಗಗಳ ಕಲ್ಯಾಣ- 8525
* ಆರ್ಥಿಕ – 7668
* ಮೀನುಗಾರಿಕೆ – 838
* ಆಹಾರ ಮತ್ತು ನಾಗರಿಕ ಪೂರೈಕೆ- 1442
* ಅರಣ್ಯ – 6478
* ಉನ್ನತ ಶಿಕ್ಷಣ – 13,599
* ಒಳಾಡಳಿತ – 28,188
* ಕಾನೂನು- 7659
* ಅಲ್ಪಸಂಖ್ಯಾತ ಕಲ್ಯಾಣ- 4972
* ಕಂದಾಯ- 10867
* ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ – 10504
* ಪರಿಶಿಷ್ಟ ಜಾತಿ ಕಲ್ಯಾಣ- 9646
* ಶಿಕ್ಷಣ- 79,694
* ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ – 3391

State Government6 ರಾಜ್ಯದ ವಿವಿಧ ಇಲಾಖೆಗಳಲ್ಲಿ 2,84,881 ಹುದ್ದೆಗಳು ಖಾಲಿ
State Government6 ರಾಜ್ಯದ ವಿವಿಧ ಇಲಾಖೆಗಳಲ್ಲಿ 2,84,881 ಹುದ್ದೆಗಳು ಖಾಲಿ

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಇತ್ತೀಚಿನ ಜನಪ್ರಿಯ ಸುದ್ದಿಗಳು (State Government6:)

  1.  ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
  2. ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
  3. ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
  4. ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
  5. ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ