BuzzBallz: ಮಕ್ಕಳಿಗೆ ಕೂಲ್ ಡ್ರಿಂಕ್ಸ್ ಕೊಡುವ ಮುನ್ನ ಎಚ್ಚರ!

(BuzzBallz: ) ಇತ್ತೀಚೆಗೆ ಮಾರುಕಟ್ಟೆಗೆ ಬಂದಿರುವ ಈ ಪಾನೀಯವು ತನ್ನ ವಿಶಿಷ್ಟವಾದ ಗೋಲಾಕಾರದ ವಿನ್ಯಾಸ ಮತ್ತು ಗಾಢ ಬಣ್ಣಗಳಿಂದಾಗಿ ಮಕ್ಕಳನ್ನು ಮತ್ತು ಯುವಕರನ್ನು ಸೆಳೆಯುತ್ತಿದೆ. ಹಣ್ಣಿನ ಜ್ಯೂಸ್‌ನಂತೆ ಕಾಣುವ ಈ ಪಾನೀಯವು ಸುಲಭವಾಗಿ ಗಮನ ಸೆಳೆಯುತ್ತಿದ್ದು, ಮಕ್ಕಳ ಕೈಗೆ ಸಿಕ್ಕುವ ಅಪಾಯವೂ ಹೆಚ್ಚಿದೆ. ಪಾನೀಯದ ಕೆಲವು ಮಾದರಿಗಳ ಪರಿಶೀಲನೆ ವೇಳೆ ಆರೋಗ್ಯಕ್ಕೆ ಹಾನಿಕಾರಕವಾಗಬಹುದಾದ ಹಾಗೂ ಲೇಬಲ್‌ನಲ್ಲಿ ಉಲ್ಲೇಖಿಸದ ಅಂಶಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.


ನ್ನೂ ಓದಿ: ಈ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಸಿಗಲಿದೆ ₹1,00,000 ಸ್ಕಾಲರ್‌ಶಿಪ್; ಡಿಟೇಲ್ಸ್‌ಗಾಗಿ ಜಸ್ಟ್‌ ಈ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ


ಅಲರ್ಜಿ ಕಾರಕ ಅಂಶಗಳು ಪತ್ತೆ:
ಕೆಲವು ಫ್ಲೇವರ್‌ಗಳಲ್ಲಿ, ವಿಶೇಷವಾಗಿ ‘ಚಾಕ್ ಟೀಸ್’ ಮಾದರಿಯಲ್ಲಿ ಹಾಲು ಮತ್ತು ಸಲ್ಫೈಟ್ಸ್ ಅಂಶಗಳಿರುವುದು ಕಂಡುಬಂದಿದೆ. ಆದರೆ ಉತ್ಪನ್ನದ ಲೇಬಲ್‌ನಲ್ಲಿ ಈ ಅಂಶಗಳ ಬಗ್ಗೆ ಯಾವುದೇ ಮಾಹಿತಿ ನೀಡಲಾಗಿಲ್ಲ ಎಂದು ವರದಿಯಾಗಿದೆ. ಹಾಲಿಗೆ ಅಲರ್ಜಿ ಇರುವವರು ಅಥವಾ ಅಸ್ತಮಾ ಸಮಸ್ಯೆ ಹೊಂದಿರುವವರು ಇದನ್ನು ಸೇವಿಸಿದರೆ ಉಸಿರಾಟದ ತೊಂದರೆ, ಚರ್ಮದ ಅಲರ್ಜಿ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ.

ಗುಣಮಟ್ಟದ ಬಗ್ಗೆ ಪ್ರಶ್ನೆ:
ಡೈರಿ ಆಧಾರಿತ ಕೆಲವು ಪಾನೀಯಗಳಲ್ಲಿ ಬಾಟಲಿಯೊಳಗೇ ಗಡ್ಡೆ ಕಟ್ಟುವ (Curdling) ಘಟನೆಗಳೂ ವರದಿಯಾಗಿವೆ. ಇದರಿಂದ ಉತ್ಪನ್ನದ ಗುಣಮಟ್ಟದ ಬಗ್ಗೆ ಅನುಮಾನಗಳು ಮೂಡಿವೆ.


ನ್ನೂ ಓದಿ: ರೇಷನ್‌ ಕಾರ್ಡ್‌ ತಿದ್ದುಪಡಿಗೆ ಅವಕಾಶ; ಏನೆಲ್ಲಾ ತಿದ್ದುಪಡಿ ಮಾಡಿಬಹುದು? ಸಂಪೂರ್ಣ ಮಾಹಿತಿ ಇಲ್ಲಿದೆ


ಹೆಚ್ಚಿನ ಆಲ್ಕೋಹಾಲ್ ಪ್ರಮಾಣ:
ಹಣ್ಣಿನ ಜ್ಯೂಸ್‌ನಂತೆ ಕಾಣುವ ಈ ಪಾನೀಯದಲ್ಲಿ ಶೇ. 13.5 ರಿಂದ 15 ರಷ್ಟು ಆಲ್ಕೋಹಾಲ್ ಅಂಶವಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಮಕ್ಕಳಿಗೆ ಇದು ಸಾಮಾನ್ಯ ಜ್ಯೂಸ್ ಎಂದು ತಪ್ಪಾಗಿ ಭಾಸವಾಗುವ ಸಾಧ್ಯತೆ ಇದೆ.

ಆಯೋಗದ ಕ್ರಮ:
ಮಕ್ಕಳು ಇದನ್ನು ಜ್ಯೂಸ್ ಎಂದು ತಪ್ಪಾಗಿ ಭಾವಿಸಿ ಸೇವಿಸುವ ಸಾಧ್ಯತೆ ಇರುವುದರಿಂದ ಮತ್ತು ಉತ್ಪನ್ನದಲ್ಲಿರುವ ಅಂಶಗಳ ಕುರಿತು ಸರಿಯಾದ ಮಾಹಿತಿ ನೀಡದಿರುವ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ಈ ಕುರಿತು ಸಂಪೂರ್ಣ ವರದಿ ಸಲ್ಲಿಸುವಂತೆ ಸಂಬಂಧಪಟ್ಟ ಇಲಾಖೆಗಳಿಗೂ ಸೂಚನೆ ನೀಡಲಾಗಿದೆ.


ನ್ನೂ ಓದಿ: ಗೃಹಲಕ್ಷ್ಮಿಯರಿಗೆ ಗುಡ್‌ ನ್ಯೂಸ್; ಈ ದಿನ ಆಗಲಿದೆ 27ನೇ ಕಂತಿನ ಹಣ ಜಮಾ


ಇಂತಹ ಆಕರ್ಷಕ ಬಾಟಲಿಗಳಲ್ಲಿರುವ ಪಾನೀಯಗಳನ್ನು ಖರೀದಿಸುವಾಗ ಪೋಷಕರು ಹೆಚ್ಚು ಎಚ್ಚರಿಕೆಯಿಂದಿರಬೇಕು. ಉತ್ಪನ್ನದ ಲೇಬಲ್ ಮತ್ತು ಪದಾರ್ಥಗಳ ಪಟ್ಟಿಯನ್ನು ಕಡ್ಡಾಯವಾಗಿ ಪರಿಶೀಲಿಸಬೇಕು ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.

BuzzBallz: ಮಕ್ಕಳಿಗೆ ಕೂಲ್ ಡ್ರಿಂಕ್ಸ್ ಕೊಡುವ ಮುನ್ನ ಎಚ್ಚರ!
BuzzBallz: ಮಕ್ಕಳಿಗೆ ಕೂಲ್ ಡ್ರಿಂಕ್ಸ್ ಕೊಡುವ ಮುನ್ನ ಎಚ್ಚರ!

ಇತ್ತೀಚಿನ ಜನಪ್ರಿಯ ಸುದ್ದಿಗಳು (BuzzBallz: )

    1. ಈ ಸಂಸ್ಥೆಯಿಂದ ಸಿಗಲಿದೆ ವಿದ್ಯಾರ್ಥಿಗಳಿಗೆ ₹1,00,000 ಸ್ಕಾಲರ್‌ಶಿಪ್
    2. ಮನೆಯಲ್ಲೇ ಕುಳಿತು ಇ-ಖಾತಾ ಪಡೆದುಕೊಳ್ಳಿ!
    3. ಕೆನರಾ ಬ್ಯಾಂಕ್‌ನಿಂದ 30 ದಿನದ ಉಚಿತ ಹೋಲಿಗೆ ಯಂತ್ರ ತರಬೇತಿಗೆ ಅರ್ಜಿ ಆಹ್ವಾನ
    4. ರಾಜ್ಯದ ವಿವಿಧ ಇಲಾಖೆಗಳಲ್ಲಿ 2,84,881 ಹುದ್ದೆಗಳು ಖಾಲಿ
    5. ಕರ್ನಾಟಕ ಸರ್ಕಾರದಿಂದ ರೈತರಿಗೆ ಗುಡ್‌ನ್ಯೂಸ್‌
    6. ಈ ಯೋಜನೆಯಡಿ ಸಿಗಲಿದೆ ಮಹಿಳೆಯರಿಗೆ ಸಹಾಯಧನ
    7. ಯುವಕರಿಗೆ ʼಗ್ರಾಮ ಒನ್‌ ಕೇಂದ್ರʼ ಆರಂಭಿಸಲು ಸುವರ್ಣಾವಕಾಶ
    8. ಎಸ್‌ಎಸ್‌ಪಿ ವಿದ್ಯಾರ್ಥಿವೇತನ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
    9. 8ನೇ ತರಗತಿಯ ಪಠ್ಯಪುಸ್ತಕದಲ್ಲಿ ಮಹತ್ವದ ಬದಲಾವಣೆ
    10. ರೈಲ್ವೆ ಇಲಾಖೆಯಿಂದ ಸಹಾಯಕ ಲೋಕೋ ಪೈಲೆಟ್‌ ಹುದ್ದೆಗೆ ಅರ್ಜಿ ಆಹ್ವಾನ