(Three Wheelers:) ದೈಹಿಕ ವಿಕಲಚೇತನರ ಸಬಲೀಕರಣದ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮೋಟಾರೀಕೃತ ತ್ರಿಚಕ್ರ ವಾಹನ ಯೋಜನೆಗೆ ಸಂಬಂಧಿಸಿದಂತೆ ಅರ್ಹತಾ ಮಾನದಂಡಗಳನ್ನು ಇತ್ತೀಚಿನ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಸಮಿತಿಗಳು ಕಟ್ಟುನಿಟ್ಟಾಗಿ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಸೂಚಿಸಲಾಗಿದೆ.
ಇದನ್ನೂ ಓದಿ: ಈ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಸಿಗಲಿದೆ ₹1,00,000 ಸ್ಕಾಲರ್‌ಶಿಪ್; ಡಿಟೇಲ್ಸ್‌ಗಾಗಿ ಜಸ್ಟ್ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ಯಾರು ಅರ್ಹರು?
- ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಜಿದಾರರು ಈ ಕೆಳಗಿನ ನಿಯಮಗಳನ್ನು ಕಡ್ಡಾಯವಾಗಿ ಪೂರೈಸಬೇಕು.
- ಅರ್ಜಿದಾರರು ಭಾರತದ ಪ್ರಜೆಯಾಗಿದ್ದು, ಕನಿಷ್ಠ 10 ವರ್ಷಗಳಿಂದ ಕರ್ನಾಟಕದಲ್ಲಿ ವಾಸಿಸುತ್ತಿರಬೇಕು.
- ಅಭ್ಯರ್ಥಿಗಳ ವಯಸ್ಸು 20 ರಿಂದ 60 ವರ್ಷಗಳೊಳಗಿರಬೇಕು.
- ದೈಹಿಕ ವಿಕಲಚೇತನದ ಪ್ರಮಾಣ ಶೇ. 75ಕ್ಕಿಂತ ಹೆಚ್ಚಿರಬೇಕು. ಮುಖ್ಯವಾಗಿ ಸೊಂಟದ ಕೆಳಭಾಗದ ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡವರಾಗಿದ್ದು, ತ್ರಿಚಕ್ರ ವಾಹನ ಚಾಲನೆ ಮಾಡಲು ಕೈಗಳು ಸಮರ್ಪಕವಾಗಿರಬೇಕು.
- ಕುಟುಂಬದ ವಾರ್ಷಿಕ ಆದಾಯವು ₹2 ಲಕ್ಷಕ್ಕಿಂತ ಕಡಿಮೆ ಇರಬೇಕು.
ಇದನ್ನೂ ಓದಿ: ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ; ಏನೆಲ್ಲಾ ತಿದ್ದುಪಡಿ ಮಾಡಿಬಹುದು? ಸಂಪೂರ್ಣ ಮಾಹಿತಿ ಇಲ್ಲಿದೆ
ಪ್ರಮುಖ ನಿಯಮಗಳು:
- ಈ ಯೋಜನೆಯಡಿ ಸೌಲಭ್ಯವನ್ನು ವ್ಯಕ್ತಿಗೆ ಜೀವನದಲ್ಲಿ ಒಂದೇ ಬಾರಿ ನೀಡಲಾಗುತ್ತದೆ. ಈ ಹಿಂದೆ ಯಾವುದೇ ಇಲಾಖೆ ಅಥವಾ ಸಂಸ್ಥೆಯಿಂದ ತ್ರಿಚಕ್ರ ವಾಹನ ಪಡೆದಿರುವವರು ಅರ್ಹರಾಗುವುದಿಲ್ಲ.
- ಸರ್ಕಾರ ನೀಡುವ ವಾಹನವನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡುವುದು ಅಥವಾ ಬೇರೆಯವರಿಗೆ ವರ್ಗಾಯಿಸುವುದು ನಿಷಿದ್ಧ. ನಿಯಮ ಉಲ್ಲಂಘನೆಯಾದರೆ ಸರ್ಕಾರ ವಾಹನವನ್ನು ವಶಕ್ಕೆ ಪಡೆಯಲಿದೆ.
- ಅರ್ಜಿ ಸಲ್ಲಿಸುವವರು ತ್ರಿಚಕ್ರ ವಾಹನ ಚಾಲನೆಗೆ ಮಾನ್ಯವಾದ ಚಾಲನಾ ಪರವಾನಗಿ ಹೊಂದಿರಬೇಕು.
ಆಯ್ಕೆ ಪ್ರಕ್ರಿಯೆ
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಸಮಿತಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಿದೆ.
ಇದನ್ನೂ ಓದಿ: ಗೃಹಲಕ್ಷ್ಮಿಯರಿಗೆ ಗುಡ್ ನ್ಯೂಸ್; ಈ ದಿನ ಆಗಲಿದೆ 27ನೇ ಕಂತಿನ ಹಣ ಜಮಾ
ವಿಶೇಷ ಸೂಚನೆ
- ವಾಹನದ ಆರ್.ಸಿ. (RC) ಪುಸ್ತಕದಲ್ಲಿ ಫಲಾನುಭವಿ ಜೀವಂತವಾಗಿರುವವರೆಗೆ ಈ ವಾಹನವನ್ನು ಮರುಮಾರಾಟ ಮಾಡುವಂತಿಲ್ಲ.
- ಯೋಜನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಲು ತಮ್ಮ ಜಿಲ್ಲೆಯ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯನ್ನು ಸಂಪರ್ಕಿಸಬಹುದು.

ಇತ್ತೀಚಿನ ಜನಪ್ರಿಯ ಸುದ್ದಿಗಳು (Three Wheelers:)
-
- ಈ ಸಂಸ್ಥೆಯಿಂದ ಸಿಗಲಿದೆ ವಿದ್ಯಾರ್ಥಿಗಳಿಗೆ ₹1,00,000 ಸ್ಕಾಲರ್‌ಶಿಪ್
- ಮನೆಯಲ್ಲೇ ಕುಳಿತು ಇ-ಖಾತಾ ಪಡೆದುಕೊಳ್ಳಿ!
- ಕೆನರಾ ಬ್ಯಾಂಕ್‌ನಿಂದ 30 ದಿನದ ಉಚಿತ ಹೋಲಿಗೆ ಯಂತ್ರ ತರಬೇತಿಗೆ ಅರ್ಜಿ ಆಹ್ವಾನ
- ರಾಜ್ಯದ ವಿವಿಧ ಇಲಾಖೆಗಳಲ್ಲಿ 2,84,881 ಹುದ್ದೆಗಳು ಖಾಲಿ
- ಕರ್ನಾಟಕ ಸರ್ಕಾರದಿಂದ ರೈತರಿಗೆ ಗುಡ್‌ನ್ಯೂಸ್
- ಈ ಯೋಜನೆಯಡಿ ಸಿಗಲಿದೆ ಮಹಿಳೆಯರಿಗೆ ಸಹಾಯಧನ
- ಯುವಕರಿಗೆ ʼಗ್ರಾಮ ಒನ್ ಕೇಂದ್ರʼ ಆರಂಭಿಸಲು ಸುವರ್ಣಾವಕಾಶ
- ಎಸ್‌ಎಸ್‌ಪಿ ವಿದ್ಯಾರ್ಥಿವೇತನ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
- 8ನೇ ತರಗತಿಯ ಪಠ್ಯಪುಸ್ತಕದಲ್ಲಿ ಮಹತ್ವದ ಬದಲಾವಣೆ
- ರೈಲ್ವೆ ಇಲಾಖೆಯಿಂದ ಸಹಾಯಕ ಲೋಕೋ ಪೈಲೆಟ್ ಹುದ್ದೆಗೆ ಅರ್ಜಿ ಆಹ್ವಾನ





