ಶಿವಮೊಗ್ಗ/ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಕುವೆಂಪು ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ಕ್ರಿಕೆಟ್ ಪಂದ್ಯಾವಳಿಯಲ್ಲಿ ಶೃಂಗೇರಿಯ ಶ್ರೀ ಜೆಸಿಬಿಎಂ ಕಾಲೇಜು ತಂಡ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಆಗಿದೆ. ಪಂದ್ಯಾವಳಿ KSCA ಶಿವಮೊಗ್ಗ ಕ್ರೀಡಾಂಗಣದಲ್ಲಿ ನಡೆದಿದ್ದು, ಹಲವು ಕಾಲೇಜುಗಳ ನಡುವೆ ನಡೆದ ಕಠಿಣ ಸ್ಪರ್ಧೆಯಲ್ಲಿ ಜೆಸಿಬಿಎಂ ಕಾಲೇಜು ತಂಡ ಉತ್ತಮ ಪ್ರದರ್ಶನ ನೀಡಿತು.
ಈ ಜಯದೊಂದಿಗೆ ಶೃಂಗೇರಿ ಕಾಲೇಜು ತನ್ನ ಇತಿಹಾಸದಲ್ಲಿ ಮೊದಲ ಬಾರಿಗೆ ಕ್ರಿಕೆಟ್ ಕಿರೀಟವನ್ನು ಗೆದ್ದು ಹೊಸ ಮೈಲಿಗಲ್ಲು ಸ್ಥಾಪಿಸಿದೆ. ತಂಡದ ಸಾಧನೆಗೆ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಕ್ರೀಡಾಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಪಂದ್ಯಾವಳಿಯ ಉತ್ತಮ ಕ್ರೀಡಾಪಟುವಾಗಿ ಪ್ರಥಮ ಬಿ.ಕಾಂ ವಿದ್ಯಾರ್ಥಿ ಕೈಲಾಶ್ ಆಯ್ಕೆಯಾಗಿದ್ದು, ಅವರ ಪ್ರದರ್ಶನ ತಂಡದ ಗೆಲುವಿಗೆ ಮಹತ್ವದ ಪಾತ್ರವಹಿಸಿದೆ.
ಈ ಸಾಧನೆಗಾಗಿ ಕಾಲೇಜಿನ ಪ್ರಾಂಶುಪಾಲರಾದ ಡಿ.ಎಂ. ಸ್ವಾಮಿ, ವಿಶ್ವಸ್ಥ ಮಂಡಳಿ, ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಕಿರಣ್ ಕೆ.ಎಸ್., ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ತಂಡಕ್ಕೆ ಅಭಿನಂದನೆಗಳನ್ನು ತಿಳಿಸಿದ್ದಾರೆ.






Leave a Reply