(Tracking App:) ಬೆಂಗಳೂರು: ರಾಜ್ಯದ ಪ್ರಸಿದ್ಧ ಗಿರಿಶಿಖರಗಳಲ್ಲಿ ಚಾರಣಿಗರು ದಾರಿತಪ್ಪುವ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿದ್ದು, ಚಾರಣಿಗರ ಸುರಕ್ಷತೆಗಾಗಿ ಕಟ್ಟುನಿಟ್ಟಿನ ಹೊಸ ಮಾರ್ಗಸೂಚಿ (SOP) ಜಾರಿಗೆ ತರಲು ಮುಂದಾಗಿದೆ.
ಈ ಸಂಬಂಧ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ದೇಶಕ್ಕೇ ಮಾದರಿಯಾಗುವ ರೀತಿಯಲ್ಲಿ ಸುರಕ್ಷತಾ ಕ್ರಮಗಳನ್ನು ರೂಪಿಸಲು ನಿರ್ದೇಶಿಸಿದ್ದಾರೆ.
ಘಟನೆಗಳ ಹಿನ್ನೆಲೆ
ಇತ್ತೀಚೆಗೆ ಕೊಡಗು ಜಿಲ್ಲೆಯ ತಡಿಯಾಂಡಮೋಲ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿದ್ದ ಕೇರಳದ ಶರಣ್ಯ ಎಂಬುವವರು ದಾರಿತಪ್ಪಿ ಮೂರು ದಿನಗಳ ಕಾಲ ಕಾಡಿನಲ್ಲಿ ಸಿಲುಕಿದ್ದ ಘಟನೆ ಆತಂಕ ಹುಟ್ಟಿಸಿತ್ತು. ಅದರ ಬೆನ್ನಲ್ಲೇ ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಅಪ್ರಾಪ್ತ ಬಾಲಕಿ ಶ್ರೀನಂದಾ ನಾಪತ್ತೆಯಾದ ಪ್ರಕರಣ ಸರ್ಕಾರದ ಗಮನ ಸೆಳೆದಿದೆ.
ಪ್ರಮುಖ ನಿರ್ದೇಶನಗಳು
ಚಾರಣಿಗರ ಸುರಕ್ಷತೆ ದೃಷ್ಟಿಯಿಂದ ಸಚಿವರು ಹಲವು ಪ್ರಮುಖ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದಾರೆ:
ಚಾರಣಿಗರಿಗಾಗಿ ಪ್ರತ್ಯೇಕ ಇ-ಟ್ರ್ಯಾಕಿಂಗ್ ಆ್ಯಪ್ ಅಭಿವೃದ್ಧಿಪಡಿಸಿ, ಚಾರಣದ ಅವಧಿಯಲ್ಲಿ ಅದನ್ನು ಕಡ್ಡಾಯವಾಗಿ ಬಳಸುವಂತೆ ಮಾಡುವುದು. ಇದರಿಂದ ದಾರಿತಪ್ಪಿದವರನ್ನು ತಕ್ಷಣ ಪತ್ತೆಹಚ್ಚಲು ಸಾಧ್ಯವಾಗುತ್ತದೆ.
ಚಾರಣಿಗರೊಂದಿಗೆ ಹೋಗುವ ನೇಚರ್ ಗೈಡ್‌ಗಳಿಗೆ ಕಡ್ಡಾಯವಾಗಿ ವೈರ್‌ಲೆಸ್ ಸಂವಹನ ವ್ಯವಸ್ಥೆ ಒದಗಿಸುವುದು.
ಚಾರಣದ ತಂಡವನ್ನು ಮುನ್ನಡೆಸುವವರಿಗೆ ಹೆಚ್ಚಿನ ಜವಾಬ್ದಾರಿ ನಿಗದಿಪಡಿಸುವುದು.
ಚಾರಣಿಗರಿಗೆ ಕಡ್ಡಾಯವಾಗಿ ಗುಂಪು ವಿಮೆ ಸೌಲಭ್ಯ ಒದಗಿಸುವುದು.
ಈ ಎಲ್ಲಾ ಕ್ರಮಗಳನ್ನು ಶೀಘ್ರ ಜಾರಿಗೆ ತಂದು, ಸುರಕ್ಷತಾ ಮಾನದಂಡಗಳನ್ನು ಬಲಪಡಿಸುವಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚಿಸಲಾಗಿದೆ.
ರಾಜ್ಯದ ಜನಪ್ರಿಯ ಚಾರಣ ಕೇಂದ್ರಗಳಲ್ಲಿ ಹೆಚ್ಚುತ್ತಿರುವ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು, ಈ ಹೊಸ SOP ಜಾರಿಯಿಂದ ಚಾರಣಿಗರ ಸುರಕ್ಷತೆ ಇನ್ನಷ್ಟು ಬಲಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.

ಇತ್ತೀಚಿನ ಜನಪ್ರಿಯ ಸುದ್ದಿಗಳು (Tracking App:)
-
- ಈ ಸಂಸ್ಥೆಯಿಂದ ಸಿಗಲಿದೆ ವಿದ್ಯಾರ್ಥಿಗಳಿಗೆ ₹1,00,000 ಸ್ಕಾಲರ್‌ಶಿಪ್
- ಮನೆಯಲ್ಲೇ ಕುಳಿತು ಇ-ಖಾತಾ ಪಡೆದುಕೊಳ್ಳಿ!
- ಕೆನರಾ ಬ್ಯಾಂಕ್‌ನಿಂದ 30 ದಿನದ ಉಚಿತ ಹೋಲಿಗೆ ಯಂತ್ರ ತರಬೇತಿಗೆ ಅರ್ಜಿ ಆಹ್ವಾನ
- ರಾಜ್ಯದ ವಿವಿಧ ಇಲಾಖೆಗಳಲ್ಲಿ 2,84,881 ಹುದ್ದೆಗಳು ಖಾಲಿ
- ಕರ್ನಾಟಕ ಸರ್ಕಾರದಿಂದ ರೈತರಿಗೆ ಗುಡ್‌ನ್ಯೂಸ್
- ಈ ಯೋಜನೆಯಡಿ ಸಿಗಲಿದೆ ಮಹಿಳೆಯರಿಗೆ ಸಹಾಯಧನ
- ಯುವಕರಿಗೆ ʼಗ್ರಾಮ ಒನ್ ಕೇಂದ್ರʼ ಆರಂಭಿಸಲು ಸುವರ್ಣಾವಕಾಶ
- ಎಸ್‌ಎಸ್‌ಪಿ ವಿದ್ಯಾರ್ಥಿವೇತನ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
- 8ನೇ ತರಗತಿಯ ಪಠ್ಯಪುಸ್ತಕದಲ್ಲಿ ಮಹತ್ವದ ಬದಲಾವಣೆ
- ರೈಲ್ವೆ ಇಲಾಖೆಯಿಂದ ಸಹಾಯಕ ಲೋಕೋ ಪೈಲೆಟ್ ಹುದ್ದೆಗೆ ಅರ್ಜಿ ಆಹ್ವಾನ






Leave a Reply