(E- Shram Card) ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಇದೊಂದು ಕಾರ್ಡ್ ಇದ್ದರೆ ಸರ್ಕಾರದಿಂದ ಆರ್ಥಿಕ ನೆರವಿನ ಜೊತೆಗೆ ಪ್ರತಿ ತಿಂಗಳು ಸಾವಿರ ರೂಪಾಯಿ ನಿಮ್ಮ ಖಾತೆಗೆ ಜಮಾ ಆಗುತ್ತದೆ. ಹಾಗಾದರೆ ಯಾವ ಕಾರ್ಡ್, ಯಾರು ಅರ್ಹರು, ಇದಕ್ಕೆ ಅರ್ಜಿ ಸಲ್ಲಿಕೆ ಹೇಗೆ? ಹಾಗೂ ಎಲ್ಲಿ ಎಂಬುದು ಸಂಪೂರ್ಣ ಮಾಹಿತಿ ಇಲ್ಲಿದೆ.
ಯಾವ ಕಾರ್ಡ್ ನಲ್ಲಿ ಈ ಲಾಭ ಪಡೆಯಬಹುದು:
ಇ – ಶ್ರಮ ಕಾರ್ಡ್ ಹೊಂದಿರುವ ಅಸಂಘಟಿತ ವಲಯದ ಕಾರ್ಮಿಕರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು. ಜೊತೆಗೆ ಪ್ರತಿ ತಿಂಗಳು ಸರ್ಕಾರದ ಕಡೆಯಿಂದ ಸಾವಿರ ರೂಪಾಯಿ ಸಿಗುತ್ತದೆ ಇದಕ್ಕಾಗಿ ಈ ಪ್ರಮುಖ ಕಾರ್ಡ್ ಹೊಂದಿರುವುದು ಕಡ್ಡಾಯ.
ಲಾಭ ಪಡೆಯಲು ಅರ್ಹ ಅಭ್ಯರ್ಥಿಯ ಪಟ್ಟಿ ಬಿಡುಗಡೆ:
2024 ರ ಹೊಸ ಫಲಾನುಭವಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಉದ್ಯೋಗ ಮತ್ತು ಕಾರ್ಮಿಕ ಸಂಪನ್ಮೂಲ ಸಚಿವಾಲಯ ಈ ಪಟ್ಟಿ ಬಿಡುಗಡೆ ಮಾಡಿದ್ದು, ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಇದರಿಂದ ಹೆಚ್ಚು ಪ್ರಯೋಜನ ಆಗಿದೆ.
ಈ ಕಾರ್ಡ್ ನಲ್ಲಿ ಯಾವುದೆಲ್ಲಾ ಯೋಜನೆಯ ಲಾಭ ಪಡೆಯಬಹುದು:
ಇದೊಂದು ಕಾರ್ಡ್ ನಲ್ಲಿ ಅಟಲ್ ಪಿಂಚಣಿ ಯೋಜನೆ , ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ, ಪ್ರಧಾನ ಮಂತ್ರಿ ಭೀಮಾ ಸುರಕ್ಷಾ ಯೋಜನೆ ಹಾಗೂ ಇನ್ನೂ ಮೊದಲಾದ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
ಆರೋಗ್ಯ ಸೌಲಭ್ಯ:
ಅಷ್ಟೇ ಅಲ್ಲದೆ ಉಚಿತ ಪಿಂಚಣಿ ಮತ್ತು ಆರೋಗ್ಯ ಸೌಲಭ್ಯವನ್ನು ವಿಶೇಷವಾಗಿ ಬಡ ಆ ಸಂಘಟಿತ ವಲಯದ ಕಾರ್ಮಿಕರಿಗಾಗಿ ಸರ್ಕಾರ ಮೀಸಲಿಟ್ಟಿದೆ. ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಸಾವಿರ ರೂಪಾಯಿಗಳನ್ನು ಪ್ರತಿ ತಿಂಗಳು ನೀಡಲಾಗುತ್ತದೆ, ಇದಕ್ಕೆ ಲೇಬರ್ ಕಾರ್ಡು ಹೊಂದಿರುವುದು ಮುಖ್ಯ.
ಇ – ಶ್ರಮ್ ಕಾರ್ಡ್ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ:
ನೀವು ಹತ್ತಿರದ ಸೇವಾ ಕೇಂದ್ರದಲ್ಲಿ ಅಥವಾ ಕಾರ್ಮಿಕ ಸಂಘಟನೆಗಳಲ್ಲಿ ಅರ್ಜಿ ಸಲ್ಲಿಸಿ ಇ – ಶ್ರಮ್ ಕಾರ್ಡ್ ಪಡೆದುಕೊಳ್ಳಬಹುದು, ಇನ್ನು ನೀವು ಹೆಸರನ್ನ ನೋಂದಾಯಿಸಿಕೊಂಡಿದ್ದರೆ ಬಿಡುಗಡೆಯಾಗಿರುವ ಹೊಸ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಎನ್ನುವುದನ್ನು ಚೆಕ್ ಮಾಡಿಕೊಳ್ಳಬಹುದು.
ಇದನ್ನೂ ಓದಿ: ಏರ್ ಇಂಡಿಯಾ ಏರ್ ಟ್ರಾನ್ಸ್ ಪೋರ್ಟ್ ಸರ್ವೀಸ್ ನಲ್ಲಿ ಉದ್ಯೋಗ; 10th ಪಾಸಾದವರು ಈಗಲೇ ಅರ್ಜಿ ಸಲ್ಲಿಸಿ
ಹೆಸರು ಚೆಕ್ ಮಾಡುವುದು ಹೇಗೆ?;
* ಕಾರ್ಮಿಕ ಇಲಾಖೆ ಅಧಿಕೃತ ವೆಬ್ ಸೈಟ್ ಭೇಟಿ ನೀಡಿ.
* ನಿರ್ವಹಣ ಬಗ್ಗೆ ಯೋಜನೆ ಎನ್ನುವ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
* ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ನಮೂದಿಸಿ.
* ಆಗ ಇ – ಶ್ರಮ್ ಕಾರ್ಡ್ ಲಿಸ್ಟ್ ಕಾಣಿಸುತ್ತದೆ.
* ಇದರಲ್ಲಿ ನಿಮ್ಮ ಹೆಸರು ಇದ್ರೆ ನಿಮ್ಮ ಖಾತೆಗೂ ಕೂಡ ಪ್ರತಿ ತಿಂಗಳು ಸಾವಿರ ರೂಪಾಯಿ ಜಮಾ ಆಗುತ್ತೆ.






























