ಮಲೆನಾಡು ಭಾಗದಲ್ಲಿ ಅಡಿಕೆ ಬೆಳೆಗಾರರನ್ನು ಕಂಗೆಡಿಸಿರುವ ಹಳದಿ ಎಲೆಚುಕ್ಕಿ ರೋಗವು ಕಳೆದ ಕೆಲ ವರ್ಷಗಳಿಂದ ತೀವ್ರ ಸ್ವರೂಪ ಪಡೆದುಕೊಂಡಿದೆ. ನಿರಂತರ ಮಳೆ, ತೇವಾಂಶ ಮತ್ತು ಹವಾಮಾನ ಬದಲಾವಣೆಯಿಂದ ಈ ರೋಗ ವೇಗವಾಗಿ ಹರಡಿ, ಶೇಕಡಾ 60–70ರಷ್ಟು ಬೆಳೆ ನಷ್ಟಕ್ಕೆ ಕಾರಣವಾಗಿದೆ. ಇದರಿಂದ ಸಾವಿರಾರು ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇಂತಹ ಸಂದರ್ಭದಲ್ಲಿ ರೈತರಿಗೆ ದೊಡ್ಡ ನಿಟ್ಟುಸಿರು ಬಿಡುವಂತೆ ಹೈಟೆಕ್ ದೋಟಿ ಹಾಗೂ ಇನಾಮಿಕ್ ಟೆಕ್ನಾಲಜಿ ಸಂಸ್ಥೆಯ ಸಿಇಒ ಬಾಲಸುಬ್ರಹ್ಮಣ್ಯ H. M ಅವರ ನೇತೃತ್ವದಲ್ಲಿ ರೂಪುಗೊಂಡಿರುವ ‘ಬಯೋಶಮನ’ ಎಂಬ ನೈಸರ್ಗಿಕ ಔಷಧಿ, ಅಡಿಕೆ ಸೇರಿದಂತೆ ಹಲವು ಪ್ಲಾಂಟೇಷನ್ ಬೆಳೆಗಳಲ್ಲಿ ಕಾಣಿಸಿಕೊಳ್ಳುವ ಫಂಗಸ್ ರೋಗಗಳಿಗೆ ಪರಿಣಾಮಕಾರಿ ಪರಿಹಾರ ನೀಡುತ್ತಿದೆ.
ಆರು ವರ್ಷಗಳ ಸಂಶೋಧನೆಯ ಫಲ:
ಕಳೆದ ಆರು ವರ್ಷಗಳಿಂದ ಬಯೋಟೆಕ್ನಾಲಜಿ ವಿಜ್ಞಾನಿಗಳ ಸಹಕಾರದೊಂದಿಗೆ ನಡೆದ ಸಂಶೋಧನೆಯಿಂದ ಈ ಔಷಧಿ ಅಭಿವೃದ್ಧಿಯಾಗಿದೆ. ಯಾವುದೇ ರಾಸಾಯನಿಕ ಅಂಶಗಳಿಲ್ಲದೆ, ಸಂಪೂರ್ಣ ನೈಸರ್ಗಿಕ ಸೂತ್ರದ ಮೇಲೆ ತಯಾರಿಸಲಾದ ಬಯೋಶಮನವನ್ನು ಮೊದಲಿಗೆ ಸ್ವಂತ ತೋಟದಲ್ಲಿ ಹಾಗೂ ನಂತರ ನೂರಾರು ರೈತರ ತೋಟಗಳಲ್ಲಿ ಪರೀಕ್ಷಿಸಲಾಗಿದೆ. ಎಲ್ಲೆಡೆ ಉತ್ತಮ ಫಲಿತಾಂಶ ಕಂಡುಬಂದಿದೆ ಎಂದಿದ್ದಾರೆ.
ಭಾರೀ ಮಳೆಯಲ್ಲೂ ಪರಿಣಾಮಕಾರಿ:
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಕ್ಯಾದಗಿ ಪ್ರದೇಶದಲ್ಲಿ ಸುಮಾರು 200 ಇಂಚು ಮಳೆಯಾದರೂ, ಬಯೋಶಮನವನ್ನು ಒಮ್ಮೆ ಸಿಂಪಡಿಸಿದ ಬಳಿಕ ಕೊಳೆರೋಗವು ಮೂರು ತಿಂಗಳವರೆಗೆ ಮರುಕಳಿಸಿಲ್ಲ. ಅದೇ ರೀತಿ, ಹಳದಿ ಎಲೆಚುಕ್ಕಿ ರೋಗವೂ ಒಂದು ವರ್ಷ ಕಳೆದರೂ ಮತ್ತೆ ಕಾಣಿಸಿಕೊಂಡಿಲ್ಲ ಎಂಬುದು ಗಮನಾರ್ಹ ಸಂಗತಿ.
ಒಂದೇ ವಾರದಲ್ಲಿ ಸ್ಪಷ್ಟ ಬದಲಾವಣೆ:
ಔಷಧಿ ಸಿಂಪಡಿಸಿದ ಒಂದು ವಾರದಲ್ಲೇ ಹೊಸ ಚಿಗುರುಗಳು ಹಸಿರಾಗಿ ಮೂಡುವುದು, ರೋಗಪೀಡಿತ ಎಲೆಗಳಿಂದ ಪಕ್ಕದ ಎಲೆಗಳಿಗೆ ಸೋಂಕು ಹರಡದಿರುವುದು ಪ್ರಮುಖ ಲಕ್ಷಣಗಳಾಗಿವೆ. ರೈತರ ಅನುಭವದ ಪ್ರಕಾರ, ಇದುವರೆಗೆ ಯಾವುದೇ ತೋಟದಲ್ಲೂ ಔಷಧಿ ಕಾರ್ಯವಿಫಲವಾದ ಉದಾಹರಣೆ ಇಲ್ಲ.
ಇತರೆ ಬೆಳೆಗಳಿಗೂ ಬಳಕೆ:
ಬಯೋಶಮನವನ್ನು ಕೇವಲ ಅಡಿಕೆಗೆ ಮಾತ್ರವಲ್ಲದೆ, ಕಾಫಿ, ಕಾಳುಮೆಣಸು, ತೆಂಗು, ತರಕಾರಿ ಬೆಳೆಗಳು, ಹೂವಿನ ಗಿಡಗಳು, ಹಣ್ಣು ಬೆಳೆಗಳು, ಶುಂಠಿ ಸೇರಿದಂತೆ ವಿವಿಧ ಪ್ಲಾಂಟೇಷನ್ ಹಾಗೂ ಕೃಷಿ ಬೆಳೆಗಳಲ್ಲಿ ಕಾಣಿಸುವ ಫಂಗಸ್ ಸಮಸ್ಯೆಗೆ ಬಳಸಬಹುದಾಗಿದೆ.
ಕೀಟಬಾಧೆಗೆ ‘ಬಯೋಬೀಟಲ್ ಶೀಲ್ಡ್’:
ಮಲೆನಾಡು ಮತ್ತು ಬಯಲುಸೀಮೆಯ ರೈತರಿಗೆ ತೀವ್ರ ಕಾಟ ನೀಡುತ್ತಿರುವ ಕೀಟಬಾಧೆಗೆ ಪರಿಹಾರವಾಗಿ ‘ಬಯೋಬೀಟಲ್ ಶೀಲ್ಡ್’ ಎಂಬ ಮತ್ತೊಂದು ನೈಸರ್ಗಿಕ ಔಷಧಿಯನ್ನೂ ಅಭಿವೃದ್ಧಿಪಡಿಸಲಾಗಿದೆ. ಇದನ್ನು ಅಡಿಕೆ, ಕಾಫಿ, ಕಾಳುಮೆಣಸು, ತೆಂಗು ಸೇರಿದಂತೆ ಯಾವುದೇ ಬೆಳೆಗೆ ಸಿಂಪಡಿಸಿದರೆ 6 ರಿಂದ 12 ತಿಂಗಳವರೆಗೆ ಕೀಟಬಾಧೆಯಿಂದ ರಕ್ಷಣೆ ದೊರೆಯುತ್ತದೆ.
ಈ ಔಷಧಿಗಳ ಕುರಿತು ಹೆಚ್ಚಿನ ವಿವರ, ಬಳಕೆ ವಿಧಾನ ಹಾಗೂ ಮಾಹಿತಿಗಾಗಿ ಬಾಲಸುಬ್ರಹ್ಮಣ್ಯ H. M ಇವರನ್ನು ಸಂಪರ್ಕಿಸಬಹುದಾಗಿದೆ. 9606142520 | 7259350487





