(Northern Railway Recruitment) ರೈಲ್ವೆ ನೇಮಕಾತಿ ಮಂಡಳಿ, ಉತ್ತರ ರೈಲ್ವೆ, ಕ್ರೀಡಾ ಕೋಟಾದಡಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ನೇಮಕಾತಿ ಪ್ರಾಧಿಕಾರ:
ಉತ್ತರ ರೈಲ್ವೆ ಆರ್‌ಆರ್‌ಸಿ
ಹುದ್ದೆ ಹೆಸರು:
ಕ್ರೀಡಾ ಕೋಟಾದಡಿಯ ಗ್ರೂಪ್ ಡಿ ಹುದ್ದೆ
ಹುದ್ದೆಗಳ ಸಂಖ್ಯೆ:
38
ವಿದ್ಯಾರ್ಹತೆ:
SSLC / ಸೆಕೆಂಡರಿ ಎಜುಕೇಷನ್ ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆ
ವಯೋಮಿತಿ:
ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 25 ವರ್ಷ ವಯಸ್ಸು ಮೀರಿರಬಾರದು. ಕ್ರೀಡಾ ಕೋಟಾದಡಿಯ ಹುದ್ದೆಗಳಿಗೆ ಯಾವುದೇ ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗುವುದಿಲ್ಲ.
ಅರ್ಜಿ ಶುಲ್ಕ ರೂ.500
ಎಸ್‌ಸಿ / ಎಸ್‌ಟಿ/ ಮಹಿಳಾ / ಇತರೆ ಹಿಂದುಳಿದ / ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ ರೂ.250
ಅರ್ಜಿ ಸಲ್ಲಿಸಲು ಭೇಟಿ ನೀಡಬೇಕಾದ ವೆಬ್ ಸೈಟ್ ವಿಳಾಸ:
https://rrcnr.net.in/
ಆಯ್ಕೆ ವಿಧಾನ:
ಅಭ್ಯರ್ಥಿಗಳು ರಾಜ್ಯ, ರಾಷ್ಟ್ರ, ವಿಶ್ವವಿದ್ಯಾಲಯಗಳು, ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಸಾಧನೆ ಮಾಡಿದ್ದಲ್ಲಿ ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ: ಏರ್ ಇಂಡಿಯಾ ಏರ್ ಟ್ರಾನ್ಸ್ ಪೋರ್ಟ್ ಸರ್ವೀಸ್ ನಲ್ಲಿ ಉದ್ಯೋಗ; 10th ಪಾಸಾದವರು ಈಗಲೇ ಅರ್ಜಿ ಸಲ್ಲಿಸಿ
ಯಾವೆಲ್ಲ ಕ್ರೀಡೆಗಳಲ್ಲಿ ಸಾಧನೆ ಮಾಡಿದವರು ಅರ್ಜಿ ಸಲ್ಲಿಸಬಹುದು?
* ಕುಸ್ತಿ (ಪುರುಷ) ಫ್ರೀ ಸ್ಟೈಲ್
* ಶೂಟಿಂಗ್
* ಕಬ್ಬಡಿ
* ಹಾಕಿ
* ತೂಕ ಎತ್ತುವಿಕೆ
* ಪವರ್ ಲಿಫ್ಟಿಂಗ್ (ಪುರುಷ)
* ಪವರ್ ಲಿಫ್ಟಿಂಗ್ (ಮಹಿಳೆ)
* ಜಿಮ್ನಾಸ್ಟಿಕ್ (ಪುರುಷ)
* ಕ್ರಿಕೆಟ್ (ಪುರುಷ)
* ಕ್ರಿಕೆಟ್ (ಮಹಿಳೆ)
* ಬಾಲ್ ಬ್ಯಾಡ್ಮಿಂಟನ್ (ಪುರುಷ)
ಅರ್ಜಿ ಸ್ವೀಕಾರ ಆರಂಭ ದಿನಾಂಕ :
16-04-2024

ಅರ್ಜಿ ಸಲ್ಲಿಸಲು ಕೊನೆ ದಿನಾಂಕ:
16-05-2024







Leave a Reply