(Voter Slip) ಭಾರತವು ಲೋಕಸಭೆ ಚುನಾವಣೆಯನ್ನು ಎದುರಿಸಲು ಸಿದ್ಧವಾಗಿದ್ದು, 21 ರಾಜ್ಯಗಳ 102 ಸ್ಥಾನಗಳಿಗೆ ನಿನ್ನೆ ಮೊದಲ ಹಂತದ ಚುನಾವಣೆ ನಡೆದಿದೆ. ಈ ಬಾರಿ ಲೋಕಸಭಾ ಚುನಾವಣೆಯು ಏಳು ಹಂತಗಳಲ್ಲಿ ನಡೆಯಲಿದ್ದು, ಏಪ್ರಿಲ್ 19, ಏಪ್ರಿಲ್ 26, ಮೇ 7, ಮೇ 13, ಮೇ 20, ಮೇ 25, ಮತ್ತು ಜೂನ್ 1 ರಂದು ನಡೆಯಲಿದೆ.
ಲೋಕಸಭಾ ಚುನಾವಣೆ ಹಿನ್ನೆಲೆ ಮತದಾರರು ಸಹ ಚುನಾವಣೆಯನ್ನು ಎದುರಿಸಲು ಸಿದ್ಧರಾಗಿದ್ದಾರೆ. ಹಾಗಿದ್ದರೆ ನಿಮಗೆ ಮತದಾನ ಮಾಡಲು ಅವಕಾಶ ಇದ್ಯಾ? ನಿಮ್ಮ ವಯಸ್ಸು 19 ದಾಟಿದ್ದರೂ ಸಹ ಕೆಲವೊಮ್ಮೆ ವೋಟರ್ ಐಡಿ ಇದ್ದರೂ ಕೂಡ ತಾಂತ್ರಿಕ ಸಮಸ್ಯೆಯ ಕಾರಣಕ್ಕೆ ಮತದಾನ ಮಾಡಲು ಆಗುವುದಿಲ್ಲ. ಹೀಗಾಗಿ ಚುನಾವಣೆಗೂ ಮೊದಲೇ ನಮ್ಮ ವೋಟರ್ ಐಡಿಯ ಬಗ್ಗೆ ಖಚಿತತೆಯನ್ನು ಪಡೆದುಕೊಳ್ಳುವುದು ತುಂಬಾ ಮುಖ್ಯ. ಹಾಗೆಯೇ ವೋಟರ್ ಕಾರ್ಡ್ ಇರುವವರು ಬೂತ್ ಸ್ಲಿಪ್ ಕೂಡ ಮುಖ್ಯವಾಗಿದೆ. ಏನಿದು ಬೂತ್ ಸ್ಲಿಪ್, ಇದನ್ನು ಡೌನ್ ಲೋಡ್ ಮಾಡುವುದು ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಈ ಜಿಲ್ಲಾ ಕೋರ್ಟ್ ನಲ್ಲಿ ಭರ್ಜರಿ ಜಾಬ್ ಆಫರ್; puc ಪಾಸಾದವರಿಗೆ ಬಂಪರ್ ಉದ್ಯೋಗಾವಕಾಶ; ಈಗಲೇ ಅರ್ಜಿ ಸಲ್ಲಿಸಿ
ಏನಿದು ಬೂತ್ ಸ್ಲಿಪ್:
ವೋಟರ್ ಸ್ಲಿಪ್ ಅಥವಾ ‘ವೋಟರ್ ಇನ್ಫರ್ಮೇಷನ್ ಸ್ಲಿಪ್ ಎಂಬುದು ಭಾರತದ ಚುನಾವಣಾ ಆಯೋಗ ನೀಡಿದ ದಾಖಲೆಯಾಗಿದೆ. ಇದು ಮತದಾರರ ಹೆಸರು, ವಯಸ್ಸು, ಲಿಂಗ, ಕ್ಷೇತ್ರ, ಮತದಾನ ಕೇಂದ್ರದ ಸ್ಥಳ ಮತ್ತು ಮತದಾನದ ದಿನಾಂಕ ಮತ್ತು ಸಮಯದಂತಹ ವಿವರಗಳನ್ನು ಒಳಗೊಂಡಿದೆ. ಮತದಾನದ ದಿನದಂದು ಮತದಾರರು ಒಯ್ಯುವಾಗ, ಇದು ಮತದಾರರಿಗೆ ಮಾರ್ಗದರ್ಶಿ ಕೈಪಿಡಿಯಾಗಿ ಮತ್ತು ನಿಜವಾದ ಮತದಾರರ ಗುರುತಿಸುವಿಕೆಯಾಗಿ ಕಾರ್ಯನಿರ್ವಹಿಸುತ್ತದೆ.
ಇದನ್ನೂ ಓದಿ: ಯಾವುದೇ ಬ್ಯಾಂಕ್ ನಲ್ಲಿ ಸಾಲ ಮಾಡಿರುವ ರೈತರಿಗೆ ಭರ್ಜರಿ ಸುದ್ದಿ; ಏನದು? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್
ಹಾಗದರೆ ಈ ವೋಟರ್ ಸ್ಲಿಪ್ ಡೌನ್ ಲೋಡ್ ಮಾಡುವುದು ಹೇಗೆ?:
ನಿಮ್ಮ ವೋಟರ್ ಸ್ಲಿಪ್ ಅನ್ನು ಆನ್ ಲೈನ್ ನಲ್ಲಿ ಡೌನ್‌ಲೋಡ್ ಮಾಡಬಹುದಾಗಿದೆ. ಸುಲಭ ವಿಧಾನವಾಗಿ ಈ ಕೆಳಗಿನಂತಿದೆ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.
* ಬೂತ್ ಸ್ಲಿಪ್ ಗಳಿಗಾಗಿ ಮೊದಲೊಗೆ EPIC ಅನ್ನು ಟೈಪ್ ಮಾಡಿ ನಂತರ ನಿಮ್ಮ ಮತದಾರರ ಗುರುತಿನ ಚೀಟಿ ಸಂಖ್ಯೆ ಟೈಪ್ ಮಾಡಿ 1950 ಗೆ SMS ಕಳುಹಿಸಿ.
ಇದನ್ನೂ ಓದಿ: 2nd puc ಪಾಸಾದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ; 20,000 ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ!
* ನಿಮ್ಮ ಪೋಲಿಂಗ್ ಸ್ಟೇಷನ್ ಸಂಖ್ಯೆ ಮತ್ತು ಹೆಸರನ್ನು ನಿಮ್ಮ ಫೋನ್ ಪರದೆಯಲ್ಲಿ 15 ಸೆಕೆಂಡುಗಳಲ್ಲಿ ಬೂತ್ ಸ್ಲಿಪ್ ಪ್ರದರ್ಶಿಸಲಾಗುತ್ತದೆ.








Leave a Reply