Vegetable Agriculture: ಮಾರ್ಚ್ ಬಂದರೆ ಸಾಕು ಬೇಸಿಗೆಯ ಆರಂಭದ ಕಾಲ ಶುರುವಾಗುತ್ತದೆ. ಬೇಸಿಗೆಯಲ್ಲಿ ರೈತರಿಗೆ ಕೃಷಿ ಮಾಡಲು ಅತ್ಯಂತ ಸೂಕ್ತ ಸಮಯ ಎನ್ನಬಹುದು. ಅದರಲ್ಲೂ ಈ ತರಕಾರಿ ಕೃಷಿಗೆ ಮಾತ್ರ ಈ ಬೇಸಿಗೆ ಹೇಳಿ ಮಾಡಿಸಿದ ಹಾಗೇ ಇರುತ್ತೆ. ಹವಾಮಾನದ ಅನುಗುಣವಾಗಿ ಬೆಳೆಗಳನ್ನು ಬೆಳೆಯುವುದರಿಂದ ರೈತರು ಆರ್ಥಿಕವಾಗಿ ಸದೃಢರಾಗಬಹುದು.
ಇದನ್ನೂ ಓದಿ: ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ; ಏನೆಲ್ಲಾ ತಿದ್ದುಪಡಿ ಮಾಡಿಬಹುದು? ಸಂಪೂರ್ಣ ಮಾಹಿತಿ ಇಲ್ಲಿದೆ
ಬೆಂಡೆಕಾಯಿ:
ಬೆಂಡೆಕಾಯಿ ಉಷ್ಣವಲಯದ ಬೆಳೆಯಾಗಿದ್ದು, ಹೆಚ್ಚು ಶಾಖವನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಇದು ಬಿತ್ತನೆಯಾದ 45 ರಿಂದ 50 ದಿನಗಳಲ್ಲಿ ಫಸಲು ಶುರುವಾಗುತ್ತೆ, ಬೇಸಿಗೆಯಲ್ಲಿ ಶುಭಸಮಾರಂಭಗಳ ಅಧಿಕ ಇರುವುದರಿಂದ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇರುತ್ತದೆ.
ಇದನ್ನೂ ಓದಿ: ಈ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಸಿಗಲಿದೆ ₹1,00,000 ಸ್ಕಾಲರ್‌ಶಿಪ್; ಡಿಟೇಲ್ಸ್‌ಗಾಗಿ ಜಸ್ಟ್ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸೋರೆಕಾಯಿ:
ಇದರ ವಿಶೇಷತೆ ಎಂದರೆ ಕಡಿಮೆ ಹೂಡಿಕೆಯಲ್ಲಿ ಬೆಳೆಯಬಹುದಾದ ಬಳ್ಳಿ ಬೆಳೆ. ಈ ಬೆಳೆಗೆ ಅಧಿಕ ನೀರಿನ ಅವಶ್ಯಕತೆ ಇದ್ದರು, ಮಣ್ಣಿನ ತೇವಾಂಶವಿದ್ದರೆ ಸಾಕು ಈ ಬೆಳೆ ಬೆಳೆಯುತ್ತದೆ. ಇಮ್ಮೆ ಬೆಳೆ ಬೆಳೆದರೆ 3 ರಿಂದ 4 ತಿಂಗಳ ಕಾಲ ನಿರಂತರವಾಗಿ ಮಾಡಬಹುದು.
ಇದನ್ನೂ ಓದಿ: ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ; ಏನೆಲ್ಲಾ ತಿದ್ದುಪಡಿ ಮಾಡಿಬಹುದು? ಸಂಪೂರ್ಣ ಮಾಹಿತಿ ಇಲ್ಲಿದೆ
ಸೌತೆಕಾಯಿ:
ಈ ಬೆಳೆ ತಂಪಾದ ಬೆಳೆಯಾಗಿದ್ದು, ಬೇಸಿಗೆ ಬಿಸಿಲೆಗೆ ಇದು ವೇಗವಾಗಿ ಬೆಳೆಯುವ ಬೆಳೆಯಾಗಿದೆ. ಜನರು ಅತಿ ಹೆಚ್ಚು ಇಷ್ಟಪಡುವ ತರಕಾರಿ ಇದಾಗಿದೆ. ಕೇವಲ 40-50 ದಿನಗಳಲ್ಲಿ ಬೆಳೆ ಬರುತ್ತದೆ. ಅಂಗಡಿಯಲ್ಲಿ ಬೇಸಿಗೆ ಪೂರ್ತಿ ಭಾರಿ ಬೇಡಿಕೆ ಇರುತ್ತದೆ.
ಇದನ್ನೂ ಓದಿ: ಗೃಹಲಕ್ಷ್ಮಿಯರಿಗೆ ಗುಡ್ ನ್ಯೂಸ್; ಈ ದಿನ ಆಗಲಿದೆ 27ನೇ ಕಂತಿನ ಹಣ ಜಮಾ
ಹಿರೇಕಾಯಿ:
ಕಡಿಮೆ ರೋಗಬಾಧೆ ಇರುವ ಬೆಳೆಯಾಗಿದ್ದು, ಸರಿಯಾದ ಪೆಂಡಾಲ್ ವ್ಯವಸ್ಥೆ ಇದ್ದರೆ ಗುಣಮಟ್ಟದ ಬೆಳೆ ಬೆಳೆಯಬಹುದು. ಇತರ ತರಕಾರಿಗಳ ಬೇಡಿಕೆ ಕಡಿಮೆಯಾದಾಗ ಹೀರೆಕಾಯಿಗೆ ಬೇಡಿಕೆ ಹೆಚ್ಚಾಗುತ್ತದೆ.
ಇದನ್ನೂ ಓದಿ: ಕೆನರಾ ಬ್ಯಾಂಕ್‌ನಿಂದ 30 ದಿನದ ಉಚಿತ ಹೋಲಿಗೆ ಯಂತ್ರ ತರಬೇತಿಗೆ ಅರ್ಜಿ ಆಹ್ವಾನ
ಹಾಗಲಕಾಯಿ:
ಆರೋಗ್ಯದ ದೃಷ್ಟಿಯಿಂದ ಮಧುಮೇಹಿಗಳಿಗೆ ಮತ್ತು ಡಯಟ್ ಮಾಡುವವರಿಗೆ ಇದು ವರದಾನ. ಹಾಗಾಗಿ ನಗರ ಪ್ರದೇಶಗಳಲ್ಲಿ ಇದರ ಬೇಡಿಕೆ ನಿರಂತರವಾಗಿ ಏರಿಕೆಯಲ್ಲಿದೆ. ಮಾರುಕಟ್ಟೆಯಲ್ಲೂ ಬೇರೆ ತರಕಾರಿಗಳಿಗಿಂತ ಹೆಚ್ಚಿನ ಮಹತ್ವ ಹೊಂದಿದೆ.
ಇದನ್ನೂ ಓದಿ: ಯುವಕರಿಗೆ ʼಗ್ರಾಮ ಒನ್ ಕೇಂದ್ರʼ ಆರಂಭಿಸಲು ಸುವರ್ಣಾವಕಾಶ
ಕುಂಬಳಕಾಯಿ:
ಈ ಬೆಳೆ ಬೆಳೆಯುವುದು ಬಹಳ ಸುಲಭ ಮತ್ತು ಹೆಚ್ಚಿನ ನಿರ್ವಹಣೆ ಬೇಕಿಲ್ಲ. ಇದು ಬಹಳ ದಿನಗಳ ಕಾಲ ಕೆಡದಂತೆ ಇರುವುದರಿಂದ ಸಂರಕ್ಷಣೆ ಸುಲಭವಾಗಿರುತ್ತದೆ. ಬೆಲೆ ಕಡಿಮೆ ಇದ್ದಾಗ ಇದನ್ನು ಸಂಗ್ರಹಿಸಿಟ್ಟು, ಬೆಲೆ ಏರಿಕೆಯಾದಾಗ ಮಾರಾಟ ಮಾಡಿ ಲಾಭ ಪಡೆಯಬಹುದು.
ಇದನ್ನೂ ಓದಿ: ರೈಲ್ವೆ ಇಲಾಖೆಯಿಂದ ಸಹಾಯಕ ಲೋಕೋ ಪೈಲೆಟ್ ಹುದ್ದೆಗೆ ಅರ್ಜಿ ಆಹ್ವಾನ
ಬೇಸಿಗೆಯಲ್ಲಿ ನೀರಿನ ಉಳಿತಾಯಕ್ಕಾಗಿ ಹನಿ ನೀರಾವರಿ ಪದ್ಧತಿ ಬಳಸುವುದು ಉತ್ತಮವಾಗಿದ್ದು, ಮಣ್ಣಿನ ತೇವಾಂಶ ಉಳಿಸಿಕೊಳ್ಳಲು ಕೃಷಿ ತ್ಯಾಜ್ಯದಿಂದ ಹೊದಿಕೆ ಮಾಡುವುದು ಸೂಕ್ತ ಮತ್ತು ರಾಸಾಯನಿಕ ಗೊಬ್ಬರಕ್ಕಿಂತ ಕೊಟ್ಟಿಗೆ ಗೊಬ್ಬರ ಬಳಸುವುದರಿಂದ ಗಿಡಗಳು ಬಿಸಿಲನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: 8ನೇ ತರಗತಿಯ ಪಠ್ಯಪುಸ್ತಕದಲ್ಲಿ ಮಹತ್ವದ ಬದಲಾವಣೆ





