SBI: ಕೋಟ್ಯಂತರ ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್

(SBI) ತನ್ನ ಕೋಟ್ಯಾಂತರ ಬ್ಯಾಂಕ್ ಗ್ರಾಹಕರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶುಭ ಸುದ್ದಿಯೊಂದನ್ನು ನೀಡಿದೆ. SBI ಮತ್ತೊಮ್ಮೆ FD ಬಡ್ಡಿದರದಲ್ಲಿ ಹೆಚ್ಚಳವನ್ನು ಘೋಷಿಸಿದ್ದು, 75 ಬೇಸಿಸ್ ಪಾಯಿಂಟ್‌ ಗಳವರೆಗೆ ಬಡ್ಡಿದರವನ್ನು ಹೆಚ್ಚಿಸಲಾಗಿದೆ. ಹೊಸ ಬಡ್ಡಿದರಗಳು ಮೇ 15 ರಿಂದ ಜಾರಿಗೆ ಬಂದಿದ್ದು, ಇದರಿಂದ ಯಾರಿಗೆ ಹೆಚ್ಚು ಪ್ರಯೋಜನವಾಗಲಿದೆ ಎಂದು ತಿಳಿಯೋಣ.


ಇದನ್ನೂ ಓದಿ: ಬರ ಪರಿಹಾರ; ನಿಮ್ಮ ಖಾತೆಗೆ ಹಣ ಜಮಾ ಆಗಿಲ್ವಾ?; ಹೀಗೆ ಚೆಕ್ ಮಾಡಿ


ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಚಿಲ್ಲರೆ ಠೇವಣಿಗಳ (2 ಕೋಟಿಯವರೆಗೆ) ಮೇಲಿನ ಸ್ಥಿರ ಠೇವಣಿ ಬಡ್ಡಿದರಗಳನ್ನ ನಿರ್ದಿಷ್ಟ ಅವಧಿಗೆ ಹೆಚ್ಚಿಸಿದೆ. ಬ್ಯಾಂಕಿನ ವೆಬ್ ಸೈಟ್ ಪ್ರಕಾರ, ಹೊಸ FD ದರಗಳು ಮೇ 15 ರಿಂದ ಜಾರಿಗೆ ಬಂದಿದೆ.


ಇದನ್ನೂ ಓದಿ: ವಾಹನ ಸವಾರರ ಗಮನಕ್ಕೆ; hsrp number plate ಬಗ್ಗೆ ಬಂದೇ ಬಿಡ್ತು ಮತ್ತೊಂದು ಮಹತ್ವದ ಮಾಹಿತಿ; ಏನದು? ಇಲ್ಲಿದೆ ನೋಡಿ


SBI ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಬಡ್ಡಿದರಗಳನ್ನ 46 ರಿಂದ 179 ದಿನಗಳು, 180 ರಿಂದ 210 ದಿನಗಳು ಮತ್ತು 211 ರಿಂದ 211 ದಿನಗಳವರೆಗೆ 25-75 ಬೇಸಿಸ್ ಪಾಯಿಂಟ್ಗಳನ್ನು (bps) ಹೆಚ್ಚಿಸಿದೆ. ಸಾರ್ವಜನಿಕ ವಲಯದ ಬ್ಯಾಂಕ್ ಕೊನೆಯ ಬಾರಿಗೆ ಡಿಸೆಂಬರ್ 27, 2023 ರಂದು FD ಗಳ ಮೇಲಿನ ಬಡ್ಡಿದರಗಳನ್ನ ಹೆಚ್ಚಿಸಿತು.


ಇದನ್ನೂ ಓದಿ: ರೇಷನ್‌ ಕಾರ್ಡ್‌ಗೆ ಕಾಯುತ್ತಿದ್ದವರಿಗೆ ಸಿಹಿ ಸುದ್ದಿ;  ಅರ್ಜಿ ಸಲ್ಲಿಕೆ ಕುರಿತು ಮಹತ್ವದ ಮಾಹಿತಿ ಇಲ್ಲಿದೆ;  ಮಿಸ್ ಮಾಡ್ದೆ ಈ ಸುದ್ದಿ ಓದಿ


ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಠೇವಣಿ ಅವಧಿಯ ಆಧಾರದ ಮೇಲೆ ಬಡ್ಡಿ ದರ:
* 7 ದಿನಗಳಿಂದ 45 ದಿನಗಳವರೆಗಿನ ಅಲ್ಪಾವಧಿಯ ಠೇವಣಿಗಳಿಗೆ ಬಡ್ಡಿ ದರವು 3.50% ಆಗಿದೆ.
* 46 ದಿನ & 179 ದಿನಗಳ ನಡುವಿನ ಠೇವಣಿಗಳಿಗೆ ಬಡ್ಡಿ ದರವು 5.50% ಏರಿಕೆಯಾಗಿದೆ.
* 180 ದಿನಗಳಿಂದ 210 ದಿನಗಳವರೆಗಿನ ಠೇವಣಿಗಳಿಗೆ ಬಡ್ಡಿ ದರ 6.00% ಆಗಿದೆ.
* 211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳಿಗೆ 6.25% ಬಡ್ಡಿ ನೀಡಲಾಗುತ್ತಿದೆ.
* 1 ವರ್ಷದಿಂದ 2 ವರ್ಷಗಳಿಗಿಂತ ಕಡಿಮೆ ಅವಧಿಗೆ, ಬಡ್ಡಿ ದರ 6.80% ರಷ್ಟಿದೆ.
* 2 ವರ್ಷಕ್ಕಿಂತ ಹೆಚ್ಚು & 3 ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳಿಗೆ ಬಡ್ಡಿ ದರ 7.00% ರಷ್ಟಿದೆ.
* 3 ವರ್ಷದಿಂದ 5 ವರ್ಷಕ್ಕಿಂತ ಕಡಿಮೆ ಅವಧಿಯವರೆಗೆ, ಬಡ್ಡಿ ದರ 6.75% ಇದೆ.
* ದೀರ್ಘಾವಧಿಯ ಠೇವಣಿಗಳಿಗೆ 5 ವರ್ಷಗಳಿಂದ 10 ವರ್ಷಗಳವರೆಗೆ, ಬಡ್ಡಿ ದರ 6.50% ಆಗಿದೆ.


ಇದನ್ನೂ ಓದಿ: ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?; ಅಡಿಕೆ ಮಾರುಕಟ್ಟೆ ಹೇಗಿದೆ| ಬೆಟ್ಟೆ, ಗೊರಬಲು, ಸರಕು, ಈಡಿ


ಇತ್ತೀಚಿನ ದರ ಹೆಚ್ಚಳದ ನಂತರ, SBI ಹಿರಿಯ ನಾಗರಿಕರಿಗೆ ಬಡ್ಡಿದರ ಈ ಕೆಳಕಂಡಂತಿದೆ:
* 7 ದಿನಗಳಿಂದ 45 ದಿನಗಳು 4%
* 46 ದಿನಗಳಿಂದ 179 ದಿನಗಳು 6%
* 180 ದಿನಗಳಿಂದ 210 ದಿನಗಳು 6.50%
* 211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ ಅವಧಿಗೆ 6.75%
* 1 ವರ್ಷದಿಂದ 2 ವರ್ಷಕ್ಕಿಂತ ಕಡಿಮೆ 7.30%
* 2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ 7.50%
* 3 ವರ್ಷದಿಂದ 5 ವರ್ಷಕ್ಕಿಂತ ಕಡಿಮೆ 7.25%
* 5 ವರ್ಷಗಳು ಮತ್ತು 10 ವರ್ಷಗಳವರೆಗೆ 7.50%

SBI: ಕೋಟ್ಯಂತರ ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್
SBI: ಕೋಟ್ಯಂತರ ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್

ಇತ್ತೀಚಿನ ಜನಪ್ರಿಯ ಸುದ್ದಿಗಳು

  1. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ; 17 ನೇ ಕಂತಿನ ಹಣ ಬಿಡುಗಡೆ; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ! ಹೀಗೆ ಚೆಕ್ ಮಾಡಿ
  2. ಗೃಹಲಕ್ಷ್ಮಿ ಯೋಜನೆಯಂತೆಯೇ ಮತ್ತೊಂದು ಯೋಜನೆ ಜಾರಿ; ಈ ಯೋಜನೆಯಲ್ಲೂ ಪ್ರತಿ ತಿಂಗಳು ಸಿಗಲಿದೆ ಹಣ; ಯಾವ ಯೋಜನೆ?, ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಡಿಟೈಲ್ಸ್
  3. ರಾತ್ರೋರಾತ್ರಿ ಬಂತು ಹೊಸ ರೂಲ್ಸ್; ನಿಮ್ಮ ಕೃಷಿ ಜಮೀನಿಗೆ ಹೋಗಲು ದಾರಿ ಇಲ್ವಾ?; ಇಲ್ಲದಿದ್ದರೆ ಹೀಗೆ ಮಾಡಿ, ಸರ್ಕಾರವೇ ನೀಡುತ್ತೆ ಪರಿಹಾರ!
  4. ಈ ಕಾರ್ಡ್ ಇದ್ದವರ ಖಾತೆಗೆ ಜಮಾ ಆಗಿದೆ 1,000 ರೂ!; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ, ಹೀಗೆ ಚೆಕ್ ಮಾಡಿ; ಅರ್ಜಿ ಸಲ್ಲಿಸದೇ ಇರುವವರು ಈ ರೀತಿ ಅರ್ಜಿ ಸಲ್ಲಿಸಿ ಲಾಭ ಪಡೆಯಿರಿ
  5. ಮನೆ ನಿರ್ಮಾಣ ಮಾಡುವವರಿಗೆ ಸರ್ಕಾರದಿಂದ ಹೊಸ ರೂಲ್ಸ್ ಜಾರಿ;ಏನದು? ಸರ್ಕಾರದ ನಿಯಮ ಏನಿದೆ? ಇಲ್ಲಿದೆ ಡಿಟೈಲ್ಸ್
  6. ರೈಲ್ವೆ ಇಲಾಖೆಯಲ್ಲಿ ಭರ್ಜರಿ ಜಾಬ್ ಆಫರ್; sslc, puc ಪಾಸ್ ಆದವರು ಈಗಲೇ ಅರ್ಜಿ ಸಲ್ಲಿಸಿ
  7. ಚಿನ್ನ ಅಡವಿಟ್ಟು ಸಾಲ ಪಡೆದವರಿಗೆ ಬಿಸಿ ಬಿಸಿ ಸುದ್ದಿ!
  8. ಪೋಸ್ಟ್ ಆಫೀಸ್ ನಲ್ಲಿ ಭರ್ಜರಿ ಜಾಬ್ ಆಫರ್;  10th ಪಾಸಾದವರು ಈಗಲೇ ಅರ್ಜಿ ಸಲ್ಲಿಸಿ; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಡಿಟೈಲ್ಸ್
  9. ರೈತರಿಗೆ ಕಂದಾಯ ಇಲಾಖೆಯಿಂದ ಗುಡ್ ನ್ಯೂಸ್; ನನ್ನ ಆಧಾರ್ ನೊಂದಿಗೆ ನನ್ನ ಆಸ್ತಿ ಸುಭದ್ರ ಯೋಜನೆ ಆರಂಭ; ಈ ಯೋಜನೆಯಿಂದ ಏನು ಲಾಭ? ಇಲ್ಲಿದೆ ಡಿಟೈಲ್ಸ್