hsrp number plate ಬಗ್ಗೆ ಬಂದೇ ಬಿಡ್ತು ಮತ್ತೊಂದು ಅಪ್ಡೇಟ್

(hsrp number plate) HSRP ನಂಬರ್ ಪ್ಲೇಟ್ (HSRP NUMBER PLATE) ನೋಂದಣಿಗೆ ಇದ್ದ ಗಡುವನ್ನು ರಾಜ್ಯ ಸರ್ಕಾರ ಮೇ 31 ರವರೆಗೆ ವಿಸ್ತರಣೆ ಮಾಡಿತ್ತು. ಆದರೆ, ಆ ಸಮಯ ಈಗ ಸಮೀಪಿಸುತ್ತಿದೆ. ಕಡ್ಡಾಯವಾಗಿ ನೋಂದಣಿ ಮಾಡಬೇಕು ಎಂದು ಹೊರಡಿಸಿದ್ದ ಆದೇಶವನ್ನು ಇದುವರೆಗೆ ಎರಡು ಬಾರಿ ಮುಂದಕ್ಕೆ ಹಾಕಿದಂತಾಗಿದೆ. ಇದಕ್ಕೆ ಕಾರಣ, ಇನ್ನೂ ಅಲ್ಪಮಟ್ಟದಲ್ಲಿ ನೋಂದಣಿ ಆಗಿರುವುದಾಗಿದೆ. ಹೀಗಾಗಿ ಈ ಬಾರಿಯೂ ವಿಸ್ತರಣೆ ಮಾಡಲಿದೆಯೇ? ಅಥವಾ ದಂಡ ಪ್ರಯೋಗಕ್ಕೆ ಮುಂದಾಗಲಿದೆಯೇ ಎಂಬ ಪ್ರಶ್ನೆ ಮೂಡಿದೆ.


ಇದನ್ನೂ ಓದಿ: ರೈತರೇ ಗಮನಿಸಿ; ಈ ಕೆಲಸ ಮಾಡದಿದ್ದರೆ ನಿಮಗೆ ಸಿಗಲ್ಲ ಬೆಳೆಪರಿಹಾರ ಹಣ; ಹಣ ಜಮಾ ಆಗಿದ್ಯಾ ಎಂದು ಹೀಗೆ ಚೆಕ್ ಮಾಡಿ


ರಾಜ್ಯದಲ್ಲಿ 2019ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು, ಲಘು ಮೋಟಾರು ವಾಹನ, ಪ್ರಯಾಣಿಕ ಕಾರು, ಮಧ್ಯಮ ಮತ್ತು ಭಾರೀ ವಾಣಿಜ್ಯ ವಾಹನ, ಟ್ರೈಲರ್, ಟ್ರ್ಯಾಕ್ಟರ್ ಇತ್ಯಾದಿ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು ನ. 17ರೊಳಗೆ ಅಳವಡಿಸುವುದು ಕಡ್ಡಾಯ ಮಾಡಿ ರಾಜ್ಯ ಸರ್ಕಾರ ಆದೇಶಿಸಿತ್ತು. ಬಳಿಕ ವಿಸ್ತರಣೆ ಮಾಡಲಾಗುತ್ತಾ ಬರುತ್ತಿದೆ.


ಇದನ್ನೂ ಓದಿ: ಪಹಣಿ ಪತ್ರಕ್ಕೆ ಆಧಾರ್ ಲಿಂಕ್ ಕಡ್ಡಾಯ; ಇಲ್ಲ ಅಂದ್ರೆ ಸಿಗಲ್ಲ ಸರ್ಕಾರದ ಯೋಜನೆ; ಲಿಂಕ್ ಮಾಡುವುದು ಹೇಗೆ? ಇಲ್ಲಿದೆ ಡಿಟೈಲ್ಸ್


HSRP ಅಳವಡಿಸಲು ಹೆಚ್ಚುವರಿ ಹಣ ವಸೂಲಿ ವಿಚಾರ ಸರ್ಕಾರದ ಗಮನಕ್ಕೆ ಬರುತ್ತಿದೆ. ಈ ಬಗ್ಗೆ ದೂರುಗಳು ಸಹ ಕೇಳಿ ಬಂದಿವೆ. ಅಲ್ಲದೆ, ಸರಿಯಾಗಿ ಅಳವಡಿಸದೇ ಇದ್ದರೆ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುವುದು. ನಾಗರಿಕರು ಹೆಚ್ಚುವರಿ ಹಣ ವಸೂಲಿ ಮಾಡುವಂತಹ ಡೀಲರ್‌ ಗಳ ಮೇಲೆ ದೂರು ನೀಡಬೇಕು. ಸಾರಿಗೆ ಇಲಾಖೆಯ ಆಯುಕ್ತರಿಗೆ ದೂರು ನೀಡಿದರೆ ಕ್ರಮವನ್ನು ತೆಗೆದುಕೊಳ್ಳಲಾಗುವುದು. ಪದೇ ಪದೆ ಗ್ರಾಹಕರಿಗೆ ಕಿರಿಕಿರಿ ಮಾಡಿದರೆ ಅಂತಹ ಡೀಲರ್‌ ಗಳನ್ನು ಬ್ಲಾಕ್ ಲಿಸ್ಟ್‌ ಗೆ ಸೇರಿಸಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.


ಇದನ್ನೂ ಓದಿ: ಬೇಸಿಗೆ ಹಂಗಾಮಿನ ಬೆಳೆ ಸಮೀಕ್ಷೆ; ಈ ಜಿಲ್ಲೆಯ ರೈತರಿಗೆ ಆಕ್ಷೇಪಣೆ ಸಲ್ಲಿಸಲು ದಿನಾಂಕ ನಿಗದಿ; ಆಕ್ಷೇಪಣೆ ಸಲ್ಲಿಸುವುದು ಹೇಗೆ? ಇಲ್ಲಿದೆ ಡಿಟೈಲ್ಸ್


HSRP ಯಾಕೆ ಮತ್ತು ವಿಶೇಷತೆ ಏನು?:
* HSRP ನೋಂದಣಿ ಫಲಕಗಳು ಅತ್ಯಂತ ಸುರಕ್ಷಿತವಾಗಿದ್ದು ಇವುಗಳನ್ನು ಬದಲಿಸುವುದು, ವಿರೂಪಗೊಳಿಸುವುದು ಸಾಧ್ಯವಿಲ್ಲ.
* ನಂಬರ್‌ ಪ್ಲೇಟ್‌ ನ ಒಂದು ಬದಿಯಲ್ಲಿ ನೀಲಿ ಬಣ್ಣದ ಚಕ್ರವನ್ನು ಹೋಲುವ ಹಾಲೋಗ್ರಾಮ್‌ ಇರುತ್ತದೆ. * ಇದರ ಕೆಳಗಡೆ 10 ನಂಬರಿನ ವಿಶಿಷ್ಟ ಗುರುತಿನ ಸಂಖ್ಯೆ ಇರುತ್ತದೆ. ಅಂಕಿಗಳ ಮೇಲೆ ಆಂಗ್ಲಭಾಷೆಯಲ್ಲಿ ಇಂಡಿಯಾ ಎಂಬ ಪದ ಹಲವೆಡೆ ಇರುತ್ತದೆ.
* ಸುರಕ್ಷಿತ ನಂಬರ್‌ ಪ್ಲೇಟ್‌ ನಲ್ಲಿ ನಂಬರ್‌ ಪ್ಲೇಟ್‌ ನಕಲು ಮಾಡುವುದು ಸಾಧ್ಯವಿಲ್ಲ.
* ವಾಹನಗಳ ಕಳವು, ಅವುಗಳನ್ನು ಬಳಸಿ ಅಪರಾಧ ಚಟುವಟಿಕೆ ಮಾಡಿದಾಗ ಪರಿಶೀಲಿಸಲು HSRP ಸಹಕಾರಿಯಾಗಲಿದೆ.
* ರಸ್ತೆಗಳಲ್ಲಿ ಸಂಚರಿಸುವ ಎಲ್ಲ ವಾಹನಗಳನ್ನು ಗುರುತಿಸಲು ಸಹಕಾರಿ.
* ನೋಂದಣಿ ಫಲಕಗಳಲ್ಲಿ ಏಕರೂಪತೆ ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತವೆ.


ಇದನ್ನೂ ಓದಿ: ರಾಜ್ಯದ ರೈತರಿಗೆ ಬಿಗ್ ಶಾಕ್!; ಖಾತೆಗೆ ಬಂದ ಬರಪರಿಹಾರ ಹಣ ಸಾಲಕ್ಕೆ ಜಮಾ!


HSRP ನಂಬರ್‌ ಪ್ಲೇಟ್‌ ಗಳನ್ನು ನಕಲಿ ಮಾಡಿ ವಂಚನೆ ಮಾಡುವ ಜಾಲವು ಇದ್ದು, ಸಾರ್ವಜನಿಕರು ಮೋಸ ಹೋಗದಂತೆ ಮನವಿ ಮಾಡಲಾಗುತ್ತಿದೆ. ಈ HSRP NUMBER PLATE ನಂತೆಯೇ ಹೋಲಿಕೆ ಇರುವಂತೆ ಇಂಥವರು ಸಿದ್ಧಪಡಿಸಿ ಕೊಡುತ್ತಾರೆ. ಇದನ್ನು ಅಗ್ಗದ ಬೆಲೆಯಲ್ಲಿ ಕೊಡುವುದರಿಂದ ಜನರೂ ಗೊತ್ತಿಲ್ಲದೆ ಖರೀದಿ ಮಾಡುತ್ತಾರೆ. ಆದರೆ, ಅದರಲ್ಲಿ ಟ್ಯಾಂಪರ್‌ ಪ್ರೂಫ್‌ ವೈಶಿಷ್ಟ್ಯ, ಯುನೀಕ್‌ ಐಡೆಂಟಿಟಿ ಅಂಶಗಳು ಇರುವುದಿಲ್ಲ. ಇದರಿಂದ ಒಮ್ಮೆ RTO ಪೊಲೀಸರಿಗೆ ಸಿಕ್ಕಿ ಬಿದ್ದರೆ ದಂಡ ಕಟ್ಟುವುದು ಗ್ಯಾರಂಟಿಯಾಗಿದೆ. ಇಲ್ಲಿ “IND” ಗುರುತಾಗಲೀ, ಅಶೋಕ ಚಕ್ರ ಚಿಹ್ನೆಯ Hot stamp ಆಗಲೀ ಇರುವುದಿಲ್ಲ. ಹೀಗಾಗಿ ಅಧಿಕೃತ ವಿತರಕರಿಂದ ಮಾತ್ರ HSRP ನಂಬರ್‌ ಪ್ಲೇಟ್‌ ಗಳನ್ನು ಪಡೆದುಕೊಳ್ಳಬೇಕು ಎಂದು ಸರ್ಕಾರ ಸಹ ಹೇಳಿದೆ.

hsrp number plate ಬಗ್ಗೆ ಬಂದೇ ಬಿಡ್ತು ಮತ್ತೊಂದು ಅಪ್ಡೇಟ್
hsrp number plate ಬಗ್ಗೆ ಬಂದೇ ಬಿಡ್ತು ಮತ್ತೊಂದು ಅಪ್ಡೇಟ್

ಇತ್ತೀಚಿನ ಜನಪ್ರಿಯ ಸುದ್ದಿಗಳು

  1. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ; 17 ನೇ ಕಂತಿನ ಹಣ ಬಿಡುಗಡೆ; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ! ಹೀಗೆ ಚೆಕ್ ಮಾಡಿ
  2. ಗೃಹಲಕ್ಷ್ಮಿ ಯೋಜನೆಯಂತೆಯೇ ಮತ್ತೊಂದು ಯೋಜನೆ ಜಾರಿ; ಈ ಯೋಜನೆಯಲ್ಲೂ ಪ್ರತಿ ತಿಂಗಳು ಸಿಗಲಿದೆ ಹಣ; ಯಾವ ಯೋಜನೆ?, ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಡಿಟೈಲ್ಸ್
  3. ರಾತ್ರೋರಾತ್ರಿ ಬಂತು ಹೊಸ ರೂಲ್ಸ್; ನಿಮ್ಮ ಕೃಷಿ ಜಮೀನಿಗೆ ಹೋಗಲು ದಾರಿ ಇಲ್ವಾ?; ಇಲ್ಲದಿದ್ದರೆ ಹೀಗೆ ಮಾಡಿ, ಸರ್ಕಾರವೇ ನೀಡುತ್ತೆ ಪರಿಹಾರ!
  4. ಈ ಕಾರ್ಡ್ ಇದ್ದವರ ಖಾತೆಗೆ ಜಮಾ ಆಗಿದೆ 1,000 ರೂ!; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ, ಹೀಗೆ ಚೆಕ್ ಮಾಡಿ; ಅರ್ಜಿ ಸಲ್ಲಿಸದೇ ಇರುವವರು ಈ ರೀತಿ ಅರ್ಜಿ ಸಲ್ಲಿಸಿ ಲಾಭ ಪಡೆಯಿರಿ
  5. ಮನೆ ನಿರ್ಮಾಣ ಮಾಡುವವರಿಗೆ ಸರ್ಕಾರದಿಂದ ಹೊಸ ರೂಲ್ಸ್ ಜಾರಿ;ಏನದು? ಸರ್ಕಾರದ ನಿಯಮ ಏನಿದೆ? ಇಲ್ಲಿದೆ ಡಿಟೈಲ್ಸ್
  6. ರೈಲ್ವೆ ಇಲಾಖೆಯಲ್ಲಿ ಭರ್ಜರಿ ಜಾಬ್ ಆಫರ್; sslc, puc ಪಾಸ್ ಆದವರು ಈಗಲೇ ಅರ್ಜಿ ಸಲ್ಲಿಸಿ
  7. ಚಿನ್ನ ಅಡವಿಟ್ಟು ಸಾಲ ಪಡೆದವರಿಗೆ ಬಿಸಿ ಬಿಸಿ ಸುದ್ದಿ!
  8. ಪೋಸ್ಟ್ ಆಫೀಸ್ ನಲ್ಲಿ ಭರ್ಜರಿ ಜಾಬ್ ಆಫರ್;  10th ಪಾಸಾದವರು ಈಗಲೇ ಅರ್ಜಿ ಸಲ್ಲಿಸಿ; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಡಿಟೈಲ್ಸ್
  9. ರೈತರಿಗೆ ಕಂದಾಯ ಇಲಾಖೆಯಿಂದ ಗುಡ್ ನ್ಯೂಸ್; ನನ್ನ ಆಧಾರ್ ನೊಂದಿಗೆ ನನ್ನ ಆಸ್ತಿ ಸುಭದ್ರ ಯೋಜನೆ ಆರಂಭ; ಈ ಯೋಜನೆಯಿಂದ ಏನು ಲಾಭ? ಇಲ್ಲಿದೆ ಡಿಟೈಲ್ಸ್