(Gold loan) ಯಾವುದೇ ವ್ಯವಹಾರ, ಕಾರ್ಯಕ್ರಮ, ಮನೆ ನಿರ್ಮಾಣಕ್ಕಾಗಿ ಸಾಲ ಬೇಕಾದರೆ ಮೊದಲು ನೆನಪಾಗುವುದು ಬ್ಯಾಂಕ್. ಬ್ಯಾಂಕ್ ನಲ್ಲಿ ದಾಖಲೆಗಳಿಂದ ಮಾತ್ರವಲ್ಲದೆ ಚಿನ್ನದ ಮೇಲೂ ಕೂಡ ಸಾಲ ನೀಡಲಾಗುತ್ತದೆ ಎಂದು ನಿಮಗೆ ತಿಳಿದಿದೆ. ಅದೇ ರೀತಿ ಇದೀಗ ಚಿನ್ನದ ಮೇಲಿನ ಸಾಲ ಮಾಡಿದವರಿಗೆ ಸರ್ಕಾರದಿಂದ ಬಿಗ್ ರಿಲೀಫ್ ಸಿಕ್ಕಿದೆ. ಏನಿದು ರಿಲೀಫ್ ಎಂಬುದು ಸಂಪೂರ್ಣ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಈ ಯೋಜನೆಯಲ್ಲಿ ಮಹಿಳೆಯರಿಗೆ ಸಿಗುತ್ತೆ 11,000; ಕೂಡಲೇ ಅರ್ಜಿ ಸಲ್ಲಿಸಿ
ಬ್ಯಾಂಕ್ ಗಳಲ್ಲಿ ಅಥವಾ ಇತರ ಹಣಕಾಸು ಸಂಸ್ಥೆಗಳಲ್ಲಿ ಚಿನ್ನವನ್ನು ಅಡವಿಟ್ಟು ಸಾಲ ಪಡೆಯಲಾಗುತ್ತದೆ. ಅಲ್ಲದೆ ಈ ಚಿನ್ನದ ಮೇಲಿನ ಸಾಲಕ್ಕೆ ಸಿಬಿಲ್ ಸ್ಕೋರ್ ಅಗತ್ಯವು ಕೂಡ ಇರುವುದಿಲ್ಲ. ಹೀಗಾಗಿ ಚಿನ್ನದ ಸಾಲವನ್ನು ಸುಲಭ ಸಾಲ ಎಂದು ಪರಿಗಣಿಸಲಾಗುತ್ತದೆ. ಇದೀಗ ಚಿನ್ನದ ಮೇಲಿನ ಸಾಲಕ್ಕೆ ಸಹಕಾರಿ ಸಂಘಗಳಲ್ಲಿ ಅಂದರೆ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಗಳಲ್ಲಿ ಬಂಗಾರದ ಮೇಲಿನ ಸಾಲದ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಹೌದು ಗ್ರಾಹಕರಿಗಾಗಿ ಈ ನಿಯಮವನ್ನು ಬಲಾವಣೆ ಮಾಡಿದ್ದು, ಇದರಿಂದ ಉಪಯೋಗವಾಗಲಿದೆ. ಹಾಗಾದರೆ ಏನದು ಬಲಾವಣೆ ಇಲ್ಲಿದೆ ನೋಡಿ.
ಇದನ್ನೂ ಓದಿ: ರೈಲ್ವೆ ಇಲಾಖೆಯಲ್ಲಿ ಭರ್ಜರಿ ಜಾಬ್ ಆಫರ್; sslc, puc ಪಾಸ್ ಆದವರು ಈಗಲೇ ಅರ್ಜಿ ಸಲ್ಲಿಸಿ
* ಗ್ರಾಹಕರು ಅಡ ಇಟ್ಟ ಚಿನ್ನದ ಮೇಲೆ ಸಾಲ ತೆಗೆದುಕೊಳ್ಳುವಾಗ ಬೇರೆ ಯಾವುದೇ ರೀತಿಯ ಅಡಮಾನ ಅಥವಾ ಗ್ಯಾರಂಟಿ ಕೊಡಬೇಕಾದ ಅಗತ್ಯ ಇನ್ನು ಮುಂದೆ ಇರುವುದಿಲ್ಲ.
* ಚಿನ್ನದ ಮೇಲಿನ ಗರಿಷ್ಠ ಸಾಲದ ಮಿತಿಯನ್ನು ಇದೀಗ ನಾಲ್ಕು ಲಕ್ಷ ರೂಪಾಯಿಗಳ ವರೆಗೆ ಹೆಚ್ಚಿಸಲಾಗಿದೆ.
* ಚಿನ್ನದ ಮೇಲಿನ ಸಾಲಕ್ಕೆ ಅಸಲು ಪಾವತಿ ಮಾಡುವವರೆಗೂ ಕೇವಲ ಬಡ್ಡಿಯನ್ನು ಕಟ್ಟಿದರೆ ಸಾಕು. ಒಂದು ವೇಳೆ ಅಸಲು ಪಾವತಿ ಮಾಡದಿದ್ದರೆ ಬ್ಯಾಂಕ್ ನಿಮ್ಮನ್ನ ಪ್ರಶ್ನಿಸುವಂತಿಲ್ಲ. ಆದರೆ ಸರಿಯಾಗಿ ಬಡ್ಡಿ ಪಾವತಿ ಮಾಡಬೇಕು. ಅಂದರೆ ಸಾಲ ಪಡೆದ ನಂತರ ಅಸಲು ಮತ್ತು ಬಡ್ಡಿ 2 ಸೇರಿಸಿ ಬರುವ ಈ ಎಮ್‌ಐ ಮೊತ್ತವನ್ನು ಪಾವತಿಸುವ ಅಗತ್ಯ ಇಲ್ಲ. ಅದರಲ್ಲಿ ಕೇವಲ ಬಡ್ಡಿಯನ್ನೇ ನೀವು ಪಾವತಿ ಮಾಡಿಕೊಂಡು ಹೋಗಬಹುದು.
ಎಲ್ಲಿ ಈ ಬದಲಾವಣೆ ತರಲಾಗಿದೆ:
ನಗರದ ಕೋ ಆಪರೇಟಿವ್ ಬ್ಯಾಂಕ್ ಗಳಲ್ಲಿ ತಂದಿರುವ ಈ ಬದಲಾವಣೆಗಳು ನಿಜಕ್ಕೂ ಹಣದ ಅವಶ್ಯಕತೆ ಇದ್ದಾಗ ಚಿನ್ನವನ್ನ ಅಡವಿಟ್ಟು ಸಾಲ ತೆಗೆದುಕೊಳ್ಳುವವರಿಗೆ ಬಹಳ ದೊಡ್ಡ ರಿಲೀಫ್ ನೀಡಿದೆ ಎನ್ನಬಹುದು.
ಇದನ್ನೂ ಓದಿ: ಮನೆ ನಿರ್ಮಾಣ ಮಾಡುವವರಿಗೆ ಸರ್ಕಾರದಿಂದ ಹೊಸ ರೂಲ್ಸ್ ಜಾರಿ;ಏನದು? ಸರ್ಕಾರದ ನಿಯಮ ಏನಿದೆ? ಇಲ್ಲಿದೆ ಡಿಟೈಲ್ಸ್








Leave a Reply