(Manasvini Scheme) ಬಡವರ್ಗದ ಮಹಿಳೆಯರಿಗಾಗಿ ರಾಜ್ಯ ಸರ್ಕಾರ ಮತ್ತೊಂದು ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಲ್ಲಿ ಮಹಿಳೆಯರು 800 ರೂಪಾಯಿಗಳನ್ನು ಪ್ರತಿ ತಿಂಗಳು ಪಡೆಯಬಹುದಾಗಿದೆ. ಹಾಗಾದರೆ ಯಾವ ಯೋಜನೆ, ಯಾರು ಅರ್ಹರು, ಅರ್ಜಿ ಸಲ್ಲಿಕೆ ಹೇಗೆ ಎಂಬುದು ಸಂಪೂರ್ಣ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆ; 17ನೇ ಕಂತಿನ ಹಣ ಬಿಡುಗಡೆ ಯಾವಾಗ?; ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ? ಹೀಗೆ ಚೆಕ್ ಮಾಡಿ
ಇತ್ತೀಚಿನ ದಿನಗಳಲ್ಲಿ ಜಾರಿಗೆ ತರುವ ಬಹುತೇಕ ಎಲ್ಲಾ ಯೋಜನೆಗಳು ಮಹಿಳೆಯರ ಸ್ವಾವಲಂಬಿ ಜೀವನವನ್ನು ಪ್ರೇರೇಪಿಸುತ್ತಿದೆ, ಅದೇ ರೀತಿ ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯ 2000 ಜೊತೆಗೆ ಮತ್ತೊಂದು ಯೋಜನೆಯ ಮೂಲಕ 800 ಗಳನ್ನು ಮಹಿಳೆಯರು ಪ್ರತಿ ತಿಂಗಳು ಪಡೆಯಬಹುದು.
ಯಾವ ಯೋಜನೆ:
ಮನಸ್ವಿನಿ ಯೋಜನೆಯಲ್ಲಿ ಈ ಲಾಭ ಪಡೆಯಬಹುದಾಗಿದೆ. ಈ ಯೋಜನೆಗೆ ಅನುದಾನ ಘೋಷಣೆ ಮಾಡಿದೆ.
ಇದನ್ನೂ ಓದಿ: 400 ರೂಪಾಯಿಗೆ lpg, 25,000 ಉದ್ಯೋಗ ಭರವಸೆ ನೀಡಿದ ಬಿಜೆಪಿ; ಈ ಘೋಷಣೆ ಯಾರಿಗೆ ಗೊತ್ತಾ?, ಇಲ್ಲಿದೆ ಡಿಟೈಲ್ಸ್
ಈ ಯೋಜನೆಗೆ ಯಾರು ಅರ್ಹರು;
40 ರಿಂದ 64 ವರ್ಷದವರೆಗಿನ ಮಹಿಳೆಯರಿಗೆ ಈ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು 800 ರೂಪಾಯಿ ನೀಡಲಾಗುತ್ತದೆ. ಇನ್ನು ಮನಸ್ವಿನಿ ಯೋಜನೆಯ ಅಡಿಯಲ್ಲಿ ಅವಿವಾಹಿತ ಮಹಿಳೆಯರು ಮತ್ತು ವಿಚ್ಛೇದಿತ ಮಹಿಳೆಯರು ಪ್ರಯೋಜನ ಪಡೆದುಕೊಳ್ಳಬಹುದು.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಯಾವುದು?;
* ಆದಾಯ ಪ್ರಮಾಣ ಪತ್ರ
* ಆಧಾರ್ ಕಾರ್ಡ್
* ವಿಚ್ಛೇದಿತರು ಅಥವಾ ಅವಿವಾಹಿತರು ಎನ್ನುವುದಕ್ಕೆ ಸ್ವಯಂ ಘೋಷಣಾ ಪ್ರಮಾಣ ಪತ್ರ
* ಬ್ಯಾಂಕ ಖಾತೆಯ ವಿವರ
ಅರ್ಜಿ ಸಲ್ಲಿಸುವುದು ಹೇಗೆ?:
ಬಡತನ ರೇಖೆಗಿಂತ ಕೆಳಗಿರುವ 40 ವರ್ಷದಿಂದ 64 ವರ್ಷದ ವಿಚ್ಛೇದಿತ ಅಥವಾ ಅವಿವಾಹಿತ ಮಹಿಳೆಯರು ಪ್ರತಿ ತಿಂಗಳು 800 ಪಡೆದುಕೊಳ್ಳಲು ಹತ್ತಿರದ ಸೇವಾ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಿ.








Leave a Reply