Road To Farm Land: ಕೃಷಿ ಭೂಮಿಗೆ ದಾರಿ ಇಲ್ಲದಿದ್ದರೆ ಹೀಗೆ ಮಾಡಿ

0
7893

(Road To Farm Land) ರೈತರು ಜಮೀನಿಗೆ ತೆರಳಲು ಕಾಲುದಾರಿ-ಬಂಡಿದಾರಿ ಮೂಲಕ ತಮ್ಮ ಜಮೀನುಗಳಿಗೆ ಸಾಗಬೇಕಾಗಿತ್ತು. ಆದರೆ, ಸಂಕಟಪಡುವ ಅವಶ್ಯಕತೆಯಿಲ್ಲ. ಯಾಕೆಂದ್ರೆ ರಾಜ್ಯದ ರೈತರಿಗೆ ಇದು ಖುಷಿ ಪಡುವ ವಿಷಯ. ಸರ್ಕಾರ ಹೊಸ ಸುತ್ತೋಲೆಯನ್ನು ಹೊರಡಿಸಿ ರೈತರು ಖುಷಿ ಪಡುವಂತೆ ಮಾಡಿದೆ. ಹಾಗಾದ್ರೆ ಆ ಸುತ್ತೋಲೆ ಏನು ಅಂತ ಕೇಳ್ತಿರಾ? ಈ ಸುದ್ದಿ ಓದಿ.


ಇದನ್ನೂ ಓದಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ; ಈ ದಿನ 17 ನೇ ಕಂತಿನ ಹಣ ಬಿಡುಗಡೆ; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ! ಹೀಗೆ ಚೆಕ್ ಮಾಡಿ


ಕೆಲವೊಮ್ಮೆ ರೈತರು ತಮ್ಮ ಜಮೀನಿಗೆ ಕಾಲುದಾರಿ-ಬಂಡಿದಾರಿ ಈ ರೀತಿಯಾಗಿ ಖಾಸಗಿ ಜಾಗಗಳ ಮೂಲಕ ತಮ್ಮ ಜಮೀನುಗಳಿಗೆ ಸಾಗಬೇಕಾಗಿತ್ತು. ಆ ಸಮಯದಲ್ಲಿ ಅದೆಷ್ಟೋ ಜಗಳಗಳು ಆಗಿದ್ದವು. ಅವು ತೀವ್ರ ರೂಪ ಪಡೆದು ಕೋರ್ಟ್ ಮಟ್ಟಿಗೆ ತಲುಪಿದ್ದವು.

ಈ ರೀತಿಯಾದ ಎಲ್ಲಾ ಸಮಸ್ಯೆಗಳನ್ನು ಅರಿತ ಸರ್ಕಾರ ಈಗ ರೈತರಿಗೆ ಅವರ ಜಮೀನಿಗೆ ತೆರಳಲು ಖಾಸಗಿ ಜಾಗದಲ್ಲಿ ಜಾಗ ನೀಡಬೇಕು ಎಂದು ತಿಳಿಸಿದೆ. ಒಂದು ವೇಳೆ ದಾರಿ ನೀಡದೇ ಇದ್ದಲ್ಲಿ ತಹಸೀಲ್ದಾರ್ ಹಾಗೂ ಪೊಲೀಸರು ಮಧ್ಯ ಪ್ರವೇಶಿಸಿ ಸಮಸ್ಯೆ ಪರಿಹರಿಸಬೇಕು ಎಂದು ಈ ಸುತ್ತೋಲೆಯಲ್ಲಿ ಹೇಳಲಾಗಿದೆ.


ಇದನ್ನೂ ಓದಿ: ಈ ಜಿಲ್ಲಾ ಕೋರ್ಟ್ ನಲ್ಲಿ ಭರ್ಜರಿ ಜಾಬ್ ಆಫರ್; puc ಪಾಸಾದವರಿಗೆ ಬಂಪರ್ ಉದ್ಯೋಗಾವಕಾಶ; ಈಗಲೇ ಅರ್ಜಿ ಸಲ್ಲಿಸಿ


ಹಾಗಾದ್ರೆ ಈ ಸುತ್ತೋಲೆಯಲ್ಲಿ ಏನಿದೆ?:
ರೈತರು ವ್ಯವಸಾಯದ ಉದ್ದೇಶಗಳಿಗಾಗಿ ತಿರುಗಾಡಲು ಬಳಸುವ ಖಾಸಗಿ ಜಮೀನುಗಳಲ್ಲಿ ಕಾಲುದಾರಿ, ಬಂಡಿದಾರಿ ಅಥವಾ ಸೌಲಭ್ಯ ಒದಗಿಸುವ ಸಲುವಾಗಿ ಕ್ರಮವಹಿಸುವ ಕುರಿತು ವಿಷಯವನ್ನು ಈ ಸುತ್ತೋಲೆ ಒಳಗೊಂಡಿದೆ.

ಕರ್ನಾಟಕ ಭೂ ಕಂದಾಯ ನಿಯಮಗಳು, 1966ರ ನಿಯಮ 59 ರಲ್ಲಿ ‘ದಾರಿಯ ಹಕ್ಕುಗಳು ಮತ್ತು ಇತರೆ ಅನುಭೋಗದ ಹಕ್ಕುಗಳ ಬಗ್ಗೆ ತಿಳಿಸಲಾಗಿದ್ದು, ಸಂಬಂಧಪಟ್ಟ ಜಮೀನುಗಳ ಭಾಗಿದಾರರು ಒಪ್ಪಿರುವಂತಹ ಸಂದರ್ಭದಲ್ಲಿ ಹಕ್ಕುಗಳ ದಾಖಲೆ ರಿಜಿಸ್ಟರ್ ನಲ್ಲಿ ನಮೂದು ಮಾಡಲು ಅವಕಾಶವಿದೆ.


ಇದನ್ನೂ ಓದಿ: ಯಾವುದೇ ಬ್ಯಾಂಕ್ ನಲ್ಲಿ ಸಾಲ ಮಾಡಿರುವ ರೈತರಿಗೆ ಭರ್ಜರಿ ಸುದ್ದಿ; ಏನದು? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್


ಪ್ರತಿಯೊಬ್ಬರಿಗೂ ಇದೆ ಹಕ್ಕು
The Indian Easement Act, 1882ರಂತೆ ಪ್ರತಿ ಜಮೀನಿನ ಮಾಲೀಕರು ಅಥವಾ ಜಮೀನಿನ ಅನುಭವದಲ್ಲಿರುವವರು ಅವರ ಭೂಮಿಯನ್ನು ಪ್ರವೇಶಿಸುವ ಹಕ್ಕು ಮತ್ತು ವಹಿವಾಟಿನ ಹಕ್ಕನ್ನು ಹೊಂದಿರುತ್ತಾರೆ. ಇದಕ್ಕೆ ಬಾಜುದಾರರಿಂದ ಯಾವುದೇ ಹಸ್ತಕ್ಷೇಪಕ್ಕೆ ಅಥವಾ ಈ ಬಗ್ಗೆ ಸದರಿ ಹಕ್ಕನ್ನು ಕ್ಷೀಣಿಸುವುದಕ್ಕೆ ಸಾಧ್ಯವಿರುವುದಿಲ್ಲ ಎಂಬುದಾಗಿ ತಿಳಿಸಲಾಗಿದ್ದು, ಈ ನಿಟ್ಟಿನಲ್ಲಿ ಕ್ರಮವಹಿಸಲು ಅವಕಾಶವಿದೆ.

ಒಂದು ವೇಳೆ ರೈತರಿಗೆ ಜಾಗ ನೀಡದೆ ಇದ್ದಲ್ಲಿ ತಹಸೀಲ್ದಾರ್ ಮತ್ತು ಪೊಲೀಸರು ಮದ್ಯ ಪ್ರವೇಶಿಸುವ ಮೂಲಕ ರೈತರಿಗೆ ಪರಿಹಾರ ನೀಡಬೇಕು ಎಂದು ಈ ಹಿಂದೆಯೇ ಸುತ್ತೊಲೆಯಲ್ಲಿ ತಿಳಿಸಲಾಗಿದೆ.


ಇದನ್ನೂ ಓದಿ: 2nd puc ಪಾಸಾದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ; 20,000 ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ!


Road To Farm Land: ಕೃಷಿ ಭೂಮಿಗೆ ದಾರಿ ಇಲ್ಲದಿದ್ದರೆ ಹೀಗೆ ಮಾಡಿ
Road To Farm Land: ಕೃಷಿ ಭೂಮಿಗೆ ದಾರಿ ಇಲ್ಲದಿದ್ದರೆ ಹೀಗೆ ಮಾಡಿ