Photo Aadhaar-Card:ಪಹಣಿ ಜೊತೆ ಆಧಾರ್‌ ಲಿಂಕ್‌ ಮಾಡುವುದು ಹೇಗೆ

(Photo Aadhaar-Card) ಭೂ ಅಕ್ರಮವನ್ನು ತಡೆಯುವ ನಿಟ್ಟಿನಲ್ಲಿ ಕಂದಾಯ ಇಲಾಖೆ ನನ್ನ ಆಧಾರ್ ನೊಂದಿಗೆ ನನ್ನ ಆಸ್ತಿ ಸುಭಧ್ರ ಎಂಬ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಲ್ಲಿ ರೈತರಿಗೆ ಅನುಕೂಲವಾಗಲಿದ್ದು, ಇದಕ್ಕಾಗಿ ರೈತರು ಏನು ಮಾಡಬೇಕು ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.


ಇದನ್ನೂ ಓದಿ: ಮಹಿಳೆಯರಿಗೆ ಹೊಸ ಭಾಗ್ಯ!; ಸಿಗಲಿದೆ ಉಚಿತ ಸೋಲಾರ್ ಸ್ಟವ್; ಕೂಡಲೇ ಈ ರೀತಿ ಅರ್ಜಿ ಸಲ್ಲಿಸಿ


ಭೂ ಅಕ್ರಮ ತಡೆಯಲು ರೈತರು ಏನು ಮಾಡಬೇಕು?:
ರೈತರ ಮಾಹಿತಿ ದಾಖಲಿಸುವ ಜೊತೆಗೆ ಭೂ ಸಂಬಂಧಿತ ವಂಚನೆ ತಡೆಯುವ ಉದ್ದೇಶದಿಂದ ಜಮೀನು ಮಾಲೀಕರ ಫೋಟೋದೊಂದಿಗೆ ಪಹಣಿಗೆ ಆಧಾರ್ ಜೋಡಣೆಯನ್ನು ಕಡ್ಡಾಯಗೊಳಿಸಲಾಗಿದೆ. ಇದು ಕಂದಾಯ ಇಲಾಖೆ ‘ನನ್ನ ಆಧಾರ್ ನೊಂದಿಗೆ ನನ್ನ ಆಸ್ತಿ ಸುಭದ್ರ ಯೋಜನೆಯನ್ನು ಆರಂಭಿಸಿರುವ ಉದ್ದೇಶವಾಗಿದೆ.

ಇದುವರೆಗೆ 15 ಲಕ್ಷ ಆಧಾರ್ ಜೋಡಣೆ ಪೂರ್ಣಗೊಳಿಸಲಾಗಿದೆ. ಸಣ್ಣ ಮತ್ತು ಅತಿ ಸಣ್ಣ ರೈತರು ಎಷ್ಟು ಮಂದಿ ಇದ್ದಾರೆ. ಸರ್ಕಾರದ ಸೌಲಭ್ಯ ಪಡೆಯಲು ಅರ್ಹತೆ ಇರುವವರು ಎಷ್ಟು ಮಂದಿ ಎನ್ನುವ ಮಾಹಿತಿ ಸಂಗ್ರಹಿಸಲು ಈ ಕ್ರಮ ಕೈಗೊಳ್ಳಲಾಗಿದೆ.ಈ ಯೋಜನೆಯಿಂದಾಗಿ ಒಬ್ಬ ರೈತ ಬೇರೆ ಬೇರೆ ಸರ್ವೆ ನಂಬರ್ ಗಳಲ್ಲಿ ಭೂಮಿ ಹೊಂದಿದ್ದರೆ ಆಧಾರ್ ಜೋಡಣೆಯಿಂದ ಎಲ್ಲಾ ಮಾಹಿತಿಗಳು ಒಂದೇ ಕಡೆ ಸಿಗುತ್ತವೆ. ಒಟಿಪಿ ಆಧಾರಿತ ಇ-ಕೆವೈಸಿ, ಕೃಷಿ ಜಮೀನು ಮಾಲೀಕರ ಭಾವಚಿತ್ರವನ್ನು ಹಳ್ಳಿಹಳ್ಳಿಗೂ ತೆರಳಿ ಕಂದಾಯ ವೃತ್ತದ ಗ್ರಾಮ ಆಡಳಿತ ಅಧಿಕಾರಿಗಳು ಸೆರೆ ಹಿಡಿಯುತ್ತಾರೆ. ಇದಕ್ಕಾಗಿ ಪ್ರತಿ ಗ್ರಾಮ ಆಡಳಿತ ಅಧಿಕಾರಿಗೆ ವಾರಕ್ಕೆ 250 ರೈತರ ನೋಂದಣಿ ಗುರಿ ನಿಗದಿಪಡಿಸಲಾಗಿದೆ.


ಇದನ್ನೂ ಓದಿ: ಮಹಿಳೆಯರಿಗೆ 1 ಲಕ್ಷ, 24 ಸಾವಿರ ನೆರವು; ಎಲ್ಲಾ ರೈತರ ಸಾಲ ಮನ್ನಾ, ನಿರುದ್ಯೋಗಿಗಳಿಗೆ ಉದ್ಯೋಗ; ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಸಂಬಳ ಹೆಚ್ಚಳದ ಭರವಸೆ


ಹಾಗಾದರೆ ಪಹಣಿಗೆ ಆಧಾರ್ ಲಿಂಕ್ ಮಾಡುವುದು ಹೇಗೆ?;
* ಸರ್ಕಾರ ಬಿಡುಗಡೆ ಮಾಡಿರುವ ಭೂಮಿ ವೆಬ್ ಸೈಟ್ ಗೆ ಭೇಟಿ ನೀಡಿ. (https://landrecords.karnataka.gov.in/service4/)
* ನಂತರ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಗೆಟ್ ಓಟಿಪಿ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
* ಈಗ ನಿಮ್ಮ ಮೊಬೈಲ್ ಸಂಖ್ಯೆಗೆ ಒಂದು ಓಟಿಪಿ ಬರುತ್ತದೆ ಅದನ್ನು ಇಲ್ಲಿ ನಮೂದಿಸಿ.
* ಈಗ ಯಾರ ಹೆಸರಿನಲ್ಲಿ ಜಮೀನು ಇರುತ್ತದೆಯೋ ಅವರ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ verify ಮಾಡಿ.
* ನೀವು ನಮೂದಿಸಿರುವ ಆಧಾರ ಸಂಖ್ಯೆ ಸರಿಯಾಗಿದ್ದರೆ ಆಧಾರ್ ಪರಿಶೀಲಿಸಲಾಗಿದೆ ಎಂದು ಸ್ಟೇಟೆಂಟ್ ಕಾಣಬಹುದು.
* ಮುಂದಿನ ಹಂತದಲ್ಲಿ ಆಧಾರ್ ಕಾರ್ಡ್ ಪರಿಶೀಲನೆ ಬಳಸಿಕೊಂಡು ಅರ್ಜಿದಾರರ ವಿವರ ಭರ್ತಿ ಮಾಡಿ ಎನ್ನುವ ಆಯ್ಕೆಯನ್ನು ಕಾಣುತ್ತೀರಿ ಅದನ್ನು ಕ್ಲಿಕ್ ಮಾಡಿ.
* ಈಗ ಮತ್ತೆ ಅರ್ಜಿದಾರರ ಆಧಾರ್ ಕಾರ್ಡ್ ಅನ್ನು ಹಾಕಿ ಓಟಿಪಿ ಪಡೆದುಕೊಳ್ಳಿ.
* ಮೊಬೈಲ್ ಸಂಖ್ಯೆಗೆ ಬಂದಿರುವ ಓಟಿಪಿಯನ್ನು ಮತ್ತೆ ನಮೂದಿಸಬೇಕು.* ನಿಮ್ಮ ಆಧಾರ್ ಸಂಖ್ಯೆಗೆ ಕನೆಕ್ಟ್ ಆಗಿರುವ ಮೊಬೈಲ್ ಗೆ ಈ ಓಟಿಪಿ ಕಳುಹಿಸಲಾಗುತ್ತದೆ. ಓಟಿಪಿ ಸರಿಯಾಗಿ ನಮೂದಿಸಿದರೆ ಲಿಂಕ್ ಆಧಾರ್ ಎನ್ನುವ ಆಯ್ಕೆಯನ್ನು ಕಾಣುತ್ತೀರಿ.


* ಈಗ ಕೆಳಭಾಗದಲ್ಲಿ ಕಾಣುವ ಸರ್ವೇ ನಂಬರ್ ಅನ್ನು ಆಯ್ಕೆ ಮಾಡಿಕೊಂಡು ಲಿಂಕ್ ಮಾಡಿಕೊಳ್ಳಬೇಕು
* ಈಗ ನಿಮ್ಮ ಮೊಬೈಲ್ ಮತ್ತೊಂದು ಒಟಿಪಿ ಕಳುಹಿಸಲಾಗುತ್ತದೆ. ಅದನ್ನ ನಮೂದಿಸಿ verify ಓಟಿಪಿ ಎಂದು ಮಾಡಿ.
* ಬಳಿಕ ನೀವು ಆಧಾರ್ ಜೊತೆಗೆ ಪಹಣಿ ಲಿಂಕ್ ಮಾಡಲು ಬಯಸುತ್ತೀರಾ ಎನ್ನುವ ಸ್ಟೇಟೆಂಟ್ ಕಾಣಿಸುತ್ತದೆ. yes ಎಂದು ಕೊಡಿ.
* ಈಗ ನಿಮ್ಮ ಪಹಣಿ ಜೊತೆಗೆ ಆದ ಲಿಂಕ್ ಆಗಿರುತ್ತದೆ ಹಾಗೂ ಆಧಾರ್ ಲಿಂಕ್ ಆಗಿದೆ ಎನ್ನುವ ಸಂದೇಶವನ್ನು ನೀವು ಕಾಣುತ್ತೀರಿ.

Photo Aadhaar-Card:ಪಹಣಿ ಜೊತೆ ಆಧಾರ್‌ ಲಿಂಕ್‌ ಮಾಡುವುದು ಹೇಗೆ
Photo Aadhaar-Card:ಪಹಣಿ ಜೊತೆ ಆಧಾರ್‌ ಲಿಂಕ್‌ ಮಾಡುವುದು ಹೇಗೆ

ಇತ್ತೀಚಿನ ಜನಪ್ರಿಯ ಸುದ್ದಿಗಳು

  1. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ; 17 ನೇ ಕಂತಿನ ಹಣ ಬಿಡುಗಡೆ; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ! ಹೀಗೆ ಚೆಕ್ ಮಾಡಿ
  2. ಗೃಹಲಕ್ಷ್ಮಿ ಯೋಜನೆಯಂತೆಯೇ ಮತ್ತೊಂದು ಯೋಜನೆ ಜಾರಿ; ಈ ಯೋಜನೆಯಲ್ಲೂ ಪ್ರತಿ ತಿಂಗಳು ಸಿಗಲಿದೆ ಹಣ; ಯಾವ ಯೋಜನೆ?, ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಡಿಟೈಲ್ಸ್
  3. ರಾತ್ರೋರಾತ್ರಿ ಬಂತು ಹೊಸ ರೂಲ್ಸ್; ನಿಮ್ಮ ಕೃಷಿ ಜಮೀನಿಗೆ ಹೋಗಲು ದಾರಿ ಇಲ್ವಾ?; ಇಲ್ಲದಿದ್ದರೆ ಹೀಗೆ ಮಾಡಿ, ಸರ್ಕಾರವೇ ನೀಡುತ್ತೆ ಪರಿಹಾರ!
  4. ಈ ಕಾರ್ಡ್ ಇದ್ದವರ ಖಾತೆಗೆ ಜಮಾ ಆಗಿದೆ 1,000 ರೂ!; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ, ಹೀಗೆ ಚೆಕ್ ಮಾಡಿ; ಅರ್ಜಿ ಸಲ್ಲಿಸದೇ ಇರುವವರು ಈ ರೀತಿ ಅರ್ಜಿ ಸಲ್ಲಿಸಿ ಲಾಭ ಪಡೆಯಿರಿ
  5. ಮನೆ ನಿರ್ಮಾಣ ಮಾಡುವವರಿಗೆ ಸರ್ಕಾರದಿಂದ ಹೊಸ ರೂಲ್ಸ್ ಜಾರಿ;ಏನದು? ಸರ್ಕಾರದ ನಿಯಮ ಏನಿದೆ? ಇಲ್ಲಿದೆ ಡಿಟೈಲ್ಸ್
  6. ರೈಲ್ವೆ ಇಲಾಖೆಯಲ್ಲಿ ಭರ್ಜರಿ ಜಾಬ್ ಆಫರ್; sslc, puc ಪಾಸ್ ಆದವರು ಈಗಲೇ ಅರ್ಜಿ ಸಲ್ಲಿಸಿ
  7. ಚಿನ್ನ ಅಡವಿಟ್ಟು ಸಾಲ ಪಡೆದವರಿಗೆ ಬಿಸಿ ಬಿಸಿ ಸುದ್ದಿ!
  8. ಪೋಸ್ಟ್ ಆಫೀಸ್ ನಲ್ಲಿ ಭರ್ಜರಿ ಜಾಬ್ ಆಫರ್;  10th ಪಾಸಾದವರು ಈಗಲೇ ಅರ್ಜಿ ಸಲ್ಲಿಸಿ; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಡಿಟೈಲ್ಸ್
  9. ರೈತರಿಗೆ ಕಂದಾಯ ಇಲಾಖೆಯಿಂದ ಗುಡ್ ನ್ಯೂಸ್; ನನ್ನ ಆಧಾರ್ ನೊಂದಿಗೆ ನನ್ನ ಆಸ್ತಿ ಸುಭದ್ರ ಯೋಜನೆ ಆರಂಭ; ಈ ಯೋಜನೆಯಿಂದ ಏನು ಲಾಭ? ಇಲ್ಲಿದೆ ಡಿಟೈಲ್ಸ್
  10. ಮನೆ ಕಟ್ಟೋ ಪ್ಲ್ಯಾನ್ ಇದೆಯಾ?; ಹಾಗದ್ರೆ ಮಿಸ್ ಮಾಡ್ದೆ ಈ ಸುದ್ದಿ ಓದಿ