Land registry amendment: ಪಹಣಿ ತಿದ್ದುಪಡಿ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ

(Land registry amendment:) ಬೆಂಗಳೂರು: ರಾಜ್ಯದ ಭೂಮಿ ಮಾಲೀಕರಿಗೆ ಸಂಬಂಧಿಸಿದ ಪಹಣಿ (RTC) ತಿದ್ದುಪಡಿ ಪ್ರಕ್ರಿಯೆಯನ್ನು ಇನ್ನಷ್ಟು ಸುಲಭ ಹಾಗೂ ಪಾರದರ್ಶಕಗೊಳಿಸಲು ಕಂದಾಯ ಆಯುಕ್ತಾಲಯ ಮಹತ್ವದ ಆದೇಶ ಮತ್ತು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಕಂದಾಯ ಇಲಾಖೆಯ ಭೂಮಿ ಉಸ್ತುವಾರಿ ಕೋಶದಿಂದ ರಾಜ್ಯದ ಎಲ್ಲಾ ಉಪವಿಭಾಗಾಧಿಕಾರಿಗಳು (AC) ಮತ್ತು ತಹಶೀಲ್ದಾರರಿಗೆ ಈ ಕುರಿತು ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಪಹಣಿಯ ವಿವಿಧ ಕಾಲಂ ತಿದ್ದುಪಡಿಗಳಿಗೆ ಯಾವ ಸಾಫ್ಟ್‌ವೇರ್ ಮಾಡ್ಯೂಲ್ ಬಳಸಬೇಕು ಎಂಬುದರ ಕುರಿತಾಗಿ ಪ್ರತ್ಯೇಕ ಪಟ್ಟಿಯನ್ನೂ ಬಿಡುಗಡೆ ಮಾಡಲಾಗಿದೆ.

ಇನ್ನುಮುಂದೆ ಪಹಣಿ ತಿದ್ದುಪಡಿ ಸಂಬಂಧಿತ ಅರ್ಜಿಗಳನ್ನು ಭೌತಿಕವಾಗಿ (Physical) ಸ್ವೀಕರಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಎಲ್ಲಾ ಅರ್ಜಿಗಳನ್ನು ಕೇವಲ ಆನ್‌ಲೈನ್ ತಂತ್ರಾಂಶದ ಮೂಲಕವೇ ಪರಿಶೀಲಿಸಿ, ನಿಯಮಾನುಸಾರ ಶೀಘ್ರವಾಗಿ ಇತ್ಯರ್ಥಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಪ್ರಮುಖ ತಾಂತ್ರಿಕ ಸೌಲಭ್ಯಗಳು
ಹೊಸ RTC ಸೃಷ್ಟಿ:
ಹೊಸ ಪಹಣಿ ಸೃಷ್ಟಿಗೆ ಅವಕಾಶ ಬೇಕಿದ್ದಲ್ಲಿ, ಉಪವಿಭಾಗಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಅಗತ್ಯ ದಾಖಲೆಗಳೊಂದಿಗೆ ಕಂದಾಯ ಆಯುಕ್ತಾಲಯಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಬಳಿಕ “RTC Management Software” ನಲ್ಲಿ ಅವಕಾಶ ಕಲ್ಪಿಸಲಾಗುತ್ತದೆ.

RTC ರದ್ದತಿ:
ಪಹಣಿ ರದ್ದತಿ ಪ್ರಕ್ರಿಯೆಯನ್ನು “RTC Management Software” ಮೂಲಕವೇ ನಿರ್ವಹಿಸಬೇಕು ಎಂದು ಸೂಚಿಸಲಾಗಿದೆ.

RTC ಮರುಪಡೆಯುವಿಕೆ:
ಪಹಣಿ ಮರುಪಡೆಯುವಿಕೆ ಕಾರ್ಯವೂ ಇದೇ ತಂತ್ರಾಂಶದ ಮೂಲಕ ಕೈಗೊಳ್ಳಬೇಕು.

ಮಾಲೀಕರಿಲ್ಲದ ಪಹಣಿ ತಿದ್ದುಪಡಿ:
“No-Owner RTC Correction” ವ್ಯವಸ್ಥೆಗೆ RTC Management Software ನಲ್ಲಿ ಪ್ರತ್ಯೇಕ ಅವಕಾಶ ನೀಡಲಾಗಿದೆ.

ದಾಖಲೆಗಳ ಅಪ್‌ಲೋಡ್ ಸೌಲಭ್ಯ:
RRT Correction Module ನಲ್ಲಿ ತಲಾ 2MB ಗಾತ್ರದ ಬಹು ದಾಖಲೆಗಳನ್ನು (Multiple Documents) ಅಪ್‌ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಸಾರ್ವಜನಿಕರಿಗೆ ತಿದ್ದುಪಡಿ ಪ್ರಕ್ರಿಯೆ ಸುಲಭವಾಗಲಿದೆ.

ಕಂದಾಯ ಇಲಾಖೆಯ ತಾಂತ್ರಿಕ ಕೋಶದ ನಿರ್ದೇಶಕರು ಈ ಆದೇಶಕ್ಕೆ ಡಿಜಿಟಲ್ ಸಹಿ ಮಾಡಿದ್ದು, ಸಾರ್ವಜನಿಕರ ಅರ್ಜಿಗಳನ್ನು ಯಾವುದೇ ವಿಳಂಬವಿಲ್ಲದೆ ತಂತ್ರಾಂಶದ ಮೂಲಕವೇ ನಿಯಮಾನುಸಾರ ಇತ್ಯರ್ಥಪಡಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

Land registry amendment: ಪಹಣಿ ತಿದ್ದುಪಡಿ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ
Land registry amendment: ಪಹಣಿ ತಿದ್ದುಪಡಿ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ

ಇತ್ತೀಚಿನ ಜನಪ್ರಿಯ ಸುದ್ದಿಗಳು (Land registry amendment:)

    1.  ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
    2. ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
    3. ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
    4. ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
    5. ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್‌ ನ್ಯೂಸ್‌; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
    6. ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ
    7. ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ; 11 ನೇ ಕಂತಿನ ಹಣ ಪಡೆಯಲು ಈ ಪತ್ರ ಕಡ್ಡಾಯ
    8. ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ
    9.  31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್
    10. ವಾಹನ ಸವಾರರೇ ಗಮನಿಸಿ; ಆಗಸ್ಟ್‌ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?