(Lok sabha election) ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಎಲ್ಲಾ ರೈತರ ಸಾಲ ಮನ್ನಾ ಮಾಡುತ್ತೇವೆ ಮತ್ತು ರಾಜ್ಯದಲ್ಲಿ ಬಡ ಮಹಿಳೆಯರಿಗೆ ಈಗಾಗಲೇ ನೀಡುತ್ತಿರುವ 24 ಸಾವಿರಕ್ಕೆ 1 ಲಕ್ಷ ರೂ. ಸೇರಿಸಿ 1 ಲಕ್ಷದ 24 ಸಾವಿರ ರೂಪಾಯಿ ನೀಡುತ್ತೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸರ್ಕಾರ ಹಲವು ಯೋಜನೆ ನೀಡುವುದಾಗಿ ಘೋಷಿಸಿದೆ. ಅದೇ ರೀತಿ ಕಾಂಗ್ರೆಸ್ ಸರ್ಕಾರ ಭಾರತದ ಎಲ್ಲಾ ರೈತರ ಸಾಲ ಮನ್ನಾ, ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಂತೆಯೇ ವರ್ಷಕ್ಕೆ 1 ಲಕ್ಷ ರೂ ನೆರವು, ನಿರುದ್ಯೋಗಿಗಳಿಗೆ ಉದ್ಯೋಗ ಕಾರ್ಯಕ್ರಮದಡಿ ಒಂದು ವರ್ಷ ತರಬೇತಿ ಆಧರಿತ ಉದ್ಯೋಗ ಬಡವರು, ಯುವಕರು, ಮಹಿಳೆಯರು, ರೈತರ ಪರವಾಗಿ ನಮ್ಮ ಸರ್ಕಾರ ನಿಲ್ಲುವ ಬದ್ದತೆ ತೋರಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಇದನ್ನೂ ಓದಿ: ಪೋಸ್ಟ್ ಆಫೀಸ್ ನಲ್ಲಿ ಭರ್ಜರಿ ಜಾಬ್ ಆಫರ್; 10th ಪಾಸಾದವರು ಈಗಲೇ ಅರ್ಜಿ ಸಲ್ಲಿಸಿ; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಡಿಟೈಲ್ಸ್
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನುಡಿದಂತೆ ನಡೆದಿದ್ದೇವೆ. 5 ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಬಡವರಿಗೆ, ಮಹಿಳೆಯರಿಗೆ, ಯುವಕರಿಗೆ ಅನುಕೂಲವಾಗಿದೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ರೈತರಿಗೆ ನ್ಯಾಯ ಸಿಕ್ಕಿಲ್ಲ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆ ಮಾಡಿದ್ದು, ಈ ವೇಳೆ ರೈತರ ಸಂಕಷ್ಟ ನೋಡಿದ್ದೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಕಾಂಗ್ರೆಸ್ ಸಮಾವೇಶದಲ್ಲಿ ರಾಹುಲ್ ಗಾಂಧಿ ನೀಡಿದ ಭರವಸೆ ಏನು?;
ರೈತರ ಸಾಲ ಮನ್ನಾ:
ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ಎಲ್ಲಾ ರೈತರ ಸಾಲ ಮನ್ನಾ ಮಾಡುತ್ತೇವೆ.
ಬಡ ಮಹಿಳೆಯರಿಗೆ ವರ್ಷಕ್ಕೆ 1.24 ಸಾವಿರ ನೆರವು:
ಇಂಡಿಯಾ ಒಕ್ಕೂಟದಿಂದ ಬಡ ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷರೂ ವರೆಗೂ ನೆರವು ನೀಡುವ ಯೋಜನೆ ಜಾರಿಯಾಗಲಿದೆ. ಕರ್ನಾಟಕದಲ್ಲಿ ಈಗಾಗಲೇ ನೀಡುತ್ತಿರುವ ಗೃಹಲಕ್ಷ್ಮಿಯ ಯೋಜನೆಯ 24 ಸಾವಿರ ರೂ. ಕೂಡ ಮಹಿಳೆಯರಿಗೆ ಸಿಗಲಿದೆ. ಅಂದರೆ ನಮ್ಮ ಸರ್ಕಾರ ಬಂದರೆ ಮಹಿಳೆಯರಿಗೆ 1.24 ಸಾವಿರ ಆರ್ಥಿಕ ನೆರವು ಕರ್ನಾಟಕದಲ್ಲಿ ಸಿಗಲಿದೆ. ಪ್ರತಿ ತಿಂಗಳು 10,500 ರೂ, ಪ್ರತಿಯೊಬ್ಬರ ಖಾತೆಗೆ ಜಮಾ ಮಾಡುತ್ತೇವೆ.
ನಿರುದ್ಯೋಗಿಗಳಿಗೆ ಉದ್ಯೋಗ:
ಶಿಕ್ಷಣ ಮುಗಿಸಿದ ಯುವಕರಿಗೆ ಅವರ ಶಿಕ್ಷಣಕ್ಕೆ ಅನುಗುಣವಾಗಿ ಪಕ್ಕಾ ಉದ್ಯೋಗವನ್ನು ಕೇಂದ್ರದಲ್ಲಿ ಇಂಡಿಯಾ ಸರ್ಕಾರ ಆರಂಭಿಸಲಿದೆ. ಈ ಮೂಲಕ ಒಂದು ವರ್ಷ ಅವರಿಗೆ ಸಂಪೂರ್ಣ ತರಬೇತಿ ಆಧರಿತ ಉದ್ಯೋಗ ಸಿಗಲಿದೆ. ಇದು ದೇಶಾದ್ಯಂತ ಜಾರಿಯಾಗಲಿದ್ದು, ನಿರುದ್ಯೋಗಿಗಳಲ್ಲಿ ವಿಶ್ವಾಸ ತುಂಬಲಿದೆ.
ಇದನ್ನೂ ಓದಿ: ಮನೆ ಕಟ್ಟೋ ಪ್ಲ್ಯಾನ್ ಇದೆಯಾ?; ಹಾಗದ್ರೆ ಮಿಸ್ ಮಾಡ್ದೆ ಈ ಸುದ್ದಿ ಓದಿ
ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಸಂಬಳ ಹೆಚ್ಚಿಸುತ್ತೇವೆ. ಸರ್ಕಾರಿ, ಅರೆ ಸರ್ಕಾರಿ ನೌಕರರ ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸುತ್ತೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಉದ್ಯೋಗ ಭದ್ರತಾ ಯೋಜನೆ ಜಾರಿ ಮಾಡುತ್ತೇವೆ ಎಂದು ಕಾಂಗ್ರೆಸ್ ಸಮಾವೇಶದಲ್ಲಿ ರಾಹುಲ್ ಗಾಂಧಿ ಹೇಳಿದರು.








Leave a Reply