Photo Aadhaar Card: ರೈತರಿಗೆ ಗುಡ್ ನ್ಯೂಸ್

0
5191

(Photo Aadhaar Card) ಕಂದಾಯ ಇಲಾಖೆಯಿಂದ ರೈತರಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದು, ನನ್ನ ಆಧಾರ್ ನೊಂದಿಗೆ ನನ್ನ ಆಸ್ತಿ ಸುಭದ್ರ ಯೋಜನೆಯಡಿ ಪಹಣಿ ಜೊತೆ ಪೋಟೋ, ಆಧಾರ್ ಜೋಡಣೆ ಕಡ್ಡಾಯಗೊಳಿಸಿದೆ.


ಇದನ್ನೂ ಓದಿ: ಈ ಯೋಜನೆಯಲ್ಲಿ ಮಹಿಳೆಯರಿಗೆ ಸಿಗುತ್ತೆ 11,000; ಕೂಡಲೇ ಅರ್ಜಿ ಸಲ್ಲಿಸಿ


ಭೂ ವಂಚನೆ ತಡೆಯುವ ಉದ್ದೇಶದಿಂದ ಈ ನಿಯಮ ಕಡ್ಡಾಯ:
ರೈತರ ಮಾಹಿತಿ ದಾಖಲಿಸುವ ಜೊತೆಗೆ ಭೂ ಸಂಬಂಧಿತ ವಂಚನೆ ತಡೆಯುವ ಉದ್ದೇಶದಿಂದ ಜಮೀನು ಮಾಲೀಕರ ಫೋಟೋದೊಂದಿಗೆ ಪಹಣಿಗೆ ಆಧಾರ್ ಜೋಡಣೆಯನ್ನು ಕಡ್ಡಾಯಗೊಳಿಸಲಾಗಿದೆ. ಕಂದಾಯ ಇಲಾಖೆ ‘ನನ್ನ ಆಧಾರ್ ನೊಂದಿಗೆ ನನ್ನ ಆಸ್ತಿ ಸುಭದ್ರ ಯೋಜನೆ’ ಆರಂಭಿಸಿದೆ.


ಇದನ್ನೂ ಓದಿ: ರೈಲ್ವೆ ಇಲಾಖೆಯಲ್ಲಿ ಭರ್ಜರಿ ಜಾಬ್ ಆಫರ್; SSLC, PUC ಪಾಸ್ ಆದವರು ಈಗಲೇ ಅರ್ಜಿ ಸಲ್ಲಿಸಿ


ಇದುವರೆಗೆ 15 ಲಕ್ಷ ಆಧಾರ್ ಜೋಡಣೆ ಪೂರ್ಣಗೊಳಿಸಲಾಗಿದೆ. ಸಣ್ಣ ಮತ್ತು ಅತಿ ಸಣ್ಣ ರೈತರು ಎಷ್ಟು ಮಂದಿ ಇದ್ದಾರೆ. ಸರ್ಕಾರದ ಸೌಲಭ್ಯ ಪಡೆಯಲು ಅರ್ಹತೆ ಇರುವವರು ಎಷ್ಟು ಮಂದಿ ಎನ್ನುವ ಮಾಹಿತಿ ಸಂಗ್ರಹಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಈ ಜೋಡಣೆಯಿಂದ ಏನು ಲಾಭ:
ಒಬ್ಬ ರೈತ ಬೇರೆ ಬೇರೆ ಸರ್ವೆ ನಂಬರ್ ಗಳಲ್ಲಿ ಭೂಮಿ ಹೊಂದಿದ್ದರೆ ಆಧಾರ್ ಜೋಡಣೆಯಿಂದ ಎಲ್ಲಾ ಮಾಹಿತಿಗಳು ಒಂದೇ ಕಡೆ ಸಿಗುತ್ತವೆ. ಒಟಿಪಿ ಆಧಾರಿತ ಇ-ಕೆವೈಸಿ, ಕೃಷಿ ಜಮೀನು ಮಾಲೀಕರ ಭಾವಚಿತ್ರವನ್ನು ಹಳ್ಳಿಹಳ್ಳಿಗೂ ತೆರಳಿ ಕಂದಾಯ ವೃತ್ತದ ಗ್ರಾಮ ಆಡಳಿತ ಅಧಿಕಾರಿಗಳು ಸೆರೆ ಹಿಡಿಯುತ್ತಾರೆ.


ಇದನ್ನೂ ಓದಿ: ಈ ಕಾರ್ಡ್ ಇದ್ದವರ ಖಾತೆಗೆ ಜಮಾ ಆಗಿದೆ 1,000 ರೂ!; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ, ಹೀಗೆ ಚೆಕ್ ಮಾಡಿ; ಅರ್ಜಿ ಸಲ್ಲಿಸದೇ ಇರುವವರು ಈ ರೀತಿ ಅರ್ಜಿ ಸಲ್ಲಿಸಿ ಲಾಭ ಪಡೆಯಿರಿ


ಪಹಣಿಯಲ್ಲಿ ಸದ್ಯ ಆಧಾರ್ ಸಂಖ್ಯೆ ನಮೂದಾಗಿರುತ್ತದೆ. ಈಗ ಪಡೆಯುವ ಫೋಟೋ ಮಾಲೀಕರ ಆಸ್ತಿ ವಿವರಗಳೊಂದಿಗೆ ಸಂಗ್ರಹವಾಗಿರುತ್ತದೆ. ಒಂದೇ ಸರ್ವೇ ನಂಬರ್ ನ ಭೂಮಿಯನ್ನು ಸಹೋದರರು, ಸಹೋದರಿಯರು ಹಂಚಿಕೊಂಡಿದ್ದು, ಜಂಟಿ ಖಾತೆ ಹೊಂದಿದ್ದರೆ ಎಷ್ಟು ಜನ ವಾರಸುದಾರರು ಇರುತ್ತಾರೋ ಅಷ್ಟು ಮಂದಿ ಪ್ರತ್ಯೇಕವಾಗಿ ಆಧಾರ್ ಮತ್ತು ಫೋಟೋ ನೀಡುವುದು ಕಡ್ಡಾಯ.


ಇದನ್ನೂ ಓದಿ: ಮನೆ ನಿರ್ಮಾಣ ಮಾಡುವವರಿಗೆ ಸರ್ಕಾರದಿಂದ ಹೊಸ ರೂಲ್ಸ್ ಜಾರಿ;ಏನದು? ಸರ್ಕಾರದ ನಿಯಮ ಏನಿದೆ? ಇಲ್ಲಿದೆ ಡಿಟೈಲ್ಸ್


ಗ್ರಾಮ ಆಡಳಿತ ಅಧಿಕಾರಿಗೆ ಗುರಿ ನಿಗದಿ:
ಪ್ರತಿ ಗ್ರಾಮ ಆಡಳಿತ ಅಧಿಕಾರಿಗೆ ವಾರಕ್ಕೆ 250 ರೈತರ ನೋಂದಣಿ ಗುರಿ ನಿಗದಿಪಡಿಸಲಾಗಿದೆ. ನೋಂದಣಿ ಮಾಡುವಾಗ ರೈತರ ಖುದ್ದು ಫೋಟೋ ಕೇಳುತ್ತದೆ. ನಿಧನರಾಗಿದ್ದವರ ಮಾಹಿತಿ ಸಂಗ್ರಹಿಸುವುದಿಲ್ಲ. ಅನ್ಯ ಉದ್ದೇಶಕ್ಕೆ ಕೃಷಿ ಭೂಮಿ ಬಳಕೆಯಾಗಿದ್ದಲ್ಲಿ ಅದನ್ನು ಪರಿಗಣಿಸುವುದಿಲ್ಲ. ಕೃಷಿ ಭೂಮಿ ಮಾತ್ರ ಪರಿಗಣಿಸಲಾಗುತ್ತದೆ. ಪಹಣಿಯಲ್ಲಿ ಜಮೀನು ಮಾಲೀಕರ ಮಾಹಿತಿ, ಪ್ರದೇಶ, ಮಣ್ಣಿನ ಪ್ರಕಾರ, ಭೂಮಿಯ ಸ್ವರೂಪ, ಬೆಳೆ ಮೊದಲಾದ ಮಾಹಿತಿ ಇರುತ್ತದೆ. ಆಧಾರ್ ಸಂಖ್ಯೆ ಕೂಡ ನಮೂದಿಸಲಾಗಿರುತ್ತದೆ.

Photo Aadhaar Card: ರೈತರಿಗೆ ಗುಡ್ ನ್ಯೂಸ್
Photo Aadhaar Card: ರೈತರಿಗೆ ಗುಡ್ ನ್ಯೂಸ್

ಇದನ್ನೂ ಓದಿ: ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ 50 ಸಾವಿರ ವಿದ್ಯಾರ್ಥಿ ವೇತನ; 1ನೇ ತರಗತಿಯಿಂದ ಉನ್ನತ ಶಿಕ್ಷಣದವರೆಗೂ ಸ್ಕಾಲರ್‌ ಶಿಪ್‌ ಲಭ್ಯ; ಅರ್ಜಿ ಸಲ್ಲಿಕೆ ಹೇಗೆ?, ಇಲ್ಲಿದೆ ಡಿಟೈಲ್ಸ್