Ration card correction2: ರೇಷನ್‌ ಕಾರ್ಡ್‌ ತಿದ್ದುಪಡಿಗೆ ಅವಕಾಶ

0
30

Ration card correction2: ಸರ್ಕಾರದಿಂದ ಹಲವು ಯೋಜನೆಗಳು, ಸಬ್ಸಿಡಿ, ಸಹಾಯಧನ ಈ ರೀತಿ ಹಲವು ಸರ್ಕಾರಿ ಯೋಜನೆಗಳ ಪ್ರಯೋಜನಗಳ ಪಡೆಯಲು ಅರ್ಜಿ ಆಹ್ವಾನಿಸಲಾಗುತ್ತದೆ. ಅರ್ಜಿ ಸಲ್ಲಿಸಲು ಕೆಲವು ದಾಖಲೆಗಳ ಅಗತ್ಯತೆ ತುಂಬಾ ಇರುತ್ತದೆ. ಆಧಾರ್‌ ಕಾರ್ಡ್‌ ದಾಖಲೆ ಸೇರಿದಂತೆ ಹಲವು ದಾಖಲೆಗಳು ಮುಖ್ಯವಾಗುತ್ತವೆ. ದಾಖಲೆಗಳಲ್ಲಿ ಒಂದು ತಪ್ಪಾಗಿದ್ದರು ಅದು ಅರ್ಜಿ ಸಲ್ಲಿಸಲು ಅಡಚನೆ ಉಂಟಾಗಿ ಅರ್ಜಿ ಯಶಸ್ವಿಯಾಗುವುದಿಲ್ಲ. ಆದ್ದರಿಂದ ರಾಜ್ಯದ ಸಾರ್ವಜನಿಕ ವಿತರಣಾ ವ್ಯವಸ್ಥೆ ಅಡಿಯಲ್ಲಿ ನೀಡಲಾಗುತ್ತಿರುವ ರೇಷನ್‌ ಕಾರ್ಡ್‌ಗಳಲ್ಲಿ ಹೆಸರು, ವಿಳಾಸ ಸೇರಿದಂತೆ ಹಲವು ವಿವರಗಳಲ್ಲಿ ತಪ್ಪುಗಳಿದ್ದರೆ ಅವುಗಳನ್ನು ತಿದ್ದುಪಡಿ ಮಾಡಿಸಿಕೊಳ್ಳಲು ಸರ್ಕಾರ ಅವಕಾಶ ನೀಡಿದ್ದು ಯೋಜನೆಗಳ ಲಾಭಗಳನ್ನು ಪಡೆಯಲು ತಕ್ಷಣ ತಿದ್ದುಪಡಿ ಮಾಡಿಸಿಕೊಳ್ಳಿ.

ಕುಟುಂಬದ ಸದಸ್ಯರ ಹೆಸರು, ಸೇರ್ಪಡೆ ಅಥವಾ ತೆಗೆದುಹಾಕವುದು ವಿಳಾಸ ಪುರಾವೆ ಬದಲಾಗಿದ್ದಲ್ಲಿ ತಿದ್ದುಪಡಿ ಮಾಡಿಸುವ ಸುಲಭವಾದ ಅವಕಾಶ.


ನ್ನೂ ಓದಿ: 10th ಪಾಸ್‌ ಆದವರಿಗೆ ಪೋಸ್ಟ್‌ ಆಫೀಸ್‌ ನಲ್ಲಿ ಭರ್ಜರಿ ಜಾಬ್‌ ಆಫರ್‌; 12,000 ದಿಂದ ಸಂಬಳ


ಏನೆಲ್ಲಾ ತಿದ್ದುಪಡಿ ಮಾಡಿಸಬಹುದು
* ಕಾರ್ಡ್‌ ಮುಖ್ಯಸ್ಥರ ಹೆಸರು ತಿದ್ದುಪಡಿ
* ಕುಟುಂಬ ಸದಸ್ಯರ ಹೆಸರು ಸೇರ್ಪಡೆ ಅಥವಾ ತೆಗೆದುಹಾಕುವುದು
* ಜನ್ಮ ದಿನಾಂಕ ತಿದ್ದುಪಡಿ
* ವಿಳಾಸ ಬದಲಾವಣೆ
* ಮೊಬೈಲ್ ಸಂಖ್ಯೆ ನವೀಕರಣ
* ಆದಾಯ ವಿವರ ತಿದ್ದುಪಡಿ
* ಕಾರ್ಡ್‌ ವರ್ಗ APL/BPL/AAY ಬದಲಾವಣೆ ಮಾಡಬಹುದು.

ಅರ್ಜಿ ಸಲ್ಲಿಸುವ ವಿಧಾನ
ರೇಶನ್ ಕಾರ್ಡ್ ತಿದ್ದುಪಡಿ ಮಾಡುವುದು ಹೇಗೆ?
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವೆಬ್‌ಸೈಟ್‌ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದು ಅಥವಾ ಸಮೀಪದ ಗ್ರಾಮ ಒನ್, ಬೆಂಗಳೂರು ಒನ್ ಅಥವಾ ನಾಗರಿಕ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.


ನ್ನೂ ಓದಿ: 6 ತಿಂಗಳು ಇಂತಹವರ ರೇಷನ್‌ ಕಾರ್ಡ್‌ ಕ್ಯಾನ್ಸಲ್‌; ಕಾರಣವೇನು ಗೊತ್ತಾ…?


ಬೇಕಾಗುವ ದಾಖಲೆಗಳು
* ಆಧಾರ್ ಕಾರ್ಡ್(Aadhar Card)
* ಹಳೆಯ ರೇಷನ್ ಕಾರ್ಡ್(Old Ration Card)
* ವಿಳಾಸ ಪುರಾವೆ(Address Proof)

ಅರ್ಜಿ ಸಲ್ಲಿಸಿದ ಮಾಹಿತಿ ಪರಿಶೀಲನೆ ಬಳಿಕ ತಿದ್ದುಪಡಿ ಅನುಮೋದನೆ ನೀಡಲಾಗುತ್ತದೆ. ತಪ್ಪು ಮಾಹಿತಿಯನ್ನು ನೀಡಿದ್ದಲ್ಲಿ ಅರ್ಜಿ ತೆಗೆದುಕೊಳ್ಳುವುದಿಲ್ಲ. ಅರ್ಜಿ ಸಂಖ್ಯೆಯಿಂದ ಪರಿಶೀಲಿಸಬಹುದು. ಇದರಿಂದ ಸರ್ಕಾರಿ ಯೋಜನೆಗಳ ಲಾಭಗಳನ್ನು ಪಡೆಯಲು ತೊಂದರೆಯಾಗಬಹುದು. ತಕ್ಷಣ ತಿದ್ದುಪಡಿ ಮಾಡಿಸಿಕೊಳ್ಳಿ.

Ration card correction2: ರೇಷನ್‌ ಕಾರ್ಡ್‌ ತಿದ್ದುಪಡಿಗೆ ಅವಕಾಶ
Ration card correction2: ರೇಷನ್‌ ಕಾರ್ಡ್‌ ತಿದ್ದುಪಡಿಗೆ ಅವಕಾಶ

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಇತ್ತೀಚಿನ ಜನಪ್ರಿಯ ಸುದ್ದಿಗಳು (Ration card correction2:)

  1.  ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
  2. ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
  3. ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
  4. ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
  5. ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ