(Post Office 26:) ಭಾರತೀಯ ಅಂಚೆ ಇಲಾಖೆ 2025ನೇ ಸಾಲಿನ ಗ್ರಾಮೀಣ ಡಾಕ್ ಸೇವಕರ (GDS) ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ. ಕರ್ನಾಟಕ ಅಂಚೆ ವೃತ್ತದಲ್ಲಿ ಒಟ್ಟು 1135 ಹುದ್ದೆಗಳು ಭರ್ತಿಯಾಗಲಿವೆ. ಈ ನೇಮಕಾತಿ ಪ್ರಕ್ರಿಯೆ ಭಾರತೀಯ ಅಂಚೆ ಇಲಾಖೆ ವತಿಯಿಂದ ನಡೆಯುತ್ತಿದ್ದು, ಗ್ರಾಮೀಣ ಡಾಕ್ ಸೇವಕ್ (GDS), ಬ್ರಾಂಚ್ ಪೋಸ್ಟ್ ಮಾಸ್ಟರ್ (BPM) ಹಾಗೂ ಅಸಿಸ್ಟಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ (ABPM) ಹುದ್ದೆಗಳು ಭರ್ತಿಯಾಗಲಿವೆ.
ಇದನ್ನೂ ಓದಿ: 6 ತಿಂಗಳು ಇಂತಹವರ ರೇಷನ್ ಕಾರ್ಡ್ ಕ್ಯಾನ್ಸಲ್; ಕಾರಣವೇನು ಗೊತ್ತಾ…?
ವರ್ಗವಾರು ಹುದ್ದೆಗಳ ಹಂಚಿಕೆ (ಕರ್ನಾಟಕ)
ಸಾಮಾನ್ಯ ವರ್ಗ: 482
ಇತರೆ ಹಿಂದುಳಿದ ವರ್ಗ (OBC): 269
ಪರಿಶಿಷ್ಟ ಜಾತಿ (SC): 175
ಪರಿಶಿಷ್ಟ ಪಂಗಡ (ST): 78
ಆರ್ಥಿಕವಾಗಿ ಹಿಂದುಳಿದ ವರ್ಗ (EWS): 122
PwD-A: 3
PwD-B: 3
PwD-C: 12
PwD-DE: 0
ಅರ್ಹತೆ ಮತ್ತು ವಯೋಮಿತಿ
ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಅಥವಾ ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಜೊತೆಗೆ ಕನ್ನಡ ಭಾಷೆಯನ್ನು ಓದಲು, ಬರೆಯಲು ಮತ್ತು ಮಾತನಾಡಲು ತಿಳಿದಿರಬೇಕು. ಮೂಲಭೂತ ಕಂಪ್ಯೂಟರ್ ಜ್ಞಾನ ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತದೆ.
2025ರ ಮಾರ್ಚ್ 3ರಂತೆ ಕನಿಷ್ಠ 18 ವರ್ಷ ಪೂರೈಸಿರಬೇಕು ಮತ್ತು ಗರಿಷ್ಠ 40 ವರ್ಷ ಮೀರಬಾರದು. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಇತರೆ ಮೀಸಲು ವರ್ಗಗಳಿಗೆ ನಿಯಮಾನುಸಾರ ವಯೋಸಡಿಲಿಕೆ ಇದೆ.
ಇದನ್ನೂ ಓದಿ: ಅಭಿನವ ವಿದ್ಯಾತೀರ್ಥ ಮೊಬೈಲ್ ಆಸ್ಪತ್ರೆ ಸೇವೆ; ಎಲ್ಲಾ ರೋಗಿಗಳಿಗೆ ಉಚಿತ ಕನ್ಸಲ್ಟೇಶನ್
ವೇತನ ವಿವರ
ಬ್ರಾಂಚ್ ಪೋಸ್ಟ್ ಮಾಸ್ಟರ್ (BPM): ₹12,000 ರಿಂದ ₹29,380
ಅಸಿಸ್ಟಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ (ABPM) / ಡಾಕ್ ಸೇವಕ್: ₹10,000 ರಿಂದ ₹24,470
ಅರ್ಜಿ ಸಲ್ಲಿಕೆ ವಿಧಾನ
ಅರ್ಜಿ ಪ್ರಕ್ರಿಯೆ ಆನ್‌ಲೈನ್ ಮೂಲಕ ಮಾತ್ರ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು India Post GDS Online ವೆಬ್‌ಸೈಟ್‌ಗೆ ಭೇಟಿ ನೀಡಿ ರಾಜ್ಯವಾಗಿ ‘Karnataka’ ಆಯ್ಕೆಮಾಡಿ, ತಮ್ಮ ಜಿಲ್ಲೆಯ ಖಾಲಿ ಹುದ್ದೆಗಳ ವಿವರಗಳನ್ನು ಪರಿಶೀಲಿಸಿ ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು
ಅರ್ಜಿ ಪ್ರಾರಂಭ: 10-02-2025
ಅರ್ಜಿ ಕೊನೆ ದಿನಾಂಕ: 03-03-2025
ಅರ್ಜಿ ತಿದ್ದುಪಡಿ ಅವಧಿ: 06-03-2025 ರಿಂದ 08-03-2025
ಅರ್ಜಿ ಶುಲ್ಕ ರೂ.100 ಆಗಿದ್ದು, ಆನ್‌ಲೈನ್ ಮೂಲಕ ಪಾವತಿಸಬೇಕು.
ಕೇಂದ್ರ ಸರ್ಕಾರಿ ಉದ್ಯೋಗವನ್ನು ತಮ್ಮ ಜಿಲ್ಲೆ ಅಥವಾ ತಾಲ್ಲೂಕಿನಲ್ಲೇ ಪಡೆಯಲು ಬಯಸುವ ಎಸ್‌ಎಸ್‌ಎಲ್‌ಸಿ ಪಾಸಾದ ಯುವಕರಿಗೆ ಇದು ಉತ್ತಮ ಅವಕಾಶವಾಗಿದೆ.

Public Desclimer
This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.
News Malnad is not responsible for any misuse of our media identity by unauthorized persons.
ಇತ್ತೀಚಿನ ಜನಪ್ರಿಯ ಸುದ್ದಿಗಳು (Post Office 26: )
- ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
- ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
- ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
- ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
- ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ
- ಏರ್‌ಟೆಲ್, ಜಿಯೋ ರೀಚಾರ್ಜ್ ಯೋಜನೆ ಬೆಲೆ ಹೆಚ್ಚಳ?; ಜನಪ್ರಿಯ ಯೋಜನೆಗಳು ಸಹ ದುಬಾರಿ
- ಚಿಕ್ಕಮಗಳೂರು ಜಿಲ್ಲೆಯಲ್ಲಿ 12,991 BPL ಕಾರ್ಡ್ ರದ್ದು; ನಿಮ್ಮ ತಾಲೂಕಿನ ರೇಷನ್ ಕಾರ್ಡ್ ಡಿಲೀಟ್ ಆದ ಡಿಟೈಲ್ಸ್ ಇಲ್ಲಿದೆ
- ಹೊಸ ವರ್ಷವನ್ನು ವಿಶಿಷ್ಟ ಡೂಡಲ್ ಮೂಲಕ ಸ್ವಾಗತಿಸಿದ ಗೂಗಲ್





