Labor Pension: ನಿಮ್ಮ ಬಳಿ ಈ ಕಾರ್ಡ್‌ ಇದ್ರೆ ಸಿಗಲಿದೆ ₹3,000 ಪಿಂಚಣಿ

Labor Pension: ಇ-ಶ್ರಮ್ (e-Shram) ಪೋರ್ಟಲ್ ಭಾರತ ಸರ್ಕಾರದ ಅಸಂಘಟಿತ ವಲಯದ ಕಾರ್ಮಿಕರ ರಾಷ್ಟ್ರೀಯ ಡೇಟಾಬೇಸ್ ಆಗಿದೆ. ಅಧಿಕೃತ ವೆಬ್‌ಸೈಟ್ ಮೂಲಕ 18-59 ವರ್ಷದ ಕಟ್ಟಡ ಕಾರ್ಮಿಕರು‌ ಮನೆಗೆಲಸದವರು ಬೀದಿ ವ್ಯಾಪಾರಿಗಳು ಮುಂತಾದವರು ಉಚಿತವಾಗಿ ನೋಂದಾಯಿಸಿಕೊಳ್ಳಬಹುದು. ಇದು ಅಪಘಾತ ವಿಮೆಪಿಂಚಣಿ ಮತ್ತು ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಕಾರ್ಮಿಕರ ಬಾಳಿಗೆ ಬೆಳಕಾಗಲು ಭಾರತ ಸರ್ಕಾರ ಮುಂದಾಗಿದ್ದು, 2026ರಲ್ಲಿ ಇ-ಶ್ರಮ್ (e-Shram) ಕಾರ್ಡ್ ಯೋಜನೆಯನ್ನು ಮತ್ತಷ್ಟು ಬಲಿಷ್ಠಗೊಳಿಸಿದೆ. ಈ ಡಿಜಿಟಲ್ ಗುರುತಿನ ಚೀಟಿಯು ಕಾರ್ಮಿಕರ ಸಾಮಾಜಿಕ ಭದ್ರತೆಗೆ ‘ಒನ್-ಸ್ಟಾಪ್ ಸೊಲ್ಯೂಷನ್’ ಆಗಿ ಮಾರ್ಪಟ್ಟಿದೆ.

ಇತ್ತೀಚಿನ ಅಂಕಿಅಂಶಗಳ ಪ್ರಕಾರ, ದೇಶದಾದ್ಯಂತ ಈಗಾಗಲೇ 31.54 ಕೋಟಿಗೂ ಹೆಚ್ಚು ಕಾರ್ಮಿಕರು ಈ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ. ಕಟ್ಟಡ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಮನೆಗೆಲಸದವರು ಮಾತ್ರವಲ್ಲದೆ ಈಗ ಸ್ವಿಗ್ಗಿ-ಜೊಮ್ಯಾಟೊದಂತಹ ‘ಗಿಗ್ ವರ್ಕಸ್’ ಕೂಡ ಈ ಯೋಜನೆಯ ಪ್ರಯೋಜನ ಪಡೆಯಬಹುದು.


ನ್ನೂ ಓದಿ: 10th ಪಾಸ್‌ ಆದವರಿಗೆ ಪೋಸ್ಟ್‌ ಆಫೀಸ್‌ ನಲ್ಲಿ ಭರ್ಜರಿ ಜಾಬ್‌ ಆಫರ್‌; 12,000 ದಿಂದ ಸಂಬಳ


ಇ-ಶ್ರಮ್ ಕಾರ್ಡ್:
* ಪ್ರಮುಖ ಕಲ್ಯಾಣ ಯೋಜನೆಗಳೊಂದಿಗೆ ಲಿಂಕ್ ಮಾಡಲಾಗಿದೆ. ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್-ಧನ್ (PM-SYM) ಯೋಜನೆಯ ಅಡಿಯಲ್ಲಿ, ಕಾರ್ಮಿಕರಿಗೆ 60 ವರ್ಷ ತುಂಬಿದ ನಂತರ ಪ್ರತಿ ತಿಂಗಳು ₹3,000 ನಿಶ್ಚಿತ ಪಿಂಚಣಿ ದೊರೆಯಲಿದೆ.

ಪ್ರಯೋಜನಗಳು:
₹2 ಲಕ್ಷದವರೆಗೆ ಅಪಘಾತ ವಿಮೆ (PM-SYM), 60 ವರ್ಷದ ನಂತರ ಪಿಂಚಣಿಮತ್ತು ಸರ್ಕಾರದ ಕಲ್ಯಾಣ ಯೋಜನೆಗಳ ನೇರ ಲಾಭ. ಜಾಗತಿಕ ಸಾಂಕ್ರಾಮಿಕ ಅಥವಾ ಯಾವುದೇ ನೈಸರ್ಗಿಕ ವಿಕೋಪದ ಸಂದರ್ಭದಲ್ಲಿ, ಸರ್ಕಾರವು ಈ ಡೇಟಾಬೇಸ್ ಬಳಸಿ ನೇರವಾಗಿ ಬ್ಯಾಂಕ್ ಖಾತೆಗಳಿಗೆ ಹಣವನ್ನು ಜಮಾ ಮಾಡುತ್ತದೆ.

ಅರ್ಹತೆಗಳು:
* ಕಟ್ಟಡ ಕಾರ್ಮಿಕರು, ವಲಸೆ ಕಾರ್ಮಿಕರು, ಕೃಷಿ ಕಾರ್ಮಿಕರು, ರಿಕ್ಷಾ ಚಾಲಕರು, ಸ್ವಚ್ಛತಾ ಕಾರ್ಮಿಕರು,
ಬ್ಯೂಟಿ ಪಾರ್ಲರ್ ಉದ್ಯೋಗಿಗಳು ಅಥವಾ ಡೆಲಿವರಿ ಬಾಯ್ಸ್.
* 18 ರಿಂದ 59 ವರ್ಷಗಳ ಒಳಗಿರಬೇಕು.
* ಮಾಸಿಕ ₹15,000ಕ್ಕಿಂತ ಕಡಿಮೆ ಆದಾಯ ಹೊಂದಿರುವವರಿಗೆ ಪಿಂಚಣಿ ಯೋಜನೆಯಲ್ಲಿ ಆದ್ಯತೆ ನೀಡಲಾಗುತ್ತದೆ.
* ಅರ್ಜಿದಾರರು EPFO (PF) ಅಥವಾ ESIC ಸದಸ್ಯರಾಗಿರಬಾರದು ಮತ್ತು ಆದಾಯ ತೆರಿಗೆ ಪಾವತಿದಾರರಾಗಿರಬಾರದು.


ನ್ನೂ ಓದಿ: 6 ತಿಂಗಳು ಇಂತಹವರ ರೇಷನ್‌ ಕಾರ್ಡ್‌ ಕ್ಯಾನ್ಸಲ್‌; ಕಾರಣವೇನು ಗೊತ್ತಾ…?


ನೋಂದಣಿ ಹೇಗೆ?
https://eshram.gov.in.en2kn.search.translate.gow/e-shram-portal ಅಧಿಕೃತ ವೆಬ್‌ಸೈಟ್ ಅಥವಾ ಸಮೀಪದ ಗ್ರಾಮ ಪಂಚಾಯಿತಿ/ಸಿಎಸ್‌ಸಿ (CSC) ಕೇಂದ್ರಗಳ ಮೂಲಕ ಉಚಿತವಾಗಿ ನೋಂದಾಯಿಸಬಹುದು.

ದಾಖಲೆಗಳು:
* ಆಧಾರ್ ಕಾರ್ಡ್(Aadhaar Card )
* ಬ್ಯಾಂಕ್ ಪಾಸ್‌ ಬುಕ್(Bank Pass Book)
* ವಯಸ್ಸಿನ ಪುರಾವೆ(Proof of age)
* ಪೋಟೋ(Photo)

Labor Pension: ಕಾರ್ಮಿಕರ ಬಳಿ ಈ ಕಾರ್ಡ್‌ ಇದ್ರೆ ಪಡೆಯಿರಿ ₹3000 ಮಾಸಿಕ ಪಿಂಚಣಿ
Labor Pension: ಕಾರ್ಮಿಕರ ಬಳಿ ಈ ಕಾರ್ಡ್‌ ಇದ್ರೆ ಪಡೆಯಿರಿ ₹3000 ಮಾಸಿಕ ಪಿಂಚಣಿ

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಇತ್ತೀಚಿನ ಜನಪ್ರಿಯ ಸುದ್ದಿಗಳು (Labor Pension:)

  1.  ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
  2. ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
  3. ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
  4. ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
  5. ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ