(Rahul Gandhi) 2024 ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸರ್ಕಾರ ಹಲವು ಯೋಜನೆ ನೀಡುವುದಾಗಿ ಘೋಷಿಸಿದೆ. ಅದೇ ರೀತಿ ಕಾಂಗ್ರೆಸ್ ಸರ್ಕಾರ ಭಾರತದ ಎಲ್ಲಾ ರೈತರ ಸಾಲ ಮನ್ನಾ ಮಾಡುತ್ತೇವೆ. ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಂತೆಯೇ ವರ್ಷಕ್ಕೆ 1 ಲಕ್ಷ ರೂ ನೆರವು, ನಿರುದ್ಯೋಗಿಗಳಿಗೆ ಉದ್ಯೋಗ ಕಾರ್ಯಕ್ರಮದಡಿ ಒಂದು ವರ್ಷ ತರಬೇತಿ ಆಧರಿತ ಉದ್ಯೋಗ ನೀಡುವ ಯೋಜನೆಯನ್ನು ಜಾರಿಗೊಳಿಸಲಾಗುವುದು. ಬಡವರು, ಯುವಕರು, ಮಹಿಳೆಯರು, ರೈತರ ಪರವಾಗಿ ನಮ್ಮ ಸರ್ಕಾರ ನಿಲ್ಲುವ ಬದ್ದತೆ ತೋರಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಇದನ್ನೂ ಓದಿ: ಈ ಜಿಲ್ಲೆಯ ಅಂಗನವಾಡಿ ಹುದ್ದೆಗೆ ಅರ್ಜಿ ಆಹ್ವಾನ; 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ
ರೈತರ ಸಾಲ ಮನ್ನಾ:
ಕೇಂದ್ರದಲ್ಲಿ ನಾವು ಅಧಿಕಾರಕ್ಕೆ ಬಂದ ತಕ್ಷಣ ಎಲ್ಲಾ ರೈತರ ಸಾಲ ಮನ್ನಾ ಮಾಡುತ್ತೇವೆ. ತಿಂಗಳೊಳಗೆ ಬಾಕಿ ಇರುವ ರೈತ ಬೆಳೆ ವಿಮೆಯನ್ನು ಪಾವತಿ ಮಾಡುತ್ತೇವೆ.
ಬಡ ಮಹಿಳೆಯರಿಗೆ ವರ್ಷಕ್ಕೆ 1.24 ಸಾವಿರ ನೆರವು:
ಇಂಡಿಯಾ ಒಕ್ಕೂಟದಿಂದ ಬಡ ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷರೂ ವರೆಗೂ ನೆರವು ನೀಡುವ ಯೋಜನೆ ಜಾರಿಯಾಗಲಿದೆ. ಕರ್ನಾಟಕದಲ್ಲಿ ಈಗಾಗಲೇ ನೀಡುತ್ತಿರುವ ಗೃಹಲಕ್ಷ್ಮಿಯ ಯೋಜನೆಯ 24 ಸಾವಿರ ರೂ. ಕೂಡ ಮಹಿಳೆಯರಿಗೆ ಸಿಗಲಿದೆ. ಅಂದರೆ ನಮ್ಮ ಸರ್ಕಾರ ಬಂದರೆ ಮಹಿಳೆಯರಿಗೆ 1.24 ಸಾವಿರ ಆರ್ಥಿಕ ನೆರವು ಕರ್ನಾಟಕದಲ್ಲಿ ಸಿಗಲಿದೆ. ಪ್ರತಿ ತಿಂಗಳು 10,500 ರೂ, ಪ್ರತಿಯೊಬ್ಬರ ಖಾತೆಗೆ ಜಮಾ ಮಾಡುತ್ತೇವೆ.
ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆ; 17ನೇ ಕಂತಿನ ಹಣ ಬಿಡುಗಡೆ ಯಾವಾಗ?; ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ? ಹೀಗೆ ಚೆಕ್ ಮಾಡಿ
ನಿರುದ್ಯೋಗಿಗಳಿಗೆ ಉದ್ಯೋಗ:
ಶಿಕ್ಷಣ ಮುಗಿಸಿದ ಯುವಕರಿಗೆ ಅವರ ಶಿಕ್ಷಣಕ್ಕೆ ಅನುಗುಣವಾಗಿ ಪಕ್ಕಾ ಉದ್ಯೋಗವನ್ನು ಕೇಂದ್ರದಲ್ಲಿ ಇಂಡಿಯಾ ಸರ್ಕಾರ ಆರಂಭಿಸಲಿದೆ. ಈ ಮೂಲಕ ಒಂದು ವರ್ಷ ಅವರಿಗೆ ಸಂಪೂರ್ಣ ತರಬೇತಿ ಆಧರಿತ ಉದ್ಯೋಗ ಸಿಗಲಿದೆ. ಇದು ದೇಶಾದ್ಯಂತ ಜಾರಿಯಾಗಲಿದ್ದು, ನಿರುದ್ಯೋಗಿಗಳಲ್ಲಿ ವಿಶ್ವಾಸ ತುಂಬಲಿದೆ.
ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಸಂಬಳ ಹೆಚ್ಚಿಸುತ್ತೇವೆ. ಸರ್ಕಾರಿ, ಅರೆ ಸರ್ಕಾರಿ ನೌಕರರ ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸುತ್ತೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಉದ್ಯೋಗ ಭದ್ರತಾ ಯೋಜನೆ ಜಾರಿ ಮಾಡುತ್ತೇವೆ ಎಂದು ಕಾಂಗ್ರೆಸ್ ಸಮಾವೇಶದಲ್ಲಿ ರಾಹುಲ್ ಗಾಂಧಿ ಹೇಳಿದರು.
ಇದನ್ನೂ ಓದಿ: ಉದ್ಯೋಗಕ್ಕಾಗಿ ನೀಡುವ ರೆಸ್ಯೂಮ್ ಈ ಕಾರಣಗಳಿಂದ ರಿಜೆಕ್ಟ್ ಆಗಬಹುದು.. ಎಚ್ಚರ!; ಜಾಬ್‌ಗೆ ಶಾರ್ಟ್ ಲಿಸ್ಟ್ ಆಗದಿರಲು ಸಾಮಾನ್ಯ ಕಾರಣಗಳೇನು?; ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ








Leave a Reply