Anganwadi recruitment: ಅಂಗನವಾಡಿ ಹುದ್ದೆಗೆ ಅರ್ಜಿ ಆಹ್ವಾನ

(Anganwadi recruitment) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಕೋಲಾರ ಜಿಲ್ಲೆಯಾದ್ಯಂತ ಇರುವ 6 ಶಿಶು ಅಭಿವೃದ್ಧಿ ಯೋಜನೆಗಳಡಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಬಿಡುಗಡೆ ಮಾಡಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.


ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆ; 17ನೇ ಕಂತಿನ ಹಣ ಬಿಡುಗಡೆ ಯಾವಾಗ?; ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ? ಹೀಗೆ ಚೆಕ್ ಮಾಡಿ


ಹುದ್ದೆಗಳ ವಿವರ:
ಅಂಗನವಾಡಿ ಕಾರ್ಯಕರ್ತೆ- 120
ಅಂಗನವಾಡಿ ಸಹಾಯಕಿ: 393

ವಿದ್ಯಾರ್ಹತೆ:
* ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ 12ನೇ ತರಗತಿ / ಡಿಪ್ಲೊಮ ಇಸಿಸಿಇ / ತತ್ಸಮಾನ ಶಿಕ್ಷಣ ಪಾಸ್‌ ಮಾಡಿರಬೇಕು.
* ಅಂಗನವಾಡಿ ಸಹಾಯಕಿ ಹುದ್ದೆ: 10ನೇ ತರಗತಿ ಉತ್ತೀರ್ಣರಾಗಿರಬೇಕು.

ವಯೋಮಿತಿ:
ಕನಿಷ್ಠ 18 ವರ್ಷ ತುಂಬಿರಬೇಕು. 35 ವರ್ಷ ವಯಸ್ಸು ಮೀರಿರಬಾರದು. ವರ್ಗಾವಾರು ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.


ಇದನ್ನೂ ಓದಿ: 400 ರೂಪಾಯಿಗೆ lpg, 25,000 ಉದ್ಯೋಗ ಭರವಸೆ ನೀಡಿದ ಬಿಜೆಪಿ; ಈ ಘೋಷಣೆ ಯಾರಿಗೆ ಗೊತ್ತಾ?, ಇಲ್ಲಿದೆ ಡಿಟೈಲ್ಸ್


ಅರ್ಜಿ ಸಲ್ಲಿಕೆ ಹೇಗೆ?:
* https://karnemakaone.kar.nic.in/abcd/applicationform_ja_org.aspx ಕ್ಕೆ ಭೇಟಿ ನೀಡಿ.
* ಉದ್ಯೋಗ ಬಯಸುವ ಜಿಲ್ಲೆ- ಶಿಶು ಅಭಿವೃದ್ಧಿ ಯೋಜನೆ (ತಾಲ್ಲೂಕು) – ಅಧಿಸೂಚನೆ ಸಂಖ್ಯೆ – ನೇಮಕಾತಿ ಬಯಸುವ ಹುದ್ದೆಯನ್ನು ಕ್ರಮವಾಗಿ ಆಯ್ಕೆ ಮಾಡಿ.
* ನಂತರ ನೀವು ಅರ್ಜಿ ಸಲ್ಲಿಸಲು ಬಯಸುವ ಅಂಗನವಾಡಿ ಕೇಂದ್ರವನ್ನು ಆಯ್ಕೆ ಮಾಡಬೇಕು.
* ಆನ್‌ ಲೈನ್‌ ಅರ್ಜಿ ಫಾರ್ಮ್‌ ಓಪನ್‌ ಆಗುತ್ತದೆ.
* ಕೇಳಲಾದ ವಿವರಗಳನ್ನು ನೀಡಿ ಅರ್ಜಿ ಹಾಕಿ.
* ಅಗತ್ಯ ದಾಖಲೆಗಳನ್ನು ಆಯಾ ಹೆಸರಿನ ಮುಂದೆ ಇರುವ ಆಯ್ಕೆ ಬಟನ್‌ ಕ್ಲಿಕ್‌ ಮಾಡಿ ಅಪ್‌ಲೋಡ್ ಮಾಡಿರಿ.


ಇದನ್ನೂ ಓದಿ: ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವವರಿಗೆ ಬಂಪರ್ ಜಾಬ್ ಆಫರ್; ರಾಷ್ಟ್ರೀಯ ಪಶು ಪೋಷಣೆ ಮತ್ತು ಶರೀರ ಕ್ರಿಯ ವಿಜ್ಞಾನ ಸಂಸ್ಥೆಯಲ್ಲಿ ಉದ್ಯೋಗ


ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು: 
* ಜನನ ಪ್ರಮಾಣ ಪತ್ರ / ಜನ್ಮ ದಿನಾಂಕ ಇರುವ ಎಸ್‌.ಎಸ್‌.ಎಲ್‌.ಸಿ / ಪಿಯುಸಿ ಅಂಕಪಟ್ಟಿ.
* ವಾಸಸ್ಥಳ ದೃಢೀಕರಣ ಪತ್ರ.
* ವಿದ್ಯಾರ್ಹತೆ ಬಗ್ಗೆ ಪ್ರಮಾಣ ಪತ್ರ.
* ವಿಕಲಚೇತನರಿಗೆ 10 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.
* ಮೀಸಲಾತಿ ಮತ್ತು ಜಾತಿ ಪ್ರಮಾಣ ಪತ್ರ.
* ವಿಧವೆಯಾಗಿದ್ದಲ್ಲಿ ಪತಿಯ ಮರಣ ಪ್ರಮಾಣ ಪತ್ರ.
* ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯಾಗಿದ್ದಲ್ಲಿ ಉಪವಿಭಾಗಾಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ.
* ಯೋಜನಾ ನಿರಾಶ್ರಿತರಾಗಿದ್ದಲ್ಲಿ ಪ್ರಮಾಣ ಪತ್ರ.
* ವಿಚ್ಛೇದಿತರಾಗಿದ್ದಲ್ಲಿ ಪ್ರಮಾಣ ಪತ್ರ.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ:
19-04-2024

Anganwadi recruitment: ಅಂಗನವಾಡಿ ಹುದ್ದೆಗೆ ಅರ್ಜಿ ಆಹ್ವಾನ
Anganwadi recruitment: ಅಂಗನವಾಡಿ ಹುದ್ದೆಗೆ ಅರ್ಜಿ ಆಹ್ವಾನ