(PM-kisan) ಕೇಂದ್ರ ಸರ್ಕಾರದ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 17 ನೇ ಕಂತಿನ ಹಣಕ್ಕಾಗಿ ಕಾಯುತ್ತಿರುವ ರೈತರಿಗೆ ಹಣ ಜಮಾ ಯಾವಾಗ, 17ನೇ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡಿಕೊಳ್ಳುವುದು ಹೇಗೆ ಎಂಬುದರ ಕುರಿತು ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.
ಇದನ್ನೂ ಓದಿ: ಕಾಂಗ್ರೆಸ್ ಗ್ಯಾರಂಟಿಗಳಿಗೆ ಬಿಜೆಪಿ ಠಕ್ಕರ್!; ಮೋದಿ ಕಿ ಗ್ಯಾರಂಟಿ ಹೆಸರಿನಲ್ಲಿ ಬಿಜೆಪಿ ಪ್ರಣಾಳಿಕೆ ರಿಲೀಸ್
ಪಿಎಂ ಕಿಸಾನ್ ಯೋಜನೆಯ 16 ನೇ ಕಂತನ್ನು ರೈತರ ಖಾತೆಗೆ 2024 ರ ಫೆಬ್ರವರಿಯಲ್ಲಿ ಜಮೆ ಆಗಿತ್ತು. ಇದಾಗಿ ತಿಂಗಳೂಗಳು ಕಳೆದಿದ್ದು, ರೈತರು ಮುಂದಿನ ಕಂತಿಗಾಗಿ ಕಾಯುತ್ತಿದ್ದಾರೆ. ಮೂಲಗಳ ಪ್ರಕಾರ, ಪಿಎಂ-ಕಿಸಾನ್ ಯೋಜನೆಯ 17 ನೇ ಕಂತು ಮುಂದಿನ ಮೇ ಕೊನೆಯ ಇಲ್ಲವೇ ಜೂನ್ ತಿಂಗಳಲ್ಲಿ ಕೇಂದ್ರ ಸರ್ಕಾರದಿಂದ ಬಿಡುಗಡೆ ಆಗುವ ನಿರೀಕ್ಷೆಗಳು ಇವೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಉಚಿತ ಪಡಿತರ ಸೇರಿ ಹಲವು ಭರವಸೆ ನೀಡಿದ ಬಿಜೆಪಿ
ವಾರ್ಷಿಕ 6000 ರೂ.ನಂತೆ 16 ಕಂತು ಜಮಾ:
ಕೇಂದ್ರ ಸರ್ಕಾರ ಕೊರೊನಾ ಕಾಲದಲ್ಲಿ PM-KISAN ಯೋಜನೆಯಡಿ ದೇಶದ ರೈತರಿಗೆ ವಾರ್ಷಿಕವಾಗಿ 6,000 ರೂಪಾಯಿ ಹಣವನ್ನು ಮೂರು ಕಂತುಗಳಂತೆ ಅಂದರೆ ಪ್ರತಿ ನಾಲ್ಕು ತಿಂಗಳಿಗೆ ಒಮ್ಮೆ ಜಮೆ ಮಾಡಲು ತೀರ್ಮಾನಿಸಿತ್ತು. ಅದರಂತೆ ಈವರೆಗೆ 16 ಕಂತುಗಳನ್ನು ಕೇಂದ್ರ ಸರ್ಕಾರ ಹಾಕಿದೆ. ಇದೀಗ 17ನೇ ಕಂತನ್ನು ಅರ್ಹ ಫಲಾನುಭವಿಗಳು ಎದುರು ನೋಡುತ್ತಿದ್ದಾರೆ.
ಇದನ್ನೂ ಓದಿ: ಕೃಷಿ ಭೂಮಿಯಲ್ಲಿ ಮನೆ ನಿರ್ಮಾಣಕ್ಕೆ ಬೇಕು ಪರ್ಮಿಷನ್; ಸರ್ಕಾರದ ಹೊಸ ರೂಲ್ಸ್
ಇ-ಕೆವೈಸಿ ಕಡ್ಡಾಯ:
ಕಂತುಗಳನ್ನು ಸ್ವೀಕರಿಸುವ ರೈತರ ಬ್ಯಾಂಕ್ ಖಾತೆಗೆ ಇ-ಕೈವಸಿ ಆಗಿರಬೇಕು. ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ಮೂಲಕ ಪಿಎಂ ಕಿಸಾನ್ ಪೋರ್ಟಲ್ ನಲ್ಲಿ ಇ-ಕೆವೈಸಿ, ಇಲ್ಲ ಬಯೋಮೆಟ್ರಿಕ್ ಆಧಾರದಲ್ಲಿ ಮಾಡಲಾಗುತ್ತದೆ. ಇದು ಆಗಿರದ ಅರ್ಹ ರೈತರು ಕೂಡಲೇ ಹತ್ತಿರದ ಸಿಎಸ್‌ಸಿ ಕೇಂದ್ರಗಳಿಗೆ ಭೇಟಿ ನೀಡುವಂತೆ ಕೇಂದ್ರ ಕೃಷಿ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ರೈತರಿಗೆ ಗುಡ್ ನ್ಯೂಸ್; ಕೇಂದ್ರ ಸರ್ಕಾರದ ಈ ಯೋಜನೆಯಡಿ ಸಿಗಲಿದೆ ಸಹಾಯಧನ!
ಫಲಾನುಭವಿ ಪಟ್ಟಿಯಲ್ಲಿ ಹೆಸರು ಪರಿಶೀಲಿಸಲು ಹೀಗೆ ಮಾಡಿ:
* ನೀವು ಪಟ್ಟಿಯಲ್ಲಿ ಹೆಸರು ಪರಿಶೀಲಿಸಲು ಮೊದಲು ಪಿಎಂ ಕಿಸಾನ್ ಅಧಿಕೃತ ಸೈಟ್ (https://pmkisan.gov.in/) ಭೇಟಿ ಕೊಡಬೇಕು.
* ಪಿಎಂ ಕಿಸಾನ್ ಜಾಲತಾಣದ ಮುಖಪುಟದಲ್ಲಿ ಫಲಾನುಭವಿಗಳ ಪಟ್ಟಿಯನ್ನು ಆಯ್ಕೆ ಮಾಡಬೇಕು
* ನಂತರ ನೀವಿರುವ ರಾಜ್ಯ, ಜಿಲ್ಲೆ, ಉಪಜಿಲ್ಲೆ, ಬ್ಲಾಕ್ ಮತ್ತು ಹಳ್ಳಿ ವಿವರ ಆಯ್ಕೆ ಮಾಡಿಕೊಳ್ಳಿ.
* ಪರದೆ ಮೇಲೆ ಕಾಣುವ ಟ್ಯಾಬ್ ಅನ್ನು ಆಯ್ಕೆ ಮಾಡಿಕೊಳ್ಳಿ.
* ಬಳಿಕ ಪರದೆ ಮೇಲೆ ಕಾಣುವ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಕಾಣಬಹುದು.

ಇದನ್ನೂ ಓದಿ: ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆಯಲ್ಲಿ ಉದ್ಯೋಗ; ನೇರ ಸಂದರ್ಶನ ಮೂಲಕ ಆಯ್ಕೆ







Leave a Reply