(annual salary hike:) ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಕರ್ನಾಟಕ ಸರ್ಕಾರ ಮಹತ್ವದ ಸಿಹಿ ಸುದ್ದಿ ನೀಡಿದ್ದು, ವಾರ್ಷಿಕ ವೇತನ ಬಡ್ತಿ ಪಡೆಯುವ ದಿನಾಂಕಕ್ಕಿಂತ ಒಂದು ದಿನ ಮುಂಚಿತವಾಗಿ ನಿವೃತ್ತಿಯಾಗುವ ನೌಕರರಿಗೂ ‘ಕಾಲ್ಪನಿಕ ವಾರ್ಷಿಕ ವೇತನ ಬಡ್ತಿ’ (Notional Annual Increment) ಮಂಜೂರು ಮಾಡುವ ಐತಿಹಾಸಿಕ ಆದೇಶ ಹೊರಡಿಸಿದೆ.
ಈ ನಿರ್ಧಾರದಿಂದ ನಿವೃತ್ತಿ ಹೊಂದುತ್ತಿರುವ ಸಾವಿರಾರು ಸರ್ಕಾರಿ ನೌಕರರ ಮಾಸಿಕ ಪಿಂಚಣಿ ಹೆಚ್ಚಳವಾಗಲಿದ್ದು, ನಿವೃತ್ತ ನೌಕರರ ವಲಯದಲ್ಲಿ ಸಂತಸ ಮನೆ ಮಾಡಿದೆ.
ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ (KCSR) ನಿಯಮ 51(1) ಪ್ರಕಾರ, ವಾರ್ಷಿಕ ವೇತನ ಬಡ್ತಿಯು ಅದನ್ನು ಗಳಿಸಿದ ದಿನದ ಮರುದಿನದಿಂದ ಜಾರಿಗೆ ಬರುತ್ತಿತ್ತು. ಇದರಿಂದಾಗಿ ಒಂದು ವರ್ಷದ ಅರ್ಹತಾದಾಯಕ ಸೇವೆಯನ್ನು ಪೂರ್ಣಗೊಳಿಸಿದ್ದರೂ, ವೇತನ ಬಡ್ತಿ ಜಾರಿಗೆ ಬರುವ ಹಿಂದಿನ ದಿನವೇ ನಿವೃತ್ತಿಯಾದ ನೌಕರರು ಕೊನೆಯ ವೇತನ ಬಡ್ತಿಯ ಲಾಭದಿಂದ ವಂಚಿತರಾಗುತ್ತಿದ್ದರು. ಪರಿಣಾಮವಾಗಿ ಅವರ ಪಿಂಚಣಿ ಮೊತ್ತವೂ ಕಡಿಮೆಯಾಗುತ್ತಿತ್ತು.
ಈ ಕುರಿತು ಸುಪ್ರೀಂ ಕೋರ್ಟ್ ಹಾಗೂ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ (KSAT) ನೀಡಿದ್ದ ಮಹತ್ವದ ತೀರ್ಪುಗಳನ್ನು ಪರಿಗಣಿಸಿ, ರಾಜ್ಯ ಸರ್ಕಾರ ಜೂನ್ 4ರಂದು (ಆದೇಶ ಸಂಖ್ಯೆ: ಆಇ 3 ಎಸ್ಆರ್ಎಸ್ 2026) ಹೊಸ ಆದೇಶ ಹೊರಡಿಸಿದೆ.
ಹೊಸ ನಿಯಮದ ಪ್ರಮುಖ ಅಂಶಗಳು
ಸರ್ಕಾರದ ಆದೇಶದಂತೆ, ವಾರ್ಷಿಕ ವೇತನ ಬಡ್ತಿ ಪಡೆಯುವ ದಿನಾಂಕದ ಹಿಂದಿನ ದಿನ ನಿವೃತ್ತಿಯಾಗುವ ಅರ್ಹ ನೌಕರರಿಗೆ ಒಂದು ಕಾಲ್ಪನಿಕ ವೇತನ ಬಡ್ತಿ ನೀಡಲಾಗುತ್ತದೆ. ಈ ಬಡ್ತಿಯನ್ನು ಕೊನೆಯ ವೇತನಕ್ಕೆ ಸೇರಿಸಿ ಮಾಸಿಕ ಪಿಂಚಣಿ ಲೆಕ್ಕಾಚಾರ ಮಾಡಲಾಗುತ್ತದೆ.
ಆದರೆ, ಈ ಸೌಲಭ್ಯವು ಕೇವಲ ಪಿಂಚಣಿ ಲೆಕ್ಕಾಚಾರಕ್ಕೆ ಮಾತ್ರ ಅನ್ವಯವಾಗಲಿದ್ದು, ನಿವೃತ್ತಿ ಉಪದನ (DCRG), ಪರಿವರ್ತಿತ ಪಿಂಚಣಿ (Commutation), ಗಳಿಕೆ ರಜೆ ನಗದೀಕರಣ ಸೇರಿದಂತೆ ಇತರ ಯಾವುದೇ ಸೇವಾಂತ್ಯ ಸೌಲಭ್ಯಗಳ ಲೆಕ್ಕಾಚಾರಕ್ಕೆ ಅನ್ವಯಿಸುವುದಿಲ್ಲ.
ಬಾಕಿ ಹಣ ಇಲ್ಲ
ಈ ಆದೇಶದ ಆರ್ಥಿಕ ಪ್ರಯೋಜನಗಳು ಭವಿಷ್ಯವರ್ತಿಯಾಗಿ ಮಾತ್ರ ಜಾರಿಯಾಗಲಿವೆ. ಹೀಗಾಗಿ ಹಿಂದಿನ ಅವಧಿಗೆ ಸಂಬಂಧಿಸಿದ ಯಾವುದೇ ಬಾಕಿ ಹಣ (Arrears) ಪಾವತಿಯಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಅರ್ಹ ಪಿಂಚಣಿದಾರರು ಮೃತಪಟ್ಟಿದ್ದಲ್ಲಿ, ಅವರ ಕುಟುಂಬ ಪಿಂಚಣಿದಾರರಿಗೂ ಈ ಸೌಲಭ್ಯ ದೊರೆಯಲಿದೆ.
ಯಾರಿಗೆ ಅನ್ವಯಿಸುವುದಿಲ್ಲ?
ಸೇವೆಯಲ್ಲಿದ್ದಾಗ ಮೃತಪಟ್ಟ ನೌಕರರಿಗೆ, ಕಡ್ಡಾಯ ನಿವೃತ್ತಿಯ ಶಿಕ್ಷೆಗೆ ಒಳಗಾದವರಿಗೆ ಹಾಗೂ ಸ್ಥಗಿತ ವೇತನ ಬಡ್ತಿ (Stagnation Increment) ಪ್ರಕರಣಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ಸರ್ಕಾರ ತಿಳಿಸಿದೆ.
ನಿಯಮಾವಳಿಗೆ ಶೀಘ್ರ ತಿದ್ದುಪಡಿ
ಹೊಸ ಆದೇಶದ ಅನುಷ್ಠಾನಕ್ಕೆ ಅನುಗುಣವಾಗಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳಿಗೆ ಅಗತ್ಯ ತಿದ್ದುಪಡಿಗಳನ್ನು ಶೀಘ್ರದಲ್ಲೇ ತರಲಾಗುವುದು. ಇನ್ಮುಂದೆ ಪಿಂಚಣಿ ಮಂಜೂರಾತಿ ಪ್ರಾಧಿಕಾರಗಳು ಹಾಗೂ ಮಹಾಲೇಖಪಾಲರ ಕಚೇರಿ ಈ ಹೊಸ ನಿಯಮದ ಅನ್ವಯವೇ ಪಿಂಚಣಿ ನಿಗದಿಪಡಿಸಲಿವೆ ಎಂದು ಸರ್ಕಾರ ತಿಳಿಸಿದೆ.
ರಾಜ್ಯ ಸರ್ಕಾರದ ಈ ನಿರ್ಧಾರ ನಿವೃತ್ತಿ ಹೊಂದುವ ನೌಕರರಿಗೆ ಆರ್ಥಿಕವಾಗಿ ನೆರವಾಗಲಿದ್ದು, ದೀರ್ಘಕಾಲದಿಂದ ಇದ್ದ ಬೇಡಿಕೆಗೆ ಸ್ಪಂದಿಸಿದ ಕ್ರಮವೆಂದು ನೌಕರರ ಸಂಘಗಳು ಸ್ವಾಗತಿಸಿವೆ.

ಇತ್ತೀಚಿನ ಜನಪ್ರಿಯ ಸುದ್ದಿಗಳು (annual salary hike:)
-
- ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
- ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
- ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
- ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
- ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
- ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ
- ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ; 11 ನೇ ಕಂತಿನ ಹಣ ಪಡೆಯಲು ಈ ಪತ್ರ ಕಡ್ಡಾಯ
- ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ
- 31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್
- ವಾಹನ ಸವಾರರೇ ಗಮನಿಸಿ; ಆಗಸ್ಟ್ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?






Leave a Reply