(Gold Loan) ಬ್ಯಾಂಕ್ ನಲ್ಲಿ ಚಿನ್ನ ಅಡವಿಟ್ಟಿರುವವರಿಗೆ ಸರ್ಕಾರದಿಂದ ಬಿಗ್ ರಿಲೀಫ್ ಸಿಕ್ಕಿದೆ. ಹೌದು, ಬ್ಯಾಂಕ್ ಗಳಲ್ಲಿ ಚಿನ್ನದ ಮೇಲಿನ ಸಾಲದ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಹಾಗಾದರೆ ಯಾವ ಬದಲಾವಣೆ ಎಂಬುದು ಸಂಪೂರ್ಣ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಈ ಜಿಲ್ಲೆಯ ಅಂಗನವಾಡಿ ಹುದ್ದೆಗೆ ಅರ್ಜಿ ಆಹ್ವಾನ; 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ
ಚಿನ್ನದ ಮೇಲಿನ ಸಾಲದ ನಿಯಮಗಳ ಸಡಿಲಿಕೆ!:
ಚಿನ್ನವನ್ನು ಅಡವಿಟ್ಟು ಬ್ಯಾಂಕ್ ಗಳಲ್ಲಿ ಅಥವಾ ಇತರ ಹಣಕಾಸು ಸಂಸ್ಥೆಗಳಲ್ಲಿ ಸಾಲ ಪಡೆಯಲಾಗುತ್ತದೆ. ಚಿನ್ನದ ಮೇಲಿನ ಸಾಲಕ್ಕೆ ಸಿಬಿಲ್ ಸ್ಕೋರ್ ಅಗತ್ಯವು ಇರುವುದಿಲ್ಲ. ಹೀಗಾಗಿ ಚಿನ್ನದ ಸಾಲವನ್ನು ಸುಲಭ ಸಾಲ ಎಂದು ಪರಿಗಣಿಸಲಾಗುತ್ತದೆ. ಇದೀಗ ಹಣಕಾಸು ಸಂಸ್ಥೆಗಳಲ್ಲಿ ಚಿನ್ನವನ್ನು ಆಡವಿಟ್ಟರೆ ಇರುವ ನಿಯಮಗಳಲ್ಲಿ ಸಡಿಲಿಕೆ ಮಾಡಲಾಗಿದೆ. ಸಹಕಾರಿ ಸಂಘಗಳಲ್ಲಿ ಅಂದರೆ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಗಳಲ್ಲಿ ಬಂಗಾರದ ಮೇಲಿನ ಸಾಲದ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.
ಏನದು ಬದಲಾವಣೆ:
* ಗ್ರಾಹಕರು ಅಡ ಇಟ್ಟ ಚಿನ್ನದ ಮೇಲೆ ಸಾಲ ತೆಗೆದುಕೊಳ್ಳುವಾಗ ಬೇರೆ ಯಾವುದೇ ರೀತಿಯ ಅಡಮಾನ ಅಥವಾ ಗ್ಯಾರಂಟಿ ಕೊಡಬೇಕಾದ ಅಗತ್ಯ ಇಲ್ಲ.
* ಚಿನ್ನದ ಮೇಲಿನ ಗರಿಷ್ಠ ಸಾಲದ ಮಿತಿಯನ್ನು ಇದೀಗ ನಾಲ್ಕು ಲಕ್ಷ ರೂಪಾಯಿಗಳ ವರೆಗೆ ಹೆಚ್ಚಿಸಲಾಗಿದೆ.
* ಚಿನ್ನದ ಮೇಲಿನ ಸಾಲಕ್ಕೆ ಅಸಲು ಪಾವತಿ ಮಾಡುವವರೆಗೂ ಕೇವಲ ಬಡ್ಡಿಯನ್ನು ಕಟ್ಟಿದರೆ ಸಾಕು. ಒಂದು ವೇಳೆ ಅಸಲು ಪಾವತಿ ಮಾಡದಿದ್ದರೆ ಬ್ಯಾಂಕ್ ನಿಮ್ಮನ್ನ ಪ್ರಶ್ನಿಸುವಂತಿಲ್ಲ. ಆದರೆ ಸರಿಯಾಗಿ ಬಡ್ಡಿ ಪಾವತಿ ಮಾಡಬೇಕು.
ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆ; 17ನೇ ಕಂತಿನ ಹಣ ಬಿಡುಗಡೆ ಯಾವಾಗ?; ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ? ಹೀಗೆ ಚೆಕ್ ಮಾಡಿ
ಅಂದರೆ ಸಾಲ ಪಡೆದ ನಂತರ ಅಸಲು ಮತ್ತು ಬಡ್ಡಿ 2 ಸೇರಿಸಿ ಬರುವ ಈ ಎಮ್‌ಐ ಮೊತ್ತವನ್ನು ಪಾವತಿಸುವ ಅಗತ್ಯ ಇಲ್ಲ. ಅದರಲ್ಲಿ ಕೇವಲ ಬಡ್ಡಿಯನ್ನೇ ನೀವು ಪಾವತಿ ಮಾಡಿಕೊಂಡು ಹೋಗಬಹುದು.
ಇದೀಗ ನಗರದ ಕೋ ಆಪರೇಟಿವ್ ಬ್ಯಾಂಕ್ ಗಳಲ್ಲಿ ತಂದಿರುವ ಈ ಬದಲಾವಣೆಗಳು ನಿಜಕ್ಕೂ ಹಣದ ಅವಶ್ಯಕತೆ ಇದ್ದಾಗ ಚಿನ್ನವನ್ನ ಅಡವಿಟ್ಟು ಸಾಲ ತೆಗೆದುಕೊಳ್ಳುವವರಿಗೆ ಬಹಳ ದೊಡ್ಡ ರಿಲೀಫ್ ನೀಡಿದೆ ಎನ್ನಬಹುದು.








Leave a Reply