Resume: ನಿಮ್ಮ ರೆಸ್ಯೂಮ್‌ ಈ ಕಾರಣಗಳಿಂದ ರಿಜೆಕ್ಟ್‌ ಆಗಬಹುದು

(Resume) ನೀವು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದಾಗ ಯಾವುದೇ ಉದ್ಯೋಗದಾತರು ನೋಡಲು ಬಯಸುವ ಮೊದಲ ವಿಷಯವೆಂದರೆ ರೆಸ್ಯೂಮ್. ಉದ್ಯೋಗ ಹುಡುಕುವವರು ರೆಸ್ಯೂಮ್ ಗೆ ಸಾಕಷ್ಟು ಮಹತ್ವ ನೀಡಬೇಕು. ಯಾಕೆಂದರೆ ಒಂದು ಉದ್ಯೋಗಕ್ಕೆ ಕಂಪನಿ ನಿರೀಕ್ಷಿತ ಅರ್ಹತೆಗಳೆಲ್ಲವೂ ಇರುವ ಬಯೋಡಾಟಾವನ್ನು ನೋಡಿದ ನಂತರವೇ ಆ ವ್ಯಕ್ತಿಯನ್ನು ಸಂದರ್ಶನಕ್ಕೆ ಆಹ್ವಾನಿಸುವುದು. ಹಾಗಾಗಿ ರೆಸ್ಯೂಮ್ ಗೆ ಸಾಕಷ್ಟು ಮಹತ್ವ ನೀಡಬೇಕು.


ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆ; 17ನೇ ಕಂತಿನ ಹಣ ಬಿಡುಗಡೆ ಯಾವಾಗ?; ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ? ಹೀಗೆ ಚೆಕ್ ಮಾಡಿ


ರೆಸ್ಯೂಮ್ ನಲ್ಲಿ ಯಾವುದೇ ಕಂಪನಿಯಲ್ಲಿ ಲಭ್ಯ ಹುದ್ದೆಗೆ ಬೇಕಾದ ಸ್ಕಿಲ್, ವಿದ್ಯಾರ್ಹತೆ, ಅನುಭವ, ಆಸಕ್ತಿ, ಸರಿಹೊಂದುವ ಅಂಶಗಳು ಎಲ್ಲವೂ ಇರುವಂತೆ ನೋಡಿಕೊಂಡಾಗ ಮಾತ್ರ ಆ ರೆಸ್ಯೂಮ್ ಶಾರ್ಟ್ ಲಿಸ್ಟ್ ಆಗುತ್ತದೆ. ನಂತರ ಆ ವ್ಯಕ್ತಿ ಸಂದರ್ಶನಕ್ಕೆ ಆಹ್ವಾನಿತರಾಗುವಲ್ಲಿ ಸಂಶಯವೇ ಇಲ್ಲ. ನೀವು ಸಹ ಈ ಅಂಶಗಳನ್ನೆಲ್ಲ ಗಮನದಲ್ಲಿ ಇಟ್ಟುಕೊಂಡು ರೆಸ್ಯೂಮ್ ಸಿದ್ಧಗೊಳಿಸಿಯೂ ಸಹ ನಿಮ್ಮ ರೆಸ್ಯೂಮ್ ಶಾರ್ಟ್ ಲಿಸ್ಟ್ ಆಗುತ್ತಿಲ್ಲ ಎಂದಾದಲ್ಲಿ ಅದಕ್ಕೆ ಕೆಲವು ಕಾರಣಗಳು ಇರುತ್ತವೆ.


ಇದನ್ನೂ ಓದಿ: 400 ರೂಪಾಯಿಗೆ lpg, 25,000 ಉದ್ಯೋಗ ಭರವಸೆ ನೀಡಿದ ಬಿಜೆಪಿ; ಈ ಘೋಷಣೆ ಯಾರಿಗೆ ಗೊತ್ತಾ?, ಇಲ್ಲಿದೆ ಡಿಟೈಲ್ಸ್


ನಿಮ್ಮ ರೆಸ್ಯೂಮ್ ಶಾರ್ಟ್ ಲಿಸ್ಟ್ ಆಗದಿರಲು ಈ ಕಾರಣಗಳಿರುತ್ತವೆ..!:

  • ಪ್ರತಿ ಕಂಪನಿಗಳು ಹುದ್ದೆಗೆ ಬೇಕಾದ ಮಾನದಂಡ, ಸ್ಕಿಲ್, ಕಾರ್ಯಾನುಭವ, ವಿದ್ಯಾರ್ಹತೆಯ ಅಪ್ಲಿಕಂಟ್ ಟ್ರ‍್ಯಾಕಿಂಗ್ ಸಿಸ್ಟಮ್ ಅನ್ನು ಹೊಂದಿರುತ್ತವೆ. ಅದಕ್ಕೆ ಸರಿಹೊಂದದ ರೆಸ್ಯೂಮ್ ನಿಮ್ಮದ್ದಾಗಿದ್ದರೆ ಶಾರ್ಟ್ ಲಿಸ್ಟ್ ಆಗುವುದಿಲ್ಲ.
  • ನಿಮ್ಮ ಬಯೋಡಾಟಾ ಹುದ್ದೆಗೆ ಬೇಕಾದ ಎಲ್ಲಾ ಅರ್ಹತೆ ಹೊಂದಿದ್ದರೂ ಸಹ ಸಾಕಷ್ಟು ತಪ್ಪುಗಳಿಂದ ಕೂಡಿದ್ದರೆ ರೆಸ್ಯೂಮ್ ಶಾರ್ಟ್ ಲಿಸ್ಟ್ ಮಾಡುವುದೇ ಇಲ್ಲ.
  • ನಿಮ್ಮ ಸಿವಿಯಲ್ಲಿನ ಮಾಹಿತಿಗಳು ಶಿಕ್ಷಣ ಮುಗಿಸಿದ ಅವಧಿಯಿಂದ ಕಾರ್ಯಾನುಭವದ ವರೆಗೆ ವರ್ಷಗಳ ಮಾಹಿತಿ ಸರಿಯಾದ ಕ್ರಮದಲ್ಲಿ ಇರಬೇಕು. ಇದು ಸರಿಯಾಗಿಲ್ಲದಿದ್ದರೂ ರೆಸ್ಯೂಮ್ ರಿಜೆಕ್ಟ್ ಆಗುವುದರಲ್ಲಿ ಸಂಶಯವಿಲ್ಲ.
  •  ಯಾವುದೇ ಕಂಪನಿಯ ಉದ್ಯೋಗಕ್ಕೆ ನಿಮ್ಮ ಬಯೋಡಾಟಾ ಕಳುಹಿಸುವ ಮೊದಲು, ಆ ಕಂಪನಿಯ ಹುದ್ದೆಗೆ ಬೇಕಾದ ಅಗತ್ಯ ಕೌಶಲ್ಯ, ಅರ್ಹತೆಗಳನ್ನು ಬರೆದು ಕಳುಹಿಸಬೇಕು. ಜೆನೆರಲ್ ರೆಸ್ಯೂಮ್ ನಿಮ್ಮದ್ದಾಗಿದ್ದರೆ ರಿಜೆಕ್ಟ್ ಆಗುತ್ತದೆ. ಅಂದರೆ ಹುದ್ದೆಗೆ ಬೇಕಾದ ಎಲ್ಲಾ ಅಗತ್ಯ ಸ್ಕಿಲ್ ಸೆಟ್ ನಮೂದಿಸಲು ಮರೆಯಬಾರದು.

ಇದನ್ನೂ ಓದಿ: ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವವರಿಗೆ ಬಂಪರ್ ಜಾಬ್ ಆಫರ್; ರಾಷ್ಟ್ರೀಯ ಪಶು ಪೋಷಣೆ ಮತ್ತು ಶರೀರ ಕ್ರಿಯ ವಿಜ್ಞಾನ ಸಂಸ್ಥೆಯಲ್ಲಿ ಉದ್ಯೋಗ


  • ನಿಮ್ಮ ಲೇಟೆಸ್ಟ್ ಬಯೋಡಾಟಾವು ನಿಮ್ಮ ಜಾಬ್ ರೋಲ್ ನಿಂದ ಯಾವೆಲ್ಲ ಸಾಧನೆ ಮಾಡಿದ್ದೀರಿ, ಮುಂದಿನ ಗುರಿ, ಪ್ರೋಗ್ರೆಸ್ ಏನು ಎಂದು ಹೇಳಬೇಕು. ಈ ಅಂಶಗಳಿಲ್ಲದಿದ್ದಲ್ಲಿ ಶಾರ್ಟ್ ಲಿಸ್ಟ್ ಕಷ್ಟ ಸಾಧ್ಯ.
  • ಪ್ರಸ್ತುತ ದಿನಗಳಲ್ಲಿ ಉದ್ಯೋಗಾಕಾಂಕ್ಷಿಯ ಆನ್ ಲೈನ್ ಪ್ರಸ್ತುತತೆ ಹೇಗಿದೆ ಎಂದು ಚೆಕ್ ಮಾಡುತ್ತಾರೆ. ಹುದ್ದೆಗೆ ಸಂಬಂಧಿಸಿದಂತೆ ನಿಮ್ಮ ಆನ್ ಲೈನ್ ಪ್ರೊಫೈಲ್ ಇಲ್ಲದಿದ್ದಲ್ಲಿ ಜಾಬ್ ಗೆ ಆಯ್ಕೆ ಆಗುವುದು ಕಷ್ಟವೇ.
  • ಕೆಲವೊಮ್ಮೆ ನೀವು ನೀಡಿದ ತಪ್ಪಾದ ದೂರವಾಣಿ ಸಂಖ್ಯೆ, ಇ-ಮೇಲ್ ವಿಳಾಸ, ವಾಸಸ್ಥಳ, ಹಿಂದಿನ ಕಂಪನಿಯ ವಿಳಾಸಗಳಿಂದಲೂ ನೀವು ಜಾಬ್ ಕಳೆದುಕೊಳ್ಳುವ ಅವಕಾಶಗಳಿವೆ.
  • ರೆಸ್ಯೂಮ್ ನಲ್ಲಿ ವಿದ್ಯಾರ್ಹತೆ, ಕಾರ್ಯಾನುಭವ (ಕಾಲಾನುಕ್ರಮದಲ್ಲಿ), ಅರ್ಹತೆ, ಸ್ಕಿಲ್ ಗಳು ಮುಖ್ಯ. ಕನಿಷ್ಠ 2 ಪುಟದ ರೆಸ್ಯೂಮ್ ಇರಬೇಕು. ಅದಕ್ಕಿಂತ ಸುದೀರ್ಘವಾದ ರೆಸ್ಯೂಮ್ ಅನಗತ್ಯ.
  • ಉದ್ಯೋಗ ಆಕಾಂಕ್ಷಿಗಳು ಯಾವುದೇ ಜಾಬ್ ಗೆ ತಮ್ಮ ರೆಸ್ಯೂಮ್ ಅನ್ನು ಕಂಪನಿ ನೀಡಿದ ನಿಗದಿತ ಅವಧಿಯೊಳಗೆ ಕಳುಹಿಸಬೇಕು. ನಂತರ ಕಳುಹಿಸಿದ ರೆಸ್ಯೂಮ್ ಗಳು ಸಹ ರಿಜೆಕ್ಟ್ ಆಗುತ್ತವೆ.

ಇದನ್ನೂ ಓದಿ: ಕಾಂಗ್ರೆಸ್ ಗ್ಯಾರಂಟಿಗಳಿಗೆ ಬಿಜೆಪಿ ಠಕ್ಕರ್!; ಮೋದಿ ಕಿ ಗ್ಯಾರಂಟಿ ಹೆಸರಿನಲ್ಲಿ ಬಿಜೆಪಿ ಪ್ರಣಾಳಿಕೆ ರಿಲೀಸ್


ಈ ಮೇಲಿನ ಎಲ್ಲಾ ಕಾರಣಗಳು ಸಹ ನಿಮ್ಮ ರೆಸ್ಯೂಮ್ ಶಾರ್ಟ್ ಲಿಸ್ಟ್ ಆಗುವಲ್ಲಿ ತಡೆನೀಡುವುದು ಖಂಡಿತ. ಆದ್ದರಿಂದ ಉದ್ಯೋಗಕ್ಕಾಗಿ ನಿಮ್ಮ ಆಸಕ್ತ ಕ್ಷೇತ್ರದ, ನಿಮ್ಮ ಆಸಕ್ತ ಕಂಪನಿಯ, ನಿಮ್ಮ ಆಸಕ್ತ ಜಾಬ್ ರೋಲ್‌ನ ಬಗ್ಗೆ ಗಮನಹರಿಸಿ, ಯಾವುದೇ ತಪ್ಪುಗಳು ಇಲ್ಲದಂತೆ ರೆಸ್ಯೂಮ್ ಸಿದ್ಧ ಮಾಡಬೇಕು.

Resume: ನಿಮ್ಮ ರೆಸ್ಯೂಮ್‌ ಈ ಕಾರಣಗಳಿಂದ ರಿಜೆಕ್ಟ್‌ ಆಗಬಹುದು
Resume: ನಿಮ್ಮ ರೆಸ್ಯೂಮ್‌ ಈ ಕಾರಣಗಳಿಂದ ರಿಜೆಕ್ಟ್‌ ಆಗಬಹುದು