ಹಾಸನ: (ನ್ಯೂಸ್ ಮಲ್ನಾಡ್ ವರದಿ) ಸಾಲಬಾಧೆಯಿಂದ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆಯಲ್ಲಿ ನಡೆದಿದೆ. ಹಿರಿಸಾವೆ ಗ್ರಾಮದ ಶಾಂತಕುಮಾರ್ (42) ಮತ್ತು ಶೀಲ (38) ಆತ್ಮಹತ್ಯೆ ಮಾಡಿಕೊಂಡ ದಂಪತಿ.
ಇದನ್ನೂ ಓದಿ; ಕ್ಷುಲ್ಲಕ ಕಾರಣಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ
ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 775 ಸಾವಿರ, ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ 73 ಲಕ್ಷ ಮತ್ತು ಸ್ತ್ರೀ ಶಕ್ತಿ ಸಂಘಗಳಲ್ಲಿ ಸಾಲ ಮಾಡಿದರೆನ್ನಲಾಗಿದ್ದು, ಸಾಲದ ಬಡ್ಡಿ ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಅಣ್ಣ ಗೋಪಾಲ ಹಿರೀಸಾವೆ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ವರುಣನ ಅಬ್ಬರ, ಸೇತುವೆ ಮುಳುಗಡೆ
- ಪ್ರೇಯಸಿ ಮೇಲೆ ಮಚ್ಚಿನಿಂದ ಹಲ್ಲೆ; ಕಲ್ಯಾಣಿಗೆ ಜಿಗಿದು ಪ್ರಾಣಬಿಟ್ಟ ಯುವಕ
- ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಬಾರದೆ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಸಾವು
ಭೀಕರ ಅಪಘಾತ, ಅತ್ತೆ-ಸೊಸೆ ಸಾವು
ಹಾಸನ: ದಾವಣೆಗೆರೆಯಿಂದ ಮನೆಯ ಗೃಹ ಪ್ರವೇಶ ಮುಗಿಸಿಕೊಂಡು ವಾಪಸ್ ಬರುವಾಗ ಟಿಪ್ಪರ್ ಲಾರಿಯೊಂದು ಓವರ್ ಟೇಕ್ ಮಾಡಲು ಹೋಗಿ ಚಲಿಸುತ್ತಿದ್ದ ಕಾರಿಗೆ ಟಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ಕು ಜನರಲ್ಲಿ ಅತ್ತೆ ಮತ್ತು ಸೊಸೆ ಇಬ್ಬರು ಸಾವನಪ್ಪಿದ ಘಟನೆ ಚನ್ನಗಿರಿ ಬಳಿ ನಡೆದಿದೆ.
ಬಾಳುಪೇಟೆಯ ಕಾಫಿ ಪ್ಲಾಂಟರ್ ಮತ್ತು ಸಹ್ಯಾದ್ರಿ ಥೀಯೇಟರ್ ಮಾಲೀಕರಾಗಿದ್ದ ಬಿ.ಎಸ್. ಗುರುನಾಥ್ ಅವರ ಪತ್ನಿ ಮೈತ್ರಿದೇವಿ 70 ವರ್ಷ ಹಾಗೂ ಸೊಸೆ ಸೌಜನ್ಯ (48) ಎಂಬುವರೇ ರಸ್ತೆ ಅಪಘಾಶದಲ್ಲಿ ಸಾವನಪ್ಪಿದ ದುರ್ದೈವಿಗಳು.
ಇದನ್ನೂ ಓದಿ; ಎರಡು ಬಸ್ ಮಧ್ಯೆ ಭೀಕರ ಅಪಘಾತ; ಇಬ್ಬರು ಸಾವು
ನಗರದ ಮಲ್ಲಿಗೆ ಹೊಟೇಲ್ ಬಳಿಯಿರುವ ಮನೆಯಲ್ಲಿ ವಾಸವಿರುವ ಬಿ.ಎಸ್. ಗುರುನಾಥ್ ಅವರ ಮಗಳ ಹೊಸ ಮನೆ ಗೃಹ ಪ್ರವೇಶಕ್ಕೆಂದು ಕಾರಿನಲ್ಲಿ ಹಾಸನದಿಂದ ದಾವಣಗೆರೆಗೆ ತೆರಳಿದ್ದರು ಎನ್ನಲಾಗಿದೆ.
ಕಾರ್ಯಕ್ರಮ ಮುಗಿಸಿಕೊಂಡು ಹಾಸನಕ್ಕೆ ವಾಪಸ್ ತೆರಳುವಾಗ ಚನ್ನಗಿರಿ ಬಳಿ ಟಿಪ್ಸರ್‌ಲಾರಿ ವಾಹನದ ಚಾಲಕ ಅತೀ ವೇಗದಲ್ಲಿ ಓವರ್ ಟೇಕ್ ಮಾಡುವ ಅವಸರದಲ್ಲಿ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರು ಪಲ್ಟಿಯಾಗಿ ರಸ್ತೆಗೆ ಉರುಳಿದೆ.
ಇದನ್ನೂ ಓದಿ; ಎಸ್.ಎಸ್.ಎಲ್.ಸಿ ಫಲಿತಾಂಶ: ಚಿಕ್ಕಮಗಳೂರು ಜಿಲ್ಲೆಗೆ ಎಷ್ಟನೇ ಸ್ಥಾನ?
ಈ ವೇಳೆ ಕಾರಿನಲ್ಲಿ ಮುಂಭಾಗ ಕುಳಿತ್ತಿದ್ದ ಬಿ.ಎಸ್. ಗುರುನಾಥ್ ಹಾಗೂ ಪುತ್ರ ರಾಜೇಶ್ ಇಬ್ಬರೂ ಸೇಫ್ಟಿ ಬೆಲ್ಟ್ ಹಾಕಿಕೊಂಡಿದ್ದರು. ಇನ್ನು ಕಾರು ಚಾಲನೆ ಮಾಡುತ್ತಿದ್ದ ರಾಜೇಶ್ ಅವರಿಗೂ ಕೂಡ ಗಾಯಗಳಾಗಿವೆ. ಗುರುನಾಥ್ ಅವರಿಗೆ ಗಾಯಗಳಾಗಿದ್ದು, ಹಿಂಬದಿ ಕುಳಿತಿದ್ದ ಗುರುನಾಥ್ ಪತ್ನಿ ಮೈತ್ರಿದೇವಿ ಮತ್ತು ಸೊಸೆ ಸೌಜನ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.