ಹಣಕ್ಕಾಗಿ ಯುವತಿಯ ಕಿಡ್ನ್ಯಾಪ್

ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಹಣಕ್ಕಾಗಿ ಯುವತಿಯೊಬ್ಬಳನ್ನು ಕಿಡ್ನ್ಯಾಪ್ ಮಾಡಿರುವ ಘಟನೆ ಶಿವಮೊಗ್ಗದ ಜಯನಗರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ವರದಿಯಾಗಿದೆ.

ಇದನ್ನೂ ಓದಿ; ಬೈಕ್‌ಗೆ ಆಂಬ್ಯುಲೆನ್ಸ್ ಡಿಕ್ಕಿ; ಸವಾರ ಸ್ಥಳದಲ್ಲೇ ಸಾವು

ಇದನ್ನೂ ಓದಿ; ಸಾಲಬಾಧೆ ತಾಳಲಾರದೆ ದಂಪತಿ ಆತ್ಮಹತ್ಯೆ

ರಂಜಿತಾ. ಬಿ, (22) ಯುವತಿಯನ್ನ ಶಿವಮೊಗ್ಗದಿಂದ ನಿನ್ನೆ ಸಂಜೆ 5 ಗಂಟೆಯಿಂದ ರಾತ್ರಿ 9:30 ರ ಮಧ್ಯಾವಧಿಯಲ್ಲಿ ಹಣಕ್ಕಾಗಿ ಯಾರೋ ದುಷ್ಕರ್ಮಿಗಳು ಅಪಹರಣ ಮಾಡಿದ್ದಾರೆ.

ಕಿಡ್ನ್ಯಾಪ್ ಆದ ರಂಜಿತಾ.ಬಿ ಸುಮಾರು 5.1 ಅಡಿ ಎತ್ತರ, ಬಿಳಿ ಮೈಬಣ್ಣ, ತೆಳ್ಳನೆಯ ಮೈಕಟ್ಟು ಹೊಂದಿದ್ದು, ಕಾಣೆಯಾದ ವೇಳೆ ನೇವಿ ಬ್ಲೂ ಬಣ್ಣದ ಚೂಡಿದಾರ್ ಧರಿಸಿದ್ದಾಳೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು


ಇವರ ಸುಳಿವು ಯಾರಿಗಾದರೂ ಸಿಕ್ಕಲ್ಲಿ ಜಯನಗರ ಪೊಲೀಸ್ ಠಾಣೆ ಶಿವಮೊಗ್ಗ, ಜಿಲ್ಲಾ ನಿಸ್ತಂತು ಕೇಂದ್ರ ಅಥವಾ ಪೊಲೀಸ್ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 08182-261400/261413/261416 ನ್ನು ಸಂಪರ್ಕಿಸಬಹುದೆಂದು ಜಯನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ; ಸೋಲಿನಿಂದ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳುವುದಿಲ್ಲ

ಸ್ನೇಕ್ ಕಿರಣ್ ಆಸ್ಪತ್ರೆಗೆ ದಾಖಲು

ಶಿವಮೊಗ್ಗ: ಉರಗ ಸಂರಕ್ಷಕ ಹಾವು ಕಡಿತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ ಸ್ನೇಕ್ ಕಿರಣ್ ಹಾವು ಕಡಿತಕ್ಕೆ ಒಳಗಾದವರು.

ನಗರದ ಹೊರಭಾಗವಾಗಿರುವ ತಾವರೆ ಚಟ್ನಹಳ್ಳಿಯಲ್ಲಿ ಹಾವು ಬಂದಿದೆ ಎಂದು ಕರೆ ಬಂದ ಹಿನ್ನಲೆಯಲ್ಲಿ ಹಾವು ಹಿಡಿಯಲು ಸ್ನೇಕ್ ಕಿರಣ್ ಮುಂದಾಗಿದ್ದಾರೆ. ಹಾವು ಹಿಡಿಯಲು ಮುಂದಾದಾಗ ಪೊದೆ ಒಳಗೆ ನುಗ್ಗಿದೆ.

ಇದನ್ನೂ ಓದಿ; ಭೀಕರ ಅಪಘಾತ, ಅತ್ತೆ-ಸೊಸೆ ಸಾವು

ಸ್ನೇಕ್ ಕಿರಣ್ ಶೂ ಹಾಕದೆ ಬಂದಿದ್ದೂ, ಕಾಲಿಗೆ ಸರಿಯಾಗಿ ಕೊಳಕಮಂಡಲ ಹಾವು ಕಚ್ಚಿದೆ. ತಕ್ಷಣ ನಂಜಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.