ತುಮಕೂರು/ಹಾಸನ: (ನ್ಯೂಸ್ ಮಲ್ನಾಡ್ ವರದಿ) ಪ್ರೀತಿಯಲ್ಲಿ ಬಿರುಕು ಮೂಡಿದ ಕಾರಣ ಪ್ರೇಯಸಿಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರಿನ ಚಿಕ್ಕನಾಯಕನಹಳ್ಳಿ ಹುಳಿಯಾರು ಪ್ರದೇಶ ಯಳನಾಡು ಗ್ರಾಮದಲ್ಲಿ ನಡೆದಿದೆ. ವಿನಯಕುಮಾರ್ (26) ಆತ್ಮಹತ್ಯೆಗೆ ಶರಣಾದ ಯುವಕ.
ಇದನ್ನೂ ಓದಿ; ಎಸ್.ಎಸ್.ಎಲ್.ಸಿ ಫಲಿತಾಂಶ: ಚಿಕ್ಕಮಗಳೂರು ಜಿಲ್ಲೆಗೆ ಎಷ್ಟನೇ ಸ್ಥಾನ?
ಇದನ್ನೂ ಓದಿ; ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿ
ಮೃತ ವಿನಯಕುಮಾರ್ ಅದೇ ಗ್ರಾಮದ ಕಲ್ಲೇಗೌಡರ ಪುತ್ರಿ 17 ವರ್ಷದ ಅಪ್ರಾಪ್ತೆಯನ್ನು ಪ್ರೀತಿಸುತ್ತಿದ್ದನು. ಅಪ್ರಾಪ್ತೆ ದೊಡ್ಡಬಿದರೆ ಗ್ರಾಮದ ನಿವಾಸಿಯಾಗಿದ್ದು, ತಾಯಿ ಜೊತೆ ಭಟ್ಟರಹಳ್ಳಿಯ ಅಜ್ಜಿ ಮನೆಯಲ್ಲಿ ವಾಸವಾಗಿದ್ದಳು.
ವಿನಯಕುಮಾರ್ ಗ್ರಾಮದ ಸಿದ್ದರಾಮೇಶ್ವರ ದೇವಸ್ಥಾನದಲ್ಲಿ ಅರ್ಚಕನಾಗಿ ಕೆಲಸ ಮಾಡಿಕೊಂಡಿದ್ದನು. ದೇವಸ್ಥಾನಕ್ಕೆ ಬಂದ ವೇಳೆ ವಿನಯಕುಮಾರ್ ಮತ್ತು ಅಪ್ರಾಪ್ತೆಗೂ ಲವ್ ಆಗಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಮತದಾನ ಮಾಡಿ ಹೊರ ಬರುತ್ತಿದ್ದಂತೆ ಹೃದಯಾಘಾತದಿಂದ ವ್ಯಕ್ತಿ ಮೃತ್ಯು
- ರಕ್ತದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದರೆ ಕೈಕಾಲುಗಳ ಬೆರಳುಗಳಲ್ಲಿ ಹೀಗೆಲ್ಲಾ ಸಮಸ್ಯೆ ಬರುತ್ತೆ!
- ಇಬ್ಬರ ಹೆಸರು ಬರೆದಿಟ್ಟು ಚಿನ್ನಾಬೆಳ್ಳಿ ವ್ಯಾಪಾರಿ ಆತ್ಮಹತ್ಯೆ
ಅಂತರ ಕಾಯ್ದುಕೊಂಡಿದ್ದ ಪ್ರೇಯಸಿ:
ಪ್ರೇಯಸಿ ತನ್ನಿಂದ ಅಂತರ ಕಾಯ್ದುಕೊಂಡಿದ್ದಕ್ಕೆ ಕೋಪಗೊಂಡಿದ್ದ ವಿನಯಕುಮಾರ್ ಗುರುವಾರ ಬೆಳಗಿನ ಜಾವ ಆಕೆಯ ಮನೆಗೆ ನುಗ್ಗಿದ್ದಾನೆ. ಮಚ್ಚಿನಿಂದ ಪ್ರೇಯಸಿ ಮೇಲೆ ಮಾರಣಾಂತಿಕ ದಾಳಿ ನಡೆಸಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಗಾಯಗೊಂಡಿರುವ ಅಪ್ರಾಪ್ತೆ ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಇದನ್ನೂ ಓದಿ; ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ

ಗ್ರಾಮದ ಕಲ್ಯಾಣಿಯಲ್ಲಿ ಯುವಕನ ಶವ ಪತ್ತೆ:
ಹಲ್ಲೆಯ ಬಳಿಕ ಗ್ರಾಮಸ್ಥರು ವಿನಯಕುಮಾರ್ ಗಾಗಿ ಹುಡುಕಾಟ ನಡೆಸಿದಾಗ ಆತನ ಟೀ ಶರ್ಟ್ ಕಲ್ಯಾಣಿ ಬಳಿ ಪತ್ತೆಯಾಗಿದೆ. ಕಲ್ಯಾಣಿ ಪರಿಶೀಲನೆ ನಡೆಸಿದಾಗ ವಿನಯಕುಮಾರ್ ಶವ ಪತ್ತೆಯಾಗಿದೆ. ನಂತರ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವು
ಚಿಕ್ಕಮಗಳೂರು: ಕಾರು ಹಾಗೂ ಟಿಟಿ ವಾಹನ ಮುಖಾಮುಖಿ ಡಿಕ್ಕಿಯಾಗಿ, ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಡೂರು ತಾಲೂಕಿನಲ್ಲಿ ನಡೆದಿದೆ.

ಬೆಂಗಳೂರು ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 206 ರ ಮತಿಘಟ್ಟ ಕ್ರಾಸ್ ಬಳಿಯಲ್ಲಿ ಈ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಗಿರಿಧರ್ (46) ಮಯಂಕ್(3) ಮೃತ ರ್ದುದೈವಿಗಳು. ಇನ್ನು ಹೊನ್ನಾವರದಿಂದ ಸಂಬಂಧಿಕರ ಮದುವೆ ನಿಮಿತ್ತ ಗಿರಿಧರ್ ಕುಟುಂಬ ತೆರಳುವಾಗ, ಕೇರಳದಿಂದ ಚಿಕ್ಕಮಗಳೂರಿಗೆ ಪ್ರವಾಸಕ್ಕೆ ಬರುತ್ತಿದ್ದ ಟಿ.ಟಿ ವಾಹನಕ್ಕೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಟಿಟಿ ವಾಹನ ಪಲ್ಟಿಯಾಗಿದೆ. ಕಾರಿನಲ್ಲಿದ್ದ ಮಗು ಸೇರಿದಂತೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಟಿ.ಟಿ ವಾಹನದಲ್ಲಿದ್ದ ಕೇರಳ ಮೂಲದ 7 ಪ್ರವಾಸಿಗರಿಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಅವರನ್ನ ಶಿವಮೊಗ್ಗ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಜಿಲ್ಲೆಯ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






Leave a Reply