ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಎಸ್.ಎಸ್.ಎಲ್.ಸಿ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು ಚಿಕ್ಕಮಗಳೂರು ಜಿಲ್ಲೆ ರಾಜ್ಯಕ್ಕೆ 17 ನೇ ಸ್ಥಾನ ಪಡೆದಿದೆ, ಶೇ.89.69ರಷ್ಟು ಫಲಿತಾಂಶ ಪಡೆದಿದ್ದರೂ ಪಟ್ಟಿಯಲ್ಲಿ ಕಳೆದ ವರ್ಷಕ್ಕಿಂತ ಎರಡು ಸ್ಥಾನ ಕುಸಿತ ಕಂಡಿದೆ. ಜಿಲ್ಲೆಯಲ್ಲೂ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದಾರೆ.
2019 ರಲ್ಲಿ ಚಿಕ್ಕಮಗಳೂರು ಜಿಲ್ಲೆ ರಾಜ್ಯದಲ್ಲಿ 5 ನೇ ಸ್ಥಾನಕ್ಕೆ ಏರಿತ್ತು. ಅದರೆ 2017 ರಲ್ಲಿ 5 ರಿಂದ 18 ಕ್ಕೆ ಕುಸಿದಿತ್ತು, 2018 26 ಸ್ಥಾನಕ್ಕೆ ಕುಸಿಯುವ ಮೂಲಕ ಕಳಪೆ ಸಾಧನೆ ಮಾಡಿತ್ತು, ಆದರೆ ಮರುವರ್ಷ 2019 ರಲ್ಲೇ ಶಿಕ್ಷಣ ಇಲಾಖೆ ಕೈಗೊಂಡ ಕೆಲವು ನಿರ್ಧಾರಗಳಿಂದ 14 ನೇ ಸ್ಥಾನಕ್ಕೇರಿತ್ತು. 2020 ರಲ್ಲಿ ಜಿಲ್ಲೆ ಬಿ ಶ್ರೇಣಿ ಪಡೆದಿತ್ತು. 2021 ರಲ್ಲಿ ಒಂದು ಸ್ಥಾನ ಕುಸಿದಿತ್ತು. 2022 ರಲ್ಲಿ ಕಳೆದ ವರ್ಷ ಕರೊನಾ ಕಾರಣದಿಂದ ಎಲ್ಲರನ್ನೂ ಉತ್ತೀರ್ಣಗೊಳಿಸಿ “ಎ” ಶ್ರೇಣಿ ನೀಡಲಾಗಿತ್ತು. ಈ ಬಾರಿ 17 ನೇ ಸ್ಥಾನಕ್ಕೆ ಜಿಲ್ಲೆ ಕುಸಿದಿದೆ.
ಇನ್ನು ಚಿಕ್ಕಮಗಳೂರು ಜಿಲ್ಲೆಯ ತಾಲೂಕುವಾರು ಶಾಲೆಗಳ ಫಲಿತಾಂಶ ನೋಡುವುದಾದರೆ.
ಜ್ಞಾನಭಾರತೀ ವಿದ್ಯಾಕೇಂದ್ರ ಶೃಂಗೇರಿ;
ಎಸ್.ಎಸ್.ಎಲ್.ಸಿ ಯಲ್ಲಿ ಜ್ಞಾನಭಾರತೀ ವಿದ್ಯಾಕೇಂದ್ರದ ಜಿ.ಎಸ್. ಸನ್ಮತಿ 622 ಅಂಕ ಗಳಿಸಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾಳೆ.
ಟಿ.ಎಸ್.ಶಿವದತ್ತ 612 ಅಂಕ ಪಡೆಯುವ ಮೂಲಕ ತಾಲೂಕಿಗೆ ದ್ವಿತೀಯ ಸ್ಥಾನ ಗಳಿಸಿದ್ದಾನೆ.
ಇದನ್ನೂ ಓದಿ; ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರಿಂದ ಪ್ರತಿಭಟನೆ
ದರ್ಶಿನಿ ಸಂಯುಕ್ತ ಪ್ರೌಢಶಾಲೆ ಶೃಂಗೇರಿ:
ದರ್ಶಿನಿ ಸಂಯುಕ್ತ ಪ್ರೌಢಶಾಲೆಯ ಕೆ.ಆರ್. ಅವನಿ 619 ಅಂಕ ಗಳಿಸಿ ತೃತೀಯ ಸ್ಥಾನ ಪಡೆದಿದ್ದಾಳೆ.
ಇನ್ನು ಶೃಂಗೇರಿ ತಾಲೂಕು ಶೇ. 95.72 ಫಲಿತಾಂಶ ಗಳಿಸಿದೆ. ಒಟ್ಟು 14 ಪ್ರೌಢಶಾಲೆಗಳಿದ್ದು, ಗ್ರಾಮೀಣ ಭಾಗದ ಶಾಲೆಗಳು ಕೂಡ ಉತ್ತಮ ಫಲಿತಾಂಶ ದಾಖಲಿಸಿವೆ.
ಪಟ್ಟಣದ ಸರ್ಕಾರಿ ಪ್ರೌಢಶಾಲೆ (92.77)
ತೊರೆಹಡ್ಲು ಸರ್ಕಾರಿ ಪ್ರೌಢಶಾಲೆ (91.4)
ಹೊಳೆಕೊಪ್ಪ ಪ್ರೌಢಶಾಲೆ (93.54)
ನೆಮ್ಮಾರ್ ಸರ್ಕಾರಿ ಪ್ರೌಢಶಾಲೆ (100)
ವೈಕುಂಠಪುರ ಸರ್ಕಾರಿ ಪ್ರೌಢಶಾಲೆ (100)
ಬೇಗಾರು ಕರ್ನಾಟಕ ಪಬ್ಲಿಕ್ ಶಾಲೆ (97.95)
ಶ್ರೀ ಅಭಿನವ ವಿದ್ಯಾತೀರ್ಥ ಪ್ರೌಢಶಾಲೆ(94.28)
ಜೇಸಿಸ್ ಶಾಲೆ (94)
ದರ್ಶಿನಿ ಸಂಯುಕ್ತ ಪ್ರೌಢಶಾಲೆ (95.1)
ಜ್ಞಾನಭಾರತೀ ವಿದ್ಯಾ ಕೇಂದ್ರ (100)
ಶ್ರೀ ರಾಮಕೃಷ್ಣ ಆಂಗ್ಲ ಮಾಧ್ಯಮ ಪ್ರೌಢಶಾಲೆ (100)
ಬೇಗಾರು ಮುರಾರ್ಜಿ ದೇಸಾಯಿ ಶಾಲೆ (97.5)
ಗೋಚರಳ್ಳಿ ಡಾ. ಬಿ.ಆರ್.ಅಂಬೇಡ್ಕರ್ ಶಾಲೆ (96,29) ಫಲಿತಾಂಶ ಗಳಿಸಿದೆ.
ಜ್ಞಾನವಾಹಿನಿ ಶಿಕ್ಷಣ ಸಂಸ್ಥೆಯ ಕೊಪ್ಪ:
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕೊಪ್ಪ ತಾಲೂಕಿನ ವಿದ್ಯಾರ್ಥಿಗಳು 625 ಕ್ಕೆ 615 ಅಂಕ ಪಡೆದಿದ್ದಾರೆ. ಜ್ಞಾನವಾಹಿನಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಾದ ಎಂ.ವಿ.ಅಮೃತಾ, ತುಷಾರ್ ಕೃಷ್ಣ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಬಿಜಿಎಸ್ ಪ್ರೌಢಶಾಲೆ ಕೊಪ್ಪ:
ಬಿಜಿಎಸ್ ಪ್ರೌಢಶಾಲೆಯ ಎಂ.ಪಿ.ಪಜೀತ್ 625 ಕ್ಕೆ 615 ಅಂಕ ಪಡೆದಿದ್ದಾರೆ.
ಇದನ್ನೂ ಓದಿ; ಚಿಕ್ಕಮಗಳೂರು; ಚುನಾವಣೆ ಬಹಿರಂಗ ಪ್ರಚಾರ ಅಂತ್ಯ
ಜಯಪುರ:
ಎಸ್‌ಎಸ್‌ಎಲ್ ಸಿಯಲ್ಲಿ ಜಯಪುರ ವಿದ್ಯಾರ್ಥಿಗಳ ಪೈಕಿ 53 ಮಂದಿ ಉತ್ತೀರ್ಣರಾಗಿದ್ದಾರೆ. ಜಿ.ತನ್ಮಯ್ ಶರ್ಮ 614 (ಶೇ.98.24) ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಎಂ.ಎಸ್.ಮನು 610 (97.6) ಅಂಕ ಗಳಿಸಿದ್ದಾನೆ. ಪ್ರಥಮ ದರ್ಜೆಯಲ್ಲಿ 27 ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ಶಾಂತಿಗ್ರಾಮ ಕನ್ನಡ ಮಾಧ್ಯಮ ಪ್ರೌಢಶಾಲೆ:
ಶಾಂತಿಗ್ರಾಮ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಪರೀಕ್ಷೆಗೆ ಕುಳಿತ 25 ವಿದ್ಯಾರ್ಥಿಗಳಲ್ಲಿ 21 ಮಂದಿ ಉತ್ತೀರ್ಣರಾಗಿದ್ದಾರೆ. 606 ಅಂಕ ಪಡೆದಿರುವ ವಿದ್ಯಾರ್ಥಿನಿ ತೃಪ್ತಿ ಗಣಿತ ವಿಷಯದಲ್ಲಿ 100 ಅಂಕ ಗಳಿಸಿದ್ದಾಳೆ. ವೈ.ಎಸ್.ಸಂದೇಶ್ 562, ವೈ.ಆರ್. ಇಂಚರಾ ಕನ್ನಡ ವಿಷಯದಲ್ಲಿ 125 ಅಂಕ ಗಳಿಸಿದ್ದಾರೆ.
ಶ್ರೀ ಸದ್ಗುರು ಕನ್ನಡ ಮಾಧ್ಯಮ ಪ್ರೌಢಶಾಲೆ:
ಶ್ರೀ ಸದ್ಗುರು ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಪರೀಕ್ಷೆ ಬರೆದ 39 ವಿದ್ಯಾರ್ಥಿಗಳ ಪೈಕಿ 35 ಮಂದಿ ಪಾಸಾಗಿದ್ದಾರೆ. ಆರ್.ವಿಜಯಾ 610, ವಿಕಾಸ್ ಕೆ.ಎಸ್. 602 ಅಂಕ ಗಳಿಸಿದ್ದಾರೆ,
ಹೇರೂರು ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆ:
ಹೇರೂರು ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಪರೀಕ್ಷೆ ಬರೆದ 47 ವಿದ್ಯಾರ್ಥಿಗಳಲ್ಲಿ 42 ಮಂದಿ ಉತ್ತೀರ್ಣರಾಗಿದ್ದಾರೆ. ಕೀರ್ತನಾ ಕೆ. 555, ಅನ್ವಿತಾ ಕೆ. 540 ಅಂಕ ಗಳಿಸಿದ್ದಾರೆ. 28 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ.
ಸಿಆರ್‌ಎಸ್‌ನ ಬಿಸಿವಿ ಆಂಗ್ಲ ಮಾಧ್ಯಮ ಶಾಲೆ:
ಸಿಆರ್‌ಎಸ್‌ನ ಬಿಸಿವಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿನಿ ಎ.ಎಸ್.ದುಂಬಿ 608 ಅಂಕ ಪಡೆದಿದ್ದಾಳೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಚುನಾವಣಾ ಆಯೋಗದ ತಪಾಸಣೆ ಹೆಸರಿನಲ್ಲಿ ಅಧಿಕಾರಿಗಳ ದಬ್ಬಾಳಿಕೆ
- ಚುನಾವಣಾ ಪ್ರಚಾರಕ್ಕಾಗಿ ವೈದ್ಯಕೀಯ ರಜೆ
- ನಾನು ಕೊಟ್ಟ ಮಾತಿಗೆ ಎಂದಿಗೂ ತಪ್ಪುವುದಿಲ್ಲ, ತಪ್ಪಿದಲ್ಲಿ ಒಂದು ನಿಮಿಷವೂ ಅಧಿಕಾರದ ಕುರ್ಚಿಯಲ್ಲಿ ಕೂರುವುದಿಲ್ಲ
ಬಿಜಿಎಸ್ ಪ್ರೌಢಶಾಲೆ ಬಾಳೆಹೊನ್ನೂರು:
ಪಟ್ಟಣದ ಬಿಜಿಎಸ್ ಪ್ರೌಢಶಾಲೆಗೆ ಶೇ.100 ಫಲಿತಾಂಶ ಲಭಿಸಿದೆ ಎಂದು ಪಾಚಾರ್ಯ ಡಾ. ವೈ.ಎ.ಸುರೇಶ್ ತಿಳಿಸಿದ್ದಾರೆ. ಶಾಲೆಯಿಂದ ಒಟ್ಟು 22 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 14 ಮಂದಿ ಅತ್ಯುನ್ನತ ದರ್ಜೆ, 7 ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ ಓರ್ವ ವಿದ್ಯಾರ್ಥಿ ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಆರ್.ಸುಶಾಂತ್ (610). ಶೇಕ್ ಜಯಾನ್ ಅಹ್ಮದ್ (608), ರಿದಾ ರಿಯಾಜ್ (594) ಅಂಕ ಗಳಿಸಿ ಮೊದಲ ಮೂರು ಸ್ಥಾನಗಳನ್ನು ಗಳಿಸಿದ್ದಾರೆ ಎಂದು ತಿಳಿಸಿದ್ದಾರೆ.
ಸಿಆರ್ ಎಸ್ ಭಾರತೀಯ ಕಾಫಿ ವಿದ್ಯಾಲಯ:
ಬಾಳೆಹೊನ್ನೂರು ಸಮೀಪದ ಸಿಆರ್ ಎಸ್ ಭಾರತೀಯ ಕಾಫಿ ವಿದ್ಯಾಲಯದ ವಿದ್ಯಾರ್ಥಿನಿ ಎಸ್.ಪಿ.ಸಾನಿಕಾ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 569 ಗಳಿಸಿ ಅತ್ಯುನ್ನತ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾಳೆ. ಈಕೆ ಕೇಂದ್ರೀಯ ಕಾಫಿ ಸಂಶೋಧನಾ ಕೇಂದ್ರದ ಉದ್ಯೋಗಿ ಕೆ.ಪ್ರಶಾಂತ್ ಕುಮಾರ್, ಪ್ರತಿಮಾ ದಂಪತಿ ಪುತ್ರಿ.
ಪೂರ್ಣಪ್ರಜ್ಞ ವಿದ್ಯಾ ಕೇಂದ್ರ ಆಲ್ದೂರು:
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಆಲ್ದೂರಿನ ಪೂರ್ಣಪ್ರಜ್ಞ ವಿದ್ಯಾ ಕೇಂದ್ರಕ್ಕೆ ಶೇ.100 ಫಲಿತಾಂಶ ಬಂದಿದೆ. 42 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 29 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 13 ವಿದ್ಯಾರ್ಥಿಗಳು ಪ್ರಥಮದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಎಚ್.ಆರ್.ಅಮೃತ (617), ಆಪ್ತಿ (616), ಜೋಯಾ ಶಬನಮ್ (616) ಆಪ್ತವಿ(615) ಅಂಕ ಪಡೆದಿದ್ದಾರೆ.
ಇದನ್ನೂ ಓದಿ; ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ
ಶ್ರೀ ಜಗದೀಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕಳಸ:
ಕಳಸ ಶ್ರೀ ಜಗದೀಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಅದಿತಿ ಜೈನ್ ತಲಾ 619 ಅಂಕ ಪಡೆದು 5 ನೇ ಸ್ಥಾನವನ್ನು ಪಡೆದಿದ್ದಾರೆ.
ವಿದ್ಯಾಭಾರತಿ ಪ್ರೌಢಶಾಲೆ ಬಣಕಲ್:
ಬಣಕಲ್ ಶ್ರೀ ವಿದ್ಯಾಭಾರತಿ ಪ್ರೌಢಶಾಲೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಪಡೆದಿದೆ. ಸಿ.ಎಂ ರಚನಾ 518 ಅಂಕ ಪಡೆದು ಪ್ರಥಮ, ಬಿ.ಎ.ಪ್ರತೀಕ್ 564 ಅಂಕ ಪಡೆದು ದ್ವೀತಿಯ ಸ್ಥಾನ ಪಡೆದಿದ್ದಾರೆ.
ಒಟ್ಟು 24 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅತ್ಯುತ್ತಮ 3, ಪ್ರಥಮ 18, ದ್ವಿತೀಯ 3 ವಿದ್ಯಾರ್ಥಿಗಳು ಉತೀರ್ಣರಾಗಿದ್ದಾರೆ.
ಇದನ್ನೂ ಓದಿ; ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ
ಆಂಗ್ಲ ಮಾಧ್ಯಮ ಪ್ರೌಢಶಾಲೆ ಬಣಕಲ್:
ಬಣಕಲ್ ಪ್ರೌಢಶಾಲೆ ಆಂಗ್ಲ ಮಾಧ್ಯಮ ವಿದ್ಯಾರ್ಥಿನಿ ಈಶ್ವರಿ ಶ್ರೀಗಂಧ 616 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾಳೆ. ಪ್ರಿಯಾಂಕ 605, ತಾಫಿನಾ ಫಾತಿಮಾ 597 ಅಂಕಪಡೆದಿದ್ದಾರೆ. ಅಂಗ್ಲ ಮಾಧ್ಯಮದಲ್ಲಿ ಶೇ.96 ಫಲಿತಾಂಶ ಬಂದಿದೆ. 10 ಅತ್ಯುತ್ತಮ, 28 ಪ್ರಥಮ, 2 ದ್ವಿತೀಯ ದರ್ಜೆಯಲ್ಲಿ ಉತೀರ್ಣರಾಗಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಮನುಕುಮಾರ್ 578, ವೀಕ್ಷಿತಾ 537 ಅಂಕ ಪಡೆದಿದ್ದಾರೆ. 6 ಅತ್ಯುತ್ತಮ, 32 ಪಥಮ, 12 ದ್ವಿತೀಯ, ತೃತೀಯ 1 ವಿದ್ಯಾರ್ಥಿಗಳು ಉತೀರ್ಣರಾಗಿದ್ದಾರೆ.
ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ:
ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು ನಗರದ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಶೇ.100 ರಷ್ಟು ಫಲಿತಾಂಶ ದಾಖಲಿಸಿದೆ. ಶೇ.95 ಕ್ಕಿಂತ ಹೆಚ್ಚು ಅಂಕಗಳನ್ನು 14 ವಿದ್ಯಾರ್ಥಿಗಳು, ಶೇ.90ಕ್ಕಿಂತ ಹೆಚ್ಚು ಅಧಿಕ ಅಂಕಗಳನ್ನು 49 ವಿದ್ಯಾರ್ಥಿಗಳು ಪಡೆದಿದ್ದಾರೆ. ಇನ್ನುಳಿದ ಎಲ್ಲಾ ವಿದ್ಯಾರ್ಥಿಗಳು ಉನ್ನತ ಶ್ರೇಣಿ ಹಾಗೂ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಇದನ್ನೂ ಓದಿ; ʻಕೈ ʼ-jds ಕಾರ್ಯಕರ್ತರ ನಡುವೆ ಘರ್ಷಣೆ
ಸಿ.ವೈ.ಶರಣ್ಯಾ ಶೇ.98.4 ರಷ್ಟು ಅಂಕಗಳನ್ನು ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಎಸ್.ಜಿ.ಲಕ್ಷ್ಮೀಶ ಮತ್ತು ಸಿ.ವಿ.ಜಯಂತ್ ಶೇ.97.92ರಷ್ಟು ಅಂಕಗಳನ್ನು ಗಳಿಸಿ ಶಾಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಎಸ್.ಸಿಂಚನಾ, ಆರ್.ಪಿ.ದೀಕ್ಷಾ, ಎಂ.ಸಂಜನಾ, ಎ.ಎಲ್.ಮೋನಿಕಾ, ಎನ್.ಯು.ರುಚಿರಾ. ಆರ್.ವರ್ಷಿಣಿ, ನಿರೀಕ್ಷಾ, ಶ್ರೇಯಾ, ಅದಿರಾ ಬಾನು ಶೇ.95 ಕ್ಕಿಂತ ಅಧಿಕ ಅಂಕ ಪಡೆದಿದ್ದಾರೆ.
ಶ್ರೀ ಆದಿಚುಂಚನಗಿರಿ ಪೌಢಶಾಲೆ (ಹೌಸಿಂಗ್ ಬೋರ್ಡ್):
ಬಡಾವಣೆಯ ಶ್ರೀ ಆದಿಚುಂಚನಗಿರಿ ಪೌಢಶಾಲೆ ವಿದ್ಯಾರ್ಥಿನಿ ಎ.ಆರ್.ಯಶಸ್ವಿನಿ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 619 ಅಂಕ ಪಡೆದು ನಗರದಲ್ಲಿ ಪ್ರಥಮ ಹಾಗೂ ರಾಜ್ಯಕ್ಕೆ 6 ನೇ ಸ್ಥಾನ ಪಡೆದಿದ್ದಾಳೆ, ಶಾಲೆಯಲ್ಲಿ ಅತ್ಯುನ್ನತ ಶ್ರೇಣಿ 11, ಉನ್ನತ ಶ್ರೇಣಿ 14, ದ್ವಿತೀಯ ದರ್ಜೆಯಲ್ಲಿ 26 ವಿದ್ಯಾರ್ಥಿಗಳು ತೇರ್ಗಡೆಯಾಗಿದು ಶಾಲೆಗೆ ಶೇ.100 ಫಲಿತಾಂಶ ಗಳಿಸಿದೆ.
ಕಣತಿ ಸರ್ಕಾರಿ ಪ್ರೌಢಶಾಲೆ:
ಕಣತಿ ಸರ್ಕಾರಿ ಪ್ರೌಢಶಾಲೆಯಲ್ಲಿ ಯಾಶಸ್ ಎ.ಎಮ್ 576 ಅಂಕ ಪಡೆದು ಶಾಲೆಗೆ ಕೀರ್ತಿಯನ್ನು ತಂದು ಕೊಟ್ಟಿದ್ದಾರೆ. ಜೊತೆಗೆ ಶಾಲೆಗೆ ಶೇ.100 ಫಲಿತಾಂಶ ಗಳಿಸಿದೆ.
ಕೆಂಪನಹಳ್ಳಿಯ ಆಶಾಕಿರಣ ಅಂಧಮಕ್ಕಳ ವಸತಿ ಪಾಠಶಾಲೆ:
ಚಿಕ್ಕಮಗಳೂರು ಕೆಂಪನಹಳ್ಳಿಯ ಆಶಾಕಿರಣ ಅಂಧಮಕ್ಕಳ ವಸತಿ ಪಾಠಶಾಲೆ ಶೇ.100ರಷ್ಟು ಫಲಿತಾಂಶ ಪಡೆದಿದೆ. ಎಚ್.ಎಂ.ಸುನಿಧಿ(565) ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರೆ ಎಂ.ರಂಗಸ್ವಾಮಿ(435), ಸಿ.ಎನ್. ಭೂಮಿಕಾ( 430), ವೈ.ಎನ್.ಸೋಮೇಶ್ (422)ಎಚ್ ಎಸ್ ಲಿಖಿತ್ (420), ಜಿ.ಕೆ ದರ್ಶನ್ (409), ಇ ಮಹೇಂದ್ರ (408), ಆರ್ ರಂಗಸ್ವಾಮಿ (407), ವಿ.ನವೀನ್ (400), ಆರ್.ಎಸ್.ನಿತಿನ್ (395), ಎ.ಆರ್. ತೇಜಸ್ವಿನಿ( 630) ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಹೈವೇ ಆಂಗ್ಲಮಾಧ್ಯಮ ಶಾಲೆ ಕಡೂರು;
ಕಡೂರಿನ ಹೈವೇ ಆಂಗ್ಲಮಾಧ್ಯಮ ಶಾಲೆಯ ಚಂದನಾ ಪ್ರಭು 625 ಕ್ಕೆ 625 ಅಂಕ ಪಡೆಯುವ ಮೂಲಕ ಜಿಲ್ಲೆಯ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಇದನ್ನೂ ಓದಿ; ವರದಕ್ಷಿಣೆ ಕಿರುಕುಳ, ಮಹಿಳೆಯ ಕೊಲೆ
ದೀಕ್ಷಾ ಆಂಗ್ಲಮಾಧ್ಯಮ ಶಾಲೆ ಕಡೂರು:
ಕಡೂರಿನ ದೀಕ್ಷಾ ಆಂಗ್ಲಮಾಧ್ಯಮ ಶಾಲೆಯ ಯು.ಮಿಲನಾ 619 ಅಂಕ ಪಡೆದಿದ್ದಾರೆ.
ಕ್ರಮುಕ ಆಂಗ್ಲಮಾಧ್ಯಮ ಶಾಲೆ ಬೀರೂರು:
ಬೀರೂರು ಪಟ್ಟಣದ ಕ್ರಮುಕ ಆಂಗ್ಲಮಾಧ್ಯಮ ಶಾಲೆ ಶೇ.100 ಫಲಿತಾಂಶ ಪಡೆದಿದೆ. 39ರಲ್ಲಿ 18 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 19 ವಿದ್ಯಾರ್ಥಿಗಳು ಪ್ರಥಮ ದರ್ಜೆ, ಇಬ್ಬರು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಬಿ.ಶ್ರೇಯಾ 606 ಅಂಕ ಪಡೆದು ಶಾಲೆಗೆ ಅಗ್ರಸ್ಥಾನಪಡೆದಿದ್ದಾರೆ.
ಅರುಣೋದಯ ಅಂಗ್ಲಮಾಧ್ಯಮ ಶಾಲೆ ತರೀಕೆರೆ:
ತರೀಕೆರೆ ಅರುಣೋದಯ ಅಂಗ್ಲಮಾಧ್ಯಮ ಶಾಲೆಯ ಎ.ಕೆ.ಹಿತೈಶ್ 620 ನಾಲ್ಕನೇ ಸ್ಥಾನ ಪಡೆದಿದ್ದಾರೆ.