Grama Hiriyara Kendra Scheme: ರಾಜ್ಯದ ಹಳ್ಳಿಗಳಲ್ಲಿ ಒಂಟಿತನ ಮತ್ತು ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯರಿಗಾಗಿ ‘ಗ್ರಾಮ ಹಿರಿಯರ ಕೇಂದ್ರ’ ಎಂಬ ಹೊಸ ಯೋಜನೆ ಜಾರಿಯಾಗಿದೆ. ‘ನಮ್ಮ ಹಿರಿಯರು-ನಮ್ಮ ಗೌರವ’ ಎಂಬ ಈ ಕೇಂದ್ರಗಳು ಗ್ರಾಮೀಣ ಹಿರಿಯರ ಜೀವನಕ್ಕೆ ನೆಮ್ಮದಿ ತರಲಿದೆ. ಇಲ್ಲಿ ಆರೋಗ್ಯ ಸಲಹೆ, ಮನರಂಜನೆ ಮತ್ತು ಸರಕಾರಿ ಸೌಲಭ್ಯಗಳ ಬಗ್ಗೆ ಮಾಹಿತಿ ಸಿಗಲಿದೆ.
ಇದನ್ನೂ ಓದಿ: ಆಧಾರ್ ಸೇವಾ ಕೇಂದ್ರದಲ್ಲಿ ಜಾಬ್, ಅರ್ಜಿ ಆಹ್ವಾನ
ಬದುಕಿನ ಸಂಧ್ಯಾಕಾಲದಲ್ಲಿ ಮಕ್ಕಳೇ ಹಿರಿಯ ಜೀವಗಳಿಗೆ ಆಸರೆ. ಆದರೆ, ಹಿರಿಯರನ್ನು ನೋಡಿಕೊಳ್ಳಲು ಯಾರೂ ಇಲ್ಲದೇ ಇದ್ದಾಗ ಅವರನ್ನು ನೋಡಿಕೊಳ್ಳುವವರು ಯಾರು ಇರಲಾರರು ಆ ಅಂತಹ ಒಂದು ಕಂಟಕದಿಂದ ಪಾರಾಗುವ ಕಾರಣಕ್ಕಾಗಿ ರಾಜ್ಯ ಸರ್ಕಾರ ಗ್ರಾಮ ಹಿರಿಯರ ಕೇಂದ್ರ ಎಂಬ ವಿನೂತನ ಯೋಜನೆಯನ್ನು ಆರಂಭಿಸಿದೆ. ವಯಸ್ಸಾದ ಕಾಲದಲ್ಲಿ ಕಾಡುವಂತ ಒಂಟಿತನ, ಅನಾರೋಗ್ಯ ಮತ್ತು ಕುಟುಂಬದ ತಾತ್ಸಾರದಿಂದ ದೂರವಾಗಿ, ಹಿರಿಯರು ನೆಮ್ಮದಿಯ ಜೀವನ ನಡೆಸಲು ಸಾಧ್ಯವಿರಲಾರದು.ಅದರ ಪೂರಕವಾಗಿ ‘ನಮ್ಮ ಹಿರಿಯರು-ನಮ್ಮ ಗೌರವ’ ಎಂಬ ಹೆಸರಿನಲ್ಲಿ ಗ್ರಾಮ ಹಿರಿಯರ ಕೇಂದ್ರ’ಗಳನ್ನು ಸ್ಥಾಪಿಸಲಾಗುತ್ತಿದೆ.
ವೃದ್ಧರ ಏಕಾಂಗಿತನವನ್ನು ದೂರಮಾಡಿ ಅವರಿಗೆ ನೆಮ್ಮದಿಯ ಬದುಕು ನೀಡುವ ಒಂದು ಮಹತ್ವದ ಉಪಕ್ರಮವಾಗಿದೆ. ಹೆಚ್ಚುತ್ತಿರುವ ಹಿರಿಯ ನಾಗರಿಕರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಅವರ ಆರೋಗ್ಯ, ಮನರಂಜನೆ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡುತ್ತದೆ.ಈ ಕೇಂದ್ರಗಳಲ್ಲಿ ವ್ಯಾಯಾಮ, ಆರೋಗ್ಯ ತಪಾಸಣೆ, ಭಜನೆ, ಜನ್ಮದಿನಾಚರಣೆ ಮತ್ತು ವಿವಿಧ ಸರ್ಕಾರಿ ಸೌಲಭ್ಯಗಳ ಮಾಹಿತಿ ನೀಡಲಾಗುತ್ತದೆ. ಸಚಿವ ಪ್ರಿಯಾಂಕ್ ಖರ್ಗೆ ಅವರ ವಿಶೇಷ ಆಸಕ್ತಿ ಮತ್ತು ಪ್ರೇರಣೆಯಿಂದ ಈ ಯೋಜನೆ ಆರಂಭವಾಗಿದೆ.
ಇದನ್ನೂ ಓದಿ: ರೈತರ ಮಕ್ಕಳಿಗೆ ‘ರೈತ ವಿದ್ಯಾನಿಧಿ ಸ್ಕಾಲರ್ಶಿಪ್; 2,000 ದಿಂದ 11,000ದ ವರೆಗೆ ಸಿಗಲಿದೆ ವಿದ್ಯಾರ್ಥಿವೇತನ
ಅರ್ಹತೆಗಳು:
* ‘ಅರಿವು ಕೇಂದ್ರ’ದಲ್ಲಿ ಆಸಕ್ತರು ನೇರವಾಗಿ ಅಲ್ಲಿಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದು.
* 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಾಗಿರಬೇಕು.
* ಗುರುತಿನ ಚೀಟಿಗಾಗಿ ಆಧಾರ್ ಕಾರ್ಡ್ ಅಥವಾ ವಯಸ್ಸಿನ ಪುರಾವೆ ನೀಡುವ ದಾಖಲೆಯನ್ನು ಒದಗಿಸಬೇಕಾಗುತ್ತದೆ.
* ಈ ಯೋಜನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು (PDO) ಅಥವಾ ಜಿಲ್ಲಾ ಪಂಚಾಯತ್ ಕಚೇರಿಯನ್ನು ಸಂಪರ್ಕಿಸಬಹುದು.

Public Desclimer
This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.
News Malnad is not responsible for any misuse of our media identity by unauthorized persons.
ಇತ್ತೀಚಿನ ಜನಪ್ರಿಯ ಸುದ್ದಿಗಳು (Grama Hiriyara Kendra Scheme:)





